HOME » NEWS » Lifestyle » WHY MAGNESIUM IS IMPORTANT FOR THE BODY STG SESR

Health Care: ಮೆಗ್ನೀಶಿಯಂ ದೇಹಕ್ಕೆ ಏಕೆ ಅಗತ್ಯ? ಇಲ್ಲಿದೆ ಮೆಗ್ನೀಶಿಯಂ ಉಳ್ಳ 5 ಆಹಾರಗಳ ಮಾಹಿತಿ

ಪ್ರೋಟೀನ್ ರಚನೆ, ವಂಶವಾಹಿ ನಿರ್ವಹಣೆ ಮತ್ತು ಸ್ನಾಯುಚಲನೆಯನ್ನು ಸುಗಮಗೊಳಿಸುವಂತಹ, ದೇಹದ ಅನೇಕ ಜೀವ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಮೆಗ್ನೀಶಿಯಂ ಬೇಕೇ ಬೇಕು

news18-kannada
Updated:June 23, 2021, 10:56 PM IST
Health Care: ಮೆಗ್ನೀಶಿಯಂ ದೇಹಕ್ಕೆ ಏಕೆ ಅಗತ್ಯ? ಇಲ್ಲಿದೆ ಮೆಗ್ನೀಶಿಯಂ ಉಳ್ಳ 5 ಆಹಾರಗಳ ಮಾಹಿತಿ
file photo
  • Share this:

ವಿಟಮಿನ್‍ಗಳು ದೇಹಕ್ಕೆ ಅತ್ಯಂತ ಅಗತ್ಯ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಮಿನರಲ್‍ಗಳ ಸೇವನೆಗೂ ಪ್ರಾಮುಖ್ಯತೆ ಕೊಡುವುದು ಬಹಳ ಅಗತ್ಯವಿದೆ. ಮಿನರಲ್‍ಗಳು ನಮ್ಮ ದೇಹದ ಆರೋಗ್ಯವನ್ನು ಕಾಪಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಮೆಗ್ನೀಶಿಯಂ ಅವುಗಳಲ್ಲಿ ಒಂದು. ಶಕ್ತಿಯ ಸೃಷ್ಟಿ, ನರಗಳ ಕಾರ್ಯ, ಪ್ರೋಟೀನ್ ರಚನೆ, ವಂಶವಾಹಿ ನಿರ್ವಹಣೆ ಮತ್ತು ಸ್ನಾಯುಚಲನೆಯನ್ನು ಸುಗಮಗೊಳಿಸುವಂತಹ, ದೇಹದ ಅನೇಕ ಜೀವ ರಾಸಾಯನಿಕ ಪ್ರಕ್ರಿಯೆಗಳಲ್ಲಿ ಮೆಗ್ನೀಶಿಯಂನ ಪಾತ್ರ ಇರಲೇಬೇಕು.




ಮೆಗ್ನೀಶಿಯಂ ಸೇವನೆ ದೇಹಕ್ಕೆ ಏಕೆ ಅಗತ್ಯ?
• ಮೆಗ್ನೀಶಿಯಂ, ರಕ್ತಪ್ರವಾಹದಿಂದ ಸಕ್ಕರೆಯನ್ನು ಹೀರಿಕೊಳ್ಳುವ ಸ್ನಾಯುಗಳು ಮತ್ತು ಯಕೃತ್ತಿನ ಕೋಶಗಳ ಶಕ್ತಿಯನ್ನು ಬಲಪಡಿಸುವ ಸಾಮರ್ಥ್ಯ ಹೊಂದಿದ್ದು, ಅದರಿಂದಾಗಿ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಟೈಪ್ 2 ಮಧುಮೇಹವನ್ನು ನಿವಾರಿಸಲು ಸಾಧ್ಯವಾಗುತ್ತದೆ.
• ಮೆಗ್ನೀಶಿಯಂನ ನಿರಂತರ ಸೇವನೆಯಿಂದ, ರಕ್ತದಲ್ಲಿನ ಸಕ್ಕರೆಯನ್ನು ನಿಮ್ಮ ಸ್ನಾಯುಗಳಿಗೆ ಹೋಗುವಂತೆ ಮಾಡಿ ಮತ್ತು ಲ್ಯಾಕ್ಟೇಟನ್ನು ವಿಲೇವಾರಿ ಮಾಡುವ ಮೂಲಕ ಕ್ರೀಡಾಪಟುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
• ಮೆಗ್ನೀಶಿಯಂ ಉಳ್ಳ ಆಹಾರಗಳು ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಮಟ್ಟವನ್ನು ನಿಯಂತ್ರಿಸಿ, ಮೂಳೆ ಸಾಂದ್ರತೆ ಮತ್ತು ಮೂಳೆ ಸ್ಫಟಿಕ ರಚನೆಯನ್ನು ಸುಧಾರಿಸುತ್ತದೆ. ಋತುಬಂಧದ ಬಳಿಕ, ಮಹಿಳೆಯರಲ್ಲಿ ಕಂಡು ಬರುವ ಅಸ್ಟಿಯೋಪೊರೋಸಿಸ್ ಅಪಾಯವನ್ನು ಇದು ಕಡಿಮೆ ಮಾಡುತ್ತದೆ.


ಮೆಗ್ನೀಶಿಯಂನ್ನು ಹೊಂದಿರುವ ಆಹಾರಗಳು ಯಾವುವು..?
1. ಬೀಜಗಳು-ಅಗಸೆ ಬೀಜ, ಕುಂಬಳಕಾಯಿ ಬೀಜ ಮತ್ತು ಚೀಯಾ ಬೀಜಗಳಲ್ಲಿ ಹೇರಳವಾದ ಮೆಗ್ನೀಶಿಯಂ ಇರುತ್ತದೆ. 28 ಗ್ರಾಮ ಕುಂಬಳಕಾಯಿ ಬೀಜದಲ್ಲಿ 150 ಎಂಜಿ ಮೆಗ್ನೀಶಿಯಂ ಇರುತ್ತದೆ. ಈ ಬೀಜಗಳು, ಕಬ್ಬಿಣಾಂಶ, ಫೈಬರ್ ಮತ್ತು ಒಮೆಗಾ-3 ಫ್ಯಾಟಿ ಆ್ಯಸಿಡ್‍ಗಳನ್ನು ಕೂಡ ಹೇರಳವಾಗಿ ಹೊಂದಿದೆ.



2. ಡಾರ್ಕ್ ಚಾಕೊಲೇಟ್-ಡಾರ್ಕ್ ಚಾಕೊಲೇಟ್ ಅತ್ಯಧಿಕ ಮೆಗ್ನೀಶಿಯಂ ಹೊಂದಿದೆ. ಅದರಲ್ಲಿ ಆ್ಯಕ್ಸಿಡೆಂಟ್‍ಗಳು ಕೂಡ ಹೇರಳವಾಗಿ ಇದ್ದು, ಉರಿಯೂತ, ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.



3. ಅವೊಕಾಡೋ-ಅವೊಕಾಡೋಗಳು ಉರಿಯೂತವನ್ನು ನಿವಾರಿಸುತ್ತವೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ. ಅವೊಕಾಡೋ ಅಧಿಕ ಮೆಗ್ನೀಶಿಯಂ ಹೊಂದಿದೆ. ಒಂದು ಮಧ್ಯಮ ಗಾತ್ರದ ಅವೊಕಾಡೋದಲ್ಲಿ 58 ಎಮ್‍ಜಿ ಮೆಗ್ನೀಶಿಯಂ ಇದೆ. ಈ ಹಣ್ಣಿನಲ್ಲಿ ಪೊಟಾಶಿಯಂ, ವಿಟಮಿನ್ ಬಿ ಮತ್ತು ಕೆ ಹಾಗೂ ಹೇರಳ ಫೈಬರ್ ಇದೆ.



4. ಒಣ ಬೀಜಗಳು/ನಟ್ಸ್ -ಬಾದಾಮಿ ಮತ್ತು ಗೋಡಂಬಿಯಲ್ಲಿ ಹೆಚ್ಚಿನ ಪ್ರಮಾಣದ ಮೆಗ್ನೀಶಿಯಂ ಇದೆ. ಅವುಗಳಲ್ಲಿ ಮೊನೋಸ್ಯಾಚುರೇಟೆಡ್ ಫ್ಯಾಟ್‍ಗಳಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.



5. ಮೀನು-ಸಾಲ್ಮನ್ ಮತ್ತು ಮ್ಯಾಕರೇಲ್‍ನಂತಹ ಹೆಚ್ಚಿನ ಮೀನುಗಳಲ್ಲಿ ಮೆಗ್ನೀಶಿಯಂ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಮೀನು ತಿನ್ನುವುದರಿಂದ ಸ್ನಾಯುಗಳ ಚೇತರಿಕೆಗೆ ಸಹಾಯವಾಗುತ್ತದೆ ಮತ್ತು ಹೃದಯದ ಕಾಯಿಲೆಗಳ ಅಪಾಯ ಕಡಿಮೆ ಆಗುತ್ತದೆ.



First published: June 23, 2021, 10:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories