Toilet Flush: ಫ್ರೆಶ್ ಆದ್ಮೇಲೆ ಫ್ಲಶ್ ಮಾಡುವಾಗ ಟಾಯ್ಲೆಟ್ ಸೀಟಿನ ಮುಚ್ಚಳ ಯಾಕೆ ಮುಚ್ಚಬೇಕು?

ನೀವು ಫ್ರೆಶ್ ಆದ ನಂತರ ಫ್ಲಶ್ ಮಾಡುವ ಮೊದಲು ಟಾಯ್ಲೆಟ್ ಸೀಟಿನ ಮುಚ್ಚಳ ಮುಚ್ಚದೇ ಫ್ಲಶ್ ಮಾಡುತ್ತೀರಾ? ಹಾಗಿದ್ದರೆ ಮೊದಲು ನಿಮ್ಮ ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ. ಟಾಯ್ಲೆಟ್ ಸೀಟಿನ ಮುಚ್ಚಳ ಹಾಕದೇ ನೀವು ಫ್ಲಶ್ ಮಾಡುವುದು ಅನಾರೋಗ್ಯಕ್ಕೆ ಹಾದಿ ಮಾಡಿ ಕೊಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮನುಷ್ಯನ (Human) ದೇಹಕ್ಕೆ (Body) ನೀರು (Water) ಮುಖ್ಯ, ಗಾಳಿ ಮುಖ್ಯ, ಸೂರ್ಯನ ಬೆಳಕು, ಆಹಾರ, ಆರೋಗ್ಯ (Health) ಎಲ್ಲವೂ ಬೇಕು. ಅದರ ಜೊತೆಗೆ ಇದರಷ್ಟೇ ಮುಖ್ಯವಾದದ್ದು ಏನು ಗೊತ್ತಾ ಅದು ಶೌಚಾಲಯ (Toilet). ಹೌದು, ಶೌಚಾಲಯವು ಅತ್ಯಂತ ಅವಶ್ಯಕ ಮತ್ತು ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಈ ವಿಷಯ ತುಂಬಾ ಮುಖ್ಯ. ಶೌಚಾಲಯ ಮತ್ತು ಸ್ವಚ್ಛತೆ ಮುಖ್ಯ. ಶೌಚಾಲಯದಲ್ಲಿ ಕುಳಿತು ಗಂಟೆಗಟ್ಟಲೆ ಮೊಬೈಲ್ ನೋಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಟಾಯ್ಲೆಟ್ ಸೀಟಿನ ಮೇಲೆ ಕುಳಿತು ಮೂವಿ, ಮನರಂಜನೆ ವಿಡಿಯೋ ನೋಡುವುದು, ಗಂಟೆಗಿಂತ ಹೆಚ್ಚು ಕಾಲ ಟಾಯ್ಲೆಟ್ ಬಳಕೆ ಮಾಡುವುದು ಸಾಕಷ್ಟು ಜನರಿಗೆ ರೂಢಿಯಾಗಿದೆ.

    ನೀವು ಫ್ರೆಶ್ ಆದ ನಂತರ ಫ್ಲಶ್ ಮಾಡುವ ಮೊದಲು ಟಾಯ್ಲೆಟ್ ಸೀಟಿನ ಮುಚ್ಚಳ ಮುಚ್ಚುವುದು

    ಆದರೆ ನೀವು ಫ್ರೆಶ್ ಆದ ನಂತರ ಫ್ಲಶ್ ಮಾಡುವ ಮೊದಲು ಟಾಯ್ಲೆಟ್ ಸೀಟಿನ ಮುಚ್ಚಳ ಮುಚ್ಚದೇ ಫ್ಲಶ್ ಮಾಡುತ್ತೀರಾ? ಹಾಗಿದ್ದರೆ ಮೊದಲು ನಿಮ್ಮ ಈ ಅಭ್ಯಾಸವನ್ನು ಬದಲಾಯಿಸಿಕೊಳ್ಳಿ. ಟಾಯ್ಲೆಟ್ ಸೀಟಿನ ಮುಚ್ಚಳ ಹಾಕದೇ ನೀವು ಫ್ಲಶ್ ಮಾಡುವುದು ಅನಾರೋಗ್ಯಕ್ಕೆ ಹಾದಿ ಮಾಡಿ ಕೊಡುತ್ತದೆ.

    ಒಂದು ವೇಳೆ ನೀವು ಟಾಯ್ಲೆಟ್ ಮುಚ್ಚಳವನ್ನು ಮುಚ್ಚಿ ಫ್ಲಶ್ ಮಾಡಿದರೆ ಅದು ನಿಮ್ಮನ್ನು ಅನೇಕ ತೊಂದರೆಗಳಿಂದ ರಕ್ಷಣೆ ಮಾಡುತ್ತದೆ. ಇಲ್ಲಿ ನಾವು ಫ್ಲಶ್ ಮಾಡುವ ಮೊದಲು ಟಾಯ್ಲೆಟ್ ಸೀಟಿನ ಮುಚ್ಚಳ ಯಾಕೆ ಮುಚ್ಚಬೇಕು? ಟಾಯ್ಲೆಟ್ ಸೀಟಿನ ಮುಚ್ಚಳ ಮುಚ್ಚದೇ ಹೋದರೆ ಏನಾಗುತ್ತದೆ ಎಂದು ನೀವು ತಿಳಿಯಲೇಬೇಕು.

    ಇದನ್ನೂ ಓದಿ: ಆರೋಗ್ಯಕರ ಮತ್ತು ಸಮತೋಲಿತ ಆಹಾರದ ಮೂಲಕ ತೂಕ ಇಳಿಸಿಕೊಂಡಿರುವ ಮಹಿಳೆಯ ಜರ್ನಿ ಹೀಗಿದೆ…

    ಬ್ಯಾಕ್ಟೀರಿಯಾ ಹರಡುತ್ತದೆ

    ನಮ್ಮ ದೇಹದಿಂದ ಹೊರಬರುವ ಮಲದೊಂದಿಗೆ ಅನೇಕ ರೀತಿಯ ವಿಷಗಳು ಮತ್ತು ಬ್ಯಾಕ್ಟೀರಿಯಾಗಳು ಸಹ ಹೊರ ಬರುತ್ತವೆ. ನಮ್ಮ ದೇಹವು ನಿಯಮಿತವಾಗಿ ಕಲುಷಿತ ಹಾಗೂ ಕಲ್ಮಶವನ್ನು ಹೊರ ಹಾಕುತ್ತದೆ. ನೀವು ಫ್ರೆಶ್ ಆದ ನಂತರ ಹೆಚ್ಚಿನ ವೇಗದ ನೀರಿನಿಂದ ಅದನ್ನು ಫ್ಲಶ್ ಮಾಡಿದಾಗ,

    ಈ ಬ್ಯಾಕ್ಟೀರಿಯಾಗಳು ಗಾಳಿಯಲ್ಲಿ ಬರುತ್ತವೆ ಮತ್ತು ನಂತರ ಬಾತ್ರೂಮ್ನಲ್ಲಿ ಇರಿಸಲಾದ ಇತರ ವಸ್ತುಗಳನ್ನು ತಲುಪುತ್ತವೆ. ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಇ-ಕೋಲಿ ಬ್ಯಾಕ್ಟೀರಿಯಾವು ಫ್ಲಶ್‌ನಲ್ಲಿ ಬೆಳೆಯುತ್ತದೆ.

    ಮತ್ತು ಈ ಬ್ಯಾಕ್ಟೀರಿಯಾವು ಫ್ಲಶ್ ಮಾಡಿದ ನಂತರ ಗಾಳಿಯಲ್ಲಿ ಬಂದಾಗ ಅದು 6 ಗಂಟೆಗಳ ಕಾಲ ಗಾಳಿಯಲ್ಲಿ ಉಳಿಯುತ್ತದೆ. ಅಂದರೆ ಈ ಬ್ಯಾಕ್ಟೀರಿಯಾ ಸಂಪರ್ಕಕ್ಕೆ ಬಂದ ನಂತರ ನೀವು ಅನಾರೋಗ್ಯಕ್ಕೆ ಒಳಗಾಗುವ ಎಲ್ಲಾ ಸಾಧ್ಯತೆಗಳು ಹೆಚ್ಚಿರುತ್ತವೆ.

    ಫ್ಲಶ್ ನಂತರ ಸೀಟಿನ ಮೇಲೆ ಕೂರುವ ನೀರಿನ ಹನಿಗಳು

    ನೀವು ಫ್ರೆಶ್ ಆದ ನಂತರ ಫ್ಲಶ್ ಮಾಡಿದಾಗ, ನೀರಿನ ಕಣಗಳು ಫ್ಲಶ್ ನ ನಂತರ ಟಾಯ್ಲೆಟ್ ಸೀಟಿನ ಮೇಲೆ ಬಂದು ಕೂರುತ್ತವೆ. ಫ್ಲಶ್‌ನಿಂದ ತುಂಬಾ ಸೂಕ್ಷ್ಮವಾದ ನೀರಿನ ಹನಿಗಳು ಹೊರ ಬರುತ್ತವೆ. ನೀವು ತೆರೆದ ಕಣ್ಣುಗಳಿಂದ ಅವುಗಳನ್ನು ನೋಡಲು ಸಾಧ್ಯವಿಲ್ಲ.

    ಈ ನೀರಿನ ಹನಿಗಳು ಬ್ಯಾಕ್ಟೀರಿಯಾದಿಂದ ತುಂಬಿರುತ್ತವೆ ಮತ್ತು ಸ್ನಾನಗೃಹದಲ್ಲಿ ಇರಿಸಲಾದ ಎಲ್ಲಾ ವಸ್ತುಗಳ ಮೇಲೆ ಕೂರುತ್ತವೆ. ನಿಮ್ಮ ಟೂತ್ ಬ್ರಷ್, ಸೋಪ್, ಮೇಕ್ಅಪ್ ಸ್ಟಫ್ ಇತ್ಯಾದಿಗಳ ಮೇಲೆ. ನೀವು ಅವುಗಳನ್ನು ಉಸಿರಾಟದ ಮೂಲಕವೂ ಉಸಿರಾಡಬಹುದು. ಫ್ಲಶ್ ಮಾಡುವ ಮೊದಲು ಮುಚ್ಚಳ ಮುಚ್ಚುವುದು ಎಷ್ಟು ಮುಖ್ಯ ಎಂದು ನೀವು ಅರ್ಥ ಮಾಡಿಕೊಳ್ಳಬೇಕು.

    ಯಾವ ರೋಗಗಳು ಹರಡುತ್ತವೆ

    ಫ್ಲಶ್ ಮಾಡುವಾಗ ನೀವು ಮುಚ್ಚಳ ಮುಚ್ಚದೇ ಹೋದರೆ ನಿಮ್ಮ ಸ್ನಾನಗೃಹದಲ್ಲಿ ಅತಿಸಾರ ಉಂಟು ಮಾಡುವ ಬ್ಯಾಕ್ಟೀರಿಯಾಗಳು 12 ಪಟ್ಟು ಹೆಚ್ಚಾಗುತ್ತದೆ. ಇದಲ್ಲದೆ, ಬಾತ್ರೂಮ್ನಲ್ಲಿ ಹರಡುವ ಬ್ಯಾಕ್ಟೀರಿಯಾವು ನಿಮಗೆ ವಾಂತಿ, ಕರೋನಾ ವೈರಸ್, ಇನ್ಫ್ಲುಯೆನ್ಸದಂತಹ ಅಪಾಯಕಾರಿ ಕಾಯಿಲೆ ಉಂಟು ಮಾಡುತ್ತದೆ.

    ಇದನ್ನೂ ಓದಿ: ಮಳೆಗಾಲದಲ್ಲಿ ನಿಮ್ಮ ಕೂದಲಿನ ಆರೈಕೆ ಈ ರೀತಿ ಮಾಡಿ ನೋಡಿ

    ಶೌಚಾಲಯಗಳು ಏಕೆ ಅಗತ್ಯ

    ಶೌಚಾಲಯಗಳ ಅಗತ್ಯತೆ ಯಾಕಿದೆ ಎಂದು ನೀವು ಈ ಸಮಸ್ಯೆಯನ್ನು ಸ್ವಲ್ಪ ಗಂಭೀರವಾಗಿ ಪರಿಗಣಿಸಿ.  ಶೌಚಾಲಯಗಳು ನಮ್ಮ ಭೂಮಿಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ.
    Published by:renukadariyannavar
    First published: