Disease And Health: ಪುರುಷರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚು ಏಕೆ? ಅದು ಹೇಗೆ ರೂಪುಗೊಳ್ಳುತ್ತದೆ?

ಜೀವಕೋಶಗಳು ಹಾನಿಗೊಳಗಾದಾಗ ಅವು ಸಾಯುತ್ತವೆ. ಮತ್ತು ಹೊಸ ಜೀವಕೋಶಗಳು ಅವುಗಳ ಸ್ಥಾನ ಪಡೆಯುತ್ತವೆ. ಕೆಲವೊಮ್ಮೆ ಈ ವ್ಯವಸ್ಥಿತ ಪ್ರಕ್ರಿಯೆಯು ಒಡೆಯುತ್ತದೆ. ಮತ್ತು ಅಸಹಜ ಅಥವಾ ಹಾನಿಗೊಳಗಾದ ಜೀವಕೋಶಗಳು ನಾಶವಾಗುವ ಬದಲು ವೇಗವಾಗಿ ಬೆಳೆಯುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳುವ ಪ್ರಕಾರ ಕ್ಯಾನ್ಸರ್ ಕಾಯಿಲೆ (Cancer Disease) ವಿಶ್ವಾದ್ಯಂತ (World) ಹೆಚ್ಚಿನ ಸಾವುಗಳು (Deaths) ಉಂಟಾಗಲು ಪ್ರಮುಖ ಕಾರಣವಾಗಿದೆ (Causes). 2020 ರಲ್ಲಿ ಸುಮಾರು 10 ಮಿಲಿಯನ್ ಸಾವುಗಳು ಕ್ಯಾನ್ಸರ್ ಕಾಯಿಲೆಯಿಂದ ಸಂಭವಿಸುತ್ತವೆ. ಪ್ರತಿ 6 ರಲ್ಲಿ 1 ಸಾವಿಗೆ ಕ್ಯಾನ್ಸರ್ ಕಾರಣ ಎಂದು ಸಹ ಅರ್ಥ ಮಾಡಿಕೊಳ್ಳಬಹುದು. ಇದು ಸ್ತನ ಕ್ಯಾನ್ಸರ್, ಶ್ವಾಸಕೋಶ, ಕೊಲೊನ್, ಗುದನಾಳ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ಸೇರಿದಂತೆ ಕೆಲವು ಕ್ಯಾನ್ಸರ್ ಕಾಯಿಲೆಗಳಿಗೆ ಕೊಡುಗೆ ನೀಡುತ್ತದೆ. ಸಾಮಾನ್ಯವಾಗಿ ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ.

    ದೇಹದಲ್ಲಿ ಕ್ಯಾನ್ಸರ್ ಹೇಗೆ ರೂಪುಗೊಳ್ಳುತ್ತದೆ?

    ಜೀವಕೋಶಗಳು ಹಾನಿಗೊಳಗಾದಾಗ ಅವು ಸಾಯುತ್ತವೆ. ಮತ್ತು ಹೊಸ ಜೀವಕೋಶಗಳು ಅವುಗಳ ಸ್ಥಾನ ಪಡೆಯುತ್ತವೆ. ಕೆಲವೊಮ್ಮೆ ಈ ವ್ಯವಸ್ಥಿತ ಪ್ರಕ್ರಿಯೆಯು ಒಡೆಯುತ್ತದೆ. ಮತ್ತು ಅಸಹಜ ಅಥವಾ ಹಾನಿಗೊಳಗಾದ ಜೀವಕೋಶಗಳು ನಾಶವಾಗುವ ಬದಲು ವೇಗವಾಗಿ ಬೆಳೆಯುತ್ತವೆ. ಈ ಜೀವಕೋಶಗಳು ಗಡ್ಡೆಗಳಾಗಲು ಕಾರಣವಾಗುತ್ತದೆ. ಈ ಗಡ್ಡೆಯು ಕೆಲವೊಮ್ಮೆ ಕ್ಯಾನ್ಸರ್ ರೂಪ ಪಡೆಯುತ್ತದೆ.

    ಇತ್ತೀಚಿನ ಅಧ್ಯಯನದ ಪ್ರಕಾರ ಕ್ಯಾನ್ಸರ್ ಯಾರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ? ನಿಮ್ಮ ಜೀವನಶೈಲಿಯು ನಿಮ್ಮ ಕ್ಯಾನ್ಸರ್ ಅಪಾಯವನ್ನು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ. ಜೊತೆಗೆ ಯಾವ ರೋಗ ಲಕ್ಷಣಗಳಿಂದ ನೀವು ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಗುರುತಿಸಬಹುದು ತಿಳಿಯೋಣ.

    ಇದನ್ನೂ ಓದಿ: ಆಗಾಗ ಶೀತ ಕಾಣಿಸಿಕೊಳ್ಳುತ್ತಿದ್ದರೆ ವಿಟಮಿನ್ ಸಿ ನಿಮ್ಮ ದೇಹ ಸೇರಲಿ

    ಯಾರಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚು

    ಅಂಕಿ ಅಂಶಗಳ ಪ್ರಕಾರ ಪ್ರತಿ ಇಬ್ಬರಲ್ಲಿ ಒಬ್ಬರಿಗೆ ತಮ್ಮ ಜೀವಿತಾವಧಿಯಲ್ಲಿ ಕ್ಯಾನ್ಸರ್ ಬರುತ್ತದೆ. ಅನೇಕ ಅಪಾಯಕಾರಿ ಅಂಶಗಳು ಕ್ಯಾನ್ಸರ್ ಉಂಟು ಮಾಡುವ ಸಾಧ್ಯತೆ ಮೇಲೆ ಪರಿಣಾಮ ಬೀರಬಹುದು. ಒಂದು ಅಧ್ಯಯನದ ಪ್ರಕಾರ ಪುರುಷರಲ್ಲಿ ಕ್ಯಾನ್ಸರ್ ಸಂಭವ ಮಹಿಳೆಯರಿಗಿಂತ ಹೆಚ್ಚು.

    ಅಧ್ಯಯನ ಏನು ಹೇಳಿದೆ?

    ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಹೊಸ ಅಧ್ಯಯನವು ಮಹಿಳೆಯರಿಗಿಂತ ಪುರುಷರಿಗೆ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಪುರುಷರು ಹೆಚ್ಚಿನ ಅಪಾಯದಲ್ಲಿರುವ ಈ ಸಂಶೋಧನೆಗಳು ಧೂಮಪಾನ, ಮದ್ಯಪಾನ ಮತ್ತು ಇತರ ಅಪಾಯಕಾರಿ ಅಂಶಗಳಿಂದ ಉಂಟಾಗುತ್ತದೆ.

    294,100 ರೋಗಿಗಳ ವಿಶ್ಲೇಷಣೆ ಮತ್ತು ಲಿಂಗದ ಮೂಲಕ ಕ್ಯಾನ್ಸರ್ ಟ್ರ್ಯಾಕಿಂಗ್ ನಿಂದ ಸಂಶೋಧನೆ ಮಾಡಲಾಗಿದೆ. ಪುರುಷರಿಗೆ ಹೆಚ್ಚಿನ ಅಪಾಯ ಏಕೆ ಎಂದು ವಿಜ್ಞಾನಿಗಳಿಗೆ ತಿಳಿದಿಲ್ಲ. ಆದರೆ ಈ ವ್ಯತ್ಯಾಸ ಅರ್ಥಮಾಡಿಕೊಂಡರೆ ಪ್ರತಿಕ್ರಿಯಾತ್ಮಕ ಕ್ಯಾನ್ಸರ್-ಸಂಬಂಧಿತ ಆರೋಗ್ಯ ಚಿಕಿತ್ಸೆ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

    ಪುರುಷರಿಗೆ ಕ್ಯಾನ್ಸರ್ ಬರುವ ಅಪಾಯ ಹೆಚ್ಚು

    ಅಧ್ಯಯನದ ಪ್ರಕಾರ, ಪುರುಷರಲ್ಲಿ ಕ್ಯಾನ್ಸರ್ ಬರುವ ಅಪಾಯವು ಮಹಿಳೆಯರಿಗಿಂತ 1.3 ರಿಂದ 10.8 ಪಟ್ಟು ಹೆಚ್ಚು. ಹೆಚ್ಚಿನ ಅಪಾಯ ಹೊಂದಿರುವ ಪುರುಷರು

    ಅನ್ನನಾಳದ ಕ್ಯಾನ್ಸರ್ (10.8 ಪಟ್ಟು ಹೆಚ್ಚಿನ ಅಪಾಯ),

    ಧ್ವನಿಪೆಟ್ಟಿಗೆ (3.5 ಪಟ್ಟು ಹೆಚ್ಚು),

    ಗ್ಯಾಸ್ಟ್ರಿಕ್ ಕಾರ್ಡಿಯಾ (3.5 ಪಟ್ಟು ಹೆಚ್ಚು),

    ಗಾಳಿಗುಳ್ಳೆಯ ಕ್ಯಾನ್ಸರ್ (3.3 ಪಟ್ಟು ಹೆಚ್ಚಿನ ಅಪಾಯ).

    ಮಹಿಳೆಯರಿಗಿಂತ ಪುರುಷರಲ್ಲಿ ಥೈರಾಯ್ಡ್ ಮತ್ತು ಪಿತ್ತಕೋಶದ ಕ್ಯಾನ್ಸರ್ ಪ್ರಕರಣಗಳು ಕಡಿಮೆ ಎಂದು ಸಂಶೋಧಕರು ಹೇಳಿದ್ದಾರೆ.

    ಜೀವನಶೈಲಿ ಕ್ಯಾನ್ಸರ್ ಅಪಾಯ ಹೆಚ್ಚಿಸಬಹುದು

    ನ್ಯಾಶನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನ ಡಾ. ಸಾರಾ ಜಾಕ್ಸನ್ ಅವರ ಜೀವನಶೈಲಿಯು ಕ್ಯಾನ್ಸರ್ ಅಪಾಯದ ಶೇಕಡಾ 20 ರಷ್ಟು ಮಾತ್ರ ಕೊಡುಗೆ ನೀಡುತ್ತದೆ. ಜೀವನಶೈಲಿಯ ಅಂಶಗಳು ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುತ್ತದೆ. ತಜ್ಞರು ಪುರುಷರು ಮತ್ತು ಮಹಿಳೆಯರಿಗೆ ಆರೋಗ್ಯಕರ ಆಹಾರ ಕಾಪಾಡಿಕೊಳ್ಳಲು, ನಿಯಮಿತ ವ್ಯಾಯಾಮ, ತಂಬಾಕು ಮತ್ತು ಆಲ್ಕೋಹಾಲ್ ಬಳಕೆ ತಪ್ಪಿಸಲು ಸಲಹೆ ನೀಡುತ್ತಾರೆ.

    ಕ್ಯಾನ್ಸರ್ ಸಂಕೇತಗಳ ಮೇಲೆ ನಿಗಾ ಇರಿಸಿ

    ಕ್ಯಾನ್ಸರ್ ಮುಖ್ಯ ಲಕ್ಷಣಗಳು ವ್ಯಕ್ತಿಯು ಯಾವ ರೀತಿಯ ಕ್ಯಾನ್ಸರ್ ಅಭಿವೃದ್ಧಿಪಡಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಹೊಸ ಅಥವಾ ಆತಂಕಕಾರಿ ರೋಗಲಕ್ಷಣಗಳನ್ನು ಗಮನಿಸುವುದು ಮುಖ್ಯ. ನಿಮ್ಮ ವೈದ್ಯರನ್ನು ಸಂಪರ್ಕಿಸಿ.

    ಇದನ್ನೂ ಓದಿ: ಈ ಕೆಲವು ಚಟುವಟಿಕೆಗಳಿಂದ ಮಧುಮೇಹ ನಿಯಂತ್ರಿಸಿ!

    ಕರುಳಿನ ಅಭ್ಯಾಸದಲ್ಲಿ ಬದಲಾವಣೆಗಳು, ಉಬ್ಬುವುದು, ಎದೆ ನೋವು, ಉಸಿರಾಟದ ತೊಂದರೆ, ಗಡ್ಡೆಗಳು ಮತ್ತು ಹೊಸ ಮೋಲ್‌, ತೂಕ ನಷ್ಟ, ಹೊಟ್ಟೆ ಅಥವಾ ಬೆನ್ನು ನೋವು, ಅಜೀರ್ಣ ಮತ್ತು ವೇಗದ ಅಥವಾ ನಿಧಾನವಾದ ಹೃದಯ ಬಡಿತ ಹೆಚ್ಚಳ ಹೊಂದಿದೆ.
    Published by:renukadariyannavar
    First published: