Heart Attack: ಆರೋಗ್ಯವಂತರಾಗಿ ಕಾಣುವ ಜನರಲ್ಲಿ ಹೃದಯಾಘಾತ ಏಕೆ ಸಾಮಾನ್ಯವಾಗುತ್ತಿದೆ? ಇಲ್ಲಿದೆ ವಿವರ

Sudden Heart Attack: ಸಾಮಾನ್ಯ ವ್ಯಕ್ತಿಯಲ್ಲಿ ಕೆಲವು ವ್ಯಾಯಾಮಗಳು ಕೆಲವು ಅಸಹಜತೆಗಳ ಅಪಾಯವನ್ನು ಹೆಚ್ಚಿಸಬಹುದು. ಇದು ಕೆಲವೊಮ್ಮೆ ಮಾರಕ ಎಂದು ಸಾಬೀತುಪಡಿಸಬಹುದು. ನೀವು ಹೆಚ್ಚು ಪ್ರಮಾಣದಲ್ಲಿ ವ್ಯಾಯಾಮ ಮಾಡುತ್ತಿದ್ದೀರಿ ಎಂದಾದಲ್ಲಿ ಪರೀಕ್ಷಿಸಿಕೊಳ್ಳುವುದು ಉತ್ತಮವಾಗಿದೆ.

ಸಿದ್ಧಾರ್ಥ್ ಶುಕ್ಲಾ -ಪುನೀತ್ ರಾಜ್‌ಕುಮಾರ್

ಸಿದ್ಧಾರ್ಥ್ ಶುಕ್ಲಾ -ಪುನೀತ್ ರಾಜ್‌ಕುಮಾರ್

 • Share this:
  ಫಿಟ್‌ನೆಸ್ (Fitness) ವಿಷಯದಲ್ಲಿ ತುಂಬಾ ನಿಷ್ಟಾವಂತರಾಗಿದ್ದ ಹಾಗೂ ಕಟ್ಟುನಿಟ್ಟಿನ ಜೀವನ ಶೈಲಿಯನ್ನು ಅನುಸರಿಸಿದ್ದ ಇಬ್ಬರು ಪ್ರತಿಭಾವಂತ ನಟರಾದ (sidharth shukla) ಸಿದ್ಧಾರ್ಥ್ ಶುಕ್ಲಾ  (40 ವರ್ಷ) ಮತ್ತು (Power Star Puneeth Rajkumar) ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ (46 ವರ್ಷ) ಹಠಾತ್ ಮರಣವು ಪ್ರತಿಯೊಬ್ಬರನ್ನೂ ದಂಗುಬಡಿಸಿದೆ. ವ್ಯಾಯಾಮದಿಂದ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯವನ್ನು ಪಡೆಯಬಹುದೆಂಬ ಅಂಶ ಸುಳ್ಳೇ ಎಂಬ ವಿಷಯ ನಮ್ಮನ್ನು ಚಿಂತೆಗೀಡು ಮಾಡುತ್ತದೆ.

  ನಮ್ಮ ದೇಹದ ಆಧಾರ್ ಸ್ತಂಭವಾಗಿರುವ ಹೃದಯದ ಕಾಳಜಿಯನ್ನು ನಾವು ಅತ್ಯುತ್ತಮವಾಗಿ ನಿರ್ವಹಿಸಬೇಕು. ವ್ಯಾಯಾಮ ಮಾಡುವ ಮುನ್ನ ಹೃದಯದ ಸ್ಥಿತಿಯನ್ನು ತಿಳಿದುಕೊಂಡಿರಬೇಕು ಹಾಗೂ ಮಧ್ಯಮದಿಂದ ತೀವ್ರ ತೆರನಾದ ವ್ಯಾಯಾಮವನ್ನು ಮಾಡುವ ಮೊದಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಹಾಗೂ ಆದಷ್ಟು ಈ ಪ್ರಕಾರದ ವ್ಯಾಯಾಮಗಳನ್ನು ಮಾಡಬಾರದು ಎಂದು ವೈದ್ಯರು ಎಚ್ಚರಿಸುತ್ತಾರೆ. ಹಾರ್ಟ್ ಇನ್‌ಸ್ಟಿಟ್ಯೂಟ್‌ನ ಕ್ಲಿನಿಕಲ್ ಮತ್ತು ಪ್ರಿವೆಂಟಿವ್ ಕಾರ್ಡಿಯಾಲಜಿ ನಿರ್ದೇಶಕರಾದ ಸಂಜಯ್ ಮಿತ್ತಲ್ ಹೇಳುವಂತೆ, ತಪ್ಪಾದ ಸಮಯ ಹಾಗೂ ತಪ್ಪಾದ ಪ್ರಮಾಣದಲ್ಲಿ ತೆಗೆದುಕೊಂಡರೆ ಪ್ರತಿಯೊಂದು ಔಷಧವೂ ವಿಷವಾಗುತ್ತದೆ ಅದೇ ರೀತಿ ವ್ಯಾಯಾಮದ ವಿಷಯದಲ್ಲೂ ಎಂದು ಹೇಳುತ್ತಾರೆ. ಸಾಮಾನ್ಯ ವ್ಯಕ್ತಿಯಲ್ಲಿ ಕೆಲವು ವ್ಯಾಯಾಮಗಳು ಕೆಲವು ಅಸಹಜತೆಗಳ ಅಪಾಯವನ್ನು ಹೆಚ್ಚಿಸಬಹುದು. ಇದು ಕೆಲವೊಮ್ಮೆ ಮಾರಕ ಎಂದು ಸಾಬೀತುಪಡಿಸಬಹುದು. ನೀವು ಹೆಚ್ಚು ಪ್ರಮಾಣದಲ್ಲಿ ವ್ಯಾಯಾಮ ಮಾಡುತ್ತಿದ್ದೀರಿ ಎಂದಾದಲ್ಲಿ ಪರೀಕ್ಷಿಸಿಕೊಳ್ಳುವುದು ಉತ್ತಮವಾಗಿದೆ.

  ಹೆಚ್ಚಿನ ವ್ಯಾಯಾಮ ಹಾಗೂ ಹೃದಯದ ಆರೋಗ್ಯ: ಗಮನಿಸಬೇಕಾದ ಅಂಶಗಳು

  ಮಿತ್ತಲ್ ಕೆಲವೊಂದು ಅಂಶಗಳನ್ನು ಹಂಚಿಕೊಂಡಿದ್ದು ಪ್ರತಿಯೊಬ್ಬರೂ ಈ ಅಂಶಗಳನ್ನು ಕಡೆಗಣಿಸದೇ ಪಾಲಿಸಬೇಕಾಗಿದೆ.

  -ವ್ಯಾಯಾಮ ಮಾಡುವಾಗ ವ್ಯಕ್ತಿಗೆ ತಲೆತಿರುಗುತ್ತಿದ್ದರೆ ಅಥವಾ ತಲೆ ಭಾರವಾಗುತ್ತಿದ್ದರೆ ನೀವು ಮೊದಲು ನಿಮ್ಮನ್ನು ಮೌಲ್ಯಮಾಪನ ಮಾಡಿಕೊಳ್ಳಬೇಕು.

  -ನೀವು ಅಧಿಕ ರಕ್ತದೊತ್ತಡ ಹೊಂದಿದ್ದರೆ (ಅತಿ ಅಧಿಕ ರಕ್ತದೊತ್ತಡ), ನಿಮ್ಮ ಬಿಪಿಯನ್ನು ನಿಯಂತ್ರಿಸುವುದು ಮತ್ತು ನಂತರ ವ್ಯಾಯಾಮ ಮಾಡುವುದು ಮುಖ್ಯ

  -ಯಾವುದೇ ಮುನ್ನಚ್ಚರಿಕೆ ಇಲ್ಲದೆಯೇ ಕುಸಿದುಬಿದ್ದು ಮರಣ ಹೊಂದಿದ ವ್ಯಕ್ತಿಯ ಸಂಬಂಧಿಕರು ಹಾಗೂ ವಂಶಸ್ಥರು ನೀವಾಗಿದ್ದರೆ ಆ ಜೀನ್ ಅನ್ನು ನೀವೂ ಹೊಂದಿರುವ ಸಾಧ್ಯತೆ ಇರುತ್ತದೆ ಹಾಗಾಗಿ ಇಸಿಜಿ ಮಾಡಿಸಿಕೊಳ್ಳುವುದು ಉತ್ತಮ

  -ನಿಮಗೆ ಎದೆಯ ಅಸ್ವಸ್ಥತೆ, ಅನಗತ್ಯ ಉಸಿರಾಟದ ತೊಂದರೆ ಇದ್ದರೆ, ನಿಮ್ಮನ್ನು ಮೌಲ್ಯಮಾಪನ ಮಾಡಿಕೊಳ್ಳಿ
  ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಔಷಧಿಗಳು ಹೃದಯದ ಕ್ರಮವಿಲ್ಲದಿರುವಿಕೆ ಮತ್ತು ಕುಸಿತಕ್ಕೆ ಮತ್ತು ಹೃದಯಾಘಾತಕ್ಕೆ ಕಾರಣವಾಗಬಹುದು

  ಹೃದಯದ ಕಾಯಿಲೆ ಎಂಬುದು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಯಲ್ಲ

  ಕೊಚ್ಚಿಯ ಅಮೃತಾ ಹಾಸ್ಪಿಟಲ್ಸ್‌ನ ವಯಸ್ಕರ ಹೃದ್ರೋಗ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ರಾಜೇಶ್ ತಚಥೋಡಿಲ್ ಹೇಳುವಂತೆ, ಮೊದಲು ಹೃದಯಾಘಾತವನ್ನು ವಯಸ್ಸಾದ ಕಾಯಿಲೆ ಎಂದು ಪರಿಗಣಿಸಲಾಗುತ್ತಿತ್ತು ಹಾಗೂ ಸಾಮಾನ್ಯವಾಗಿ 60 ವರ್ಷ ಮೇಲ್ಪಟ್ಟವರು ಈ ಕಾಯಿಲೆಗೆ ಗುರಿಯಾಗುತ್ತಿದ್ದರು. ಆದರೆ ಇತ್ತೀಚೆಗೆ ಈ ಸನ್ನಿವೇಶ ಬದಲಾಗುತ್ತಿದೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಈ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ನೀವು ಹೊರಗಿನಿಂದ ಫಿಟ್ ಹಾಗೂ ಆರೋಗ್ಯವಂತರಾಗಿ ಕಂಡರೂ ನಿಮ್ಮ ದೇಹದೊಳಗೆ ನಿಮಗೆ ತಿಳಿಯದೇ ಕಾಯಿಲೆಗಳು ಉದ್ಭವವಾಗಿರುತ್ತವೆ ಎಂದಾಗಿದೆ.

  What is the difference between a heart attack, cardiac arrest and or heart failure?


  ಇದನ್ನು ಓದಿ: Stroke: ಇದೇ ಕಾರಣಕ್ಕೆ ನೀವು ಪಾರ್ಶ್ವವಾಯುವಿಗೆ ತುತ್ತಾಗೋದಂತೆ.. ಸುಮ್ಮನೆ ನಿರ್ಲಕ್ಷ ಮಾಡಬೇಡಿ!

  OPD ಯಲ್ಲಿಯೂ ಸಹ ನಾವು ಒಂದು ತಿಂಗಳಲ್ಲಿ ಸುಮಾರು 200 ಯುವ ರೋಗಿಗಳನ್ನು ಹೃದಯ ಸಮಸ್ಯೆಗಳೊಂದಿಗೆ ನೋಡುತ್ತೇವೆ. ಯುವ ಜನಸಂಖ್ಯೆಯಲ್ಲಿ ಹೃದಯ ಸ್ತಂಭನ ಅಥವಾ ಹೃದಯಾಘಾತಕ್ಕೆ ಕಾರಣವಾಗುವ ಹಲವಾರು ಅಂಶಗಳಿವೆ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್, ನಿದ್ರಾಹೀನತೆ, ಕಳಪೆ ಆಹಾರ ಪದ್ಧತಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸದಿರುವುದು. ಮನೆಯಿಂದ ಕೆಲಸ ಮಾಡುವ ಸಂದರ್ಭಗಳಿಗೆ ಮುನ್ನ, ಹೆಚ್ಚಿನ ಜನರು ತಮ್ಮ ಕಚೇರಿಗಳಿಗೆ ಪ್ರಯಾಣಿಸುತ್ತಿದ್ದರು ಮತ್ತು ಬಹಳಷ್ಟು ಸ್ಥಳಗಳಿಗೆ ಭೇಟಿ ನೀಡುತ್ತಿದ್ದರು ಹೀಗಾಗಿ ದೇಹದ ಚಲನೆಯು ಸಕ್ರಿಯವಾಗಿತ್ತು.

  ಸಾಂಕ್ರಾಮಿಕ ರೋಗದ ನಂತರ, ಪ್ರತಿಯೊಬ್ಬರ ಸಕ್ರಿಯ ದಿನಚರಿ ನಿಂತುಹೋಯಿತು ಜಡ ಜೀವನಶೈಲಿಯಿಂದ ಯುವಕರು ಇಡೀ ದಿನ ಕಂಪ್ಯೂಟರ್ ಮತ್ತು ನಂತರ ಟಿವಿಗಳ ಮುಂದೆ ಕುಳಿತುಕೊಳ್ಳುವ ಕಳೆಯುತ್ತಿದ್ದಾರೆ ಹೀಗಾಗಿ ಚಟುವಟಿಕೆ ಸಂಪೂರ್ಣ ನಿಂತುಹೋಗಿದೆ ಎಂದು ತಿಳಿಸುತ್ತಾರೆ.

  ನಿಯಮಿತ ಸ್ಕ್ರೀನಿಂಗ್ (ಪರಿಶೀಲನೆ) ಮುಖ್ಯವಾಗಿದೆ:

  ಪ್ರಾಸಂಗಿಕವಾಗಿ, ಹೃದಯದ ಸಮಸ್ಯೆಗಳ ಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುವ ಹೊತ್ತಿಗೆ, ರೋಗವು ಕೆಲವೊಮ್ಮೆ ಮುಂದುವರಿದ ಹಂತದಲ್ಲಿರುತ್ತದೆ. ಮುಂಬೈನ ಏಷ್ಯನ್ ಹಾರ್ಟ್ ಇನ್‌ಸ್ಟಿಟ್ಯೂಟ್‌ನ ಹಿರಿಯ ಹೃದ್ರೋಗ ತಜ್ಞ ಡಾ ಸಂತೋಷ್ ಕುಮಾರ್ ಡೋರಾ ಹೇಳುವಂತೆ, “ಪ್ರಯಾಸಕರ ಎದೆಯ ಅಸ್ವಸ್ಥತೆ ಅಥವಾ ಉಸಿರಾಟದ ತೊಂದರೆಯು ಹೃದಯ ಸಮಸ್ಯೆಯ ಸಾಧ್ಯತೆಯನ್ನು ಸೂಚಿಸುತ್ತದೆ ಮತ್ತು ನಂತರ ಕಾರಣವನ್ನು ಸ್ಥಾಪಿಸಲು ಹೆಚ್ಚಿನ ಪರೀಕ್ಷೆಗಳ ಅಗತ್ಯವಿದೆ. ಆರಂಭಿಕ ಹಂತದಲ್ಲಿ ಸಮಸ್ಯೆಗಳನ್ನು ಕಂಡುಹಿಡಿಯಲು ಆಗಾಗ್ಗೆ ಸ್ಕ್ರೀನಿಂಗ್ ಪರೀಕ್ಷೆಗಳನ್ನು ನಡೆಸುವ ಅಗತ್ಯವಿದೆ, ಹೀಗಾಗಿ ಹೃದಯಕ್ಕೆ ಗಮನಾರ್ಹ ಹಾನಿಯಾಗುವ ಮೊದಲು ಸರಿಯಾದ ಚಿಕಿತ್ಸೆಯನ್ನು ನೀಡಬಹುದು.

  ಇದನ್ನು ಓದಿ: Face Pack: ಪಳ ಪಳ ಹೊಳೆಯುವ ಚರ್ಮಕ್ಕಾಗಿ ಇಲ್ಲಿವೆ 9 ಸರಳ ಫೇಸ್‍ಪ್ಯಾಕ್‍ಗಳು

  ಸಾಮಾನ್ಯ ಸ್ಕ್ರೀನಿಂಗ್ ಪರೀಕ್ಷೆಗಳೆಂದರೆ ECG, 2D ಎಕೋಕಾರ್ಡಿಯೋಗ್ರಾಮ್, ಒತ್ತಡ ಪರೀಕ್ಷೆ, ಪರಿಧಮನಿಯ ಕ್ಯಾಲ್ಸಿಯಂಗಾಗಿ CT ಸ್ಕ್ಯಾನ್ ಮೊದಲಾದವು. 40 ವರ್ಷ ವಯಸ್ಸಿನ ನಂತರ ಅಥವಾ 30 ವರ್ಷ ವಯಸ್ಸಿನ ನಂತರ ವರ್ಷಕ್ಕೊಮ್ಮೆ ಅಥವಾ 2 ವರ್ಷಗಳಿಗೊಮ್ಮೆ ಹೃದಯ ತಪಾಸಣೆ ಪರೀಕ್ಷೆಗಳನ್ನು ಸೂಚಿಸಲಾಗುತ್ತದೆ.
  First published: