HOME » NEWS » Lifestyle » WHY DO OTHERS HAVE A PROBLEM WITH THEM HAVING SEX RHHSN SWPB

Sexual wellness: ವಿವಾಹಕ್ಕೂ ಮುನ್ನ ಲೈಂಗಿಕ ಸಂಬಂಧ ಹೊಂದಲು ನಮ್ಮಲ್ಲಿ ಮುಕ್ತ ಅವಕಾಶ ಏಕಿಲ್ಲ?

ನಮ್ಮ ಸಮಾಜದಲ್ಲಿ ವಿವಾಹಪೂರ್ವ ಲೈಂಗಿಕತೆಯನ್ನು ತಪ್ಪಾಗಿ ಪರಿಗಣಿಸಲು ಇವು ಮುಖ್ಯ ಕಾರಣಗಳಾಗಿವೆ. ಸ್ವಲ್ಪ ಹೆಚ್ಚು ಸಮಯ ಮತ್ತು ಸಂಶೋಧನೆಯು ಈ ಹಳತಾದ ನಂಬಿಕೆಗಳನ್ನು, ಮತ್ತು ಪೂರ್ವಾಗ್ರಹಗಳನ್ನು ತೊಡೆದುಹಾಕುತ್ತವೆ.

news18-kannada
Updated:January 7, 2021, 3:31 PM IST
Sexual wellness: ವಿವಾಹಕ್ಕೂ ಮುನ್ನ ಲೈಂಗಿಕ ಸಂಬಂಧ ಹೊಂದಲು ನಮ್ಮಲ್ಲಿ ಮುಕ್ತ ಅವಕಾಶ ಏಕಿಲ್ಲ?
ಸಾಂದರ್ಭಿಕ ಚಿತ್ರ
  • Share this:
ಪ್ರಶ್ನೆ; ಇಂದು ಯುವಕರು ತಾವು ಪ್ರೀತಿಸುವವರೊಂದಿಗೆ ವೈವಾಹಿಕ ಪೂರ್ವ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಭಾರತೀಯ ಸಮಾಜದಲ್ಲಿ ಇದು ಏಕೆ ನಿಷಿದ್ಧವಾಗಿದೆ? ಲೈಂಗಿಕತೆಯ ಪರಿಣಾಮಗಳ ಬಗ್ಗೆ ಮುಕ್ತವಾಗಿ ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದೆಂದು ನಾನು ನಂಬುತ್ತೇನೆ. ಲೈಂಗಿಕ ಸಂಬಂಧ ಹೊಂದಿದರೆ ಇತರರಿಗೆ ಏನು ಸಮಸ್ಯೆ?

ಉತ್ತರ; ಇದು ಇಂದು ನಮ್ಮ ಸಮಾಜವನ್ನು ಕೇಳಬೇಕಾದ ಪ್ರಮುಖ ಪ್ರಶ್ನೆಗಳಲ್ಲಿ ಒಂದಾಗಿದೆ. ವೈವಾಹಿಕ ಪೂರ್ವದ ಲೈಂಗಿಕತೆಯನ್ನು ಖಂಡಿಸುವ ಹಿಂದಿನ ಒಂದು ಪ್ರಮುಖ ಕಾರಣವೆಂದರೆ ಕನ್ಯತ್ವದ ಕಲ್ಪನೆ. ಶತಮಾನಗಳಿಂದಲೂ ಮಹಿಳೆಯರು ತಮ್ಮ ‘ಶುದ್ಧತೆಯನ್ನು’ ಕಾಪಾಡಿಕೊಳ್ಳುವ ಒತ್ತಡವನ್ನು ಎದುರಿಸುತ್ತಿದ್ದಾರೆ ಮತ್ತು ಪತಿಯೇ ಮೊದಲನೆಯವರಾಗಿಬೇಕು ಎಂಬ ಅಲಿಖಿತ ನಿಯಮ ಹಾಕಿಕೊಳ್ಳಲಾಗಿದೆ. ಹೆಣ್ಣು ಮದುವೆಯಾದ ಮೊದಲ ರಾತ್ರಿ ಮಿಲನದ ಬಳಿಕ ಬಿಳಿ ಬೆಡ್​ಶಿಟ್​ ಮೇಲೆ ರಕ್ತಸ್ರಾವವಾಗಿದ್ದರೆ ಆಕೆ ಶುದ್ಧಳು ಎಂದು ಹೇಳುವ ಕೆಟ್ಟ ಸಂಪ್ರದಾಯ ಕೂಡ ನಮ್ಮಲಿದೆ.

ವಿವಾಹಪೂರ್ವ ಲೈಂಗಿಕತೆಯನ್ನು ಖಂಡಿಸುವ ಇನ್ನೊಂದು ಕಾರಣವೆಂದರೆ, ಸಂತಾನೋತ್ಪತ್ತಿಯ ಉದ್ದೇಶಕ್ಕಾಗಿ ಮಾತ್ರ ಲೈಂಗಿಕತೆಯನ್ನು ಮಾಡಬೇಕು ಎಂಬ ಜೂಡಿಯೊ-ಕ್ರಿಶ್ಚಿಯನ್ ಸಿದ್ಧಾಂತ. ಈ ದೃಷ್ಟಿಕೋನವು ಲೈಂಗಿಕತೆಯ ಕಲ್ಪನೆ, ಸಂತೋಷ ಅಥವಾ ಪ್ರೀತಿಯ ಕ್ರಿಯೆಯನ್ನು ಖಂಡಿಸುತ್ತದೆ. ಮೂರನೆಯದಾಗಿ, ‘ನ್ಯಾಯಸಮ್ಮತವಲ್ಲದ ಮಕ್ಕಳನ್ನು’ ಪಡೆಯದಿರಲು ಮದುವೆಗೆ ಮುಂಚಿತವಾಗಿ ಲೈಂಗಿಕತೆಯನ್ನು ಖಂಡಿಸಲು ಕಾರಣವಾಗಿದೆ.

ಇದನ್ನು ಓದಿ: Sexual wellness: ಸಂಗಾತಿ ಮುಂದೆ ಹಸ್ತಮೈಥುನ ಮಾಡಿಕೊಂಡರೆ ಏನಾಗುತ್ತದೆ?

ನಮ್ಮ ಸಮಾಜದಲ್ಲಿ ವಿವಾಹಪೂರ್ವ ಲೈಂಗಿಕತೆಯನ್ನು ತಪ್ಪಾಗಿ ಪರಿಗಣಿಸಲು ಇವು ಮುಖ್ಯ ಕಾರಣಗಳಾಗಿವೆ. ಸ್ವಲ್ಪ ಹೆಚ್ಚು ಸಮಯ ಮತ್ತು ಸಂಶೋಧನೆಯು ಈ ಹಳತಾದ ನಂಬಿಕೆಗಳನ್ನು, ಮತ್ತು ಪೂರ್ವಾಗ್ರಹಗಳನ್ನು ತೊಡೆದುಹಾಕುತ್ತವೆ.
Published by: HR Ramesh
First published: January 7, 2021, 3:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories