Thinking: ಯೋಚ್ನೆ ಮಾಡಿ ಮಾಡಿನೇ ಸುಸ್ತಾಗ್ತಿದೆಯಾ? ಇದರಿಂದ ಚೇತರಿಸಿಕೊಳ್ಳುವುದು ಹೇಗೆ?

ನೀವು ಅತಿಯಾಗಿ ಆಲೋಚಿಸಿದಾಗ ನಿಮ್ಮ ಮೆದುಳಿನ ಒಂದು ಭಾಗದಲ್ಲಿ ನಂಜಿನ ಕಸ ಸಂಗ್ರಹಗೊಳ್ಳುತ್ತದೆ. ಇದರಿಂದ ನಿಮಗೆ ದಣಿವುಂಟಾಗುತ್ತದೆ ಹೀಗಾದಾಗ ನೀವು ಅತಿಯಾಗಿ ಯೋಚಿಸುವುದನ್ನು ನಿಲ್ಲಿಸುತ್ತೀರಿ. ಈ ಪ್ರಕ್ರಿಯೆಯನ್ನು ಮೆದುಳಿನ ಸ್ವಯಂ-ರಕ್ಷಣಾ ಕಾರ್ಯವಿಧಾನವೆಂದು ಕರೆದಿರುವ ತಜ್ಞರು, ಖಿನ್ನತೆ ಅಥವಾ ಕ್ಯಾನ್ಸರ್‌ನಂತಹ ಆರೋಗ್ಯ ಪರಿಸ್ಥಿತಿಗಳಿಂದ ಚೇತರಿಸಿಕೊಳ್ಳುವಲ್ಲಿ ಮೆದುಳಿನ ಪ್ರತಿಕ್ರಿಯೆಯನ್ನು ಊಹಿಸಲು ಇದು ಉತ್ತರವೇ ಎಂಬುದನ್ನು ಪ್ರಯತ್ನಿಸುತ್ತಿದ್ದಾರೆ. ಈ ಕುರಿತು ಇನ್ನಷ್ಟು ಅಂಶಗಳನ್ನು ಅರಿತುಕೊಳ್ಳೋಣ...

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನೀವು ಅತಿಯಾಗಿ ಆಲೋಚಿಸಿದಾಗ ನಿಮ್ಮ ಮೆದುಳಿನ ಒಂದು ಭಾಗದಲ್ಲಿ ನಂಜಿನ ಕಸ ಸಂಗ್ರಹಗೊಳ್ಳುತ್ತದೆ. ಇದರಿಂದ ನಿಮಗೆ ದಣಿವುಂಟಾಗುತ್ತದೆ ಹೀಗಾದಾಗ ನೀವು ಅತಿಯಾಗಿ ಯೋಚಿಸುವುದನ್ನು ನಿಲ್ಲಿಸುತ್ತೀರಿ. ಈ ಪ್ರಕ್ರಿಯೆಯನ್ನು ಮೆದುಳಿನ (Brain) ಸ್ವಯಂ-ರಕ್ಷಣಾ ಕಾರ್ಯವಿಧಾನವೆಂದು ಕರೆದಿರುವ ತಜ್ಞರು ಖಿನ್ನತೆ ಅಥವಾ ಕ್ಯಾನ್ಸರ್‌ನಂತಹ (Cancer) ಆರೋಗ್ಯ  ಪರಿಸ್ಥಿತಿಗಳಿಂದ (Health Condition) ಚೇತರಿಸಿಕೊಳ್ಳುವಲ್ಲಿ ಮೆದುಳಿನ ಪ್ರತಿಕ್ರಿಯೆಯನ್ನು ಊಹಿಸಲು ಇದು ಉತ್ತರವೇ ಎಂಬುದನ್ನು ಪ್ರಯತ್ನಿಸುತ್ತಿದ್ದಾರೆ? ಈ ಕುರಿತು ಇನ್ನಷ್ಟು ಅಂಶಗಳನ್ನು ಅರಿತುಕೊಳ್ಳೋಣ. ದೈಹಿಕ ಪರಿಶ್ರಮ ಇಲ್ಲದೇ ಇದ್ದರೂ ನಿದ್ರಿಸದೇ ಇರುವಂತಹ ಮಾನಸಿಕ ಆಯಾಸವನ್ನು (Mental fatigue) ನಿಮ್ಮ ಯೋಚನೆ ಉಂಟುಮಾಡುತ್ತಿದ್ದಲ್ಲಿ ಇದಕ್ಕೆ ಕಾರಣಗಳಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಸಂಶೋಧಕರು ಮಾನಸಿಕ ಬಳಲಿಕೆಯನ್ನು ವಿವರಿಸುವ ಹೊಸ ಪುರಾವೆಗಳ ಆವಿಷ್ಕಾರವನ್ನು ಹಂಚಿಕೊಂಡಿದ್ದಾರೆ.

ತೀವ್ರವಾಗಿ ಯೋಚನೆ ಮಾಡ್ತಾ ಇದ್ರೆ ಏನಾಗುತ್ತದೆ ಗೊತ್ತಾ? 
ನೀವು ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕೆಲಸ ಮಾಡಿದ ನಂತರ ವಿಶ್ರಾಂತಿ ಬೇಕೆಂದು ಅನಿಸಿದರೆ ಇದಕ್ಕೆ ಕಾರಣ ಮಾನಸಿಕ ವಿಶ್ರಾಂತಿಗೆ ಶಾರೀರಿಕವಾಗಿ ಪ್ರತಿಕ್ರಿಯಿಸುವುದಾಗಿದೆ. ಮನಸ್ಸಿಗೆ ಆಯಾಸವಾದಲ್ಲಿ ಅದನ್ನು ಶರೀರ ವಿಶ್ರಾಂತಿಯ ಮೂಲಕ ಪರಿಹರಿಸುತ್ತದೆ. ಇದು ಮೆದುಳು ತನ್ನನ್ನು ತಾನೇ ಸಂರಕ್ಷಿಸಿಕೊಳ್ಳುವ ವಿಧಾನವಾಗಿದೆ ಎಂಬುದಾಗಿ ತಜ್ಞರು ಹೇಳಿದ್ದಾರೆ. ತೀವ್ರವಾಗಿ ಯೋಚಿಸಿದಾಗ ಮೆದುಳಿನ ಒಂದು ಭಾಗದಲ್ಲಿ ಫ್ರಂಟಲ್ ಕಾರ್ಟೆಕ್ಸ್‌ನಲ್ಲಿ ಗ್ಲುಟಮೇಟ್ ಎಂಬ ಉಪ-ಉತ್ಪನ್ನಗಳು ನಿರ್ಮಾಣವಾಗುತ್ತವೆ ಈ ಗ್ಲುಟಮೇಟ್‌ಗಳು ವಿಷಕಾರಿಯಾಗಿರಬಹುದು ಎಂಬುದಾಗಿ ಅಧ್ಯಯನಗಳು ತಿಳಿಸಿವೆ.

ವ್ಯಕ್ತಿಗೆ ಆಯಾಸ ಆಗುವುದೇಕೆ?
ಆಯಾಸ ಎಂಬುದು ಒಂದು ರೀತಿಯ ಭ್ರಮೆಯಾಗಿದ್ದು ಮೆದುಳು ಸ್ವತಃ ಇದನ್ನು ಉತ್ಪಾದಿಸಿ ನಾವು ಮಾಡುತ್ತಿರುವ ಕೆಲಸವನ್ನು ನಿಲ್ಲಿಸಿ ನಮ್ಮನ್ನು ಸಂತೋಷದಾಯಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ನಾವು ಮಾಡುತ್ತಿರುವ ಕೆಲಸವನ್ನು ನಿಲ್ಲಿಸುವ ಸಂಕೇತವನ್ನು ಆಯಾಸವು ನೀಡುತ್ತದೆ. ಮೆದುಳಿನ ಕಾರ್ಯಚಟುವಟಿಕೆಗಳ ಸಮಗ್ರತೆಯನ್ನು ಕಾಪಾಡಲು ಮೆದುಳು ಕಂಡುಕೊಂಡಿರುವ ಸ್ವಯಂ ರಕ್ಷಣಾ ವಿಧಾನವೇ ಆಯಾಸ ಎಂಬುದಾಗಿ ಪಿಟೀ-ಸಾಲ್ಪೆಟ್ರಿಯರ್ ವಿಶ್ವವಿದ್ಯಾಲಯದ ಮಥಿಯಾಸ್ ಪೆಸಿಗ್ಲಿಯೋನ್ ಹೇಳುತ್ತಾರೆ.

ಇದನ್ನೂ ಓದಿ: Mental Strength: ತಜ್ಞರ ಪ್ರಕಾರ ಯಶಸ್ವಿ ವ್ಯಕ್ತಿಯಾಗಲು ಅಗತ್ಯವಿರುವ 5 ಮಾನಸಿಕ ಸಾಮರ್ಥ್ಯಗಳು ಇದೇ ಅಂತೆ!

ತಮ್ಮ ಸಹೋದ್ಯೋಗಿಗಳೊಂದಿಗೆ ಪೆಸಿಗ್ಲಿಯೋನ್ ಈ ಕುರಿತು ಇನ್ನಷ್ಟು ವಿಚಾರಗಳನ್ನು ಅರಿಯಲು ಆರಂಭಿಸಿದರು. ಮಾನವನ ಮೆದುಳು ಯಂತ್ರದಂತೆ ಏಕೆ ಕಾರ್ಯನಿರ್ವಹಿಸುವುದಿಲ್ಲ ಎಂಬುದನ್ನು ಪತ್ತೆಹಚ್ಚುವ ಪ್ರಯತ್ನ ಮಾಡಿದರು. ನರಗಳ ಚಟುವಟಿಕೆಯಿಂದ ಉಂಟಾಗುವ ಸಂಭಾವ್ಯ ವಿಷಕಾರಿ ವಸ್ತುಗಳನ್ನು ಮರುಬಳಕೆ ಮಾಡುವ ಮೆದುಳಿನ ಅವಶ್ಯಕತೆಯೊಂದಿಗೆ ಇದನ್ನು ನಿರ್ವಹಿಸಬೇಕೆಂದು ಸಂಶೋಧಕರು ಸಿದ್ಧಾಂತ ಮಂಡಿಸುತ್ತಾರೆ. ಅದಕ್ಕಾಗಿ ಅವರು ಮಾನವ ಮೆದುಳಿನ ರಸಾಯನಶಾಸ್ತ್ರವನ್ನು ಮೇಲ್ವಿಚಾರಣೆ ಮಾಡಲು ಮ್ಯಾಗ್ನೆಟಿಕ್ ರೆಸೋನೆನ್ಸ್ ಸ್ಪೆಕ್ಟ್ರೋಸ್ಕೋಪಿ (MRS) ಅನ್ನು ಬಳಸಿದ್ದಾರೆ.

ಈ ಅಧ್ಯಯನ ಹೇಗೆ ನಡೆಯಿತು
ಸರಾಸರಿ ಕೆಲಸವನ್ನು ಮಾಡುವ ಎರಡು ಗುಂಪುಗಳ ಜನರನ್ನು ಅಧ್ಯಯನ ನಡೆಸಿದರು. ಒಂದು ಗುಂಪು ತೀವ್ರವಾಗಿ ಯೋಚಿಸುವವರು ಇನ್ನು ಇನ್ನೊಂದು ಗುಂಪು ತುಲನಾತ್ಮಕವಾಗಿ ಸುಲಭವಾದ ಅರಿವಿನ ಕಾರ್ಯಗಳನ್ನು ಹೊಂದಿರುವವರು. ಈ ಎರಡೂ ಗುಂಪುಗಳ ಅಧ್ಯಯನ ನಡೆಸಿದಾಗ ಕಠಿಣ ಕೆಲಸ ಮಾಡುವ ಗುಂಪಿನಲ್ಲಿ ಆಯಾಸದ ಚಿಹ್ನೆಗಳು ಕಂಡುಬಂದಿವೆ. ಈ ಗುಂಪು ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ನ ಸಿನಾಪ್ಸಸ್ನಲ್ಲಿ ಹೆಚ್ಚಿನ ಮಟ್ಟದ ಗ್ಲುಟಮೇಟ್ ಅನ್ನು ಹೊಂದಿದ್ದರು. ಗ್ಲುಟಮೇಟ್ ಶೇಖರಣೆಯು ಪ್ರಿಫ್ರಂಟಲ್ ಕಾರ್ಟೆಕ್ಸ್ ಅನ್ನು ಮತ್ತಷ್ಟು ಕ್ರಿಯಾಶೀಲವಾಗಿಸುತ್ತದೆ ಎಂಬ ಕಲ್ಪನೆಯನ್ನು ಬೆಂಬಲಿಸುತ್ತದೆ ಎಂದು ಲೇಖಕರು ಹೇಳುತ್ತಾರೆ.

ಇದನ್ನೂ ಓದಿ:  Self-Confidence: ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆಯೇ? ಈ ಅಂಶಗಳನ್ನು ಅಳವಡಿಸಿಕೊಂಡರೆ ನಿಮಗಿದೆ ಸಕ್ಸಸ್

ಪ್ರಿಫ್ರಂಟಲ್ ಕಾರ್ಟೆಕ್ಸ್ ವಿಶೇಷವಾಗಿ ಗ್ಲುಟಮೇಟ್ ಶೇಖರಣೆ ಮತ್ತು ಆಯಾಸಕ್ಕೆ ಏಕೆ ಒಳಗಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಲೇಖಕರು ಈಗ ಉದ್ದೇಶವನ್ನು ಹೊಂದಿದ್ದು ಮೆದುಳಿನಲ್ಲಿನ ಈ ಆಯಾಸದ ಚಿಹ್ನೆಗಳು ಖಿನ್ನತೆ ಅಥವಾ ಕ್ಯಾನ್ಸರ್‌ನಂತಹ ಆರೋಗ್ಯ ಪರಿಸ್ಥಿತಿಗಳಿಂದ ಚೇತರಿಸಿಕೊಳ್ಳುವುದನ್ನು ಮುನ್ಸೂಚಿಸಬಹುದೇ ಎಂದು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಯಾವುದೇ ವಿಷಯದ ಬಗ್ಗೆ ನಾವು ಅತಿಯಾಗಿ ಯೋಚಿಸುವ ಮೂಲಕ ನಮಗೆ ನಾವೇ ಸುಸ್ತು ಮಾಡಿಕೊಳುತ್ತೇವೆ ಎಂಬುದು ಇದರಿಂದ ತಿಳಿದುಬರುತ್ತದೆ. ಸಾಧ್ಯವಾದಷ್ಟು ಅನವಶ್ಯಕ ವಸ್ತಿ-ವಿಷಯಗಳ ಬಗ್ಗೆ ವ್ಯರ್ಥ ಆಲೋಚನೆ ಮಾಡುವುದನ್ನು ತಪ್ಪಿಸಿ.
Published by:Ashwini Prabhu
First published: