ಮಗು ಜನಿಸಿದ ನಂತರ ತಾಯಿಗೆ ಬೆನ್ನು ನೋವು ಬರೋದೇಕೆ?; ಇಲ್ಲಿದೆ ಮಾಹಿತಿ

ಮಗು ಜನಿಸುವ ಸಂದರ್ಭದಲ್ಲಿ ಬೆನ್ನಿನ ಕೆಳಭಾಗದಲ್ಲಿ ಅನಸ್ತೇಷಿಯಾ ನೀಡುತ್ತಾರೆ. ಹೈ ಡೋಸ್​ನಿಂದಾಗಿ ಸಮಸ್ಯೆ ಉಂಟಾಗುತ್ತದೆ ಎಂಬುದು ಕೆಲವರ ನಂಬಿಕೆ. ಆದರೆ, ಇದು ಸಂಪೂರ್ಣ ಸುಳ್ಳು ಎನ್ನುತ್ತದೆ ವೈದ್ಯ ಲೋಕ.

news18-kannada
Updated:June 25, 2020, 11:32 AM IST
ಮಗು ಜನಿಸಿದ ನಂತರ ತಾಯಿಗೆ ಬೆನ್ನು ನೋವು ಬರೋದೇಕೆ?; ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
  • Share this:
ಮಗು ಜನಿಸಿದ ನಂತರ ತಾಯಿಗೆ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಶಮನ ಮಾಡಿಕೊಳ್ಳುವುದು ತಾಯಿಗೆ ಇರೋ ದೊಡ್ಡ ಸವಾಲು ಕೂಡ ಹೌದು. ಅಂದಹಾಗೆ, ಇದಕ್ಕೆ ಕಾರಣವೇನು ಎನ್ನುವುದು ಅನೇಕರಿಗೆ ಗೊತ್ತಿರುವುದಿಲ್ಲ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಮಗು ಜನಿಸುವ ಸಂದರ್ಭದಲ್ಲಿ ಬೆನ್ನಿನ ಕೆಳಭಾಗದಲ್ಲಿ ಅನಸ್ತೇಷಿಯಾ ನೀಡುತ್ತಾರೆ. ಹೈ ಡೋಸ್​ನಿಂದಾಗಿ ಸಮಸ್ಯೆ ಉಂಟಾಗುತ್ತದೆ ಎಂಬುದು ಕೆಲವರ ನಂಬಿಕೆ. ಆದರೆ, ಇದು ಸಂಪೂರ್ಣ ಸುಳ್ಳು ಎನ್ನುತ್ತದೆ ವೈದ್ಯ ಲೋಕ. ಇದಕ್ಕೆ ಬೇರೆಯದೇ ಕಾರಣಗಳಿವೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಮಹಿಳೆ ಗರ್ಭ ಧರಿಸಿದ ನಂತರದಲ್ಲಿ ಆಕೆಯ ದೇಹದಲ್ಲಿ ಭಾರೀ ಬದಲಾವಣೆಗಳು ಕಾಣುತ್ತವೆ. ಇದು ಬೆನ್ನು ನೋವು ಕಾಣಿಸಿಕೊಳ್ಳಲು ಮೂಲ ಕಾರಣ. ಇನ್ನು, ಮಗು ಜನಿಸಿದ ನಂತರ ದೇಹದ ತೂಕ ಹೆಚ್ಚಾಗುತ್ತದೆ. ಇದು ದೇಹದ ಮೇಲೆ ಭಾರೀ ಒತ್ತಡವನ್ನು ಹೇರುತ್ತದೆ.

ಸಾಮಾನ್ಯ ಹೆರಿಗೆ ಸಂದರ್ಭದಲ್ಲಿ ಮಹಿಳೆ ಕೆಲ ಮಾಂಸಖಂಡಗಳ ಸಹಾಯ ಪಡೆಯುತ್ತಾಳೆ. ಇದು ಸಾಮಾನ್ಯ ದಿನದಲ್ಲಿ ಬಳಕೆ ಆಗುವುದಿಲ್ಲ. ಹೀಗಾಗಿ, ಇವು ಹೆಚ್ಚಿನ ಒತ್ತಡ ಪಡೆಯುತ್ತವೆ. ಇದರಿಂದಲೂ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ.

ಮಹಿಳೆ ಇಡೀ ದಿನ ಮಗುವಿನ ಮೇಲೆ ಗಮನ ಹರಿಸುತ್ತಾಳೆ. ಇದರಿಂದ ಆಕೆಗೆ ಒತ್ತಡ ಹೆಚ್ಚಾಗುತ್ತದೆ. ಹೀಗಾಗಿ, ಈ ಒತ್ತಡದಿಂದಲೂ ಆಕೆಗೆ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ ಎಂಬುದು ವೈದ್ಯರ ಮಾತು
First published:June 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading