• ಹೋಂ
 • »
 • ನ್ಯೂಸ್
 • »
 • ಲೈಫ್ ಸ್ಟೈಲ್
 • »
 • Paracetamol: ಗರ್ಭಿಣಿಯರೇ ಎಚ್ಚರ! ನೀವು ಪ್ಯಾರಾಸಿಟಮಲ್ ಮಾತ್ರೆ ತಿಂತೀರಾ? ಹಾಗಿದ್ದರೆ ಅಡ್ಡಪರಿಣಾಮ ಇಲ್ಲಿ ತಿಳಿಯಿರಿ

Paracetamol: ಗರ್ಭಿಣಿಯರೇ ಎಚ್ಚರ! ನೀವು ಪ್ಯಾರಾಸಿಟಮಲ್ ಮಾತ್ರೆ ತಿಂತೀರಾ? ಹಾಗಿದ್ದರೆ ಅಡ್ಡಪರಿಣಾಮ ಇಲ್ಲಿ ತಿಳಿಯಿರಿ

ಗರ್ಭಿಣಿ

ಗರ್ಭಿಣಿ

ಪ್ಯಾರಾಸಿಟಮಲ್ ಒಂದು ಜ್ವರದ ಔಷಧವಾಗಿದ್ದು, ಇದು ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಇದ್ದೇ ಇರುತ್ತದೆ. ಶೀತ ಮತ್ತು ಜ್ವರ ಸೋಂಕಿನಿಂದ ಪರಿಹಾರವನ್ನು ಪಡೆಯಲು ಈ ಮಾತ್ರೆಯನ್ನು ಸೇವಿಸುತ್ತಾರೆ. ಆದರೆ ಗರ್ಭಿಣಿ ಮಹಿಳೆಯರು ಈ ಮಾತ್ರೆಯನ್ನು ಸೇವಿಸುವ ಮುನ್ನ ಗಂಭೀರವಾಗಿ ಯೋಚಿಸಬೇಕಿದೆ.!

 • Trending Desk
 • 3-MIN READ
 • Last Updated :
 • Bangalore, India
 • Share this:

ಆರೋಗ್ಯ ಸರಿಯಿಲ್ಲ (Health) ಎಂದ ತಕ್ಷಣ ಔಷಧಗಳು ನೆನಪಾಗೋದು ಸಹಜ. ಈಗಂತೂ ಮೊದಲಿನ ಹಾಗೆ ಮನೆ ಔಷಧ ಮಾಡುವವರು ಕಡಿಮೆ. ಏನೇ ಆದರೂ ತಕ್ಷಣ ಆಸ್ಪತ್ರೆಯ ಕದ ತಟ್ಟಿ ಬಿಡುತ್ತಾರೆ. ಆದ್ರೆ ಅನಾವಶ್ಯಕವಾಗಿ ಔಷಧಗಳನ್ನು ಸೇವಿಸಬಾರದು ಎಂದು ವೈದ್ಯರೂ (Docter) ಹೇಳುತ್ತಾರೆ. ಅಲ್ಲದೇ ಹೆಚ್ಚಿನ ಔಷಧಿಗಳನ್ನು (Medicines) ವೈದ್ಯರ ಅನುಮತಿಯಿಲ್ಲದೆ ತೆಗೆದುಕೊಳ್ಳಬಾರದು ಕೂಡ. ಆದರೆ ನಮ್ಮಲ್ಲಿ ಹೆಚ್ಚಿನವರು ವೈದ್ಯರನ್ನು ಸಂಪರ್ಕಿಸದೆ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಅದರಲ್ಲೂ ಶೀತ, ಜ್ವರ ಇತ್ತೆಂದರೆ ಮರು ಯೋಚನೆ ಮಾಡದೇ ಪ್ಯಾರಾಸಿಟಮಲ್ (Paracetamol) ತೆಗೆದುಕೊಳ್ಳುತ್ತಾರೆ.


ಜ್ವರ, ತಲೆನೋವಿಗೆ ಪ್ಯಾರಾಸಿಟಮಲ್‌ ಟ್ಯಾಬ್ಲೆಟ್!‌


ಪ್ಯಾರಾಸಿಟಮಲ್ ಒಂದು ಜ್ವರದ ಔಷಧವಾಗಿದ್ದು, ಇದು ಸಾಮಾನ್ಯವಾಗಿ ಪ್ರತಿ ಮನೆಯಲ್ಲೂ ಇದ್ದೇ ಇರುತ್ತದೆ. ಶೀತ ಮತ್ತು ಜ್ವರ ಸೋಂಕಿನಿಂದ ಪರಿಹಾರವನ್ನು ಪಡೆಯಲು ಈ ಮಾತ್ರೆಯನ್ನು ಸೇವಿಸುತ್ತಾರೆ. ಸಾಮಾನ್ಯವಾಗಿ ಈ ಮಾತ್ರೆಯನ್ನು ತೆಗೆದುಕೊಳ್ಳಲು ಯಾರೂ ವೈದ್ಯರನ್ನು ಸಂಪರ್ಕಿಸೋದಿಲ್ಲ. ಬದಲಾಗಿ ಔಷಧ ಅಂಗಡಿಯಿಂದ ನೇರವಾಗಿ ತಂದು ತೆಗೆದುಕೊಳ್ಳುತ್ತಾರೆ.


ಹೌದು.. ಯಾರಾದರೂ ಸಣ್ಣ ಜ್ವರ ಅಥವಾ ತಲೆನೋವಿನಿಂದ ಬಳಲುತ್ತಿದ್ದರೆ, ಅವರು ವೈದ್ಯರನ್ನು ಸಂಪರ್ಕಿಸದೆ ಪ್ಯಾರಾಸಿಟಮಲ್ ಮಾತ್ರೆಗಳನ್ನು ಸೇವಿಸುತ್ತಾರೆ. ಆದಾಗ್ಯೂ, ಸಣ್ಣ ಜ್ವರಕ್ಕೆ ಪ್ಯಾರಾಸಿಟಮಲ್ ಅಗತ್ಯವಿಲ್ಲ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ನೈಸರ್ಗಿಕ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಔಷಧವು ನಿಜವಾಗಿಯೂ ಅಗತ್ಯವಿದ್ದಾಗ ಮಾತ್ರ ಬೇರೆ ರೀತಿಯೇ ಕೆಲಸ ಮಾಡುತ್ತದೆ.


ಇದನ್ನೂ ಓದಿ: Bengaluru: 18 ವರ್ಷಕ್ಕೂ ಮುನ್ನ ಗರ್ಭಿಣಿಯರಾದ 1,000 ಅಪ್ರಾಪ್ತರು! ಬೆಂಗಳೂರಲ್ಲಿ ಬೆಚ್ಚಿಬೀಳಿಸುವ ವರದಿ ಬಹಿರಂಗ


ಪ್ಯಾರಾಸಿಟಮಲ್‌ ಉಂಟು ಮಾಡುವ ಪರಿಣಾಮವೇನು?


ಜ್ವರ ಬಂದಾಗ ನಮ್ಮ ದೇಹದ ಉಷ್ಣತೆಗೆ ಮೆದುಳಿನಲ್ಲಿರುವ ರಾಸಾಯನಿಕ ಸಂದೇಶವಾಹಕಗಳು ಅನುಮತಿಸುತ್ತವೆ. ಪ್ಯಾರಾಸಿಟಮಾಲ್ ಮೆದುಳಿನಲ್ಲಿರುವ ರಾಸಾಯನಿಕ ಸಂದೇಶವಾಹಕಗಳನ್ನು ತಡೆಯುವ ಮೂಲಕ ನಮ್ಮ ದೇಹದ ಉಷ್ಣತೆಯನ್ನು ನಿಯಂತ್ರಿಸಲು ಅನುವು ಮಾಡಿಕೊಡುತ್ತದೆ ಎಂಬುದಾಗಿ ಕೆಲವು ಅಧ್ಯಯನಗಳು ಹೇಳುತ್ತವೆ.


ಅಲ್ಲದೇ ಪ್ಯಾರಾಸಿಟಮಲ್ ಮಾತ್ರೆ ರೋಗ, ಸೋಂಕುಗಳು ಮತ್ತು ಗಾಯಗಳನ್ನು ಎದುರಿಸಲು ದೇಹದಿಂದ ಉತ್ಪತ್ತಿಯಾಗುವ ಪ್ರೊಸ್ಟಗ್ಲಾಂಡಿನ್‌ಗಳ ಉತ್ಪಾದನೆಯನ್ನು ತಡೆಯುತ್ತದೆ.


ಮತ್ತೊಂದು ಸುದ್ದಿ ಸಂಸ್ಥೆ ಪ್ರಕಟಿಸಿದ ವರದಿಯು, ಗರ್ಭಾವಸ್ಥೆಯಲ್ಲಿ ಪ್ಯಾರಾಸಿಟಮಾಲ್ ಬಳಕೆಯು ಭ್ರೂಣದ ಬೆಳವಣಿಗೆಗೆ ಅಡ್ಡಿ ಉಂಟು ಮಾಡಬಹುದು ಎಂದಿದೆ. ಅಲ್ಲದೇ ಇದು ಅನೇಕ ರೀತಿಯ ಅಸ್ವಸ್ಥತೆಗಳನ್ನು ಉಂಟುಮಾಡಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಹೈಪರ್‌ ಆಕ್ಟಿವಿಟಿ ಡಿಸಾರ್ಡರ್, ಏಕಾಗ್ರತೆಯಲ್ಲಿ ತೊಂದರೆ, ಮಾತನಾಡುವಾಗ ತೊದಲುವುದು ಮತ್ತು ಐಕ್ಯೂ ಮಟ್ಟದಲ್ಲಿನ ಇಳಿಕೆಗೆ ಪ್ಯಾರಾಸಿಟಮಲ್‌ನ ಕಾರಣವಾಗಬಹುದು ಎಂಬುದಾಗಿ ಹಲವು ಅಧ್ಯಯನಗಳು ಹೇಳಿವೆ.


ಇದನ್ನೂ ಓದಿ: Health Care: ವಿಟಮಿನ್​ ಹೆಚ್ಚಲು ಗರ್ಭಿಣಿಯರು ಹಾಗೂ ಮಕ್ಕಳು ಯಾವ ರೀತಿಯ ಆಹಾರ ಸೇವನೆ ಮಾಡಬೇಕು?


ಗರ್ಭಿಣಿಯರ ಮೇಲೆ ಪ್ಯಾರಾಸಿಟಮಲ್ ಅಡ್ಡಪರಿಣಾಮಗಳು!


ಗರ್ಭಾವಸ್ಥೆಯಲ್ಲಿ ಪ್ಯಾರಾಸಿಟಮಾಲ್ ತೆಗೆದುಕೊಳ್ಳುವುದರಿಂದ ಸಾಕಷ್ಟು ಅಡ್ಡ ಪರಿಣಾಮಗಳು ಉಂಟಾಗಬಹುದು. ಇದು ಗರ್ಭಿಣಿಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಗರ್ಭಿಣಿಯರು ತೆಗೆದುಕೊಳ್ಳುವ ಈ ಮಾತ್ರೆ ಭ್ರೂಣದ ಬೆಳವಣಿಗೆಯನ್ನು ನಿಲ್ಲಿಸಬಹುದು ಎಂದು ಡೆನ್ಮಾರ್ಕ್ ಸಂಶೋಧಕರು ಬಹಿರಂಗಪಡಿಸಿದ್ದಾರೆ.


ಪ್ಯಾರಾಸಿಟಮಾಲ್‌ನ ಅಡ್ಡ ಪರಿಣಾಮಗಳನ್ನು ಗಮನಿಸಿದರೆ, ವಿಶೇಷ ಸಂದರ್ಭಗಳಲ್ಲಿ ವೈದ್ಯರ ಸಲಹೆಯ ಮೇರೆಗೆ ಮಾತ್ರ ಪ್ಯಾರಾಸಿಟಮಲ್ ಅನ್ನು ಬಳಸಬೇಕೆಂದು ಸಂಶೋಧಕರು ಗರ್ಭಿಣಿಯರಿಗೆ ಎಚ್ಚರಿಸಿದ್ದಾರೆ. ಗರ್ಭಾವಸ್ಥೆಯಲ್ಲಿ ಪ್ಯಾರಾಸಿಟಮಲ್ ಸೇವಿಸುವುದರಿಂದ ಮಕ್ಕಳಲ್ಲಿ ನರವೈಜ್ಞಾನಿಕ ಅಸ್ವಸ್ಥತೆಗಳು ಉಂಟಾಗಬಹುದು ಎಂದು ಹೇಳಲಾಗಿದೆ.


ಈ ಅಧ್ಯಯನವನ್ನು ಕೋಪನ್ ಹ್ಯಾಗನ್ ವಿಶ್ವವಿದ್ಯಾನಿಲಯವು ಡಾ. ಕೆವಿನ್ ಕ್ರಿಸ್ಟೇನ್ಸೆನ್ ನೇತೃತ್ವದಲ್ಲಿ ನಡೆಸಿದೆ. ಅವರು ಮಾನವರು ಮತ್ತು ಪ್ರಾಣಿಗಳ ಮೇಲೆ ಪ್ಯಾರಾಸಿಟಮಾಲ್ ಬಳಕೆಯ ಪರಿಣಾಮಗಳನ್ನು ಸಂಶೋಧಿಸಿದ್ದಾರೆ. ಇದರಲ್ಲಿ ಗರ್ಭಾವಸ್ಥೆಯಲ್ಲಿ ಪ್ಯಾರಾಸಿಟಮಲ್ ಬಳಕೆಯು ಮಕ್ಕಳ ಮಾನಸಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರ ಕಲಿಯುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಕಂಡುಬಂದಿದೆ.
ಒಟ್ಟಾರೆಯಾಗಿ ಗರ್ಭಿಣಿಯರ ಆರೋಗ್ಯ ಯಾವಾಗಲೂ ಗರ್ಭದಲ್ಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಅವರ ಆರೋಗ್ಯ, ಆಹಾರ, ಯೋಚಿಸುವ ರೀತಿ, ಅವರು ಏನನ್ನು ನೋಡುತ್ತಾರೆ, ಏನನ್ನು ಕೇಳುತ್ತಾರೆ, ಏನನ್ನು ಸೇವಿಸುತ್ತಾರೆ ಇವೆಲ್ಲವೂ ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಹೀಗೆ ಏನೇ ಮಾಡುವುದಿದ್ದರೂ ಎಚ್ಚರಿಕೆ ಅಗತ್ಯ. ವೈದ್ಯರನ್ನು ಸಂಪರ್ಕಿಸದೆ ಗರ್ಭಿಣಿಯರು ಮಾಡುವ ಸ್ವಯಂ ವೈದ್ಯ ಇನ್ನಷ್ಟು ಅಪಾಯಕಾರಿ ಎಂಬುದಾಗಿ ಸಂಶೋಧನೆಗಳು ಹೇಳುತ್ತದೆ.

Published by:Avinash K
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು