ಪ್ರತೀ ತಿಂಗಳು (Every Month) ಮಹಿಳೆಯರು ಪಿರಿಯಡ್ಸ್ (Women’s Menstrual) ಸಮಯದಲ್ಲಿ 5 ರಿಂದ 7 ದಿನಗಳು ಹೆಚ್ಚಾಗಿ ಮಂಕಾಗುವುದು ಮತ್ತು ಮೂಡ್ ಸ್ವಿಂಗ್ಸ್ (Mood Swings) ಅನುಭವಿಸುತ್ತಾರೆ. ಹೆಚ್ಚಿನ ಮಹಿಳೆಯರು ಮುಟ್ಟಿನ ಅವಧಿಯಲ್ಲಿ ಹೆಚ್ಚು ನೋವು (Pain), ಕಿಬ್ಬೊಟ್ಟೆಯ ಸೆಳೆತ ಮತ್ತು ಹೆಚ್ಚು ಬ್ಲೀಡಿಂಗ್ ಸಮಸ್ಯೆ ಅನುಭವಿಸುತ್ತಾರೆ. ಇನ್ನು ಪಿರಿಯಡ್ಸ್ ಅವಧಿಯಲ್ಲಿ ಮಹಿಳೆಯರ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳು ಉಂಟಾಗುತ್ತವೆ. ಈ ವೇಳೆ ದೇಹದ ಹಾರ್ಮೋನುಗಳ ಸಾಕಷ್ಟು ಪರಿಣಾಮ ಬೀರುತ್ತವೆ. ಇದರಿಂದ ಮಹಿಳೆಯರು ಮನಸ್ಥಿತಿ ಬದಲಾವಣೆ ಮತ್ತು ದೇಹದಲ್ಲಿ ನೋವಿನಂತಹ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಈ ನೋವು ಪಿರಿಯಡ್ಸ್ ಶುರುವಾಗುವ ಮೊದಲು ಆರಂಭವಾಗುತ್ತದೆ.
ಪಿರಿಯಡ್ಸ್ ಸಮಯದಲ್ಲಿ ದೈಹಿಕ ಬದಲಾವಣೆ ಮತ್ತು ನೋವು
ದೇಹದಲ್ಲಿ ನೋವು, ಕಿಬ್ಬೊಟ್ಟೆ ಸೆಳೆತ, ಕೈ ಕಾಲು, ಸೊಂಟದಲ್ಲಿ ನೋವು ಇದು ಪಿರಿಯಡ್ಸ್ ಶುರುವಾಗುವ ಮೊದಲು ಆರಂಭವಾಗುತ್ತದೆ. ಈ ಅನುಭವವು ಹೆಚ್ಚಿನ ಮಹಿಳೆಯರಿಗೆ ಪಿರಿಯಡ್ಸ್ ಪ್ರಾರಂಭವಾಗುವ 3 ದಿನಗಳ ಮೊದಲು ಪ್ರಾರಂಭವಾಗಿ, ಪಿರಿಯಡ್ಸ್ ಆಗುವ ದಿನ ಹತ್ತಿರವಿದೆ ಎಂಬ ಸಂಕೇತ ಸೂಚಿಸುತ್ತದೆ.
ಕೆಲವು ಮಹಿಳೆಯರು ತಮ್ಮ ದೇಹದಲ್ಲಿ ಉಂಟಾಗುವ ಈ ಬದಲಾವಣೆ ಮತ್ತು ನೋವಿನಿಂದ ತಮಗೆ ಪಿರಿಯಡ್ಸ್ ಬರಲಿದೆ ಎಂದು ತಿಳಿದುಕೊಳ್ತಾರೆ. ಇದನ್ನು ಪ್ರಿ ಮೆನ್ಸ್ಟ್ರುವಲ್ ಸಿಂಡ್ರೋಮ್ ಎಂದು ಕರೆಯುತ್ತಾರೆ.
ಪಿರಿಯಡ್ಸ್ ಏಕೆ ಹೆಚ್ಚು ನೋವನ್ನು ಉಂಟುಮಾಡುತ್ತದೆ?
ಋತುಚಕ್ರದ ನೋವು ಬಹುತೇಕ ಎಲ್ಲಾ ಮಹಿಳೆಯರಲ್ಲಿ ಕಂಡು ಬರುತ್ತದೆ. ಇದು ಸಾಮಾನ್ಯ ವಿಷಯವಲ್ಲ. ಮುಟ್ಟಿನ ಸಮಯದಲ್ಲಿ ನೋವು ಹೆಚ್ಚಿನ ಮಟ್ಟದ ಪ್ರೊಸ್ಟಗ್ಲಾಂಡಿನ್ ಹಾರ್ಮೋನ್ ಗಳಿಂದ ಉಂಟಾಗುತ್ತದೆ. ಈ ಹಾರ್ಮೋನ್ ಮಟ್ಟವು ಹೆಚ್ಚಾದರೆ ಪಿರಿಯಡ್ಸ್ ನಲ್ಲಿ ನೋವು ಸಹ ಹೆಚ್ಚುತ್ತದೆ.
ಪಿಎಂಎಸ್, ಎಂಡೊಮೆಟ್ರಿಯೊಸಿಸ್, ಫೈಬ್ರಾಯ್ಡ್, ಪಿಐಡಿ-ಪೆಲ್ವಿಕ್ ಉರಿಯೂತ ಕಾಯಿಲೆ, ಅಡೆನೊಮೈಯೋಸಿಸ್, ದುರ್ಬಲ ಸ್ನಾಯು, ಗರ್ಭಕಂಠದ ಸ್ಟೆನೋಸಿಸ್, ಪೌಷ್ಠಿಕಾಂಶದ ಕೊರತೆ ಕಾರಣದಿಂದ ಹೆಚ್ಚಿನ ಮಟ್ಟದ ಪ್ರೊಸ್ಟಗ್ಲಾಂಡಿನ್ ಉಂಟಾಗುವ ಸಾಧ್ಯತೆ ಇದೆ ಅಂತಾರೆ ತಜ್ಞರು.
ಡಾ. ಅಕ್ಷತ್ ಚಡ್ಡಾ ಪ್ರಕಾರ, ಎಲ್ಲಾ ಮಹಿಳೆಯರಲ್ಲಿ ಪಿರಿಯಡ್ ನೋವು ವಿಭಿನ್ನ ತೀವ್ರತೆ ಹೊಂದಿರುತ್ತದೆ. ಋತುಚಕ್ರದ ಸಮಯದಲ್ಲಿ ತೀಕ್ಷ್ಣವಾದ ನೋವು ಉಂಟಾದರೆ ಅದು ಗಂಭೀರ ಕಾಯಿಲೆಗಳ ಸಂಕೇತವೂ ಆಗಿರಬಹುದು. ವೈದ್ಯರಿಂದ ತಪಾಸಣೆ ಮಾಡಿಸಿ. ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಮಾಡಿ ಅಂತಾರೆ.
ಹರಳೆಣ್ಣೆ ಅನ್ವಯಿಸುವುದು
ಮುಟ್ಟಿನ ಸಮಯದಲ್ಲಿ ಕಿಬ್ಬೊಟ್ಟೆ ಸೆಳೆತ, ನೋವು ತಪ್ಪಿಸಲು ನಿಯಮಿತವಾಗಿ ಹರಳೆಣ್ಣೆಯನ್ನು ಹೊಟ್ಟೆಯ ಕೆಳಭಾಗಕ್ಕೆ ಅನ್ವಯಿಸಿದರೆ ಸೆಳೆತ ಕಡಿಮೆಯಾಗುತ್ತೆ ಅಂತಾರೆ ತಜ್ಞರು. ಮುಟ್ಟಿನ ಸಮಯದಲ್ಲಿ ಯಾವುದೇ ರೀತಿಯ ಮಸಾಜ್ ಮಾಡಬೇಡಿ.
ಬಿಸಿನೀರು ಮತ್ತು ಕೋಲ್ಡ್ ಕಂಪ್ರೆಸ್
ಪಿರಿಯಡ್ಸ್ ಸಮಯದಲ್ಲಿ ನೋವು ನಿವಾರಿಸಲು ಹೊಟ್ಟೆಯ ಕೆಳಭಾಗ ಮತ್ತು ತೊಡೆ ಸಂದುಗಳಿಗೆ ಬಿಸಿ ನೀರಿನ ಚೀಲ ಅಥವಾ ತಾಪನ ಪ್ಯಾಡ್ ನ್ನು ಅನ್ವಯಿಸಿ. ಕೋಲ್ಡ್ ಕಂಪ್ರೆಸ್ ಮಾಡಿ.
ಉತ್ತಮ ಆಹಾರ ಸೇವನೆ ಮಾಡುವುದು
ಪಿರಿಯಡ್ಸ್ ಸಮಯದಲ್ಲಿ ದೇಹವನ್ನು ಸದೃಢವಾಗಿಡಲು ಉತ್ತಮ ಆಹಾರ ಕ್ರಮ ಫಾಲೋ ಮಾಡಬೇಕು. ಅವಧಿಯಲ್ಲಿ ನೋವು, ದೌರ್ಬಲ್ಯ ಉಂಟಾಗುತ್ತದೆ. ಇದನ್ನು ತಪ್ಪಿಸಲು ಹಸಿರು ಎಲೆಗಳ ತರಕಾರಿಗಳು, ಕುಂಬಳಕಾಯಿ ಬೀಜಗಳು, ಬಾದಾಮಿ, ಗೋಡಂಬಿ, ನಿಂಬೆ, ಪೇರಲ, ಸಿಟ್ರಸ್ ಹಣ್ಣು, ಕಿವಿ, ಸ್ಟ್ರಾಬೆರಿ, ಬ್ರೊಕೊಲಿ, ಕ್ಯಾಪ್ಸಿಕಂ, ಆಮ್ಲಾ ಸೇವಿಸಲು ತಜ್ಞರು ಸೂಚಿಸುತ್ತಾರೆ.
ಇದನ್ನೂ ಓದಿ: ಅನಾವಶ್ಯಕವಾಗಿ ಮಾತ್ರೆ ಸೇವನೆ ಮಾಡ್ತೀರಾ? ಅದರಿಂದ ಏನೆಲ್ಲಾ ಅನಾಹುತವಾಗುತ್ತೆ ನೋಡಿ
ಶುಂಠಿ ಚಹಾ ಸೇವಿಸಿ
ಅವಧಿಯ ನೋವು ಕಡಿಮೆ ಮಾಡಲು ಒಂದು ಕಪ್ ಶುಂಠಿ, ಕ್ಯಾಮೊಮೈಲ್ ಅಥವಾ ರಾಸ್ಪ್ಬೆರಿ ಎಲೆಗಳ ಚಹಾ ಸೇವಿಸಿ. ಪಿರಿಯಡ್ಸ್ ಸಮಯದಲ್ಲಿ ಆಲ್ಕೋಹಾಲ್ ಅಥವಾ ಸಿಗರೇಟ್ ಸೇವನೆ ತ್ಯಜಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ