DOG: ರಾತ್ರಿ ವೇಳೆಯಲ್ಲಿ ನಾಯಿ ಬೊಗಳಿದರೆ ಏನು ಅರ್ಥ ಗೊತ್ತಾ?

DOG Barking: ಒಂದು ನಾಯಿಗೆ ನಾನು ಏಕಾಂಗಿಯಾಗಿ ಇದ್ದೇನೆ ಎಂದಾಗ ಅದು ಅಳುವುದಕ್ಕೆ ಪ್ರಾರಂಭಿಸುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ ಕೂಡ ಹೌದು. ಇದನ್ನು ಕೇಳಿದ ಇತರೆ ನಾಯಿಗಳು ಸಹ ಕೂಗುವುದಕ್ಕೆ ಪ್ರಾರಂಭಿಸುತ್ತವೆ . ಹೀಗಾಗಿ ಇನ್ನು ಮುಂದೆ ನಾಯಿಗಳು ಕೂಗುತ್ತಿದ್ದರೆ ಎಂದು ಓಡಿಸುವುದಕ್ಕೆ ಹೋಗಬೇಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮಧ್ಯರಾತ್ರಿ (Mid Night) ಸುಮಾರು 2 ಗಂಟೆಯ(2 Am) ಸಮಯ (Time).. ನೀವು ಗಾಢವಾಗಿ ಮಲಗಿ ನಿದ್ರಿಸುತ್ತಿದ್ದೀರಾ (Deep Sleep) .. ಸುಂದರ ಸ್ವಪ್ನಗಳು (Dreams) ನಿಮ್ಮನ್ನು ಕಾಡುತ್ತಿರುತ್ತವೆ.. ಇದ್ದಕ್ಕಿದ್ದಂತೆ ನಿಮ್ಮ ಮನೆಯ ನಾಯಿ (Dog), ಅಥವಾ ಬೀದಿನಾಯಿಗಳು (Street Dog) ಜೋರಾಗಿ ಬೊಗಳಲು (Barking) ಶುರು ಮಾಡುತ್ತವೆ.. ಒಮ್ಮೆಲೇ ನೀವು ನಿದ್ರೆಯಿಂದ ಥಟ್ಟನೆ ಎದ್ದು ಕುಳಿತುಕೊಂಡರೆ ನಿಮಗೆ ನಾಯಿಗಳ ಮೇಲೆ ಅದೆಷ್ಟು ಸಿಟ್ಟು ಬರಬಹುದು ಹೇಳಿ.. ಮಟಮಟ ಮಧ್ಯಾಹ್ನದಲ್ಲೂ ಇಳಿ ಸಂಜೆಯಲ್ಲಿ ನಿಮ್ಮ ರಾತ್ರಿಯ ಗಾಢನಿದ್ರೆ ವೇಳೆ ನಾಯಿ ಬೊಗಳಿ ನಿಮ್ಮನ್ನ ನಿದ್ರೆಯಿಂದ ಎಬ್ಬಿಸುವುದು ನೆನೆಸಿಕೊಂಡರೆ ನಿಮಗೆ ಸಿಟ್ಟು ಬರುತ್ತದೆ. ಆದರೆ ಹೀಗೆ ನಾಯಿಗಳು ರಾತ್ರಿ ವೇಳೆ ಅಷ್ಟೊಂದು ಊಳಿಡುವುದು ಯಾಕೆ..? ಹೀಗೆ ಸುಮ್ಮನೆ ಸುಮ್ಮನೆ ಬೊಗಳುವುದು ಯಾಕೆ ಅನ್ನೋದು ನಿಮಗೆ ಗೊತ್ತಾದರೆ ಖಂಡಿತ ನೀವು ಆಶ್ಚರ್ಯ ಪಡುತ್ತೀರಾ..

  ರಾತ್ರಿ ವೇಳೆ ನಾಯಿಗಳು ಊಳಿಡುವುದು ಯಾಕೆ..?

  ನಾರಾಯಣ ದೇವನ ವಾಹನ ಎಂದು ಪರಿಗಣಿಸಲಾಗುವ ಶ್ವಾನಗಳಲ್ಲಿ ದೈವ ಶಕ್ತಿಯು ಇರುತ್ತದೆ ಎನ್ನಲಾಗುವುದು. ವಾತಾವರಣದಲ್ಲಿ ಮನುಷ್ಯ ಗ್ರಹಿಸಲು ಸಾಧ್ಯವಾಗದಂತಹ ಸಂಗತಿಯನ್ನು ನಾಯಿ ಪರಿಶೀಲಿಸುತ್ತದೆ. ಅದು ಸಕಾರಾತ್ಮಕ ಶಕ್ತಿಗಳು ಹಾಗೂ ಋಣಾತ್ಮಕ ಶಕ್ತಿಗಳನ್ನು ಸಹ ಕಂಡು ಹಿಡಿಯುತ್ತದೆ.

  ನಾಯಿಯ ಓಡಾಟ, ಕೂಗು ಹಾಗೂ ಕೆಲವು ವರ್ತನೆಗಳನ್ನು ಆಧರಿಸಿ ಮನುಷ್ಯ ತನ್ನ ಜೀವನದಲ್ಲಿ ನಡೆಯುವ ಸಂಗತಿಗಳನ್ನು ಅರಿತುಕೊಳ್ಳುತ್ತಾನೆ.

  ಇದನ್ನೂ ಓದಿ: ಮಣ್ಣಿನಲ್ಲಿ ಮಕ್ಕಳನ್ನು ಆಡಲು ಬಿಟ್ಟು ನೋಡಿ, ಧೂಳೆಂದು ದೂರ ಸರಿಯಬೇಡಿ ಸಂಶೋಧನೆಯೇ ಹೇಳಿದೆ ಇದರ ಮಹತ್ವ

  ಮೂಢ ನಂಬಿಕೆಗಳ ಪ್ರಕಾರ ನಾಯಿ ಊಳಿಟ್ಟರೆ ಈ ಅರ್ಥ

  ಮಧ್ಯರಾತ್ರಿಯ ಸಮಯದಲ್ಲಿ ನಾಯಿಗಳು ಉಳಿಡುವುದಕ್ಕೆ ನಾನಾ ಅರ್ಥಗಳನ್ನು ಕಲ್ಪನೆ ಮಾಡಲಾಗುತ್ತದೆ.. ಕೆಲವರ ನಂಬಿಕೆ ಪ್ರಕಾರ ನಾಯಿಗಳ ಕಣ್ಣಿಗೆ ನಕರಾತ್ಮಕ ಶಕ್ತಿಗಳು ಕಾಣಿಸಿಕೊಳ್ಳುತ್ತವಂತೆ.. ನಕಾರಾತ್ಮಕ ಶಕ್ತಿ ಗಳನ್ನು ನೋಡಿದಾಗ ನಾಯಿಗಳು ಊಳಿಡಲು ಪ್ರಾರಂಭ ಮಾಡುತ್ತವಂತೆ.

  ದೆವ್ವ-ಭೂತದ ಸಂಚಾರದ ಅನುಭವ ನಾಯಿಗಳಿಗೆ ಆಗುತ್ತದೆಯಂತೆ.. ಹೀಗಾಗಿ ನಾಯಿಗಳು ಈ ರೀತಿ ಬೊಗಳಿ ಎಚ್ಚರಿಸುವ ಕೆಲಸ ಮಾಡುತ್ತವಂತೆ..

  ಇನ್ನು ಮತ್ತೆ ಕೆಲವರ ಪ್ರಕಾರ ನಾಯಿಗಳು ಊಳಿಟ್ಟರೆ ಏನೋ ಅನಾಹುತ ಸಂಭವಿಸುತ್ತದೆ ಎಂಬ ಮೂಢನಂಬಿಕೆಯಿದೆ. ನಾಯಿಗಳು ಊಳಿಟ್ಟರೆ ಯಾವುದೋ ಕೆಟ್ಟ ಸುದ್ದಿ ಕೇಳಿ ಬರುತ್ತದೆ, ಮನೆಯಲ್ಲಿ ಯಾರಿಗಾದರೂ ಹುಷಾರು ಇಲ್ಲದಿದ್ದರೆ ನಾಯಿ ಈ ರೀತಿ ಊಳಿಟ್ಟರೆ ಅಶುಭ ಘಟನೆ ನಡೆಯುವುದು ಎಂದು ಹೇಳಲಾಗುವುದು.. ಅಲ್ಲದೆ ಗುಂಪುಗುಂಪಾಗಿ ನಾಯಿಗಳು ಸೇರಿಕೊಂಡು ಊಳಿಟ್ಟರೆ ಯಾರದೋ ಸಾವು ಸಂಭವಿಸಲಿದೆ ಎಂದು ಕೆಲವರು ಹೇಳುತ್ತಾರೆ.

  ವೈಜ್ಞಾನಿಕವಾಗಿ ನಾಯಿ ಊಳಿಟ್ಟರೆ ಏನು ಅರ್ಥ

  ಇನ್ನು ಮನುಷ್ಯರಿಗೆ ವಯಸ್ಸಾಗುತ್ತಿದ್ದಂತೆ ಮರೆವು, ಮತ್ತಿತರ ಆರೋಗ್ಯ ಸಮಸ್ಯೆ ಹೇಗೆ ಕಾಡುತ್ತದೆಯೋ ಅದೇ ರೀತಿ ಪ್ರಾಣಿಗಳಿಗೂ ಉಂಟಾಗುವುದು. ಸಾಮಾನ್ಯವಾಗಿ ನಾಯಿಗಳಿಗೆ ನೆನಪಿನ ಶಕ್ತಿ ತುಂಬಾ ಇರುತ್ತದೆ. ಚಿಕ್ಕ ಮರಿ ಆಗಿದ್ದಾಗ ಅದರ ಜತೆ ಆಡುತ್ತಿದ್ದು, ನಂತರ ಅದು ಬೆಳೆಯುತ್ತಿದ್ದಾಗ ವಿದ್ಯಾಭ್ಯಾಸ, ಉದ್ಯೋಗ ಅಂತ ಮನೆ ಸದಸ್ಯರು ಒಂದಿಷ್ಟು ವರ್ಷಗಳು ಮನೆಯಿಂದ ದೂರವಿದ್ದು ನಂತರ ಮರಳಿ ಬಂದಾಗ ಅವರನ್ನು ಗುರಿತು ಹಿಡಿಯುತ್ತದೆ.

  ಆದರೆ ಕೆಲವೊಂದು ನಾಯಿಗಳಿಗೆ ವಯಸ್ಸಾಗುತ್ತಾ ಬರುತ್ತಿದ್ದಂತೆ ಆರೋಗ್ಯ ಸಮಸ್ಯೆ ಕಾಡುವುದು. ಮರೆವಿನ ಸಮಸ್ಯೆ ಕೂಡ ಉಂಟಾಗುವುದು, ತಾನು ಏನು ಮಾಡಬೇಕು ಎಂದು ತಿಳಿಯದೆ ಗೊಂದಲಕ್ಕೆ ಬಿದ್ದು, ಅದನ್ನು ಊಳಿಡುವ ಮೂಲಕ ತನ್ನ ಭಾವನೆಗಳನ್ನು ವ್ಯಕ್ತ ಪಡಿಸುತ್ತದೆ. ಈ ರೀತಿ ಊಳಿಡುತ್ತಿದ್ದರೆ ಏನು ಮಾಡಬೇಕು ಎಂದು ಪ್ರಾಣಿ ತಜ್ಞರ ಸಲಹೆ ಪಡೆದುಕೊಳ್ಳಿ.

  ಇದನ್ನೂ ಓದಿ: ಹಸಿರು ತರಕಾರಿಗಳನ್ನು ತಿನ್ನುವ ಮುನ್ನ ಈ ವಿಚಾರಗಳನ್ನು ತಿಳಿದುಕೊಳ್ಳಿ

  ಇನ್ನು ಒಂದು ನಾಯಿಗೆ ನಾನು ಏಕಾಂಗಿಯಾಗಿ ಇದ್ದೇನೆ ಎಂದಾಗ ಅದು ಅಳುವುದಕ್ಕೆ ಪ್ರಾರಂಭಿಸುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ ಕೂಡ ಹೌದು. ಇದನ್ನು ಕೇಳಿದ ಇತರೆ ನಾಯಿಗಳು ಸಹ ಕೂಗುವುದಕ್ಕೆ ಪ್ರಾರಂಭಿಸುತ್ತವೆ . ಹೀಗಾಗಿ ಇನ್ನು ಮುಂದೆ ನಾಯಿಗಳು ಕೂಗುತ್ತಿದ್ದರೆ ಎಂದು ಓಡಿಸುವುದಕ್ಕೆ ಹೋಗಬೇಡಿ.

  ನಾಯಿಗಳು ತಮ್ಮ ಒಂಟಿತನವನ್ನು ಮತ್ತು  ಒಂಟಿತನದ ನೋವನ್ನು ಈ ರೀತಿ  ಕೂಗುವುದರ ಮೂಲಕ ವ್ಯಕ್ತಪಡಿಸುತ್ತವೆ.
  Published by:ranjumbkgowda1 ranjumbkgowda1
  First published: