Health Care Tips: ಮಹಿಳೆಯರಿಗಿಂತ ಪುರುಷರಿಗೆ ಯಾಕೆ ಬೇಕು ಹೆಚ್ಚಿನ ಕ್ಯಾಲೋರಿ?

ಆರೋಗ್ಯದ ವಿಚಾರದಲ್ಲಿ ಪೌಷ್ಟಿಕಾಂಶ ಸೇವನೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪೌಷ್ಟಿಕ ತಜ್ಞರ ಸಹಾಯ ಪಡೆಯಬಹದು. ಮತ್ತು ಸಮತೋಲಿತ ಆಹಾರ ಫಾಲೋ ಮಾಡಿ. ಪೌಷ್ಠಿಕಾಂಶವು ಪುರುಷರು ಮತ್ತು ಮಹಿಳೆಯರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪರಿಸರದಲ್ಲಿ (Environment) ಜೀವಿಸುವ ಪ್ರತಿಯೊಂದು ಜೀವಿಗಳು (Creatures) ತಮ್ಮದೇ ಆದ ಆಹಾರ (Food) ಪದ್ಧತಿ ಹೊಂದಿವೆ. ಹಾಗೆಯೇ ಒಂದು ಜೀವಿಗಿಂತ ಮತ್ತೊಂದು ಜೀವಿಯ ಆಹಾರ ಪದ್ಧತಿ ಭಿನ್ನತೆ ಹೊಂದಿದೆ. ಅದರಲ್ಲಿ ಮನುಷ್ಯ ಜೀವಿಯು ಹಲವು ತರಹದ ಆಹಾರ ಸೇವನೆಯ ಮೂಲಕ ಆರೋಗ್ಯವೆಂಬ (Health) ಮಹಾತ್ವಾಕಾಂಕ್ಷೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಹಾಗೆಯೇ ಮನುಷ್ಯರಲ್ಲಿ ಗಂಡು- ಹೆಣ್ಣಿನ ನಡುವೆ ವ್ಯತ್ಯಾಸಗಳಿವೆ. ಇದು ಆಹಾರ ಸೇವನೆಯನ್ನೂ ಸಹ ಹೊಂದಿದೆ. ಹಾಗಾಗಿ ಮಹಿಳೆಯರ ಆಹಾರದ ಅವಶ್ಯಕತೆಗಳು ಪುರುಷರಿಗಿಂತ ಭಿನ್ನವಾಗಿವೆ. ಪುರುಷರಿಗೆ ಮಹಿಳೆಯರಿಗಿಂತ ಹೆಚ್ಚಿನ ಕ್ಯಾಲೋರಿ ಮತ್ತು ಪ್ರೋಟೀನ್ ಅಗತ್ಯವಿದೆ. ಹಾಗಾಗಿ ಪುರುಷರು ಮತ್ತು ಮಹಿಳೆಯರಿಗೆ ನಿಯಮಿತ ಆಹಾರದಲ್ಲಿ ಯಾವ ಪೌಷ್ಟಿಕಾಂಶದ ಘಟಕಗಳನ್ನು ಸೇರಿಸುವುದು ಅವಶ್ಯಕ ಎಂಬ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ.

  ಪೌಷ್ಟಿಕಾಂಶ ಸೇವನೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ

  ಆರೋಗ್ಯದ ವಿಚಾರದಲ್ಲಿ ಪೌಷ್ಟಿಕಾಂಶ ಸೇವನೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪೌಷ್ಟಿಕ ತಜ್ಞರ ಸಹಾಯ ಪಡೆಯಬಹದು. ಮತ್ತು ಸಮತೋಲಿತ ಆಹಾರ ಫಾಲೋ ಮಾಡಿ. ಪೌಷ್ಠಿಕಾಂಶವು ಪುರುಷರು ಮತ್ತು ಮಹಿಳೆಯರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಉತ್ತಮ ಆಹಾರ ರೋಗ, ಅಲರ್ಜಿ ಮತ್ತು ಸೋಂಕು ಅಪಾಯ ಕಡಿಮೆ ಮಾಡುತ್ತದೆ. ಮತ್ತು ಚಯಾಪಚಯ ಸುಧಾರಿಸುತ್ತದೆ.

  ನಿಮಗೆ ಉತ್ತಮ ಪೋಷಣೆಗೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ಗರಿಷ್ಠ ತೂಕ ಕಾಪಾಡಲು ಸಹಕಾರಿ. ಸರಿಯಾದ ಪೋಷಣೆಯ ಬಗ್ಗೆ ಹೆಚ್ಚಿನ ಪುರುಷರು ಮತ್ತು ಮಹಿಳೆಯರು ತಿಳಿದಿರಲ್ಲ. ಮುಂಬೈನ ವೊಕಾರ್ಡ್ ಆಸ್ಪತ್ರೆಯ ಹಿರಿಯ ಡಯೆಟಿಷಿಯನ್ ರಿಯಾ ದೇಸಾಯಿ ಅವರು ಆರೋಗ್ಯವಾಗಿರಲು ನೀವು ಯಾವ ರೀತಿಯ ಆಹಾರ ಸೇವಿಸಬೇಕು ಎಂದು ಹೇಳಿದ್ದಾರೆ ನೋಡೋಣ.

  ಇದನ್ನೂ ಓದಿ: ಎಷ್ಟೇ ಆರೈಕೆ ಮಾಡಿದರೂ ನಿಲ್ಲದ ಕೂದಲು ಉದುರುವ ಸಮಸ್ಯೆಗೆ ಬ್ರೇಕ್ ಹಾಕುತ್ತೆ ಹಲೀಂ ಬೀಜ!

  ಪುರುಷರಿಗೆ ಹೆಚ್ಚಿನ ಕ್ಯಾಲೋರಿ ಬೇಕು

  ಪುರುಷರು ಮಹಿಳೆಯರಿಗಿಂತ ಹೆಚ್ಚು ಸ್ನಾಯು ಹೊಂದಿದ್ದಾರೆ. ಸ್ನಾಯುವಿನ ದ್ರವ್ಯರಾಶಿ ಕಾಪಾಡಲು ಹೆಚ್ಚಿನ ಕ್ಯಾಲೋರಿಗಳು ಬೇಕು. ದೇಹದ ಪ್ರಕಾರ ಮತ್ತು ದೇಹದ ಸಂಯೋಜನೆಯಲ್ಲಿನ ವ್ಯತ್ಯಾಸಗಳ ಜೊತೆಗೆ ಒಬ್ಬ ವ್ಯಕ್ತಿಗೆ ಅಗತ್ಯವಿರುವ ಕ್ಯಾಲೊರಿಗಳು, ಎತ್ತರ ಮತ್ತು ಪ್ರಸ್ತುತ ದೇಹದ ತೂಕ ಮತ್ತು ವ್ಯಕ್ತಿಯ ಜೀವನಶೈಲಿಯ ಪ್ರಕಾರನ್ನು ಅವಲಂಬಿಸಿದೆ.

  ಉದಾಹರಣೆಗೆ, ಡೆಸ್ಕ್ ಕೆಲಸ ಮಾಡುವ ಮನುಷ್ಯನಿಗೆ ಕಡಿಮೆ ಕ್ಯಾಲೋರಿ ಬೇಕು. ಆದ್ದರಿಂದ, ಪುರುಷರಿಗೆ ಹೆಚ್ಚಿನ ಕ್ಯಾಲೋರಿಗಳು ಬೇಕು. ಕ್ಯಾಲೋರಿ ಸೇವನೆಯು ಯಾವಾಗಲೂ ಬದಲಾಗುತ್ತದೆ. ಅದಕ್ಕಾಗಿಯೇ ನೀವು ತಜ್ಞರ ಸಲಹೆ ಪಡೆಯಬೇಕು.

  ಮಹಿಳೆಯರಿಗೆ ಹೆಚ್ಚಿನ ಕ್ಯಾಲ್ಸಿಯಂ ಬೇಕು

  ಮಹಿಳೆಯರ ದೇಹದಲ್ಲಿ ಹೆಚ್ಚಿನ ಕ್ಯಾಲ್ಸಿಯಂ ಇರುವಂತೆ ನೋಡಿಕೊಳ್ಳಬೇಕು. ಏಕೆಂದರೆ ಕ್ಯಾಲ್ಸಿಯಂ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಋತುಬಂಧದ ನಂತರ ದೇಹದಲ್ಲಿ ಕ್ಯಾಲ್ಸಿಯಂ ಮತ್ತು ಈಸ್ಟ್ರೊಜೆನ್ ಮಟ್ಟಗಳು ಕಡಿಮೆಯಾಗುತ್ತವೆ. ಮಹಿಳೆಯರು ಪುರುಷರಿಗಿಂತ ಆಸ್ಟಿಯೊಪೊರೋಸಿಸ್ಗೆ ಹೆಚ್ಚು ಒಳಗಾಗುತ್ತಾರೆ.

  ಮೂಳೆ ಮುರಿತದ ಸಾಧ್ಯತ ಕಡಿಮೆ ಮಾಡಲು, ಮಹಿಳೆಯರಿಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅಗತ್ಯವಿದೆ. ಕಡಿಮೆ ಕೊಬ್ಬಿನ ಹಾಲು ಮತ್ತು ಹಾಲಿನ ಉತ್ಪನ್ನಗಳು, ಕಡು ಹಸಿರು ಎಲೆಗಳ ತರಕಾರಿಗಳಾದ ನಾಚ್ನಿ, ರಾಜಗಿರಾ, ಪಾಲಕ್, ಕೇಲ್, ಬೀಟ್ರೂಟ್,

  ಬ್ರೊಕೊಲಿ, ತೋಫು, ಸೋಯಾಬೀನ್ ಮತ್ತು ಅದರ ಉಪ ಉತ್ಪನ್ನಗಳನ್ನು ಹೆಚ್ಚು ಸೇವಿಸಿ. ಸೋಯಾ ಹಾಲು, ಅಣಬೆ,ಕೊಬ್ಬಿನ ಮೀನು ಮತ್ತು ಬಲವರ್ಧಿತ ಧಾನ್ಯಗಳು, ಎಣ್ಣೆಗಳು ಮತ್ತು ಮೊಟ್ಟೆಗಳಂತಹ ವಿಟಮಿನ್ ಡಿ ಸಮೃದ್ಧ ಆಹಾರ ಸೇವಿಸಿ.

  ಮಹಿಳೆಯರಿಗೆ ಹೆಚ್ಚು ಕಬ್ಬಿಣದ ಅಗತ್ಯವಿದೆ

  ಕಬ್ಬಿಣದ ಕೊರತೆಯಿಂದ ಮಹಿಳೆಯರು ರಕ್ತಹೀನತೆ ಎದುರಿಸುತ್ತಾರೆ. ಕಬ್ಬಿಣದ ಸ್ಥಿತಿಯ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶವೆಂದರೆ ಮುಟ್ಟು. ಮಹಿಳೆಯರು ಋತುಮತಿಯಾಗುತ್ತಿದ್ದಂತೆ ಕಬ್ಬಿಣಾಂಶದ ಕೊರತೆ ಉಂಟಾಗುತ್ತದೆ. ರಕ್ತಹೀನತೆ, ಮಹಿಳೆಯರಲ್ಲಿ ಸೆಳೆತ, ಆಯಾಸ, ಕೇಂದ್ರೀಕರಿಸಲು ಅಸಮರ್ಥತೆ ಮತ್ತು ಉಸಿರಾಟದ ತೊಂದರೆ ಉಂಟುಮಾಡುತ್ತದೆ.

  ಇದನ್ನೂ ಓದಿ: ಪಾದ, ಕೈಗಳಲ್ಲಿ ಅಧಿಕ ಕೊಲೆಸ್ಟ್ರಾಲ್ ಲಕ್ಷಣ ಕಂಡು ಬರುವುದು ಹೇಗೆ? ಇದರ ಮುನ್ನೆಚ್ಚರಿಕಾ ಕ್ರಮಗಳೇನು?

  ಕಬ್ಬಿಣಂಶ ಪೂರೈಸುವದು ಹೇಗೆ?

  ಮಹಿಳೆಯರು ಬೀನ್ಸ್, ಬಟಾಣಿ ಮತ್ತು ಮಸೂರ, ಮೊಳಕೆ ಮತ್ತು ಕಾಳುಗಳು, ಒಣದ್ರಾಕ್ಷಿ ಮತ್ತು ಖರ್ಜೂರದಂತಹ ಒಣ ಹಣ್ಣುಗಳು, ಕಡು ಹಸಿರು ಎಲೆಗಳ ತರಕಾರಿಗಳಾದ ಪಾಲಕ್, ಪುದೀನ, ತಾಜಾ ಕೊತ್ತಂಬರಿ, ಹೂಕೋಸು ಮತ್ತು ಕುಂಬಳಕಾಯಿ, ಎಳ್ಳು, ಬೀಜಗಳಂತಹ ತರಕಾರಿಗಳನ್ನು ನಿಯಮಿತ ಆಹಾರದಲ್ಲಿ ಸೇರಿಸಬೇಕು.
  Published by:renukadariyannavar
  First published: