• Home
 • »
 • News
 • »
 • lifestyle
 • »
 • Aging Foods: ಪುರುಷರು ಏಕೆ ವೇಗವಾಗಿ ವಯಸ್ಸಾಗುವಿಕೆ ಪ್ರಕ್ರಿಯೆಗೆ ತುತ್ತಾಗುತ್ತಾರೆ?

Aging Foods: ಪುರುಷರು ಏಕೆ ವೇಗವಾಗಿ ವಯಸ್ಸಾಗುವಿಕೆ ಪ್ರಕ್ರಿಯೆಗೆ ತುತ್ತಾಗುತ್ತಾರೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಕಾಯಿಲೆಗೆ ತುತ್ತಾಗುವುದು ವಯಸ್ಸಾಗುವಿಕೆ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಕೆಲವು ಪುರುಷರು ಮಹಿಳೆಯರಿಗಿಂತ ವೇಗವಾಗಿ ವಯಸ್ಸಾಗುವಿಕೆ ಲಕ್ಷಣಗಳನ್ನು ಹೊಂದುತ್ತಾರೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗ ಪಡಿಸಿದೆ.

 • Share this:

  ಬಾಲ್ಯ, ಯೌವನ (Youth) ಮತ್ತು ವೃದ್ಧಾಪ್ಯ (Aged) ಜೀವನದ (Life) ಪ್ರಮುಖ ಘಟ್ಟಗಳು. ಇದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದು ಜೀವನದ ಮುಖ್ಯ ಸತ್ಯವಾಗಿದೆ. ವಯಸ್ಸು (Age) ದಾಟಿದಂತೆ ವೃದ್ಧಾಪ್ಯವೂ ಬರುತ್ತದೆ. ಆದಾಗ್ಯೂ ಕೆಲವು ಜನರು (People) ಕಳಪೆ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿಯಿಂದ (Lifestyle) ವಯಸ್ಸಿಗೂ ಮೊದಲೇ ವಯಸ್ಸಾಗುವಿಕೆ ಲಕ್ಷಣಗಳು ಕಾಣಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಕಾಯಿಲೆಗೆ ತುತ್ತಾಗುವುದು, ವಯಸ್ಸಾಗುವಿಕೆ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಕೆಲವು ಪುರುಷರು ಮಹಿಳೆಯರಿಗಿಂತ ವೇಗವಾಗಿ ವಯಸ್ಸಾಗುವಿಕೆ ಲಕ್ಷಣಗಳನ್ನು ಹೊಂದುತ್ತಾರೆ ಎಂದು ಇತ್ತೀಚಿನ ಅಧ್ಯಯನವೊಂದು ಬಹಿರಂಗ ಪಡಿಸಿದೆ. ಇದು ಸಾಕಷ್ಟು ಪುರುಷರನ್ನೂ ಚಿಂತೆಗೆ ದೂಡಬಹುದು.


  ಪುರುಷರಲ್ಲಿ ವಯಸ್ಸಿಗಿಂತ ಮೊದಲೇ ವಯಸ್ಸಾಗುವಿಕೆ ಸಮಸ್ಯೆ


  ಜರ್ನಲ್ ಆಫ್ ಜೆರೊಂಟಾಲಜಿಯಲ್ಲಿ ಪ್ರಕಟವಾದ ಫಿನ್‌ ಲ್ಯಾಂಡ್‌ ನ ಅಧ್ಯಯನವು ಪುರುಷರು ಮಹಿಳೆಯರಿಗಿಂತ ಜೈವಿಕವಾಗಿ ದೊಡ್ಡವರು ಎಂದು ಸೂಚಿಸುತ್ತದೆ. ಇದರರ್ಥ ಒಬ್ಬ ಪುರುಷನು ತನ್ನ 50 ರ ಹರೆಯದ ಹೊತ್ತಿಗೆ,


  ಅವನು ಅದೇ ವಯಸ್ಸಿನ ಮಹಿಳೆಗಿಂತ ನಾಲ್ಕು ಜೈವಿಕ ವರ್ಷ ಹಿರಿಯನಾಗಿರುತ್ತಾನೆ ಎಂದು ತಿಳಿಸಿದೆ. ಈ ವ್ಯತ್ಯಾಸವು ಚಿಕ್ಕ ವಯಸ್ಸಿನಲ್ಲಿ ಶುರು ಆಗುತ್ತದೆ. ಆಶ್ಚರ್ಯಕರ ಸಂಗತಿ ಅಂದ್ರೆ ಈ ಪರಿಣಾಮವು 20 ವರ್ಷಕ್ಕಿಂತ ಮುಂಚೆಯೇ ಪುರುಷರಲ್ಲಿ ಆರಂಭ ಆಗುತ್ತದೆ.


  ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


  ಪುರುಷರು ಏಕೆ ವೇಗವಾಗಿ ವಯಸ್ಸಾಗುವಿಕೆ ಲಕ್ಷಣ ಹೊಂದುತ್ತಾರೆ?


  ಲಿಂಗಗಳ ನಡುವಿನ ಜೈವಿಕ ವಯಸ್ಸಾದ ವ್ಯತ್ಯಾಸವಿದೆಯೇ ಎಂದು ಕಂಡು ಹಿಡಿಯಲು ಅಧ್ಯಯನವು ಪ್ರಯತ್ನಿಸಿದೆ. ಜೀವನಶೈಲಿಗೆ ಸಂಬಂಧಿತ ಅಂಶಗಳಿಂದ ಆ ಸಂಭಾವ್ಯ ವ್ಯತ್ಯಾಸಗಳನ್ನು ಅರ್ಥ ಮಾಡಿಕೊಳ್ಳಲು ಸಂಶೋಧಕರು ಬಯಸಿದ್ದರು.


  ಸಂಶೋಧನೆಯಲ್ಲಿ ಅವರು ಅವಳಿ ವಯಸ್ಸಿನ ಸಂಶೋಧನೆಯಲ್ಲಿ ವಿರುದ್ಧ ಲಿಂಗದ ಪುರುಷರು ಮತ್ತು ಮಹಿಳೆಯರನ್ನು ಸೇರಿಸಿಕೊಂಡರು. ಹೆಚ್ಚಿನ ಪುರುಷ ಒಡಹುಟ್ಟಿದವರು ಜೈವಿಕವಾಗಿ ತಮ್ಮ ಸಹೋದರಿಯರಿಗಿಂತ ಸುಮಾರು ಒಂದು ವರ್ಷ ಹಿರಿಯರು ಎಂದು ತಜ್ಞರು ಹೇಳ್ತಾರೆ. ವಯಸ್ಸಾಗುವಿಕೆ ಸಮಸ್ಯೆ ತಡೆಯಲು ನೀವು ಬಯಸಿದರೆ ನೀವು ಈ ಕೆಳಗಿನ ಆಹಾರ ಸೇವಿಸಿ.


  ಟೊಮೆಟೊ


  ಟೊಮೆಟೊವನ್ನ ತರಕಾರಿಗಳು ಮತ್ತು ಸಲಾಡ್‌ ನಲ್ಲಿ ಸೇವನೆ ಮಾಡಲಾಗುತ್ತದೆ. ಇದು ಆಹಾರದ ರುಚಿ ಹೆಚ್ಚಿಸುತ್ತದೆ. ಜೊತೆಗೆ ದೇಹವನ್ನು ಯೌವನ ಮತ್ತು ಆರೋಗ್ಯವಾಗಿರಿಸಲು ಸಹಾಯ ಮಾಡುತ್ತದೆ. ಎನ್‌ ಸಿಬಿಐನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಟೊಮೆಟೊಗಳಲ್ಲಿ ಲೈಕೋಪೀನ್ ಕಂಡು ಬರುತ್ತದೆ.


  ದೇಹವನ್ನು ಫಿಟ್ ಮಾಡಲು ಈ ಫೈಟೊಕೆಮಿಕಲ್ ಸಹಕಾರಿ. ಚರ್ಮ ಬಲಪಡಿಸಲು ಸಹಾಯ ಮಾಡುತ್ತದೆ. ಲೈಕೋಪೀನ್ ನಿಮ್ಮ ದೇಹವನ್ನು ಹಾನಿಕಾರಕ ಜೀವಾಣುಗಳ ಪರಿಣಾಮಗಳಿಂದ ರಕ್ಷಣೆ ಮಾಡುತ್ತದೆ.


  ಮೀನು ಮತ್ತು ಮೀನಿನ ಎಣ್ಣೆ


  ಒಮೆಗಾ -3 ಕೊಬ್ಬಿನಾಮ್ಲ ಮೀನು ಮತ್ತು ಮೀನಿನ ಎಣ್ಣೆಯಲ್ಲಿ ಕಂಡು ಬರುತ್ತವೆ. ಇದು ದೇಹದ ಜೀವಕೋಶ ಆರೋಗ್ಯವಾಗಿಡುವ ಮತ್ತು ಅವುಗಳ ಕಾರ್ಯ ನಿರ್ವಹಣೆ ಸುಧಾರಿಸುವ ಪೋಷಕಾಂಶ ಆಗಿದೆ. ಇದು ನಿಮ್ಮ ಚರ್ಮದ ವಿನ್ಯಾಸ ಸುಧಾರಿಸುವ ಪ್ರೋಟೀನ್ ಹೊಂದಿದೆ. ಇದು ವಯಸ್ಸಾಗುವಿಕೆಗೆ ಕಾರಣವಾದ ರಕ್ತದ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ.


  ಬೀಜಗಳು


  ನಟ್ಸ್ ಮತ್ತು ಡ್ರೈ ಫ್ರೂಟ್ಸ್ ಆರೋಗ್ಯದ ಉಗ್ರಾಣ. ಇದು ಆರೋಗ್ಯಕರ ದೇಹಕ್ಕೆ ಅಗತ್ಯವಿರುವ ಎಲ್ಲಾ ಪೋಷಕಾಂಶ ಒದಗಿಸುತ್ತದೆ. ಬೀಜಗಳು ದೇಹವನ್ನು ಯೌವನವಾಗಿಡಲು ಅಗತ್ಯವಿರುವ ಎಲ್ಲಾ ಜೀವಸತ್ವ ಮತ್ತು ಪೋಷಕಾಂಶ ಹೊಂದಿದೆ. ಒಮೆಗಾ-3, ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್ ಗೋಡಂಬಿ, ಬಾದಾಮಿ ಮತ್ತು ವಾಲ್‌ನಟ್‌ ಸೇವಿಸಿ.


  ಹಣ್ಣುಗಳು


  ಬೆರ್ರಿಗಳ ವರ್ಗವು ಬೆರ್ರಿ ಹಣ್ಣು, ಸ್ಟ್ರಾಬೆರಿ, ಬ್ಲ್ಯಾಕ್ಬೆರಿ ಮತ್ತು ಬೆರಿಹಣ್ಣು ವಿಷಯಗಳನ್ನು ಒಳಗೊಂಡಿದೆ. ಎನ್ ಎಚ್ ಐ ವರದಿ ಪ್ರಕಾರ, ಈ ಎಲ್ಲಾ ಆಹಾರಗಳು ಫ್ಲೇವನಾಯ್ಡ್ಗಳು ಮತ್ತು ಉತ್ಕರ್ಷಣ ನಿರೋಧಕಗಳ ನಿಧಿ. ಈ ಫ್ಲೇವನಾಯ್ಡ್‌ಗಳು ವಯಸ್ಸಾದ ವಿರೋಧಿ ಗುಣ ಹೊಂದಿದೆ. ವಿಟಮಿನ್ ಸಿ ಇದೆ. ಇದು ಕಾಲಜನ್ ಬಲಪಡಿಸಲು ಸಹಾಯ ಮಾಡುತ್ತದೆ.


  ಆವಕಾಡೊ


  ಆರೋಗ್ಯಕರ ಮತ್ತು ದೀರ್ಘಾಯುಷ್ಯಕ್ಕಾಗಿ ಹಣ್ಣುಗಳನ್ನು ತಿನ್ನಬೇಕು. ಪ್ರತಿಯೊಂದು ಹಣ್ಣು ತನ್ನದೇ ಆದ ವಿಶಿಷ್ಟ ಪ್ರಯೋಜನ ಹೊಂದಿದೆ. ಆವಕಾಡೊ ಕೂಡ ಶಕ್ತಿಶಾಲಿ ಹಣ್ಣು. ಇದು ವಿಟಮಿನ್ ಬಿ ಮತ್ತು ಇ ಯ ಅತ್ಯುತ್ತಮ ಮೂಲ.


  ಇದನ್ನೂ ಓದಿ: ದೇಹದಲ್ಲಿ ಮೆಗ್ನೀಸಿಯಮ್ ಕೊರತೆ ಈ ಅಪಾಯಕ್ಕೆ ಕಾರಣವಂತೆ, ಎಚ್ಚರವಿರಲಿ


  ಚರ್ಮಕ್ಕೆ ಸಂಪೂರ್ಣ ಪೋಷಣೆ ನೀಡುತ್ತದೆ. ಆರೋಗ್ಯಕರ ಚರ್ಮ ಉತ್ತೇಜಿಸುತ್ತದೆ. ಆವಕಾಡೊದಲ್ಲಿರುವ ಗ್ಲುಟಾಥಿಯೋನ್ ವಯಸ್ಸಾಗುವಿಕೆ ಪ್ರಕ್ರಿಯೆ ನಿಧಾನಗೊಳಿಸುತ್ತದೆ.

  Published by:renukadariyannavar
  First published: