• Home
  • »
  • News
  • »
  • lifestyle
  • »
  • Puffed Rice Benefits: ಮಂಡಕ್ಕಿ ರುಚಿಕರ ಮಾತ್ರ ಅಲ್ಲ, ಆರೋಗ್ಯಕರ ಕೂಡ - ನಿಮ್ಮ ಹೃದಯಕ್ಕೆ ಬಹಳ ಒಳ್ಳೆಯದಂತೆ

Puffed Rice Benefits: ಮಂಡಕ್ಕಿ ರುಚಿಕರ ಮಾತ್ರ ಅಲ್ಲ, ಆರೋಗ್ಯಕರ ಕೂಡ - ನಿಮ್ಮ ಹೃದಯಕ್ಕೆ ಬಹಳ ಒಳ್ಳೆಯದಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Puffed Rice Health Benefits: ಕಾರ್ಬೋಹೈಡ್ರೇಟ್ ಗಳು, ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧತೆಯನ್ನು ಹೊಂದಿರುವ ಈ ಪ್ರಮುಖ ಭಾರತೀಯ ಆಹಾರವು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ.

  • Share this:

ನಾವು ಉತ್ತರ ಕರ್ನಾಟಕದ (North Karnataka) ಜಿಲ್ಲೆಗಳಿಗೆ (District) ಬಂದರೆ ಅಲ್ಲಿ ಮಂಡಕ್ಕಿಯಿಂದ ({Puffed Rice) ಮಾಡಿದ ತಿಂಡಿ ಸವಿಯಲು ಸಿಗುತ್ತದೆ. ಈ ಮಂಡಕ್ಕಿ ಒಗ್ಗರಣೆ ಬೆಳಗ್ಗೆ ತಿಂಡಿಗೆ ತುಂಬಾನೇ ಫೇಮಸ್ ಅಂತ ಹೇಳಬಹುದು. ಈ ಮಂಡಕ್ಕಿಯಿಂದ ರಸ್ತೆ ಬದಿಯಲ್ಲಿ ಮಾಡುವ ಭೇಲ್ ಪುರಿ ಮತ್ತು ಹುಬ್ಬಳ್ಳಿ-ಧಾರವಾಡಕ್ಕೆ ಬಂದರೆ ಗಿರ್ಮಿಟ್ ನೆನಪಿಗೆ ಬರುವುದು ಸಹಜ. ನಾವೆಲ್ಲರೂ ದಿನದ ಯಾವುದೇ ಸಮಯದಲ್ಲಿಯಾದರೂ ಈ ಮಂಡಕ್ಕಿ ಒಗ್ಗರಣೆ ಅಥವಾ ಭೇಲ್ ಪುರಿಯನ್ನು (Bhel Puri)  ತಿನ್ನಲು ಇಷ್ಟಪಡುತ್ತೇವೆ. ಅದರ ಕುರುಕಲು ರುಚಿಗಾಗಿ, ಈ ಆರೋಗ್ಯಕರ ತಿಂಡಿಯ ಆಯ್ಕೆಯು ಪಾಕೆಟ್-ಸ್ನೇಹಿ ಮಾತ್ರವಲ್ಲದೇ, ದೇಹದ ತೂಕವನ್ನು ಕಡಿಮೆ (Weight Loss) ಮಾಡಿಕೊಳ್ಳುವುದರಿಂದ ಹಿಡಿದು ರಕ್ತದೊತ್ತಡವನ್ನು ಸಹ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂಬುದು ಹಲವಾರು ಜನರಿಗೆ ಗೊತ್ತಿಲ್ಲ.


ಬಹುತೇಕರಿಗೆ ಈ ಮಂಡಕ್ಕಿ ಸೇವನೆಯಿಂದ ಅನೇಕ ಆರೋಗ್ಯಕರವಾದ ಪ್ರಯೋಜನಗಳಿವೆ ಅಂತ ಗೊತ್ತೇ ಇರುವುದಿಲ್ಲ. ಅದ್ಭುತ ಆರೋಗ್ಯ ಪ್ರಯೋಜನಗಳನ್ನು ತಿಳಿಯುವ ಮೊದಲು ನಾವು ಮೊದಲು ಅದರ ಪೌಷ್ಟಿಕಾಂಶದ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಈ ಪಫ್ಡ್ ರೈಸ್ ಎಂದರೆ ಮಂಡಕ್ಕಿ ಹೆಚ್ಚುವರಿ ಸೋಡಿಯಂ, ಕೊಬ್ಬು ಅಥವಾ ಕೊಲೆಸ್ಟ್ರಾಲ್ ಅನ್ನು ದೇಹಕ್ಕೆ ಸೇರಿಸದೆ ಪ್ರಮುಖ ಜೀವಸತ್ವಗಳು ಮತ್ತು ಖನಿಜಗಳನ್ನು ನೀಡುತ್ತದೆ.


100 ಗ್ರಾಂ ಪಫ್ಡ್ ರೈಸ್ ನಲ್ಲಿರುವ ಪೋಷಕಾಂಶಗಳು:


ಕ್ಯಾಲೋರಿ - 402


ಕೊಬ್ಬು – 0.5 ಗ್ರಾಂ


ಕೊಲೆಸ್ಟ್ರಾಲ್ – 0 ಮಿಲಿ ಗ್ರಾಂ


ಕಾರ್ಬೋಹೈಡ್ರೇಟ್ ಗಳು – 90 ಗ್ರಾಂ


ಫೈಬರ್ – 1.7 ಗ್ರಾಂ


ಪ್ರೋಟೀನ್ – 6 ಗ್ರಾಂ


ಕ್ಯಾಲ್ಸಿಯಂ – 6 ಮಿಲಿ ಗ್ರಾಂ


ಕಬ್ಬಿಣ - 31.7 ಮಿಲಿ ಗ್ರಾಂ


ವಿಟಮಿನ್ ಬಿ6 - 0.1 ಮಿಲಿ ಗ್ರಾಂ


ಮೆಗ್ನೀಸಿಯಮ್ - 25 ಮಿಲಿ ಗ್ರಾಂ


ಇದನ್ನೂ ಓದಿ: ಈ ರೀತಿಯಾಗಿ ಸ್ಟೋರ್ ಮಾಡಿದ್ರೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್​ ಬೇಗ ಹಾಳಾಗಲ್ಲ


ಕಾರ್ಬೋಹೈಡ್ರೇಟ್ ಗಳು, ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧತೆಯನ್ನು ಹೊಂದಿರುವ ಈ ಪ್ರಮುಖ ಭಾರತೀಯ ಆಹಾರವು ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಹೊಂದಿದೆ. ಇದರಲ್ಲಿ ವಿಟಮಿನ್ ಬಿ6 ಸಮೃದ್ಧವಾಗಿದೆ ಮತ್ತು ಸಂಕೀರ್ಣ ಪಿಷ್ಟವನ್ನು ಸಹ ಇದು ಹೊಂದಿರುತ್ತದೆ.


ಮಲಬದ್ಧತೆಯನ್ನು ನಿವಾರಿಸುತ್ತದೆ: ನಮ್ಮ ದೇಸಿ ಮುರ್ಮುರಾ ಅದರ ಸಮೃದ್ಧ ನಾರಿನಂಶದೊಂದಿಗೆ ಉತ್ತಮ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಇದು ನಿಮ್ಮ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸಲು ಮತ್ತು ಕರುಳಿನ ರಕ್ತಸ್ರಾವವನ್ನು ಸಹ ತಡೆಗಟ್ಟಲು ಸಹಾಯ ಮಾಡುತ್ತದೆ. ಇದು ಜೀರ್ಣಕಾರಿ ಪ್ರಚೋದಕವಾಗಿಯೂ ಕಾರ್ಯನಿರ್ವಹಿಸುತ್ತದೆ ಮತ್ತು ಜೀರ್ಣಕಾರಿ ರಸಗಳ ಸ್ರವಿಸುವಿಕೆಯನ್ನು ಉತ್ತೇಜಿಸುತ್ತದೆ, ಇದು ಕರುಳಿನ ಮೂಲಕ ಅಗತ್ಯ ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ.




ರೋಗ ನಿರೋಧಕ ಶಕ್ತಿ ವರ್ಧಕ: ಮಂಡಕ್ಕಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ವಿವಿಧ ಸೋಂಕುಗಳು, ಜ್ವರ, ನೆಗಡಿ, ಗಂಟಲು ನೋವು ಮತ್ತು ಇತರ ಉಸಿರಾಟದ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದರ ಸಮೃದ್ಧ ಉತ್ಕರ್ಷಣ ನಿರೋಧಕ, ಖನಿಜ ಮತ್ತು ಪೋಷಕಾಂಶಗಳ ಅಂಶವು ಆರೋಗ್ಯಕ್ಕೆ ಒಳ್ಳೆಯದು.


ನಿಮ್ಮ ಹೃದಯಕ್ಕೆ ಒಳ್ಳೆಯದು: ಮಂಡಕ್ಕಿ ರಕ್ತದೊತ್ತಡದ ಸಮಸ್ಯೆಗಳನ್ನು ಹೊಂದಿರುವವರಿಗೆ ಸರಿಯಾದ ತಿಂಡಿಯಾಗಿದೆ. ಇದು ರಕ್ತದೊತ್ತಡದ ಮಟ್ಟವನ್ನು ಸಾಮಾನ್ಯಗೊಳಿಸಲು ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡಲು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.


ಮೂಳೆಗಳನ್ನು ಬಲಪಡಿಸುತ್ತದೆ: ಮಂಡಕ್ಕಿ ನಿಮ್ಮ ಮೂಳೆಗಳಿಗೆ ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಡಿ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳ ಸಮೃದ್ಧತೆಯೊಂದಿಗೆ ಪ್ರಯೋಜನವನ್ನು ನೀಡುತ್ತದೆ, ಇದು ಸರಿಯಾದ ಮೂಳೆಯ ಕೋಶಗಳ ಬೆಳವಣಿಗೆ ಮತ್ತು ಪುನರುತ್ಪಾದನೆಗೆ ಸಹಾಯ ಮಾಡುತ್ತದೆ.


ಇದನ್ನೂ ಓದಿ: ಈ 5 ಆಹಾರಗಳಿದ್ರೆ ನೀವ್ ಬೇಗ ತೆಳ್ಳ ಆಗ್ತೀರಂತೆ


ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ: ಮಂಡಕ್ಕಿಯಲ್ಲಿರುವ ಫೈಬರ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್ ಗಳ ಸಮೃದ್ಧತೆಯು ನಿಮ್ಮ ಹಸಿವಿನ ನೋವನ್ನು ದೂರವಿಡುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಹೀಗಾಗಿ ಇದು ನಿಮ್ಮ ತೂಕ ಇಳಿಸಲು ಸಹಾಯ ಮಾಡುತ್ತದೆ.

Published by:Sandhya M
First published: