Health Tips: : ನಿದ್ರಾಹೀನತೆ ಏನೆಲ್ಲ ಸಮಸ್ಯೆಗಳಿಗೆ ಕಾರಣವಾಗುತ್ತೆ ಗೊತ್ತಾ?

Sleeping Problem : ನಿದ್ದೆ ಸಮಸ್ಯೆ ಅಪರೂಪಕ್ಕೆ ಒಮ್ಮೆ ಕಾಡುವುದು ಸಹಜ. ಆದರೆ ಆ ಸಮಸ್ಯೆ ಅತಿ ಹೆಚ್ಚು ದಿನಗಳಿಗೆ ಮುಂದುವರೆದಲ್ಲಿ.ಅದರ ಬಗ್ಗೆ ಗಮನಹರಿಸುವುದು ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:ನಿದ್ದೆ  ಮನುಷ್ಯನ ಜೀವನಕ್ಕೆ ಅತಿ ಮುಖ್ಯವಾದದ್ದುನಮಗೆ ದಿನವಿಡೀ ಸರಿಯಾಗಿ ಕಾರ್ಯನಿರ್ವಹಿಸಲು, 8 ಗಂಟೆಗಳ ಉತ್ತಮ ನಿದ್ರೆ ಅನಿವಾರ್ಯ. ಕೆಲವರಿಗೆ ಅದಕ್ಕಿಂತ ಸ್ವಲ್ಪ ಹೆಚ್ಚು ಬೇಕಾಗಬಹುದು ಮತ್ತು ಕೆಲವರಿಗೆ ಅವರ ವಯಸ್ಸಿನ ಆಧಾರದ ಮೇಲೆ ಕಡಿಮೆ ಬೇಕಾಗಬಹುದು. ನಿದ್ರೆ ಒಂದು ಪ್ರಮುಖ ಕಾರ್ಯ. ನಮ್ಮನ್ನ ರಿಫ್ರೆಶ್ ಮಾಡುವುದು ನಿದ್ದೆಯಿಂದ ಸಾಧ್ಯ. ನಾವು ನಿದ್ದೆಯಿಂದ ಎದ್ದಾಗ ರಿಫ್ರೆಶ್ ಮಾತ್ರವಲ್ಲದೇ, ರೀಚಾರ್ಚ್ ಕೂಡ ಆಗಿರುತ್ತೇವೆ. ಮನುಷ್ಯರಿಗೆ ಬದುಕಲು ಆಹಾರ, ನೀರು ಮತ್ತು ಗಾಳಿ ಅಗತ್ಯವಿರುವಂತೆ ನಿದ್ರೆ ಬೇಕು. ರಾತ್ರಿ ನಿದ್ದೆ ಮಾಡದೇ ಇರುವುದು ಆರೋಗ್ಯಕ್ಕೆ ಹಾನಿಕಾರಕ, ಆದರೆ ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ನಿದ್ದೆಗೆಡುವುದು ತೊಂದರೆಯಾಗುವುದಿಲ್ಲ. ಆದರೆ ಹೆಚ್ಚು ನಿದ್ದೆ ಗೆಡುವುದು, ನಿಮ್ಮ ಮಾನಸಿಕ ಮತ್ತು ದೈಹಿಕವಾಗಿ ಹೆಚ್ಚು ಕೆಟ್ಟ ಪರಿಣಾಮಗಳಾಗುತ್ತದೆ

ಆಧುನಿಕ ಜಗತ್ತಿನಲ್ಲಿ, ವಿಶೇಷವಾಗಿ ಕೊರೊನಾ ಸಮಯದಲ್ಲಿ ನಿದ್ರಾಹೀನತೆ ಸಮಸ್ಯೆ ಹೆಚ್ಚಾಗಿದೆ. ಸರಿಯಾದ ಸಮಯದಲ್ಲಿ ಸರಿಯಾಗಿ ನಿದ್ರೆ ಮಾನಸಿಕ ನೆಮ್ಮದಿ ಹಾಗೂ ದೈಹಿಕ ಯೋಗಕ್ಷೇಮಕ್ಕೆ ಅತ್ಯಗತ್ಯ ಎಂದು ಸಂಶೋಧನೆಗಳು ಸಾಬೀತು ಮಾಡಿವೆ.  ನಿದ್ರಾಹೀನತೆ ಬುದ್ದಿ ಮತ್ತು ಭಾವನಾತ್ಮಕ ಕಾರ್ಯಗಳ ಮೇಲೆ ಪರಿಣಾಮ ಬೀರುವುದರ ಜೊತೆಗೆ, ಮಾನಸಿಕ ಖಿನ್ನತೆ, ಆತಂಕ, ಮತ್ತು ಇತರ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳಂತಹ ಮಾನಸಿಕ ರೋಗಗಳಿಗೆ ಕಾರಣವಾಗಬಹುದು.

ಆರೋಗ್ಯಕರ ನಿದ್ರೆಯ ಅಭ್ಯಾಸವು ವ್ಯಕ್ತಿಯ ಆರೋಗ್ಯಕ್ಕೆ ಪ್ರಮುಖ. . ಆಗಾಗ್ಗೆ, ನಿದ್ರೆಯನ್ನು ಕಡೆಗಣಿಸಲಾಗುತ್ತದೆ ಅಥವಾ ನಿರ್ಲಕ್ಷಿಸಲಾಗುತ್ತದೆ. ನಾವು ಯಾವುದೇ ತೊಂದರೆಯಿಲ್ಲದೆ ದಿನವಿಡೀ ಕಾರ್ಯನಿರ್ವಹಿಸಲು ಶ್ರಮಿಸುತ್ತಿರುವಾಗ ನಮಗೆ ನಿದ್ರೆಯ ಅವಶ್ಯಕತೆ ಹೆಚ್ಚಿರುತ್ತದೆ.  ನಿದ್ರೆಯ ಕೊರತೆಯಿರುವ ಮಕ್ಕಳು ವಯಸ್ಕರಿಗಿಂತ ವಿಭಿನ್ನ ರೋಗಲಕ್ಷಣಗಳನ್ನು ಹೊಂದಿರುವ ಸಾಧ್ಯತೆಯಿದೆ. ಮಕ್ಕಳಲ್ಲಿ, ನಿದ್ರೆಯ ಕೊರತೆಯು ಅತಿಯಾದ ಚಟುವಟಿಕೆ ಮತ್ತು ಗಮನ ಶಕ್ತಿ ಕಡಿಮೆಯಾಗುವುದಕ್ಕೆ ಕಾರಣವಾಗುತ್ತದೆ ಅಲ್ಲದೇ  ಏಕಾಏಕಿ  ನಡುವಳಿಕೆಯಲ್ಲಿ ಬದಲಾವಣೆಯಾಗುತ್ತದೆ. ಹಾಗೂ ಶಾಲಾ ಚಟುವಟಿಕೆಗಳಲ್ಲಿ ಗಮನ ಕಡಿಮೆಯಾಗುತ್ತದೆ. ಈ ನಿದ್ರಾ ಹೀನತೆ ಸಮಸ್ಯೆಯಿಂದ ಉಂಟಾಗುವ ಸಮಸ್ಯೆಗಳು ಹಲವಾರು.

ಇದನ್ನೂ ಓದಿ: ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಇಲ್ಲಿದೆ ಸುಲಭ ಉಪಾಯ

ಆಯಾಸ: ನಿದ್ರೆ ಕಡಿಮೆಯಾದಾಗ ಆಯಾಸ ಹೆಚ್ಚಾಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ದೈಹಿಕವಾಗಿ ಆಯಾಸವಾಗುತ್ತದೆ. ಅಲ್ಲದೇ ಮತ್ತೆ ನಿದ್ರೆ ಮಾಡಬೇಕು ಎಂದು ಅನಿಸುತ್ತದೆ. ಯಾವುದೇ ಕೆಲಸಗಳನ್ನು ಮಾಡಲು ಆಸಕ್ತಿ ಇರುವುದಿಲ್ಲ.

ಗಮನದ ಕೊರತೆ: ನಿದ್ದೆ ಕಡಿಮೆಯಾದಾಗ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಕಷ್ಟವಾಗುತ್ತದೆ. ಗೊಂದಲ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಗಮನ ಎಲ್ಲೋ ಇರುತ್ತದೆ. ನೀವು ಸ್ನೇಹಿತರೊಂದಿಗೆ ಇದ್ದೀರಿ ಎಂದರೆ, ಅವರೊಡನೆ ಒಳ್ಳೆಯ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ. ನೀವು ಎಲ್ಲೋ ಕಳೆದು ಹೋದಂತೆ ಇರುತ್ತೀರಿ.  ಅಷ್ಟೇ ಅಲ್ಲದೇ ನಿದ್ರಾ ಹೀನತೆ ನೆನಪಿನ ಶಕ್ತಿಯನ್ನು ಕುಗ್ಗಿಸುತ್ತದೆ.

ಮೂಡ್ ಸ್ವಿಂಗ್ಸ್:  ನಿದ್ರಾ ಹೀನತೆ ನಮ್ಮ ನಡುವಳಿಕೆಯಲ್ಲಿ ಹೆಚ್ಚಿನ ಬದಲಾವಣೆಯನ್ನು ತರುತ್ತದೆ. ನಮಗೆ ಸರಿಯಾಗಿ ನಿದ್ದೆ ಬರದಿದ್ದಾಗ ಕಿರಿ ಕಿರಿ ಅನುಭವಿಸುತ್ತೇವೆ. ಕೆಲ ನಿಮಿಷಗಳ ಹಿಂದೆ ಇದ್ದ ನಮ್ಮ ಮೂಡ್ ಬದಲಾಗಿರುತ್ತದೆ. ಬಹಳ ಹಿಂಸೆಯನ್ನು ಅನುಭವಿಸುತ್ತೇವೆ. ನಿದ್ರೆ ಸರಿಯಾಗಿ ಆಗದಿದ್ದಾಗ, ನಮಗೆ ಪ್ರತಿ ಸಣ್ಣ ಸಣ್ಣ ವಿಚಾರಗಳು ತಪ್ಪು ಎಂದು ಅನಿಸಿ, ಕೋಪ, ಒತ್ತಡಗಳು ಹೆಚ್ಚಾಗುತ್ತದೆ.

ತೂಕದಲ್ಲಿ ಹೆಚ್ಚಳ: ಹಸಿವು ಮತ್ತು ಭಾವನೆಗಳನ್ನು ನಿಯಂತ್ರಿಸುವ ಹಾರ್ಮೋನುಗಳ ಮೇಲೆ ನಿದ್ರೆ ಪರಿಣಾಮ ಬೀರಬಹುದು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ನೀವು ಚೆನ್ನಾಗಿ ನಿದ್ರೆ ಮಾಡಬೇಕು. ನಿದ್ರೆ ಸರಿಯಾಗದಿದ್ದಲ್ಲಿ, ನಿಮ್ಮ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಛಾಗಿ, ತು ಸಹ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಅಲ್ಲದೇ ಡಯಾಬಿಟೀಸ್  ಟೈಪ್ 2 ಆಗುವ  ಸಾಧ್ಯತೆ ಹೆಚ್ಚು.
Published by:Sandhya M
First published: