ಮಳೆಗಾಲದ (Rainy Season) ಈ ಋತುವಿನಲ್ಲಿ ತೇವಾಂಶವು ಕೂದಲಿನ (Hair) ಮೇಲೆ ಸಾಕಷ್ಟು ಕೆಟ್ಟ ಪರಿಣಾಮ (Bad Effects) ಬೀರುತ್ತದೆ. ತೇವಾಂಶದ ಹಿನ್ನೆಲೆ ಕೂದಲು ಸಾಮಾನ್ಯವಾಗಿ ಹೆಚ್ಚಾಗಿ ತೇವವಾಗಿ ಇರುತ್ತದೆ. ಜೊತೆಗೆ ಒಟ್ಟಿಗೆ ಅಂಟಿಕೊಳ್ಳುತ್ತದೆ. ಹೀಗಾಗಿ ಅನೇಕ ಜನರು (People) ಹೆಚ್ಚು ಕೂದಲು ಉದುರುವ ಸಮಸ್ಯೆ (Problem) ಅನುಭವಿಸುತ್ತಾರೆ. ಇಲ್ಲವೇ ಕೂದಲಿಗೆ ಸಂಬಂಧಿಸಿದ ಸಮಸ್ಯೆ ಎದುರಿಸಲು ಕಾರಣವಾಗುತ್ತದೆ. ಋತುಗಳ ಬದಲಾವಣೆ ಸಮಯದಲ್ಲಿ ಕೂದಲಿನ ಬಗ್ಗೆ ಹೆಚ್ಚು ಕಾಳಜಿ ವಹಿಸಲು ತಜ್ಞರು ಸೂಚನೆ ನೀಡಲು ಇದೂ ಕೂಡ ಒಂದು ಕಾರಣವಾಗಿದೆ. ಕೂದಲು ಉದುರುವುದು ಮತ್ತು ಕೂದಲ ತುದಿ ಸೀಳುವುದು ತಡೆಯುವ ಮಾರ್ಗೋಪಾಯಗಳ ಬಗ್ಗೆ ಹೆಚ್ಚಿನ ಜನರು ಅಂತರ್ಜಾಲದಲ್ಲಿ ಸರ್ಚ್ ಮಾಡುತ್ತಾರೆ.
ಅಂತರ್ಜಾಲದಲ್ಲಿ ಸಿಗುವ ವಿಡಿಯೋ ಹಾಗೂ ಅಲ್ಲಿ ಹೇಳಲಾದ ವಿಧಾನಗಳನ್ನು ಅಳವಡಿಸಿಕೊಳ್ತಾರೆ. ಆದರೆ ಮೊದಲು ನೀವು ನಿಮ್ಮ ಕೂದಲು ಉದುರುವಿಕೆಗೆ ಕಾರಣ ಏನು ಎಂದು ತಿಳಿಯಿರಿ. ಕೂದಲು ಉದುರುವಿಕೆಗೆ ಕಾರಣ ತಿಳಿದರೆ ಮಾತ್ರ ಚಿಕಿತ್ಸೆ ನೀಡಲು ಸಾಧ್ಯ. ಅದು ಪರಿಣಾಮಕಾರಿಯೂ ಆಗಿರುತ್ತದೆ. ಕಾರಣ ತಿಳಿಯದಿದ್ದರೆ ಕೂದಲು ಏಕೆ ಉದುರುತ್ತಿದೆ ಎಂಬುದು ಗೊತ್ತಾಗುವುದಿಲ್ಲ.
ಕೆಲವರಿಗೆ ಯಾವಾಗಲೂ ಕೂದಲು ಉದುರುತ್ತದೆ. ಆದರೆ ಕೆಲವರಿಗೆ ನಿರ್ದಿಷ್ಟ ಋತುಮಾನದಲ್ಲಿ ಕೂದಲು ಉದುರುತ್ತದೆ. ಆದರೆ ವರ್ಷದ ಯಾವ ಋತುವಿನಲ್ಲಿ ಹೆಚ್ಚು ಕೂದಲು ಉದುರುತ್ತದೆ ಎಂದು ನಿಮಗೆ ತಿಳಿದಿದೆಯೇ? ಇತ್ತೀಚೆಗೆ ತಜ್ಞರು ವರ್ಷದ ಯಾವ ತಿಂಗಳಲ್ಲಿ ಹೆಚ್ಚು ಕೂದಲು ಉದುರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಶ್ವಾಸಕೋಶ ತೊಂದರೆ, ಉಸಿರಾಟ ಸಮಸ್ಯೆಗೆ ಮನೆಯಲ್ಲೇ ಹೀಗೆ ಪರಿಹಾರ ಮಾಡಿ!
ಯಾವ ತಿಂಗಳಲ್ಲಿ ಕೂದಲು ಉದುರುತ್ತದೆ
Express.co.uk ಪ್ರಕಾರ, ಸೆಪ್ಟೆಂಬರ್ ತಿಂಗಳಲ್ಲಿ ಕಾಲೋಚಿತವಾಗಿ ಹೆಚ್ಚು ಕೂದಲು ಉದುರುವಿಕೆ ಸಂಭವಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದಕ್ಕೆ ಕಾರಣ ಶರತ್ಕಾಲದ ತಾಪಮಾನ ಮತ್ತು ಒತ್ತಡದ ಕುಸಿತ. ಸೆಪ್ಟೆಂಬರ್ನಲ್ಲಿ ಗರಿಷ್ಠ ಕೂದಲು ಉದುರುತ್ತದೆ. ಮತ್ತು ಜನವರಿ ತಿಂಗಳ ಹೊತ್ತಿಗೆ ಕೂದಲು ಉದುರುವುದು ಕ್ರಮೇಣ ಕಡಿಮೆಯಾಗುತ್ತದೆ. ಸರಿಯಾದ ಆಹಾರ ಮತ್ತು ಜೀವನಶೈಲಿ ಬದಲಾವಣೆ ಮಾಡಿದರೆ ಉದುರಿದ ಕೂದಲು ಮತ್ತೆ ಹುಟ್ಟಿಕೊಳ್ಳುತ್ತದೆ.
40 ಕ್ಕೂ ಹೆಚ್ಚು ಕೈಗಾರಿಕೆಗಳಲ್ಲಿ ಕೆಲಸ ಮಾಡಿದ ಮತ್ತು UK ಯ ಪ್ರಸಿದ್ಧ ಹೇರ್ ಸಲೂನ್ನ ಗೌರವಾನ್ವಿತ ಮಾರ್ಕ್ ಬ್ಲ್ಯಾಕ್ ಪ್ರಕಾರ, ಸೆಪ್ಟೆಂಬರ್ನಲ್ಲಿ ಹೆಚ್ಚು ಕೂದಲು ಉದುರುತ್ತದೆ ಎಂದು ಹೇಳಲಾಗಿದೆ. ಏಕೆಂದರೆ ಈ ತಿಂಗಳಲ್ಲಿ ತಾಪಮಾನವು ಸಾಕಷ್ಟು ಬದಲಾಗುತ್ತದೆ. ಅಕ್ಟೋಬರ್ನಿಂದ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ. ಮತ್ತು ಜನವರಿಗೆ ಕೂದಲು ಉದುರುವುದು ನಿಲ್ಲುತ್ತದೆ.
ಮಾರ್ಕ್ ಬ್ಲ್ಯಾಕ್ ಹೇಳುವ ಪ್ರಕಾರ, ಒತ್ತಡವು ದೇಹಕ್ಕೆ ಮತ್ತು ಇದು ಕೂದಲಿಗೆ ತುಂಬಾ ಅಪಾಯಕಾರಿ. ಒತ್ತಡವು ದೇಹದ ಅಡ್ರಿನಾಲಿನ್ ಮತ್ತು ಕಾರ್ಟಿಸೋಲ್ ಹಾರ್ಮೋನುಗಳ ಉತ್ಪಾದನೆ ಹೆಚ್ಚಿಸುತ್ತದೆ. ಇದು ಕೂದಲಿನ ನೈಸರ್ಗಿಕ ಬೆಳವಣಿಗೆ ಪ್ರಕ್ರಿಯೆಯನ್ನು ದುರ್ಬಲಗೊಳಿಸುತ್ತದೆ. ಮತ್ತು ಹೆಚ್ಚು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.
ಹೇರ್ಕೇರ್ ಬ್ರ್ಯಾಂಡ್ ನಿಯೋಕ್ಸಿನ್ 2000 ವಯಸ್ಕರ ಮೇಲೆ ಸಂಶೋಧನೆ ಮಾಡಿದೆ. ಹತ್ತರಲ್ಲಿ ಆರು ವಯಸ್ಕರಿಗೆ ಕೂದಲು ಉದುರುತ್ತಿದೆ ಎಂದು ಹೇಳಿದೆ. ಸೂರ್ಯನಿಗೆ ಒಡ್ಡಿಕೊಳ್ಳುವುದು ಕೂದಲು ಉದುರುವಿಕೆ ತಡೆಯುತ್ತದೆ. ಅದಕ್ಕೆ ಸಮತೋಲಿತ ಆಹಾರದ ಅಗತ್ಯವಿದೆ ಎಂದು ಹೇಳಿದೆ.
OnePol ನ ಸಂಶೋಧನೆ ಪ್ರಕಾರ, ಒತ್ತಡ ರಹಿತವಾಗಿರುವುದು ಕೂದಲು ಉದುರುವಿಕೆ ತಡೆಯುತ್ತದೆ. 34 ವರ್ಷ ವಯಸ್ಸಿನವರಲ್ಲಿ ಕೂದಲು ತೆಳುವಾಗುತ್ತದೆ. ಕೂದಲು ಉದುರುವಿಕೆಗೆ ಕಾರಣವಾಗುವ ಕೆಲವು ಜೀವನ ಘಟನೆಗಳು ಇವೆ ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ದೈನಂದಿನ ತ್ವಚೆಯ ಕಾಳಜಿ ಹೀಗಿರಲಿ! ಆಹಾರದಲ್ಲಿ ಇವುಗಳನ್ನು ಮಿಸ್ ಮಾಡಬೇಡಿ
ಯಾವ ಆಹಾರವು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ
ನೇಚರ್ ನಿಯತಕಾಲಿಕದಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಜೆನೆಟಿಕ್ಸ್, ಸೈಕಾಲಜಿ ಮತ್ತು ಜೀವನಶೈಲಿ ಕೂದಲು ಉದುರುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೆಚ್ಚಿನ ಕೊಬ್ಬಿನ ಆಹಾರ,
ಬೊಜ್ಜು ಹೊಂದಿರುವ ಜನರು ಕೂದಲಿನ ಕೋಶಕ ಕಾಂಡಕೋಶಗಳಲ್ಲಿ (HFSCs) ಕಡಿಮೆಯಾಗಿರುತ್ತದೆ. ಇದು ಕೂದಲಿನ ಬೆಳವಣಿಗೆ ತಡೆಯುತ್ತದೆ. ಹಾಗಾಗಿ ಕೂದಲು ಮತ್ತೆ ಬೆಳೆಯುವುದಿಲ್ಲ. ಕೂದಲು ಬರಲು ವಿಟಮಿನ್ ಬಿ, ವಿಟಮಿನ್ ಇ, ವಿಟಮಿನ್ ಸಿ, ವಿಟಮಿನ್ ಎ, ಪ್ರೊಟೀನ್ ಮತ್ತು ಕಬ್ಬಿಣಾಂಶವಿರುವ ಆಹಾರ ಸೇವಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ