Cooking Oil: ಅಡುಗೆ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡಿದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ

ಪದೇ ಪದೇ ಅಡುಗೆ (Cooking Oil) ಎಣ್ಣೆಯನ್ನು ಬಿಸಿ ಮಾಡುತ್ತಿದ್ದರೆ ಮತ್ತು ಹಲವು ಬಾರಿ ಎಣ್ಣೆಯನ್ನು ಮರುಬಳಕೆ ಮಾಡಿದರೆ ಏನೆಲ್ಲಾ ಆಗುತ್ತದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಾಮಾನ್ಯವಾಗಿ ಪಕೋಡ, ಪೂರಿ, ಸಮೋಸ ಮಾಡಿದ ನಂತರ ಮಿಕ್ಕಿದ ಎಣ್ಣೆಯನ್ನು (Oil) ಸಂಗ್ರಹಿಸಿ ಬೇರೆ ಅಡುಗೆಗಳಿಗೆ ಬಳಸಿಕೊಳ್ಳುವುದು ರೂಢಿಯಲ್ಲಿದೆ. ಅದರಲ್ಲೂ ಗಗನಕ್ಕೇರಿರುವ ಈಗಿನ ಖಾದ್ಯ ತೈಲವನ್ನು ಚಿನ್ನದಷ್ಟೇ (Gold) ಜೋಪಾನ ಮಾಡಲಾಗುತ್ತಿದೆ. ಒಂದು ಹನಿ ಎಣ್ಣೆಯು ವ್ಯರ್ಥವಾಗದಂತೆ ಬಳಸಲಾಗುತ್ತಿದೆ. ಆದರೆ ಹೀಗೆ ಪದೇ ಪದೇ ಅಡುಗೆ (Cooking Oil) ಎಣ್ಣೆಯನ್ನು ಬಿಸಿ ಮಾಡುತ್ತಿದ್ದರೆ ಮತ್ತು ಹಲವು ಬಾರಿ ಎಣ್ಣೆಯನ್ನು ಮರುಬಳಕೆ ಮಾಡಿದರೆ ಏನೆಲ್ಲಾ ಆಗುತ್ತದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ. ಹೌದು ಅಡುಗೆ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡಿ ಸೇವಿಸುವುದರಿಂದ ಕ್ಯಾನ್ಸರ್ (Cancer), ಯಕೃತ್ತಿನ ವೈಫಲ್ಯ, ಮೆದುಳಿನ ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ರೋಗಗಳಿಗೆ ನಾವೇ ಆಹ್ವಾನ ನೀಡಿ ಕರೆಸಿಕೊಂಡಂತೆ ಎನ್ನುತ್ತಾರೆ ತಜ್ಞರು.

ಚಂಡೀಗಢ ಪಿಜಿಐ (ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ) ಪಂಜಾಬ್ ಸರ್ಕಾರಕ್ಕೆ ಅಡುಗೆ ಎಣ್ಣೆಯ ಬಳಕೆಯ ಅಧ್ಯಯನ ವರದಿಯನ್ನು ಸಲ್ಲಿಸಿದೆ. ವರದಿಯಲ್ಲಿ, ಅಡುಗೆ ಎಣ್ಣೆಯನ್ನು 4 ಬಾರಿ ಹೆಚ್ಚು ಬಿಸಿಮಾಡುವುದರಿಂದ ಅದರಲ್ಲಿ ವಿಷಕಾರಿ ಅಂಶ ಬಿಡುಗಡೆಯಾಗುತ್ತದೆ ಎಂದು ಉಲ್ಲೇಖ ಮಾಡಿದೆ.

ಅಡಿಗೆ ಎಣ್ಣೆಯನ್ನು 4ಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡಬೇಡಿ:

ಅಡುಗೆ ಎಣ್ಣೆಯ ಬಳಕೆಯನ್ನು 4ಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡುವುದನ್ನು ನಿಷೇಧಿಸಬೇಕು ಎಂದು ವರದಿ ಶಿಫಾರಸು ಮಾಡಿದೆ. ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಿಗೂ ಇದೇ ಬಗ್ಗೆ ಸೂಚನೆ ನೀಡುವಂತೆ ಪಂಜಾಬ್ ಸರ್ಕಾರಕ್ಕೆ ಪಿಜಿಐ ಒತ್ತಾಯಿಸಿದೆ. ಈ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಬಳಸುವ ತೈಲದ ಮೇಲೆ ನಿಗಾ ಇಡಲು ತನಿಖಾ ತಂಡವನ್ನು ರಚಿಸಬೇಕು ಎಂದೂ ಕೂಡ ಹೇಳಲಾಗಿದೆ.

ಇದನ್ನೂ ಓದಿ: Acidity Treatment: ಅಸಿಡಿಟಿ ಸಮಸ್ಯೆ ಹೆಚ್ಚಿದೆಯೇ? ಹಾಗಿದ್ರೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ವಿಷವಾಗಿ ಪರಿವರ್ತನೆಯಾಗುತ್ತದಂತೆ:

ರೆಸ್ಟೊರೆಂಟ್ ಅಥವಾ ಸ್ಟ್ರೀಟ್ ಫುಡ್ ಗಿಂತ ಮನೆಯಲ್ಲಿ ತಯಾರಿಸಿದ ಆಹಾರ ಸುರಕ್ಷಿತ ಮತ್ತು ಆರೋಗ್ಯಕರ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದಾಗ್ಯೂ ಬೀದಿ ಬದಿಯ ಖಾದ್ಯಗಳಿಗೆ ಮಾರು ಹೋಗುವ ನಮಗೆ ಸಮೋಸಾ ಸ್ಟಾಲ್‌ನಲ್ಲಿ ಒಂದೇ ಎಣ್ಣೆಯಲ್ಲಿ ಎಷ್ಟು ಬಾರಿ ಆಹಾರ ಪದಾರ್ಥವನ್ನು ಕರಿದಿದ್ದಾರೆ ಎಂದು ತಿಳಿಯುವುದು ಅತ್ಯಗತ್ಯವಾಗಿದೆ.

ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳು ಮುಚ್ಚಿದ ಅಡುಗೆ ಮನೆಯನ್ನು ಹೊಂದಿರುವುದರಿಂದ ಇದನ್ನು ತಿಳಿದುಕೊಳ್ಳುವುದು ಕಷ್ಟ. ಆದರೆ ಅದೇ ಎಣ್ಣೆಯನ್ನು ದಿನವಿಡೀ ಮತ್ತೆ ಬಿಸಿಮಾಡುವುದರಿಂದ ಅದು ಅಡುಗೆ ಎಣ್ಣೆಯನ್ನು 'ವಿಷ'ವಾಗಿ ಪರಿವರ್ತಿಸುತ್ತದೆ ಎಂದು ವರದಿಗಳು ಬಲವಾಗಿ ಹೇಳಿವೆ.

ಇದನ್ನೂ ಓದಿ: Weight loss Tips: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಿದ್ರೆ ಈ ಸಲಹೆಗಳನ್ನು ಮರೆಯದಿರಿ

ಪದೇ ಪದೇ ಎಣ್ಣೆಯನ್ನು ಬಿಸಿ ಮಾಡಿದರೆ ಏನಾಗುತ್ತದೆ?:

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಕೂಡ ಅಡುಗೆ ಎಣ್ಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಎಣ್ಣೆಯನ್ನು ಮತ್ತೆ ಬಿಸಿ ಮಾಡುವುದನ್ನು ತಪ್ಪಿಸಬೇಕು ಎಂದು ಹೇಳಿದೆ. ವೈದ್ಯಕೀಯ ಅಧ್ಯಯನಗಳ ಪ್ರಕಾರ,

1) ಅಡುಗೆ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡುವುದರಿಂದ ವಿಷಕಾರಿ ವಸ್ತುಗಳು ಹೊರಬರುತ್ತವೆ.
2) ಈ ವಿಷಕಾರಿ ವಸ್ತುಗಳು ದೇಹದಲ್ಲಿ ಸ್ವತಂತ್ರ ರಾಡಿಕಲ್ಗಳನ್ನು ಹೆಚ್ಚಿಸುತ್ತವೆ.
3) ಎಣ್ಣೆಯನ್ನು ಒಂದಕ್ಕಿಂತ ಹೆಚ್ಚು ಬಾರಿ ಬಿಸಿ ಮಾಡಿದಾಗ, ಕೊಬ್ಬಿನ ಕಣಗಳು ಅದರೊಳಗೆ ವಿಭಜನೆ ಆಗುತ್ತವೆ. ಇದರಿಂದಾಗಿ ಕೊಬ್ಬುಗಳು ಟ್ರಾನ್ಸ್ಫ್ಯಾಟ್‍ಗಳಾಗಿ ಬದಲಾಗುತ್ತವೆ ಮತ್ತು ತೈಲದ ಗುಣಮಟ್ಟವು ಸಹ ಹದಗೆಡುತ್ತದೆ.
4) ತೈಲದ ಈ ಟ್ರಾನ್ಸ್ಫ್ಯಾಟ್‌ಗಳು ದೇಹದಲ್ಲಿ ದ್ವಿಗುಣಗೊಳ್ಳುತ್ತವೆ, ಅದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿ ಅಧಿಕ ತೂಕಕ್ಕೆ ಸಹ ದಾರಿ ಮಾಡಿಕೊಡುತ್ತದೆ. ಇದು ಅಪಧಮನಿಗಳನ್ನು ಸಹ ನಿರ್ಬಂಧಿಸಬಹುದು, ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಇದಲ್ಲದೆ, ಕೊಲೊನ್, ಗಾಲ್ ಮೂತ್ರಕೋಶ ಮತ್ತು ಯಕೃತ್ತಿನ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ. ಈ ತೈಲವನ್ನು ಬಿಸಿಮಾಡಲಾಗುತ್ತದೆ, ಮತ್ತೆ ಮತ್ತೆ, ಅನೇಕ ರೀತಿಯ ನರವೈಜ್ಞಾನಿಕ ಅಸ್ವಸ್ಥತೆಗಳನ್ನು ಉಂಟುಮಾಡುತ್ತದೆ.

ಶೇಕಡಾ 25 ರಷ್ಟು ಕಲಬೆರಕೆ ಎಣ್ಣೆ:

ಮಾರುಕಟ್ಟೆಯಲ್ಲಿ ಲಭ್ಯವಿರುವ ಅಡುಗೆ ಎಣ್ಣೆಯಲ್ಲಿ ಶೇಕಡಾ 25 ರಷ್ಟು ಕಲಬೆರಕೆಯಾಗಿದೆ ಎಂದು ಈ ಹಿಂದಿನ ವರದಿಗಳಲ್ಲಿ ಬಹಿರಂಗಪಡಿಸಲಾಗಿತ್ತು. ಹೀಗಾಗಿ ಕಲಬೆರೆಕೆಯೇ ಹೆಚ್ಚಿರುವ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡುವುದರಿಂದ ಆರೋಗ್ಯಕ್ಕೆ ಇನ್ನಷ್ಟು ಅಪಾಯ ಬಂದೊದಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ, ಬಾಣಲೆಯಲ್ಲಿ ಹುರಿಯಲು ಅಥವಾ ಕರಿಯಲು ಅಗತ್ಯವಿರುವಷ್ಟು ಎಣ್ಣೆಯನ್ನು ಮಾತ್ರ ತೆಗೆದುಕೊಳ್ಳುವ ಕ್ರಮ ನಿಮ್ಮ ಬಜೆಟ್ ಜೊತೆಗೆ ನಿಮ್ಮ ಆರೋಗ್ಯವನ್ನು ಹತೋಟಿಯಲ್ಲಿಡಲು ಸಹಕರಿಸುತ್ತದೆ.
Published by:shrikrishna bhat
First published: