Gowri Festival 2022: ಹಬ್ಬದ ದಿನ ರೇಷ್ಮೆ ಸೀರೆ ಉಡೋದು ಇದೇ ಕಾರಣಕ್ಕೆ, ಸಂಪ್ರದಾಯಗಳೆಷ್ಟು ವಿಭಿನ್ನ

Silk Saree on Gowri Festival 2022: ಶುದ್ಧ ರೇಷ್ಮೆಗೆ ಇನ್ನೂ ಹೆಚ್ಚಿನ ಮಹತ್ವವಿದೆ ಮತ್ತು ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿಯೂ ಸಹ ರೇಷ್ಮೆಯನ್ನು ದೇವತೆಗಳಿಗೆ ಅರ್ಪಿಸಲಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಬ್ಬಗಳೆಂದರೆ (Festival) ಅದೇನೋ ಒಂದು ಸಡಗರ, ಸಂಭ್ರಮ ಇದ್ದೇ ಇರುತ್ತೆ ಅಲ್ವ. ಬಹುತೇಕ ಎಲ್ಲ ಹಬ್ಬಗಳಿಗೂ ಒಂದು ವಿಶೇಷತೆ ಇದ್ದೇ ಇರುತ್ತದೆ. ಆದರೂ, ಗೌರಿ - ಗಣೇಶ ಹಬ್ಬ (Gowri Ganesha Festival) ಬಂತೆಂದರೆ ಮಕ್ಕಳಿಂದ ಹಿಡಿದು ಹಿರಿಯರ ತನಕ ಸಂಭ್ರಮ (Celebration) ಹೆಚ್ಚಾಗೇ ಇರುತ್ತದೆ. ಗೌರಿ - ಗಣೇಶನ ಮೂರ್ತಿ ತರುವುದು, ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ತರುವುದು, ಗೌರಿ - ಗಣೇಶನಿಗೆ ನೈವೇದ್ಯ ಮಾಡಲು ಸಿಹಿ ತಿಂಡಿಗಳು, ಪೂಜೆ ಮಾಡುವುದು ಹಾಗೂ ಬೇರೆಯವರ ಮನೆಗೆ ಹೋಗಿ ಗೌರಿ - ಗಣೇಶನ ಮೂರ್ತಿ ನೋಡುವುದು ಹಾಗೂ ಆಶೀರ್ವಾದ ತೆಗೆದುಕೊಳ್ಳುವುದೂ ಒಂದು ಸಂಭ್ರಮವೇ. ಹಾಗೆಯೇ ಗೌರಿ ಹಬ್ಬವನ್ನು ಮಹಿಳೆಯರು ಬಹಳ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸುತ್ತಾರೆ. ಈ ದಿನ ಸುಂದರವಾಗಿ ತಯಾರಾಗಿ ದೇವಿಯನ್ನು ಆರಾಧಿಸುತ್ತಾರೆ. ಹಾಗೆಯೇ ವಿಶೇಷವಾಗಿ ಈ ದಿನ ರೇಷ್ಮೆ ಸೀರೆಯನ್ನು  ಉಡುತ್ತಾರೆ. ಈ ಹಬ್ಬದ ದಿನ ಏಕೆ ರೇಷ್ಮೆ ಸೀರೆ ಉಡುವುದು ಎಂಬುದು ಇಲ್ಲಿದೆ.

ಗೌರಿಗೆ ಶ್ರೇಷ್ಠ ಈ ರೇಷ್ಮೆ ಸೀರೆ

ಗಣೇಶನ ಹಬ್ಬದ ಹಿಂದಿನ ದಿನ ಬರುವುದು ಗೌರಿ ಹಬ್ಬ. ಗೌರಿ ಹಬ್ಬವು ಗೌರಿ ದೇವಿಗೆ ಅರ್ಪಿಸಿದ ಹಬ್ಬವಾಗಿದೆ. ಗೌರಿ ಶಿವನ ಸಂಗಾತಿ, ಪಾರ್ವತಿ ಎಂದೇ ಪ್ರಸಿದ್ಧವಾಗಿ ಕರೆಯುತ್ತಾರೆ. ಈ ಗೌರಿ ಹಬ್ಬವನ್ನು ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ ಹಲವು ಭಾಗಗಳ ಮಹಿಳೆಯರು ಆಚರಿಸುತ್ತಾರೆ. ಸಾಮಾನ್ಯವಾಗಿ ಗಣೇಶ ಚತುರ್ಥಿಯ ಒಂದು ದಿನ ಮೊದಲು ದೇವಿಯ ಪೂಜೆ ಮಾಡುವ ಮೂಲಕ ಈ ಹಬ್ಬವನ್ನು ಆಚರಿಸುತ್ತಾರೆ. ಈ ದಿನ ರೇಷ್ಮೆ ಸೀರೆಯನ್ನು ಉಟ್ಟು, ಬಹಳ ಮಡಿಯಿಂದ ಪೂಜೆ ಮಾಡುತ್ತಾರೆ.

Best Silk Saree for festivals colorful saree you see here how beautiful these are
ರೇಷ್ಮೆ ಸೀರೆ


ಭಾರತೀಯ ಸಂಸ್ಕೃತಿಯ ಉಡುಗೆ ತೊಡುಗೆಗಳಲ್ಲಿಯೇ ಅತ್ಯಂತ ಪುರಾತನ ಉಡುಗೆ ಸೀರೆ. ಅನಾದಿ ಕಾಲದಿಂದ ಸೀರೆಯು ನಮ್ಮ ದೇಶದ ಮಹಿಳೆಯರ ಪ್ರಮುಖ ಉಡುಗೆ. ಸೀರೆಯ ಬಳಕೆ ಎಲ್ಲಿಂದ ಪ್ರಾರಂಭವಾಯಿತು ಎಂಬುದರ ಕುರಿತು ಸ್ಪಷ್ಟ ಮಾಹಿತಿ ಎಲ್ಲಿಯೂ ಇಲ್ಲ. ಆದರೆ ಸೀರೆ ನಮ್ಮ ಸಂಸ್ಕೃತಿಯ ಪ್ರತೀಕ.

ಇದನ್ನೂ ಓದಿ: ಸೀರೆಗೆ ವೆಸ್ಟರ್ನ್ ಟಚ್​ ಕೊಟ್ಟು ಹೀಗೂ ಉಡಬಹುದು ನೋಡಿ

ದಿನ ನಿತ್ಯದ ಜೀವನದಲ್ಲಿ ಸೀರೆಗೆ ಬಹಳ ಪ್ರಮುಖವಾದ ಸ್ಥಾನವಿದೆ.  ಗೌರಿ ಹಬ್ಬದ ದಿನ ಮಾತ್ರವಲ್ಲ ಗಣೇಶ ಹಬ್ಬದ ದಿನ ಹಾಗೂ ಇತರೆ ಹಬ್ಬದ ಸಮಯದಲ್ಲಿ ಮಹಿಳೆಯರು ರೇಷ್ಮೆ ಸೀರೆಯನ್ನು ಧರಿಸುತ್ತಾರೆ.ಇದಕ್ಕೆ ಕಾರಣ, ರೇಷ್ಮೆ ಸೀರೆ ಬಹಳ ಶ್ರೇಷ್ಠ. ದೇವರಿಗೆ ಪೂಜೆ ಮಾಡುವಾಗ ಮಡಿ, ಮಲೈಗೆ ಹಾಗೂ ಸಂಪ್ರದಾಯವನ್ನು ಪಾಲಿಸಬೇಕು. ಹಾಗಾಗಿ, ರೇಷ್ಮೆ ಸೀರೆಯನ್ನು ಧರಿಸಿ ಪೂಜೆ ಮಾಡುತ್ತಾರೆ.

ಸಂಪ್ರದಾಯದಲ್ಲಿ ಮಹತ್ತರವಾದ ಪಾತ್ರವಿದೆ

ರೇಷ್ಮೆಯು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಮಹತ್ತರವಾದ ಪಾತ್ರವನ್ನು ಹೊಂದಿದೆ, ಮದುವೆಯಿಂದ ಹಿಡಿದು ಹಲವಾರು ಪೂಜೆಗಳವರೆಗೆ ಅದರ ಆಕರ್ಷಣೆ ಹೆಚ್ಚಿದೆ. ಯಾವುದೇ ಸಾಂಪ್ರದಾಯಿಕ ಆಚರಣೆಗಳಿಗೆ ಸೀರೆ, ಲೆಹೆಂಗಾ ಅಥವಾ ಸೂಟ್‌ನಂತಹ ರೇಷ್ಮೆ ವಸ್ತ್ರವನ್ನು ಮಂಗಳಕರ ಮತ್ತು ಶುದ್ಧವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಗೌರಿ ಹಬ್ಬಕ್ಕೆ ಚೆಂದ ಚೆಂದದ ಈ ಮೆಹೆಂದಿ ಡಿಸೈನ್​ ಟ್ರೈ ಮಾಡಿ

ಶುದ್ಧ ರೇಷ್ಮೆಗೆ ಇನ್ನೂ ಹೆಚ್ಚಿನ ಮಹತ್ವವಿದೆ ಮತ್ತು ಹಿಂದೂ ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿಯೂ ಸಹ ರೇಷ್ಮೆಯನ್ನು ದೇವತೆಗಳಿಗೆ ಅರ್ಪಿಸಲಾಗುತ್ತದೆ. ಯಾರಿಗಾದರೂ ರೇಷ್ಮೆಯನ್ನು ಉಡುಗೊರೆಯಾಗಿ ನೀಡುವುದು ಇಂದು ಅತ್ಯಂತ ಗೌರವಾನ್ವಿತ ಮತ್ತು ಅಮೂಲ್ಯವೆಂದು ಪರಿಗಣಿಸಲಾಗಿದೆ. ಈ ಸಂಪ್ರದಾಯವು ದೇಶದ ಅನೇಕ ಭಾಗಗಳಲ್ಲಿ ಬದಲಾಗಬಹುದು.ಅದರ ಸಾಂಸ್ಕೃತಿಕ ಪ್ರಾಮುಖ್ಯತೆಯಿಂದಾಗಿ, ರೇಷ್ಮೆ ಸೀರೆಯನ್ನು ಹಬ್ಬದ ದಿನದಂದು ಉಡುತ್ತಾರೆ.
Published by:Sandhya M
First published: