Betel Leaves Benefits: ದಸರಾ ಹಬ್ಬದ ದಿನ ತಪ್ಪದೇ ವೀಳ್ಯದೆಲೆ ಸೇವನೆ ಮಾಡಬೇಕು ಯಾಕೆ ಗೊತ್ತಾ?

Betel Leaves: ವೈಜ್ಞಾನಿಕವಾಗಿ ಇದಕ್ಕೆ ಮತ್ತೊಂದು ಕಾರಣವಿದೆ. ಈ ಸಮಯದಲ್ಲಿ ಹವಾಮಾ ಬದಲಾವಣೆಯಾಗುವುದು ಸಾಮಾನ್ಯ, ನೀವೇ ಗಮನಿಸಿ ನೋಡಿ ಹೆಚ್ಚಿನ ಜನರು ಡೆಂಗ್ಯೂ, ಚಿಕನ್ ಗುನ್ಯಾದಂತಹ ಹಲವಾರು ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿಜಯದಶಮಿ(Vijayadashami) ಹಬ್ಬವನ್ನು ಭಾರತದಲ್ಲಿ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ವಿವಿಧ ಬಗೆಯ  ಆಹಾರಗಳು, ಸಿಹಿ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಈ ದಿನದ ಹಿಂದೆ ಹಲವಾರು ಪುರಾಣ ಕಥೆಗಳಿವೆ. ಈ ದಿನವನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ಈ ದಿನ ದೇವರಿಗೆ ಕೆಲವೊಂದು ವಸ್ತುಗಳನ್ನು ನೈವೇದ್ಯ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಈ ದಿನ ಹಲವಾರು ಪದ್ಧತಿಗಳನ್ನು ಪಾಲಿಸಲಾಗುತ್ತದೆ. ಈ ಪದ್ದತಿಗಳಲ್ಲಿ ಒಂದು ದಸರಾ ದಿನದಂದು ಪಾನ್ ತಿನ್ನುವುದು. ಹೌದು, ದಸರಾ ಹಬ್ಬದ ದಿನ ತಪ್ಪದೇ ಪಾನ್(Pan)​ ಸೇವನೆ ಮಾಡಬೇಕು ಎಂಬ ಪದ್ದತಿ ಇದೆ. ಈ ದಿನ ಪಾನ್ ತಿನ್ನುವುದರಿಂದ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ. ಇನ್ನು ಇದರ ಹಿಂದೆ ಕೆವಲ ಧಾರ್ಮಿಕ ನಂಬಿಕೆ ಪಾತ್ರವಲ್ಲದೆ ವೈಜ್ಞಾನಿಕ ಕಾರಣಗಳು ಸಹ ಇದೆ.

ದಸರಾದಲ್ಲಿ ವೀಳ್ಯ (Betel Leaves)ಸೇವನೆ ಏಕೆ ಮಾಡಬೇಕು?

ಸಾಮಾನ್ಯವಾಗಿ ವೀಳ್ಯವನ್ನು ಸಮಾರಂಭದಲ್ಲಿ ಊಟದ ನಂತರ ಸೇವನೆ ಮಾಡಲಾಗುತ್ತದೆ. ಕೇವಲ ಕೆಲವು ಮನೆಗಳಲ್ಲಿ ಮಾತ್ರ ಇದನ್ನು ದಿನನಿತ್ಯ ಬಳಕೆ ಮಾಡಲಾಗುತ್ತದೆ. ಇನ್ನು ಈ ವೀಳ್ಯವನ್ನು ಪ್ರೀತಿ ಮತ್ತು ವಿಜಯದ ಸಂಕೇತವೆಂದು  ಹೇಳಲಾಗುತ್ತದೆ. ಕೆಟ್ಟ ಅಂಶಗಳ ವಿರುದ್ದ ಒಳ್ಲೆಯದಕ್ಕೆ ಜಯ ಲಭಿಸುತ್ತದೆ ಎಂಬ ನಂಬಿಕೆಯೊಂದಿಗೆ ರಾವಣನ ದಹನದ ನಂತರ ವೀಳ್ಯ ಸೇವನೆ ಮಾಡಲಾಗುತ್ತದೆ.

ಇದನ್ನೂ ಓದಿ: ವಿಜಯದಶಮಿ ಹಬ್ಬಕ್ಕೆ ಸ್ಪೆಷಲ್​ ಅವಲಕ್ಕಿ ಪಾಯಸ ಟ್ರೈ ಮಾಡಿ

ಇದು ಧಾರ್ಮಿಕ ಕಾರಣವಾದರೆ ವೈಜ್ಞಾನಿಕವಾಗಿ ಇದಕ್ಕೆ ಮತ್ತೊಂದು ಕಾರಣವಿದೆ. ಈ ಸಮಯದಲ್ಲಿ ಹವಾಮಾ ಬದಲಾವಣೆಯಾಗುವುದು ಸಾಮಾನ್ಯ, ನೀವೇ ಗಮನಿಸಿ ನೋಡಿ ಹೆಚ್ಚಿನ ಜನರು ಡೆಂಗ್ಯೂ, ಚಿಕನ್ ಗುನ್ಯಾದಂತಹ ಹಲವಾರು ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುತ್ತಾರೆ. ಈ ಕಾಲದಲ್ಲಿ ರೋಗಗಳು ಹೆಚ್ಚು, ಈ ರೋಗಗಳಿಂದ ದೂರವಿರಲು ವೀಳ್ಯದೆಲೆ ಸೇವನೆ ಮಾಡುವುದು ಉತ್ತಮ ಎಂದು ಹೇಳಲಾಗುತ್ತದೆ.

ಎಲ್ಲರಿಗೂ ತಿಳಿದಿರುವಂತೆ ನವರಾತ್ರಿಯ ದಿನ ಹಲವಾರು ಜನರು ಉಪವಾಸ ಮಾಡುತ್ತಾರೆ.  ಇದು ಅವರ ಆರೋಗ್ಯ ಮೇಲೆ ಪರಿಣಾಮ ಬಿರುತ್ತದೆ. ಮುಖ್ಯವಾಗಿ ಉಪವಾಸ ಮಾಡುವ ಜನರ ಜೀರ್ಣಕ್ರಿಯೆ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ನಿಮಗೆ ತಿಳಿದಿರುವಂತೆ ವೀಳ್ಯದೆಲೆ ಸೇವನೆ ಮಾಡುವುದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಾಗಾಗಿ ಈ ಸಮಯದಲ್ಲಿ ಪಾನ್ ಸೇವನೆ ಮಾಡಲಾಗುತ್ತದೆ.

ವೀಳ್ಯದೆಲೆ ಇತರ ಆರೋಗ್ಯ ಪ್ರಯೋಜನಗಳು

ಆಂಟಿ ಆಕ್ಸಿಡೆಂಟ್ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿರುವಂತಹ ವೀಳ್ಯದೆಲೆಯು ಹಲವಾರು ಆರೋಗ್ಯ  ಪ್ರಯೋಜನಗಳನ್ನು ನೀಡುತ್ತದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ ಹಾಗೂ ಹಲ್ಲಿನ ಆರೋಗ್ಯ ಕಾಪಾಡುವಲ್ಲಿ ಸಹಕಾರಿಯಾಗಿದೆ.

ಮಧುಮೇಹ  ನಿಯಂತ್ರಣಕ್ಕೆ ಸಹಕಾರಿ
ವೀಳ್ಯದೆಲೆಯಲ್ಲಿ ಮಧುಮೇಹಿ ವಿರೋಧಿಯಾಗಿರುವಂತಹ ಟ್ಯಾನಿನ್ ಎನ್ನುವ ಅಂಶವಿದ್ದು, ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡುತ್ತದೆ. ವೀಳ್ಯದೆಲೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ತಗ್ಗಿಸುವುದು. ಇದರಲ್ಲಿ ಇರುವಂತಹ ಫಾಲಿಪೆನಾಲ್ ಮೇಧೋಜೀರಕ ಗ್ರಂಥಿಯ ಕೋಶಕ್ಕೆ ಫ್ರೀ ರ್ಯಾಡಿಕಲ್‍‌ನಿಂದ ಹಾನಿಯಾಗದಂತೆ ತಡೆಯಲಾಗುತ್ತದೆ.

ಕೆಮ್ಮು ಮತ್ತು ಕಫಕ್ಕೆ ರಾಮಬಾಣ

ಇದನ್ನೂ ಓದಿ: ಲವಂಗ ಟೀ ಬಗ್ಗೆ ಕೇಳಿದ್ದೀರಾ? ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ಗೊತ್ತಾ?
 ಆಯುರ್ವೇದದ ಪ್ರಕಾರ ವೀಳ್ಯದೆಲೆಯು ಕೆಮ್ಮು ನಿವಾರಣೆ ಮಾಡುತ್ತದೆ. ಈ ಎಲೆಯನ್ನು ಸಾಸಿವೆ ಎಣ್ಣೆಯಲ್ಲಿ ನೆನಸಬೇಕು. ಇದರ ಬಳಿಕ ಬಿಸಿ ಮಾಡಿ ಎದೆ ಮೇಲೆ ಹಚ್ಚಿದರೆ ಆಗ ಕಫಗಟ್ಟುವುದು ನಿಲ್ಲುವುದು. ಮಕ್ಕಳಿಗೆ ಜೇನುತುಪ್ಪಕ್ಕೆ ವೀಳ್ಯದೆಲೆ ರಸ ಹಾಕಿ ನೀಡಿದರೆ ಒಣ ಕೆಮ್ಮು ಮತ್ತು ಕಫ ನಿವಾರಣೆ ಆಗುವುದು.
Published by:Sandhya M
First published: