Importance Of Sleep: ಮಕ್ಕಳಿಗೆ ನಿದ್ದೆ ಕಡಿಮೆಯಾದ್ರೆ ಈ ಎಲ್ಲಾ ಸಮಸ್ಯೆಗಳಾಗುತ್ತದೆ..

Importance Of Sleep In Kids: ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ  ನಿದ್ದೆ ಕಡಿಮೆಯಾಗುವುದು ಸಾಮಾನ್ಯ, ಆದರೆ ಪ್ರತಿ ಬಾರಿಯೂ ಹೀಗೆ ಆಗುವುದು ಮಕ್ಕಳ ಆರೋಗ್ಯವನ್ನು ಹಾಳು ಮಾಡುತ್ತದೆ.  ಮಕ್ಕಳು ರಾತ್ರಿ ಮಲಗುವ ಮುನ್ನ ಸುತ್ತ ಮುತ್ತಲಿನ ಪರಿಸ್ಥಿತಿ ಸರಿಯಾಗಿರಬೇಕು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಿದ್ರೆ (Sleep)ಪ್ರತಿಯೊಬ್ಬರ ದಿನಚರಿಯ ಅತ್ಯಗತ್ಯ ಭಾಗವಾಗಿದೆ ಮತ್ತು ಆರೋಗ್ಯಕರ ಜೀವನಶೈಲಿಯ ಅನಿವಾರ್ಯ ಕೂಡ. ನಿಯಮಿತವಾಗಿ ಸಾಕಷ್ಟು ಪ್ರಮಾಣದ ನಿದ್ರೆ ಪಡೆಯುವ ಮಕ್ಕಳು ಗಮನ, ನಡವಳಿಕೆ, ಕಲಿಕೆ, ಸ್ಮರಣೆ ಮತ್ತು ಒಟ್ಟಾರೆ ಮಾನಸಿಕ(Mental Health) ಮತ್ತು ದೈಹಿಕ ಆರೋಗ್ಯವನ್ನು ಸುಧಾರಿಸಿದ್ದಾರೆ ಎಂದು ಅಧ್ಯಯನಗಳು  ಸಾಬೀತು ಮಾಡಿವೆ. ಸಾಕಷ್ಟು ನಿದ್ದೆ ಬರದಿದ್ದರೆ ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಖಿನ್ನತೆಗೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ.

ಮಾನಸಿಕ ಒತ್ತಡ, ತಲೆನೋವು ಮತ್ತು ಆಯಾಸ ಎಲ್ಲರಲ್ಲೂ ಸಾಮಾನ್ಯ. ಅದನ್ನು ತೊಡೆದು ಹಾಕಲು ಜನರು ಏನೇನೋ ಮಾಡುತ್ತಾರೆ. ಆದರೆ ಸಂಶೋಧನೆಯೊಂದರಲ್ಲಿ ಬಹಿರಂಗವಾಗಿರುವ ಪ್ರಕಾರ ಈ ಸಮಸ್ಯೆಗಳಿಗೆ ಪರಿಹಾರ ಮನೆಯೊಳಗೇ ಇದೆ. ಅದು ನಿದ್ದೆ. ಹೌದು. ಪ್ರತಿಯೊಬ್ಬರಿಗೂ ನಿದ್ದೆ ಸರಿಯಾಗಿ ಆದರೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಕೊರೊನಾ ಕಾರಣದಿಂದ ಮಕ್ಕಳ ಆರೋಗ್ಯದ ಮೇಲೆ ಹಲವಾರು ರೀತಿಯ ಪರಿಣಾಮ ಬೀರುತ್ತಿದೆ.  ಹಾಗೆಯೇ ಮಕ್ಕಳ ನಿದ್ದೆಯ ಮೇಲೆ ಕೂಡ ಪರಿಣಾಮ ಬೀರಿದೆ. ಆನ್​ಲೈನ್​ ಕ್ಲಾಸ್  ಸೇರಿದಂತೆ ದೈನಂದಿನ ಚಟುವಟಿಕೆಯಲ್ಲಿನ ಹಲವಾರು ಬದಲಾವಣೆಯ ಕಾರಣದಿಂದ ಮಕ್ಕಳು ರಾತ್ರಿಯ ಸಮಯದಲ್ಲಿ ನಿದ್ದೆ ಮಾಡುತ್ತಿಲ್ಲ.    ನಿಮ್ಮ ಮಗುವು ಹಗಲಿನ ನಿದ್ರೆ ಅಥವಾ ಮಗುವಿನ ನಡುವಳಿಕೆಯಲ್ಲಿ  ತೊಂದರೆಗಳನ್ನು ಹೊಂದಿದ್ದರೆ ನೀವು ನಿದ್ರೆಯ ಕೊರತೆಯ ಕಾರಣದಿಂದ ಎಂದು ಅನಿಸಿದರೆ ನೀವು ವೈದ್ಯರ ಬಳಿ ಮಕ್ಕಳನ್ನು ತೋರಿಸುವುದು ಉತ್ತಮ.

ಇದನ್ನೂ ಓದಿ: ಮಕ್ಕಳಲ್ಲಿ ಈ ಲಕ್ಷಣಗಳಿದ್ರೆ ಅದು ಮಧುಮೇಹದ ಸೂಚನೆ ಇರಬಹುದು ಎಚ್ಚರ..

ಇನ್ನು ವಯಸ್ಸಿಗೆ ಅನುಗುಣವಾಗಿ ನಿದ್ದೆಯ ಅಗತ್ಯವಿದೆ.

1 ವರ್ಷದೊಳಗಿನ ಶಿಶುಗಳು: 12-16 ಗಂಟೆಗಳು

1-2 ವರ್ಷ ವಯಸ್ಸಿನ ಮಕ್ಕಳು: 11-14 ಗಂಟೆಗಳು

3-5 ವರ್ಷ ವಯಸ್ಸಿನ ಮಕ್ಕಳು: 10-13 ಗಂಟೆಗಳು

6-12 ವರ್ಷ ವಯಸ್ಸಿನ ಮಕ್ಕಳು: 9-12 ಗಂಟೆಗಳು

ಹದಿಹರೆಯದವರು 13-18 ವರ್ಷಗಳು: 8-10 ಗಂಟೆಗಳು

ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ  ನಿದ್ದೆ ಕಡಿಮೆಯಾಗುವುದು ಸಾಮಾನ್ಯ, ಆದರೆ ಪ್ರತಿ ಬಾರಿಯೂ ಹೀಗೆ ಆಗುವುದು ಮಕ್ಕಳ ಆರೋಗ್ಯವನ್ನು ಹಾಳು ಮಾಡುತ್ತದೆ.  ಮಕ್ಕಳು ರಾತ್ರಿ ಮಲಗುವ ಮುನ್ನ ಸುತ್ತ ಮುತ್ತಲಿನ ಪರಿಸ್ಥಿತಿ ಸರಿಯಾಗಿರಬೇಕು. ಕೆಲ ಮಕ್ಕಳಿಗೆ ಲೈಟ್​ ಇದ್ದರೆ ನಿದ್ದೆ ಬರುವುದಿಲ್ಲ, ಇನ್ನು ಕೆಲವರಿಗೆ ಶಬ್ಧವಾಗಬಾರದು.

ಹಾಗಾಗಿ ಈ ಟಿಪ್ಸ್​ ಗಳನ್ನು ಫಾಲೋ ಮಾಡಿ. ಲೈ

ಟ್ ಡಿಮ್ ಮಾಡಿ.

ಮಲಗುವ ಕನಿಷ್ಠ ಒಂದು ಗಂಟೆ ಮೊಬೈಲ್ ಮತ್ತು ಲ್ಯಾಪ್​ ಟಾಪ್ ಕೊಡಬೇಡಿ

ಕೆಫೀನ್ ಸೇವನೆ  ಮಿತಿಗೊಳಿಸಿಬೆಚ್ಚಗಿನ ಸ್ನಾನ ಮಾಡಿ ಮಲಗುವುದು ಇನ್ನೂ ಉತ್ತಮ

ಒಂದು ಸಣ್ಣ ಪುಸ್ತಕ ಓದುವಂತಹ ಅಭ್ಯಾಸ ಒಳ್ಳೆಯದು

ನಿಮ್ಮ ಮಗು ರಾತ್ರಿಯ ಸಮಯದಲ್ಲಿ ಎಚ್ಚರಗೊಂಡರೆ, ಸಾಧ್ಯವಾದಷ್ಟು ಕಡಿಮೆ ಶಬ್ಧ ಮಾಡಿ.

ಒತ್ತಡ ಸೃಷ್ಟಿ ಮಾಡುವ ಹಾರ್ಮೋನುಗಳು ಮತ್ತು ಹಾನಿಕಾರಕ ಕೊಲೆಸ್ಟ್ರಾಲ್‌ನಿಂದಾಗಿ ರಕ್ತನಾಳಗಳ ಮೇಲೆ ಉಂಟಾಗುವ ಹಾನಿಯಿಂದ  ಈ ನಿದ್ರೆ ಮಕ್ಕಳನ್ನು ರಕ್ಷಿಸುತ್ತದೆ ಎಂಬುದು ಸಾಬೀತಾಗಿದೆ.ನಿದ್ರೆಯ  ಸಮಸ್ಯೆ ಹೊಂದಿರುವ ಮಕ್ಕಳು ನಿದ್ರೆಯ ಸಮಯದಲ್ಲಿ ಅತಿಯಾದ ಮಿದುಳಿನ ಪ್ರಚೋದನೆಯನ್ನು ಹೊಂದಿರುತ್ತಾರ, ಹಾಗಾಗಿ ,ಮಕ್ಕಳಿಗೆ ನಿದ್ದೆಯ ಅಗತ್ಯ ಹೆಚ್ಚಿದೆ.

ಇದನ್ನೂ ಓದಿ: ತೂಕ ಹೆಚ್ಚಿಸಿಕೊಳ್ಳದೇ ರುಚಿ ರುಚಿಯಾದ ಈ ಆಹಾರಗಳನ್ನು ಸೇವಿಸಿ..

ತುಂಬಾ ಕಡಿಮೆ ನಿದ್ರೆ ಮಾಡುವುದರಿಂದ ಮಕ್ಕಳು  ಕಡಿಮೆ ವಯಸ್ಸಿನಲ್ಲಿಯೇ ಅಧಿಕ ತೂಕ ಹೊಂದುತ್ತಾರೆ. ಪೆನ್ ಸ್ಟೇಟ್ ಚಿಲ್ಡ್ರನ್ಸ್ ಹಾಸ್ಪಿಟಲ್ನ ಒಂದು ಅಧ್ಯಯನದ ಪ್ರಕಾರ,  ನಿದ್ದೆ ಕಡಿಮೆಯಾದ ಕಾರಣ 50 ರಲ್ಲಿ 30 ಮಕ್ಕಳು ತೂಕ ಹೆಚ್ಚಿಸಿಕೊಂಡಿರುವುದು ಸಾಬೀತಾಗಿದೆ.  ಮಕ್ಕಳಲ್ಲಿ ನಿದ್ರೆ ಕಡಿಮೆ ಆದರೆ ಒಂದು ಹಸಿವು ಹೆಚ್ಚಾಗುತ್ತದೆ, ಇಲ್ಲ ಹಸಿವು ಕಡಿಮೆಯಾಗುತ್ತದೆ. ಹಸಿವು ಹೆಚ್ಚಾಗಿ ಆಹಾರ ಸೇವನೆ ಮಾಡುವುದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇನ್ನು ಹಸಿವು ಕಡಿಮೆಯಾದರೆ ಅದರಿಂದ ಗ್ಯಾಸ್ ತುಂಬಿ ತೂಕ ಹೆಚ್ಚಳವಾಗುತ್ತದೆ.
Published by:Sandhya M
First published: