HOME » NEWS » Lifestyle » WHY DO PARENTS THINK THEY HAVE A SAY ON OUR SEXUALITY ZP

Sexual wellness: ಲೈಂಗಿಕತೆ ವಿಷಯದಲ್ಲಿ ಪೋಷಕರು ಏಕೆ ಹಸ್ತಕ್ಷೇಪ ಮಾಡುತ್ತಾರೆ? ಇಲ್ಲಿದೆ ತಜ್ಞರ ಅಭಿಪ್ರಾಯ

ಇನ್ನು ಕೆಲವು ಪೋಷಕರು ತಮ್ಮ ಮಕ್ಕಳ ಲೈಂಗಿಕತೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ಅವರು ಸಮಾಜದಲ್ಲಿ ಯಾವುದೇ ರೀತಿಯಲ್ಲಿ ಅಪಹಾಸ್ಯಕ್ಕೊಳಗಾಗಲು ಬಯಸುವುದಿಲ್ಲ.

news18-kannada
Updated:February 15, 2021, 8:33 PM IST
Sexual wellness: ಲೈಂಗಿಕತೆ ವಿಷಯದಲ್ಲಿ ಪೋಷಕರು ಏಕೆ ಹಸ್ತಕ್ಷೇಪ ಮಾಡುತ್ತಾರೆ? ಇಲ್ಲಿದೆ ತಜ್ಞರ ಅಭಿಪ್ರಾಯ
ಸಾಂದರ್ಭಿಕ ಚಿತ್ರ
  • Share this:
ಪ್ರಶ್ನೆ: ನಮ್ಮ ಲೈಂಗಿಕತೆ ವಿಷಯದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ತಮಗಿದೆ ಎಂದು ಪೋಷಕರು ಏಕೆ ಭಾವಿಸುತ್ತಾರೆ?

ಪ್ರತಿಯೊಬ್ಬ ಪೋಷಕರು ಅಲ್ಲ, ಆದರೆ ಹೆಚ್ಚಿನ ಭಾರತೀಯ ಪೋಷಕರು ಇದನ್ನು ಮಾಡುತ್ತಾರೆ. ನಮ್ಮ ದೇಶದ ಕುಟುಂಬ ವ್ಯವಸ್ಥೆಯ ಸ್ವರೂಪವೇ ಇದಕ್ಕೆ ಕಾರಣವಾಗಿದೆ. ನೀವು ಈ ಸಮಸ್ಯೆಯನ್ನು ಸಾಮಾಜಿಕ ದೃಷ್ಟಿಕೋನದಿಂದ ನೋಡಬೇಕು, ಇಲ್ಲದಿದ್ದರೆ ನಮಗೆ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುವುದಿಲ್ಲ.

ಸಮಾಜವು ವಿರುದ್ಧ ಲಿಂಗಕ್ಕೆ ಸಂಬಂಧಿಸಿದ 'ಸತ್ಯ'ಗಳನ್ನು ಮಾತ್ರ ಸ್ವೀಕರಿಸುತ್ತದೆ. ಅಲ್ಲದೆ ಮದುವೆಯನ್ನು ಪ್ರೀತಿಯ ಪ್ರದರ್ಶನ ಮತ್ತು ಲೈಂಗಿಕತೆಗೆ ಅನುಮತಿ ಪಡೆಯುವ ಮಾರ್ಗವೆಂದು ಪರಿಗಣಿಸುತ್ತದೆ. ಈ ವಿಷಯಗಳನ್ನು ಯಾವಾಗಲೂ ವೈಯಕ್ತಿಕ ದೃಷ್ಟಿಕೋನ ಅಥವಾ ಸಾಮಾನ್ಯ ಜ್ಞಾನದ ಆಧಾರದ ಮೇಲೆ ನೋಡಬಾರದು.

ನಮ್ಮ ಲೈಂಗಿಕತೆಗೆ ಹಸ್ತಕ್ಷೇಪ ಮಾಡುವ ಹಕ್ಕು ತಮಗೆ ಇದೆ ಎಂದು ಪೋಷಕರು ನಂಬಿದರೆ, ಅದಕ್ಕೆ ಕಾರಣ ಅವರು ಸಮಾಜದ ಭಾಗವಾಗಿದ್ದಾರೆ ಮತ್ತು ಅವರು ಬೆಳೆದು ಬಂದ ಹಾದಿ. ಸಾಂಪ್ರದಾಯಿಕ ಕುಟುಂಬದಲ್ಲಿ, ಸ್ವಾತಂತ್ರ್ಯ ಮತ್ತು ಸ್ವೀಕಾರ ಬಹಳ ಕಷ್ಟ. ಪಾಲಕರು ತಮ್ಮ ಮಕ್ಕಳ ಲೈಂಗಿಕತೆಯ ಬಗ್ಗೆ ತುಂಬಾ ಕಟ್ಟುನಿಟ್ಟಾಗಿರುತ್ತಾರೆ. ಸಾಂಪ್ರದಾಯಿಕ ಸಾಮಾಜಿಕ ಕಾನೂನು ಆ ಸಮಾಜದಲ್ಲಿ ವಾಸಿಸುವ ಜನರಿಗೆ ಭದ್ರತಾ ವಲಯವಾಗಿ ಕಾರ್ಯನಿರ್ವಹಿಸುತ್ತದೆ. ಜನರು ಯಾವುದೇ ಪ್ರಶ್ನೆಯನ್ನು ಕೇಳದೆ ಅದನ್ನು ಪಾಲಿಸಲು ಇದು ಕಾರಣವಾಗಿದೆ. ಆದರೆ ಇದೀಗ ಕಾಲ ಬದಲಾಗುತ್ತಿವೆ ಮತ್ತು ನಮ್ಮ ಜೀವನ ವಿಧಾನಗಳು ಬದಲಾಗುತ್ತಿವೆ, ಹಾಗೆಯೇ ಸಾಮಾಜಿಕ ನಿಯಮಗಳೂ ಬದಲಾಗುತ್ತಿವೆ.

ಉದಾಹರಣೆಗೆ, ದಂಪತಿಗಳು ಇಂದು ಮದುವೆಯಾಗಿ ಒಟ್ಟಿಗೆ ಸಂತೋಷವಾಗಿರಲು ಸಾಧ್ಯವಿಲ್ಲ ಎಂದು ಭಾವಿಸಿದರೆ, ಅವರು ಪರಸ್ಪರ ಒಪ್ಪಿಗೆಯಿಂದ ದೂರವಿರಬಹುದು. ಮದುವೆಯಾಗುವ ಮೊದಲು ಅವರು ಒಟ್ಟಿಗೆ ಬದುಕಬಹುದೇ ಅಥವಾ ಇಲ್ಲವೇ ಎಂದು ಒಬ್ಬರಿಗೊಬ್ಬರು ತಿಳಿದುಕೊಳ್ಳಬೇಕೆಂದು ದಂಪತಿಗಳು ಭಾವಿಸಿದರೆ, ಮದುವೆಗೂ ಮೊದಲು ಒಟ್ಟಿಗೆ ವಾಸಿಸಬಹುದು.

ಒಬ್ಬ ಮಹಿಳೆ ಮಗುವನ್ನು ದತ್ತು ತೆಗೆದುಕೊಳ್ಳಲು ಬಯಸಿದರೆ, ಹಾಗೆ ಮದುವೆಯಾಗಲು ಬಯಸದಿದ್ದರೆ, ಪೋಷಕರ ಕರ್ತವ್ಯಗಳನ್ನು ಪೂರ್ಣ ಜವಾಬ್ದಾರಿಯಿಂದ ನಿರ್ವಹಿಸಲು ಅವಳಿಗೆ ಒಂಟಿ ಪೋಷಕರಾಗುವ ಹಕ್ಕನ್ನು ಹೊಂದಿರುತ್ತಾಳೆ. ವಿರುದ್ಧ ಲಿಂಗದ ನಡುವೆ ಅಥವಾ ಸಲಿಂಗಕಾಮಿಗಳ ನಡುವೆ ಇರುವ ಪ್ರೀತಿ ಕೂಡ ಪ್ರೀತಿಯೇ. ಈ ನಿಟ್ಟಿನಲ್ಲಿ ಸೆಕ್ಷನ್ 377 ರ ಸುಪ್ರೀಂ ಕೋರ್ಟ್ ತೀರ್ಪು ಅಸಂವಿಧಾನಿಕವಾಗಿದೆ. ಹೊಸ ಕುಟುಂಬ ರಚನೆ ಸಹ ಪರಿಚಯವಾಗುತ್ತಿದೆ. ಅಂದರೆ ಒಂಟಿ ಪೋಷಕರು, ಸಲಿಂಗಕಾಮಿ, ಲೈವ್-ಇನ್ ಸಂಬಂಧ, ಬ್ಯಾಚುಲರ್ ಇತ್ಯಾದಿ.

ಲೈಂಗಿಕತೆಯ ಮೇಲಿನ ನಿರ್ಬಂಧಿತ ಸಾಮಾಜಿಕ ರೂಪಗಳನ್ನು ನೀವು ಗಂಭೀರವಾಗಿ ನೋಡಿದರೆ, ನೀವು ಈ ವಿಷಯಗಳನ್ನು ವಿಮರ್ಶಾತ್ಮಕವಾಗಿ ಯೋಚಿಸಬೇಕಿದೆ. ಕೆಲವು ಪೋಷಕರು ತಮ್ಮ ಮಕ್ಕಳಿಗೆ ಉತ್ತಮವಾದ ವಿಷಯಗಳನ್ನು ತಿಳಿಸಲು ಬಯಸುತ್ತಾರೆ. ಆದರೆ ಅವರು ಅದನ್ನು ತಮ್ಮದೇ ಆದ ರೀತಿಯಲ್ಲಿ ಮಾಡಲು ಬಯಸುತ್ತಾರೆ. ಅದು ಆ ಕಾಲದ ಸಾಮಾಜಿಕ ನಿಯಮಗಳಿಗೆ ಅನುಸಾರವಾಗಿದೆ ಎಂದು ಅವರು ಭಾವಿಸುತ್ತಾರೆ.ನಿಮ್ಮ ಆಲೋಚನೆಗಳು ಅವರ ಅಭಿಪ್ರಾಯಗಳಿಗೆ ಹೊಂದಿಕೆಯಾಗದಿದ್ದರೆ, ನೀವು ಈ ಬಗ್ಗೆ ಅವರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೀರಿ ಮತ್ತು ಇದು ಸಾಧ್ಯವಾಗದಿದ್ದರೆ ನೀವು ಉತ್ತಮ ಸ್ನೇಹಿತರು, ಸಾಮಾಜಿಕ ಗುಂಪುಗಳನ್ನು ಹುಡುಕುತ್ತೀರಿ. ಅಲ್ಲಿ ನೀವು ಈ ವಿಷಯಗಳನ್ನು ಚರ್ಚಿಸಬಹುದು ಮತ್ತು ಪರಸ್ಪರ ಸಹಾಯ ಮಾಡಬಹುದು. ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬಹುದು.

ಇನ್ನು ಅನೇಕ ಪೋಷಕರು ಇದ್ದಾರೆ. ಅವರು ತಮ್ಮ ಮಕ್ಕಳಿಗೆ ಈ ವಿಷಯಗಳಲ್ಲಿ ಸ್ವಾತಂತ್ರ್ಯ ಬೇಕು ಎಂದು ಒಪ್ಪಿಕೊಳ್ಳುತ್ತಾರೆ. ಅದನ್ನು ಅವರಿಗೆ ನೀಡಬೇಕು, ಅವರು ಮದುವೆಗೆ ಮೊದಲು ಪಾಲುದಾರರನ್ನು ಹೊಂದಬಹುದು ಮತ್ತು ಅವರೊಂದಿಗೆ ಉಳಿಯಬಹುದು. ಅವರು ಸಲಿಂಗಕಾಮಿಯನ್ನು ಮದುವೆಯಾಗಬಹುದು.

ಇನ್ನು ಕೆಲವು ಪೋಷಕರು ತಮ್ಮ ಮಕ್ಕಳ ಲೈಂಗಿಕತೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ಅವರು ಸಮಾಜದಲ್ಲಿ ಯಾವುದೇ ರೀತಿಯಲ್ಲಿ ಅಪಹಾಸ್ಯಕ್ಕೊಳಗಾಗಲು ಬಯಸುವುದಿಲ್ಲ. ಇದು ಸಂಕೀರ್ಣ ವಿಷಯವಾಗಿದೆ ಮತ್ತು ಸಾಮಾನ್ಯ ತೀರ್ಮಾನವಿಲ್ಲ. ಆದರೆ ಅಂತಹ ಸಮಸ್ಯೆಗಳೊಂದಿಗೆ ಸಿಕ್ಕಿಹಾಕಿಕೊಳ್ಳುವ ಮೊದಲು, ವೈಯಕ್ತಿಕ ಅನುಭವಗಳಲ್ಲಿ ಸಿಲುಕಿಕೊಳ್ಳುವುದಕ್ಕಿಂತ ಹೆಚ್ಚಾಗಿ ಅವರ ಬಗ್ಗೆ ವಿಮರ್ಶಾತ್ಮಕ ದೃಷ್ಟಿಕೋನವನ್ನು ಹೊಂದಿರುವುದು ಬಹಳ ಮುಖ್ಯ.
First published: February 15, 2021, 8:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories