Sleep Hours: ನಮಗೆ ನಿದ್ದೆ ಯಾಕೆ ಅಗತ್ಯ; ಯಾವ ವಯಸ್ಸಿನವರು ಎಷ್ಟು ಹೊತ್ತು ನಿದ್ದೆ ಮಾಡಬೇಕು?

ನಿದ್ದೆ ನಮ್ಮ ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ. ದೇಹಕ್ಕೆ ವಿಶ್ರಾಂತಿ ಬೇಕಾಗುತ್ತದೆ. ಅದು ಆರಾಮದಾಯ ನಿದ್ದೆಯಿಂದ ಸಾಧ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಿದ್ದೆ (Sleep) ಯಾಕೆ (Why) ಮಾಡಬೇಕು? ನಿದ್ದೆ ಮಾಡಿದರೆ ಏನು ಪ್ರಯೋಜನ (Benefits), ನಿದ್ದೆ ನಮಗೆ ಅಷ್ಟೊಂದು ಅವಶ್ಯಕತೆ (Important) ಇದ್ಯಾ? ಯಾವ ವಯಸ್ಸಿನವರು ಎಷ್ಟು ತಾಸು (Hours) ನಿದ್ದೆ ಮಾಡಬೇಕು? ಇದೆಲ್ಲಾ ಪ್ರಶ್ನೆಗಳು (Questions) ಮನುಷ್ಯನ್ನಲ್ಲಿ ಒಂದು ದಿನ ಬಂದೇ ಬರುತ್ತವೆ. ಹೌದು, ನಮ್ಮ ಆರೋಗ್ಯಕ್ಕಾಗಿ ಸರಿಯಾದ ಕ್ರಮದಲ್ಲಿ ಒಳ್ಳೆಯ ನಿದ್ದೆಯನ್ನು ನಾವು ಮಾಡಲೇಬೇಕು. ನಿದ್ದೆ ನಮ್ಮ ದೈಹಿಕ ಮತ್ತು ಮಾನಸಿಕ ನೆಮ್ಮದಿಗೆ ಕಾರಣವಾಗುತ್ತದೆ. ದೇಹಕ್ಕೆ ವಿಶ್ರಾಂತಿ ಬೇಕಾಗುತ್ತದೆ. ಅದು ಆರಾಮದಾಯ ನಿದ್ದೆಯಿಂದ ಸಾಧ್ಯ. ಒಂದು ರಾತ್ರಿ ಸರಿಯಾದ ನಿದ್ದೆ ಮಾಡದ ಮನುಷ್ಯ ಯಾವುದೇ ರೀತಿಯಲ್ಲೂ ಚಟುವಟಿಕೆಯಿಂದ ಇರಲು ಸಾಧ್ಯ ಆಗುವುದಿಲ್ಲ.

    ಅದಾಗ್ಯೂ ಆರೋಗ್ಯಕರ ದೇಹ ಮತ್ತು ಮನಸ್ಸಿಗೆ ರಾತ್ರಿ ಒಳ್ಳೆಯ ನಿದ್ರೆ ಮಾಡುವುದು ಬಹಳ ಮುಖ್ಯ. ಸಾಕಷ್ಟು ಅಂದರೆ ಒಳ್ಳೆಯ ನಿದ್ರೆ ಮಾಡದಿದ್ದರೆ ಅದು ಟೈಪ್ 2 ಡಯಾಬಿಟಿಸ್, ಹೃದ್ರೋಗ, ಬೊಜ್ಜು ಮತ್ತು ಖಿನ್ನತೆಯಂತಹ ಅನೇಕ ಕಾಯಿಲೆಗಳ ಅಪಾಯಕ್ಕೆ ಗುರಿ ಮಾಡುತ್ತದೆ. ಬ್ಯುಸಿ ಶೆಡ್ಯೂಲ್, ಮೊಬೈಲ್ ಹೀಗೆ ಕೆಲ ಕಾರಣಗಳು ನಮ್ಮ ರಾತ್ರಿಯ ನಿದ್ದೆಗೆ ಕತ್ತರಿ ಹಾಕುತ್ತವೆ.

    ಇದರಿಂದಾಗಿ ನಾವು ರಾತ್ರಿ ತಡವಾಗಿ ನಿದ್ದೆ ಮಾಡಿ, ಬೆಳಗ್ಗೆ ಲೇಟಾಗಿ ಅಥವಾ ಬೇಗ ಎದ್ದೇಳುವವರು ಬಹಳ ಮಂದಿ ಇದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ನೀವು ಯಾವ ವಯಸ್ಸಿನ ಜನರಿಗೆ ಎಷ್ಟು ಗಂಟೆಗಳ ನಿದ್ರೆ ಅಗತ್ಯ ಎಂಬುದನ್ನು ಇಲ್ಲಿ ತಿಳಿಯಿರಿ.

    ಇದನ್ನೂ ಓದಿ: ಚಿಕನ್, ಫಿಶ್ ತಿನ್ನಲ್ವಾ? ಹಾಗಿದ್ದರೆ ಪ್ರೋಟೀನ್​​ಗಾಗಿ ಈ ಕೆಲವು ಆಹಾರ ಮಿಸ್ ಮಾಡಲೇಬೇಡಿ

    ಮಕ್ಕಳು, ವಯಸ್ಕರು ಮತ್ತು ವೃದ್ಧರಿಗೆ ಎಷ್ಟು ತಾಸು ನಿದ್ದೆ ಮಾಡುವುದು ಸೂಕ್ತ ಮತ್ತು ಸರಿ?

      ವಯಸ್ಸು ಮತ್ತು ಎಷ್ಟು ಗಂಟೆಗಳ ನಿದ್ದೆ ಅಗತ್ಯ

    ನವಜಾತ ಶಿಶುಗಳು:  1-2 ವರ್ಷದ ಮಕ್ಕಳು ಸುಮಾರು 11 ರಿಂದ 14 ತಾಸು ನಿದ್ದೆ ಮಾಡಬೇಕು.

    ಪ್ರಿ-ಸ್ಕೂಲ್ ಮಕ್ಕಳು:  3 ರಿಂದ 5 ವರ್ಷದ ಮಕ್ಕಳು ಸುಮಾರು 10 ರಿಂದ 13 ತಾಸು ನಿದ್ದೆ ಮಾಡಬೇಕು.

    ಮಕ್ಕಳು: 6 ರಿಂದ 13 ವರ್ಷದ ಮಕ್ಕಳು ಸುಮಾರು 9 ರಿಂದ 11 ತಾಸು ನಿದ್ದೆ ಮಾಡಬೇಕು.

    ಹದಿಹರೆಯದವರು : 14 ರಿಂದ 17 ವರ್ಷದವರು ಸುಮಾರು 8 ರಿಂದ 10 ತಾಸು ನಿದ್ದೆ ಮಾಡಬೇಕು.

    ವಯಸ್ಕರು : 18 ರಿಂದ 60 ವರ್ಷದವರು ಸುಮಾರು 7 ರಿಂದ 9 ತಾಸು ನಿದ್ದೆ ಮಾಡಬೇಕು.

    60 ವರ್ಷಕ್ಕಿಂತ ಮೇಲ್ಪಟ್ಟವರು: ಸುಮಾರು 6 ರಿಂದ 8 ತಾಸು ನಿದ್ದೆ ಮಾಡಬೇಕು.

    ನಿದ್ರೆ ಏಕೆ ಮಾಡಬೇಕು?

    ಕೇವಲ ರಾತ್ರಿ ನಿದ್ದೆ ಮಾಡಿದರೆ ಸಾಲದು. ಇದರ ಹೊರತಾಗಿ ನೀವು ಯಾವಾಗ ಮಲಗುತ್ತೀರಿ? ಎಷ್ಟು ಹೊತ್ತು ನಿದ್ದೆ ಮಾಡುತ್ತೀರಿ ಮತ್ತು ನಿಮ್ಮ ನಿದ್ದೆಯ ಗುಣಮಟ್ಟ ಹೇಗಿದೆ ಎಂಬುದು ಮುಖ್ಯ ಆಗುತ್ತದೆ. ಆರೋಗ್ಯ ತಜ್ಞರ ಪ್ರಕಾರ ರಾತ್ರಿ ನಿದ್ರೆಯ ಕೊರತೆ, ಹಗಲಿನಲ್ಲಿ ನಿದ್ದೆ ಬರುವುದು, ಸುಸ್ತು, ಕೆಟ್ಟ ಮೂಡ್ ಹೀಗೆ ಹಲವು ರೀತಿಯ ಕಾಯಿಲೆಗಳಿಗೆ ಕಾರಣವಾಗುತ್ತದೆ ಎನ್ನುತ್ತಾರೆ.

    ಮಕ್ಕಳು ಸಾಕಷ್ಟು ನಿದ್ದೆ ಮಾಡದಿದ್ದರೆ ಏನಾಗುತ್ತದೆ?

    ಉತ್ತಮ ನಿದ್ರೆಯ ಕೊರತೆ ಮಕ್ಕಳ ದೈಹಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಸಾಮಾನ್ಯವಾಗಿ ಬೆಳವಣಿಗೆಗೆ ಅಡ್ಡಿ ಉಂಟು ಮಾಡುತ್ತದೆ. ನಿದ್ರೆಯ ಕೊರತೆಯಿಂದಾಗಿ ಮಕ್ಕಳು ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ. ಶಾಲೆಯ ಕಾರ್ಯಕ್ಷಮತೆ ಕಡಿಮೆ, ಬೆಳಗ್ಗೆ ಬೇಗನೆ ಎದ್ದೇಳಲು ತೊಂದರೆ, ಕಿರಿಕಿರಿ, ಮನಸ್ಥಿತಿ ಬದಲಾವಣೆ, ಖಿನ್ನತೆ ಇತ್ಯಾದಿ ಸಮಸ್ಯೆ ಕಾಡುತ್ತದೆ.

    ಇದನ್ನೂ ಓದಿ: ಮದುವೆ ಸಮಾರಂಭಕ್ಕೆ ಹೋಗುವ ಮೊದಲು ಗ್ಲಾಸಿ ಮೇಕಪ್ ಮತ್ತು ಗೋಲ್ಡನ್ ಮೇಕಪ್ ಹೀಗೆ ಮಾಡಿಕೊಳ್ಳಿ

    ಹಿರಿಯರಿಗೆ ಕಡಿಮೆ ನಿದ್ರೆ ಬೇಕು ಯಾಕೆ?

    ನಿದ್ರೆಯ ಅಗತ್ಯ ವಯಸ್ಸಿನೊಂದಿಗೆ ಬದಲಾವಣೆ ಆಗುವುದಿಲ್ಲ ಎಂದು ಸಂಶೋಧನೆಗಳು ಹೇಳುತ್ತವೆ. ಅದಾಗ್ಯೂ ಅಗತ್ಯ ನಿದ್ರೆ ಪಡೆಯುವ ಸಾಮರ್ಥ್ಯವು ವಯಸ್ಸಿನೊಂದಿಗೆ ಕಡಿಮೆ ಆಗುತ್ತದೆ. ವಯಸ್ಸಾದ ಮೇಲೆ ಕಾಯಿಲೆ, ಔಷಧಗಳ ಕಾರಣದಿಂದಾಗಿ ನಿದ್ರೆ ಮಾಡುವ ಸಾಮರ್ಥ್ಯ ಕಡಿಮೆ ಆಗುತ್ತದೆ. ಹಾಗಾಗಿ ವಯಸ್ಸಿನ ಜೊತೆಗೆ ನಿದ್ರೆಯ ಗುಣಮಟ್ಟವೂ ಕಡಿಮೆಯಾಗುತ್ತದೆ.
    Published by:renukadariyannavar
    First published: