ದೇವರಿದ್ದಾನಾ? ಇದ್ದಾನೆ..ನೌಶಾದ್ ರೂಪದಲ್ಲಿ: ನೆರೆ ಸಂತ್ರಸ್ತರ ನೆರವಿಗೆ ನಿಂತ ದೇವಮಾನವ..!

ಇಲ್ಲ ಸಾರ್, ನೀವು ಬನ್ನಿ. ನಿಮಗೆ ಬೇಕಾಗಿರುವಷ್ಟು ಬಟ್ಟೆಗಳನ್ನು ನಾನು ಕೊಡುವೆ ಎಂದು ವಿಳಾಸ ತಿಳಿಸಿ ನೌಶಾದ್ ಫೋನ್ ಕಟ್ ಮಾಡಿದ್ದರು.

zahir | news18-kannada
Updated:August 15, 2019, 4:21 PM IST
ದೇವರಿದ್ದಾನಾ? ಇದ್ದಾನೆ..ನೌಶಾದ್ ರೂಪದಲ್ಲಿ: ನೆರೆ ಸಂತ್ರಸ್ತರ ನೆರವಿಗೆ ನಿಂತ ದೇವಮಾನವ..!
noushad
  • Share this:
ಕಳೆದ ವರ್ಷ ಕೇರಳದಲ್ಲಿ ಉಂಟಾದ ಪ್ರವಾಹ ಮರೆಯುವ ಮುನ್ನವೇ ಇದೀಗ ಉತ್ತರ ಕೇರಳ ಜಲಪ್ರಳಯದಿಂದ ತತ್ತರಿಸಿ ಹೋಗಿದೆ. ರಾತ್ರಿ ಬೆಳಗಾಗುವಷ್ಟರಲ್ಲೇ ಅಲ್ಲೊಂದು ಊರಿತ್ತು ಎಂಬ ಕುರುಹು ಕೂಡ ಸಿಗದಂತೆ ಭೂಕುಸಿತಕ್ಕೆ ಸಂಪೂರ್ಣ ಗ್ರಾಮವೊಂದು ನೆಲಸಮವಾಗಿದೆ. ಈಗಾಗಲೇ ವರುಣನ ಭೀಕರ ಆರ್ಭಟಕ್ಕೆ ಕೇರಳದಲ್ಲಿ 95 ಮಂದಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ಇನ್ನು ಸಾವಿರಾರೂ ಜನರು ಜೀವವೊಂದನ್ನು ಮಾತ್ರ ಉಳಿಸಿ ನಿರಾಶ್ರಿತ ಶಿಬಿರಗಳಲ್ಲಿ ಕಾಲ ಕಳೆಯುತ್ತಿದ್ದಾರೆ. ಇಂತಹ ಸಂತ್ರಸ್ತರ ಪಾಲಿಗೆ ದೇವರ ನಾಡಿನಲ್ಲಿ ದೇವರದಾವರಲ್ಲಿ ಕೊಚ್ಚಿಯ ನೌಶಾದ್ ಕೂಡ ಒಬ್ಬರು.

ಕೇರಳದಲ್ಲಿ ಕಾಣಿಸಿಕೊಂಡ ಭೀಕರ ಪ್ರವಾಹ ಉತ್ತರ ಕೇರಳಿಗರ ಜೀವನವೇ ಮೂರಾಬಟ್ಟೆಯಾಗಿದೆ. ಇದೇ ಸಂದರ್ಭದಲ್ಲಿ ಸಂಘಟನೆಯೊಂದು ಪರಿಹಾರ ಕಾರ್ಯಕ್ಕೆ ಕೈ ಜೋಡಿಸುವಂತೆ  ಕೊಚ್ಚಿನ್ ಭಾಗದ ಜನರಲ್ಲಿ ಕೇಳಿಕೊಂಡಿತ್ತು. ಇಂತಹದೊಂದು ಮನವಿ ಕೇಳಿದಾಕ್ಷಣ ನೌಶಾದ್ ಸ್ವಯಂ ಸೇವಾ ಸಂಸ್ಥೆ ಕಾರ್ಯಕರ್ತರಿಗೆ ಫೋನ್ ಮಾಡಿದ್ದಾರೆ.

'ನಾನು ಕೂಡ ನಿಮ್ಮ ಜತೆ ಕೈಜೋಡಿಸಬೇಕೆಂದಿರುವೆ. ನನ್ನಲ್ಲಿ ತುಂಬಾ ಬಟ್ಟೆಗಳಿವೆ. ನೀವು ಬಂದು ತೆಗೆದುಕೊಳ್ಳಬಹುದು'. ಅತ್ತ ನೌಶಾದ್ ಹೇಳುತ್ತಿದ್ದ ಮಾತು ಕೇಳಿದ ಸ್ವಯಂಸೇವಕ ಹೇಳಿರುವುದು ಒಂದೇ. 'ಸರ್ ದಯವಿಟ್ಟು, ಹರಿದು ಹೋದ ಬಟ್ಟೆಗಳನ್ನು, ಹಾಕಿಕೊಳ್ಳಲು ಯೋಗ್ಯವಲ್ಲದ ಬಟ್ಟೆಗಳನ್ನು ನೀಡಬೇಡಿ' ಎಂದು.

'ಇಲ್ಲ ಸಾರ್, ನೀವು ಬನ್ನಿ. ನಿಮಗೆ ಬೇಕಾಗಿರುವಷ್ಟು ಬಟ್ಟೆಗಳನ್ನು ನಾನು ಕೊಡುವೆ ಎಂದು ವಿಳಾಸ ತಿಳಿಸಿ ನೌಶಾದ್ ಫೋನ್ ಕಟ್ ಮಾಡಿದ್ದರು. ಸ್ವಯಂ ಸೇವಾ ಸಂಸ್ಥೆಯವರು ನೌಶಾದ್ ಹೇಳಿದ ಸ್ಥಳಕ್ಕಾಗಮಿಸಿದಾಗ ವ್ಯಕ್ತಿಯೊಬ್ಬರು ಬಟ್ಟೆಗಳನ್ನು ಪ್ಯಾಕ್ ಮಾಡುತ್ತಿದ್ದರು. ಅದು ಕೂಡ  ಬೆಲೆ ಟ್ಯಾಗ್ ಇರುವ ಬಟ್ಟೆಗಳು. ಇದನ್ನು ನೋಡಿದ ಸ್ವಯಂ ಸೇವಾ ಸಂಘಟನಾ ಸದಸ್ಯರ ಕಣ್ಣಂಚಲ್ಲಿ ನೀರು ಚಿಮ್ಮಿತು.

ಹೌದು, ನೌಶಾದ್ ಎಂಬ ವ್ಯಕ್ತಿಯು ತನ್ನ ಡ್ರೆಸ್ ಶಾಪ್​​ನಲ್ಲಿದ್ದ ಸಂಪೂರ್ಣ ಹೊಸ ಬಟ್ಟೆಗಳನ್ನು ಬಂಡಲ್​ ಮಾಡುತ್ತಿದ್ದರು. ನೀವು ಸಾಮರ್ಥ್ಯಕ್ಕಿಂತ ಹೆಚ್ಚು ನೀಡಿದ್ದೀರಿ. ನಿಮ್ಮ ಅಂಗಡಿಯನ್ನೇ ದಾನ ಮಾಡುತ್ತೀದ್ದೀರಾ ಎಂದು ಕಾರ್ಯಕರ್ತರು ಕೇಳಿದಾಗ ನೌಶಾದ್ ಹೇಳಿದ್ದು ಒಂದೇ ಮಾತು. 'ನನ್ನ ಬಳಿ ಇಷ್ಟೊಂದು ಇದೆ. ಈಗ ಇದು ಇಲ್ಲದವರಿಗೆ ಸಲ್ಲಬೇಕು. ನಮ್ಮ ಸಹೋದರ-ಸಹೋದರಿಯರು ನಿರಾಶ್ರಿತರಾಗಿದ್ದಾರೆ. ನಾನು ಅವರಿಗೆ ನೀಡುವುದರಿಂದ ನನ್ನ ಸಂಪತ್ತು ಏನು ಕಡಿಮೆಯಾಗುವುದಿಲ್ಲ. ಬರುವಾಗ ಏನೂ ತಂದಿಲ್ಲ. ಹೋಗುವಾಗಲೂ ಏನು ತೆಗೆದುಕೊಂಡು ಹೋಗುವುದಿಲ್ಲ. ಇಷ್ಟೆಲ್ಲಾ ದೇವರು ನನಗೆ ಕೊಟ್ಟಿದ್ದಾನೆ. ಮುಂದೆಯು ಕೊಡುತ್ತಾನೆ' ಎಂದು ಅನುಕಂಪ ಹಾಗೂ ಭ್ರಾತೃತ್ವಕ್ಕೆ ಹೊಸ ಭಾಷ್ಯ ಬರೆದರು.

ಇದೆಲ್ಲವನ್ನು ನೋಡುತ್ತಿದ್ದ ಸ್ವಯಂ ಸೇವಕರು ಮಾತಿಯಿಲ್ಲದೇ ಮೂಕವಿಸ್ಮಿತರಾದರು. ತನ್ನ ಆದಾಯದ ಮೂಲವಾಗಿರುವ ಬಟ್ಟೆ ಅಂಗಡಿಯನ್ನು ಸಂಪೂರ್ಣ ದಾನ ಮಾಡುವ ಮೂಲಕ ಸಂತ್ರಸ್ತರ ಮುಖದಲ್ಲಿ ಮಂದಹಾಸ ಕಾಣುವ ನೌಶಾದ್ ಅವರ ದೊಡ್ಡ ಮನಸ್ಸು ನೋಡಿ ನಿಬ್ಬೆರಗಾದರು. ತಮ್ಮ ಅಂಗಡಿಯ ಬಟ್ಟೆಗಳನ್ನು ಪ್ಯಾಕ್​ ಮಾಡಿದ ನೌಶಾದ್ ಕಾರ್ಯಕರ್ತರೊಂದಿಗೆ ಖುದ್ದು ವಾಹನಕ್ಕೆ ಹೊತ್ತೊಯ್ದು ನಿರಾಶ್ರಿತ ಕ್ಯಾಂಪ್​ಗಳಿಗೆ ತಲುಪಿಸುವಲ್ಲಿ ಶ್ರಮಿಸಿದರು.

ಬಟ್ಟೆಯಲ್ಲೇ ನೌಶಾದ್ ಚಿತ್ರ ರಚಿಸಿದ ಕಲಾವಿದ

Loading...

ಇದೀಗ ಮಾನವೀಯತೆ ಹೊಸ ಭಾಷ್ಯ ಬರೆದ ನೌಶಾದ್ ಕೇರಳ ಕಡಲ ತೀರದ ಹೊಸ ಹೀರೋ ಆಗಿ ಹೊರಹೊಮ್ಮಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೇರಳ ಕಂಡ ದೇವಮಾನವ ಎಂಬ ಟ್ಯಾಗ್​ಲೈನ್​ನಲ್ಲಿ ನೌಶಾದ್ ಫೋಟೋಗಳು ಹರಿದಾಡುತ್ತಿದೆ. ಇವರ ದೊಡ್ಡ ಮನಸ್ಸಿಗೆ ಮಲಯಾಳಂ ಮೆಗಾ ಸ್ಟಾರ್ ಮಮ್ಮುಟ್ಟಿ, ನಟ ಜಯಸೂರ್ಯ ಖುದ್ದು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಅಂದಹಾಗೆ ನೌಶಾದ್ ಅಂತಹ ಅಗರ್ಭ ಶ್ರೀಮಂತರಲ್ಲ. ಆ ಒಂದು ಶಾಪ್​ನಿಂದ ಜೀವನ ನಡೆಸಬೇಕಾದವರು. ಇದೆಲ್ಲವನ್ನು ನೋಡಿದಾಗ ದೇವರಿದ್ದಾನೆ ಎಂದು ಅನಿಸುವುದಿಲ್ಲವೇ. ಅದು ಕೂಡ ನೌಶಾದ್ ಅಂತವರ ರೂಪದಲ್ಲಿ.
First published:August 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...