Vitamin D: ದೇಹಕ್ಕೆ ಸರಿಯಾದ ಪ್ರಮಾಣದ ವಿಟಮಿನ್ ಡಿ ಸಿಗದಿದ್ರೆ ಏನಾಗತ್ತೆ ಗೊತ್ತಾ?

ಕೆಲವು ಜನರು ವಿಟಮಿನ್ ಡಿ ಕೊರತೆಯ ಅಪಾಯ ಹೆಚ್ಚು ಹೊಂದಿರುತ್ತಾರೆ. ನಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಕೆಟ್ಟ ಅಭ್ಯಾಸಗಳು ನೈಸರ್ಗಿಕವಾಗಿ ದೇಹಕ್ಕೆ ಸಿಗಬೇಕಾದ ವಿಟಮಿನ್ ಡಿ ಯನ್ನು ಪಡೆದುಕೊಳ್ಳಲು ವಿಫಲಗೊಳ್ಳುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಿಟಮಿನ್ ಡಿ (Vitamin D) ದೇಹದಲ್ಲಿ (Body) ಕೊರತೆಯಾದರೆ ಹಲವು ಸಮಸ್ಯೆಗಳು (Problems) ಉದ್ಭವಿಸುತ್ತವೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿಟಮಿನ್ ಡಿ ಬೇಕು. ಜೊತೆಗೆ ಮೂಳೆಗಳನ್ನು (Bones) ಆರೋಗ್ಯವಾಗಿಡಲು, ಸ್ಟ್ರಾಂಗ್ ಮಾಡಲು ಮುಖ್ಯವಾಗಿ ವಿಟಮಿನ್-ಡಿ ಬೇಕು. ಅದಾಗ್ಯೂ ವಿಟಮಿನ್ ಡಿಯುಕ್ತ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಲು ತಜ್ಞರು ಮತ್ತು ವೈದ್ಯರು ಸಲಹೆ ನೀಡುತ್ತಾರೆ. ವಿಟಮಿನ್ ಡಿ ಸಹಾಯದಿಂದ ಮಾತ್ರ ಕ್ಯಾಲ್ಸಿಯಂ ದೇಹದಲ್ಲಿ ಹೀರಲ್ಪಡುತ್ತದೆ. ಹಾಗಾಗಿ ವಿಟಮಿನ್-ಡಿ ಕೊರತೆ ಇರುವ ಜನರು ಮೂಳೆಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಗೆ ಹೆಚ್ಚು ತುತ್ತಾಗುತ್ತಾರೆ. ಎಲ್ಲಾ ವಯಸ್ಕರರು ದಿನಕ್ಕೆ 10-20 ಮೈಕ್ರೋಗ್ರಾಂ ನಷ್ಟು ವಿಟಮಿನ್ ಡಿ ಸೇವನೆ ಮಾಡಬೇಕು.

    ಸರಿಯಾದ ಪ್ರಮಾಣದಲ್ಲಿ ವಿಟಮಿನ್ ಡಿ ದೇಹಕ್ಕೆ ಸಿಗಬೇಕು

    ಸರಿಯಾದ ಪ್ರಮಾಣದಲ್ಲಿ ವಿಟಮಿನ್ ಡಿ ದೇಹಕ್ಕೆ ಸಿಗಬೇಕು ಎಂದು ತಜ್ಞರು ಹೇಳುತ್ತಾರೆ. ನಿಮ್ಮ ಆಹಾರದಲ್ಲಿ ಮೀನು, ಅಣಬೆ, ಹಾಲು ಮತ್ತು ಮೊಟ್ಟೆ ಸೇರಿದಂತೆ ಅನೇಕ ಆಹಾರ ಪದಾರ್ಥಗಳನ್ನು ಸೇರಿಸುವ ಮೂಲಕ ನೀವು ಇದರ ಕೊರತೆಯನ್ನು ಪೂರ್ತಿಗೊಳಿಸಬಹುದು.

    ವಿಟಮಿನ್ ಡಿ ಕೊರತೆಯ ಅಪಾಯ

    ಕೆಲವು ಜನರು ವಿಟಮಿನ್ ಡಿ ಕೊರತೆಯ ಅಪಾಯ ಹೆಚ್ಚು ಹೊಂದಿರುತ್ತಾರೆ. ನಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಕೆಟ್ಟ ಅಭ್ಯಾಸಗಳು ನೈಸರ್ಗಿಕವಾಗಿ ದೇಹಕ್ಕೆ ಸಿಗಬೇಕಾದ ವಿಟಮಿನ್ ಡಿ ಯನ್ನು ಪಡೆದುಕೊಳ್ಳಲು ವಿಫಲಗೊಳ್ಳುತ್ತವೆ.

    ಇದನ್ನೂ ಓದಿ: ಹಲವು ಕಾಯಿಲೆಗಳಿಗೆ ಕಾರಣವಾಗುವ ಯೂರಿಕ್ ಆಸಿಡ್ ಕಡಿಮೆ ಮಾಡಲು ಆಯುರ್ವೇದ ಪರಿಹಾರವೇನು?

    ಹೀಗಾಗಿ ದೇಹದಲ್ಲಿ ಅಗತ್ಯ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ ಎಂಬುದು ವೈದ್ಯರು ಅಭಿಪ್ರಾಯವಾಗಿದೆ. ಗ್ರಾಮೀಣ ಪರಿಸರಕ್ಕಿಂತ ನಗರ ಪರಿಸರದಲ್ಲಿ ವಾಸಿಸುವ ಜನರು ಹೆಚ್ಚು ವಿಟಮಿನ್ ಡಿ ಪಡೆಯಲು ಸಾಧ್ಯವಾಗದೇ ಅನಾರೋಗ್ಯದ ಅಪಾಯದಲ್ಲಿದ್ದಾರೆ ಎಂದು ಕೆಲವು ಅಧ್ಯಯನಗಳು ಹೇಳುತ್ತವೆ. ಅದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ.

    ವಿಟಮಿನ್-ಡಿ ದೇಹಕ್ಕೆ ಯಾಕೆ ಮುಖ್ಯ?

    ವಿಟಮಿನ್-ಡಿ ನಮ್ಮ ದೇಹಕ್ಕೆ ಯಾಕೆ ಬೇಕು ಅಂದ್ರೆ, ನಮ್ಮ ಮೂಳೆಯ ಶಕ್ತಿ ಮತ್ತು ಸ್ನಾಯುಗಳು ಸ್ಟ್ರಾಂಗ್ ಆಗಲು ಬೇಕು. ಕ್ಯಾನ್ಸರ್, ಹೃದ್ರೋಗ ಮತ್ತು ಟೈಪ್ 2 ಮಧುಮೇಹದ ಅಪಾಯ ಕಡಿಮೆ ಮಾಡಲು ವಿಟಮಿನ್ ಡಿ ಬೇಕು. ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಬಲಪಡಿಸಲು ವಿವಿಧ ಆರೋಗ್ಯ ಪರಿಸ್ಥಿತಿಗಳಿಗೆ ವಿಟಮಿನ್ ಡಿ ಅವಶ್ಯಕವಾಗಿ ಬೇಕು ಎಂದು ಸಂಶೋಧನೆಗಳು ಹೇಳುತ್ತವೆ.

    ಕೊಲೊನ್, ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ಬೆಳವಣಿಗೆ ನಿಯಂತ್ರಿಸುವಲ್ಲಿ ವಿಟಮಿನ್ ಡಿ ಪರಿಣಾಮಕಾರಿ ಎಂದು ಕೆಲವು ಅಧ್ಯಯನಗಳು ಹೇಳಿವೆ.

    ಯಾವ ಜನರು ಹೆಚ್ಚು ವಿಟಮಿನ್ ಡಿ ಕೊರತೆ ಹೊಂದಿರುತ್ತಾರೆ?

    ಕೆಲವು ಪರಿಸ್ಥಿತಿಗಳಿಂದಾಗಿ ಕೆಲವರು ವಿಟಮಿನ್-ಡಿ ಕೊರತೆ ಅಪಾಯ ಎದುರಿಸುತ್ತಾರೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ದಿನದ ಹೆಚ್ಚಿನ ಸಮಯವನ್ನು ಮುಚ್ಚಿದ ಕೊಠಡಿಗಳು ಅಥವಾ ಕಛೇರಿಗಳಲ್ಲಿ ಕಳೆಯುವ ಮತ್ತು ಸೂರ್ಯನ ಬೆಳಕಿಗೆ ಕಡಿಮೆ ಒಡ್ಡಿಕೊಳ್ಳುವ ಜನರಲ್ಲಿ ಹೆಚ್ಚಿನ ಅಪಾಯ ಕಂಡು ಬರುತ್ತದೆ.

    ಸನ್‌ಸ್ಕ್ರೀನ್ ಅನ್ನು ಅತಿಯಾಗಿ ಬಳಸುವ ಜನರಲ್ಲಿ ಅವರ ಚರ್ಮವು ವಿಟಮಿನ್-ಡಿ ಅನ್ನು ಸರಿಯಾದ ಪ್ರಮಾಣದಲ್ಲಿ ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ ಅಂತವರಲ್ಲಿ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ.

    ನಮ್ಮ ದೇಹವು ಆಹಾರದ ಜೊತೆಗೆ ಸೂರ್ಯನ ಬೆಳಕಿನ ಮೂಲಕ ವಿಟಮಿನ್-ಡಿ ನ್ನು ಪಡೆಯುತ್ತದೆ. ಸಾಕಷ್ಟು ಸೂರ್ಯನ ಬೆಳಕು ದೇಹಕ್ಕೆ ದೊರೆಯದಿದ್ದರೆ ವಿಟಮಿನ್ ಡಿ ಕೊರತೆಯ ಅಪಾಯ  ಎದುರಿಸಬೇಕಾಗುತ್ತದೆ.

    ಸೂರ್ಯನ ಬೆಳಕು ಮತ್ತು ವಿಟಮಿನ್ ಡಿ

    ಚರ್ಮವು ಸೂರ್ಯನ ಬೆಳಕಿನೊಂದಿಗೆ ರಾಸಾಯನಿಕವಾಗಿ ಪ್ರತಿಕ್ರಿಯಿಸಿದಾಗ ವಿಟಮಿನ್ ಡಿ ರೂಪುಗೊಳ್ಳುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಚರ್ಮವು ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ, 7-ಡಿಹೈಡ್ರೊಕೊಲೆಸ್ಟರಾಲ್ ಎಂಬ ಸ್ಟೀರಾಯ್ಡ್ ಸ್ಥಗಿತಗೊಳ್ಳುತ್ತದೆ.

    ಇದು ವಿಟಮಿನ್ ಡಿ ರಚನೆಗೆ ಕಾರಣವಾಗುತ್ತದೆ. ಆಹಾರದ ಜೊತೆಗೆ, ಸೂರ್ಯನಿಗೆ ಒಡ್ಡಿಕೊಳ್ಳುವುದು ವಿಟಮಿನ್ ಡಿಗೆ ಅಗತ್ಯ ಎಂದು ತಜ್ಞರು ಹೇಳುತ್ತಾರೆ.

    ಇದನ್ನೂ ಓದಿ: ಬೆಳಗಿನ ಉಪಹಾರದಲ್ಲಿ ಅವಲಕ್ಕಿ ಸೇರಿಸಿ ಹೀಗೆ ತೂಕ ಇಳಿಸಿಕೊಳ್ಳಿ

    ವಿಟಮಿನ್ ಡಿಗೆ ಆರೋಗ್ಯಕರ ಆಹಾರ

    ವಿಟಮಿನ್ ಡಿ ಕೊರತೆ ಸ್ನಾಯು ನೋವು, ಆಯಾಸ ಮತ್ತು ಖಿನ್ನತೆಗೆ ಕಾರಣವಾಗುತ್ತದೆ. ಹಾಗಾಗಿ ಆಹಾರದಲ್ಲಿ ವಿಟಮಿನ್ ಡಿ ಸಮೃದ್ಧ ಪದಾರ್ಥ ಸೇವಿಸಬೇಕು. ಪಾಲಕ, ಎಲೆಕೋಸು, ಸೋಯಾಬೀನ್ ಮತ್ತು ಬೀನ್ಸ್‌, ಅಣಬೆ ತರಕಾರಿ, ಕಿತ್ತಳೆ ಮತ್ತು ಬಾಳೆಹಣ್ಣು ತಿನ್ನುವುದು ಪ್ರಯೋಜನಕಾರಿಯಾಗಿದೆ.
    Published by:renukadariyannavar
    First published: