Vitamin D Deficiency: ತೂಕ ಹೆಚ್ಚಳ ಮತ್ತು ಬೊಜ್ಜಿಗೆ ವಿಟಮಿನ್ ಡಿ ಕೊರತೆ ಕಾರಣವೇ..? ಇದನ್ನು ಒಮ್ಮೆ ಓದಿ..

ಅರೇ.. ನಮ್ಮ ದೇಹದಲ್ಲಿ ಹೆಚ್ಚಾಗುತ್ತಿರುವ ಬೊಜ್ಜಿಗೆ ಈ ವಿಟಮಿನ್ ಡಿ ಕೊರತೆಯು ಹೇಗೆ ಕಾರಣವಾಗುತ್ತದೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚೆಗೆ ಈ ಅತಿಯಾದ ದೇಹದ ತೂಕ(Over Body Weight ) ಮತ್ತು ಬೊಜ್ಜು(Obesity)ನಿಂದ ಆಗುತ್ತಿರುವ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ. ತುಂಬಾ ಜನರು ಅತಿಯಾದ ತೂಕ ಮತ್ತು ಬೊಜ್ಜನ್ನು ಕಡಿಮೆ ಮಾಡಿಕೊಳ್ಳಲು ಅನೇಕ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಅತಿಯಾದ ಬೊಜ್ಜು ಪ್ರಸ್ತುತ ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಳ್ಳುವ ರೋಗವಾಗಿ ಪರಿಣಮಿಸಿವೆ ಎಂದರೆ ತಪ್ಪಾಗಲಾರದು. ಈ ಬೊಜ್ಜಿನ ಸಮಸ್ಯೆಯು ಮೆಕ್ಸಿಕೋ(Mexico)ದಂತಹ ದೇಶಗಳಲ್ಲಿ ಮಕ್ಕಳ ಅತಿದೊಡ್ಡ ಶತ್ರುವಾಗಿದೆ. ಈಗಾಗಲೇ ಇದನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಲಾಗಿದ್ದು, ಈ ಸಮಸ್ಯೆಯು ಕಳಪೆ ಪೌಷ್ಟಿಕಾಂಶದ ಪರಿಣಾಮವಾಗಿ ಮತ್ತು ವಿಟಮಿನ್ ಡಿ(Vitamin D Deficiency) ಕೊರತೆಗೂ ಸಂಬಂಧಿಸಿದೆ ಎಂದು ಸಾಬೀತಾಗಿದೆ.

ಅರೇ.. ನಮ್ಮ ದೇಹದಲ್ಲಿ ಹೆಚ್ಚಾಗುತ್ತಿರುವ ಬೊಜ್ಜಿಗೆ ಈ ವಿಟಮಿನ್ ಡಿ ಕೊರತೆಯು ಹೇಗೆ ಕಾರಣವಾಗುತ್ತದೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವಿಸಬಹುದು. ಟಫ್ಟ್ಸ್- ನ್ಯೂ ಇಂಗ್ಲೆಂಡ್ ವೈದ್ಯಕೀಯ ಕೇಂದ್ರದ ವಿಜ್ಞಾನಿಗಳು ಈ ವಿಟಮಿನ್ ಡಿ ಕೊರತೆಯೂ ದೇಹದಲ್ಲಿ ಬೊಜ್ಜು ಹೆಚ್ಚಾಗಲು ಮತ್ತು ಮಧುಮೇಹದ ಅಪಾಯವನ್ನು ತರಬಲ್ಲದು ಎಂದು ತಿಳಿಸಿದ್ದಾರೆ.

ಇದಲ್ಲದೆ, ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರುವ ಜನರ ಕಿಬ್ಬೊಟ್ಟೆಯ ಸುತ್ತಲೂ ಅಡಿಪೋಸ್ ಅಂಗಾಂಶ ಸಂಗ್ರಹವಾಗುತ್ತದೆ ಮತ್ತು ಇದರಿಂದ ತ್ವರಿತವಾಗಿ ತೂಕ ಹೆಚ್ಚಳವಾಗುತ್ತದೆ ಎಂದು ಈ ಅಧ್ಯಯನ ತಿಳಿಸಿದೆ.

ವಿಟಮಿನ್ ಡಿ ಮಾನವನ ದೇಹದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಏಕೆಂದರೆ ಕ್ಯಾಲ್ಸಿಯಂ ಮತ್ತು ರಂಜಕವನ್ನು ದೇಹದಲ್ಲಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದು ಸ್ನಾಯುಗಳು ಮತ್ತು ನರಗಳೆರಡರ ಸಾಮಾನ್ಯ ಕಾರ್ಯನಿರ್ವಹಣೆ ಮತ್ತು ಬೆಳವಣಿಗೆಗೆ ಕಾರಣವಾಗಿದೆ. ದೇಹದಲ್ಲಿ ಸರಿಯಾದ ಶೇಕಡಾವಾರು ಇಲ್ಲದಿದ್ದಾಗ, ಮೂಳೆ, ಸ್ನಾಯು ಸಂಬಂಧಿ ರೋಗಗಳು ಕಾಣಿಸಿಕೊಳ್ಳುತ್ತವೆ.

ಬೊಜ್ಜು ಮತ್ತು ವಿಟಮಿನ್ ಡಿ ಕೊರತೆಯ ನಡುವಿನ ಸಂಬಂಧ

ಬೊಜ್ಜು ಈಗ ಒಂದು ಅನಾರೋಗ್ಯವಾಗಿದ್ದು, ಪ್ರಪಂಚದಾದ್ಯಂತದ ಪೌಷ್ಟಿಕ ತಜ್ಞರು ಹೇಳುವಂತೆ ಹೆಚ್ಚಿನ ಪ್ರಕರಣಗಳು ಚಿಕ್ಕ ಮಕ್ಕಳಲ್ಲಿ ಕಂಡು ಬರುತ್ತಿದೆ. ಇದಲ್ಲದೆ, ಚಯಾಪಚಯ ತೊಂದರೆಗಳಿಗೆ ನೇರವಾಗಿ ಸಂಬಂಧಿಸಿದೆ, ಉದಾಹರಣೆಗೆ ಕಡಿಮೆ ಹೆಚ್ಚಿನ ಸಾಂದ್ರತೆಯ ಲಿಪೋಪ್ರೋಟೀನ್ ಮತ್ತು ಅನಾರೋಗ್ಯಕರ ಟ್ರೈಗ್ಲಿಸರೈಡ್ ಮಟ್ಟಗಳಿಂದ ಈ ರೋಗವು ಕಂಡು ಬರುತ್ತದೆ.

ಪರಾಟ್ ಹಾರ್ಮೋನ್ (ಪಿಟಿಎಚ್) ಎಂಬ ಸಂಯುಕ್ತವು ಹೆಚ್ಚಿನ ಮಟ್ಟದಲ್ಲಿದ್ದು, ಕಡಿಮೆ 25 (ಒಎಚ್)ಡಿ3 ಮತ್ತು 1.25 (ಒಎಚ್)2ಡಿ ಅಂಶವು ಇದ್ದರೆ, ಆಗ ತೂಕ ಹೆಚ್ಚಳವಾಗುತ್ತದೆ. ಇದಲ್ಲದೆ ವಿಟಮಿನ್ ಸಿ ಕೊರತೆಯು ಸಹ ಟೈಪ್ 2 ಮಧುಮೇಹದ ಅಪಾಯ ಹೆಚ್ಚಿಸುತ್ತದೆ ಎಂದು ಊಹಿಸಲಾಗಿದೆ.

ವಿಟಮಿನ್ ಡಿ ಹೇಗೆ ಪಡೆಯಬಹುದು

ಈ ವಿಟಮಿನ್ ಡಿ ಕೊರತೆಯನ್ನು ಹೋಗಲಾಡಿಸಲು ವಾರಕ್ಕೆ 3 - 4 ಬಾರಿ ಸುಮಾರು 10 ನಿಮಿಷಗಳ ಕಾಲ ನೀವು ಬೆಳಗ್ಗೆ ಸೂರ್ಯನ ಕಿರಣಗಳನ್ನು ಪಡೆಯಿರಿ. ಇದನ್ನು ಯಾವುದೇ ಸನ್‌ಸ್ಕ್ರೀನ್ ಹಚ್ಚಿಕೊಳ್ಳದೆಯೇ ಮಾಡಬೇಕು.

ಇದಲ್ಲದೆ ವಿಟಮಿನ್ ಡಿ ಅಂಶವಿರುವಂತಹ ಹಾಲು, ಬೆಣ್ಣೆ, ಚೀಸ್, ಮೊಟ್ಟೆಗಳು, ಧಾನ್ಯಗಳು, ಮೀನು ಮತ್ತು ಅಣಬೆಗಳನ್ನು ಹೆಚ್ಚಾಗಿ ಸೇವಿಸಿರಿ.
Published by:Latha CG
First published: