• Home
  • »
  • News
  • »
  • lifestyle
  • »
  • ನಿಮ್ಮ ಮಕ್ಕಳೇಕೆ ನಿದ್ದೆ ಮಾಡಲು ಬಯಸುವುದಿಲ್ಲ? ಈ ಕಾರಣಗಳಿರಬಹುದೇ..

ನಿಮ್ಮ ಮಕ್ಕಳೇಕೆ ನಿದ್ದೆ ಮಾಡಲು ಬಯಸುವುದಿಲ್ಲ? ಈ ಕಾರಣಗಳಿರಬಹುದೇ..

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Kids: ನಿಜಕ್ಕೂ ಕೆಲ ಸಮಸ್ಯೆಗಳು ಮಕ್ಕಳಿಗೆ ಕಾಡುವುದರಿಂದ ನಿದ್ರೆ ಮಾಡುವುದನ್ನು ತಪ್ಪಿಸಿಕೊಳ್ಳಲು ನೋಡುತ್ತವೆ. ಯಾವ ಯಾವ ಕಾರಣಗಳಿಗೆ ನಿದ್ದೆಯನ್ನು ತಪ್ಪಿಸಿಕೊಳ್ಳಲು ನೋಡುತ್ತಾರೆ ಎಂದು ತಿಳಿಯೋಣ ಬನ್ನಿ.

  • Share this:

ಕೆಲವೊಂದು ಮಕ್ಕಳು ಸಂಜೆಯಾಗುತ್ತಲೇ ನಿದ್ರೆಗೆ ಜಾರುವುದನ್ನು ನಾವು ನೋಡಿದ್ದೇವೆ, ಆದರೆ ಇನ್ನೂ ಕೆಲವು ಮಕ್ಕಳು ತಾಯಿಯಾದವರು ಎಷ್ಟೇ ಮಲಗಿಸಲು ಪ್ರಯತ್ನಿಸಿದರೂ ಮಕ್ಕಳು ಮಲಗುವುದೇ ಇಲ್ಲ. ಹಲವು ಬಾರಿ ತಾಯಂದಿರು ತಮ್ಮ ಮಕ್ಕಳ ಮೇಲೆ "ನೀನು ಯಾಕೆ ಬೇಗ ಮಲಗುವುದಿಲ್ಲ" ಎಂದು ರೇಗುವುದನ್ನು ನಾವೆಲ್ಲಾ ಕೇಳಿರುತ್ತೇವೆ.ಆದರೆ ಕೆಲ ಮಕ್ಕಳು ಮಾತ್ರ ನಿದ್ರೆ ಮಾಡುವುದನ್ನು ಹೇಗಾದರೂ ಮಾಡಿ ತಪ್ಪಿಸಿಕೊಳ್ಳಬೇಕು ಎಂದು ನೋಡುತ್ತಿರುತ್ತಾರೆ. ಇಲ್ಲಿ ನಾವು ಒಂದು ವಿಷಯವನ್ನು ಗಮನಿಸಬೇಕಾಗುತ್ತದೆ, ಏನಂದರೆ ಮಕ್ಕಳಿಗೆ ಸಹ ನಿದ್ದೆ ಮಾಡಲು ಏನಾದರೂ ಸಮಸ್ಯೆಗಳಿರಬಹುದೇ ಎಂದು. ಹೌದು.. ನಿಜಕ್ಕೂ ಕೆಲ ಸಮಸ್ಯೆಗಳು ಮಕ್ಕಳಿಗೆ ಕಾಡುವುದರಿಂದ ನಿದ್ರೆ ಮಾಡುವುದನ್ನು ತಪ್ಪಿಸಿಕೊಳ್ಳಲು ನೋಡುತ್ತವೆ. ಯಾವ ಯಾವ ಕಾರಣಗಳಿಗೆ ನಿದ್ದೆಯನ್ನು ತಪ್ಪಿಸಿಕೊಳ್ಳಲು ನೋಡುತ್ತಾರೆ ಎಂದು ತಿಳಿಯೋಣ ಬನ್ನಿ.


ಅರ್ಧಬಂರ್ಧ ನಿದ್ದೆ, ನಿದ್ದೆ ಸರಿಯಾಗಿ ಆಗದಿರುವುದು, ನಿದ್ರೆಯಲ್ಲಿ ಒಂದು ಗಾಡತೆ ಇಲ್ಲದಿರುವುದು, ನಿದ್ರಾ ಹೀನತೆ ಎಲ್ಲಾ ಕಾರಣಗಳು ನಮ್ಮ ಆರೋಗ್ಯದ ಮತ್ತು ನಡುವಳಿಕೆಗಳ ಮೇಲೆ ಪರಿಣಾಮಗಳನ್ನು ಬೀರುತ್ತವೆ.ಆದ್ದರಿಂದ ನಿದ್ದೆಯು ಚೆನ್ನಾಗಿ ಮಾಡುವುದು ತುಂಬಾ ಅವಶ್ಯಕವಾಗಿದೆ.


ಎಷ್ಟು ಗಂಟೆಗಳ ನಿದ್ದೆ ದೇಹಕ್ಕೆ ಬೇಕು:


ನಿದ್ದೆಯು ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ತುಂಬಾ ಅವಶ್ಯಕವಾಗಿದ್ದು, ಬೇರೆ ಬೇರೆ ವಯಸ್ಸಿನ ಮಕ್ಕಳಿಗೆ ಬೇರೆ ಬೇರೆ ಅವಧಿಗಳ ನಿದ್ದೆ ಅವಶ್ಯಕವಾಗಿದೆ ಎಂದು ಸಂಶೋಧನೆಗಳು ತಿಳಿಸಿವೆ. 3 ರಿಂದ 5 ವರ್ಷದ ಮಕ್ಕಳಿಗೆ ಪ್ರತಿದಿನ ಸುಮಾರು 10 ರಿಂದ 13 ಗಂಟೆಗಳ ಕಾಲ ನಿದ್ದೆ ತುಂಬಾ ಅವಶ್ಯಕವಾಗಿದೆ. ಅದೇ 6 ರಿಂದ 12 ವರ್ಷದ ಮಕ್ಕಳಿಗೆ ಪ್ರತಿದಿನ ಸುಮಾರು 9 ರಿಂದ 11 ಗಂಟೆಗಳ ಕಾಲ ನಿದ್ದೆ ಅವಶ್ಯಕವಾಗಿದೆ. 18 ವರ್ಷ ಮೇಲ್ಪಟ್ಟವರು, ವಯಸ್ಕರು ಮತ್ತು ಹಿರಿಯರಿಗೆ ಸುಮಾರು 7 ರಿಂದ 9 ತಾಸುಗಳ ಕಾಲ ನಿದ್ದೆ ಅವಶ್ಯಕವಾಗಿ ಬೇಕೇ ಬೇಕು ಎಂದು ಸಂಶೋಧನೆಗಳು ಹೇಳುತ್ತವೆ.


ದೊಡ್ಡವರಲ್ಲಿ ನಿದ್ರಾ ಹೀನತೆ ಬಗ್ಗೆ ಕಾರಣಗಳನ್ನು ತುಂಬಾ ಸುಲಭವಾಗಿ ತಿಳಿದುಕೊಳ್ಳಬಹುದು, ಆದರೆ ಮಕ್ಕಳಲ್ಲಿ ನಿದ್ರಾ ಹೀನತೆ ಬಂದರೆ ಅದಕ್ಕೆ ಕಾರಣಗಳನ್ನು ಹುಡುಕುವುದು ತುಂಬಾ ಕಷ್ಟದ ಕೆಲಸವೇ ಸರಿ. ಅವುಗಳಿಗೆ ಎಷ್ಟು ನಿದ್ರೆ ಬೇಕು ಅಂತ ತಿಳಿದಿರುವುದಿಲ್ಲ ಮತ್ತು ಅವು ತಮ್ಮ ತಂದೆ ತಾಯಿಯರ ನಿದ್ರೆ ಅವಧಿಯನ್ನು ಅನುಸರಿಸುತ್ತವೆ, ಹೀಗಾಗಿ ನಿದ್ರೆ ಮಕ್ಕಳಿಗೆ ಕಡಿಮೆ ಬೀಳುವಂತಹ ಸಾಧ್ಯತೆಗಳು ತುಂಬಾ ಇರುತ್ತವೆ.ಮಕ್ಕಳಲ್ಲಿ ಸಾಮಾನ್ಯವಾಗಿ ನಿದ್ರಾ ಹೀನತೆಯು ಶಾಲೆಯಲ್ಲಿ ಉತ್ತಮವಾಗಿ ಅಭ್ಯಾಸವನ್ನು ಮಾಡದಿರುವುದು, ಅತೀ ಕಡಿಮೆ ಆಟವಾಡುವುದು, ಅತಿಯಾಗಿ ಆಟವಾಡಿದಾಗ ಕಾಲು ನೋವಿನಿಂದ ಸಹ ಕೆಲ ಮಕ್ಕಳು ನಿದ್ರೆ ಬಾರದೆ ಹಾಸಿಗೆಯಲ್ಲಿ ಚಡಪಡಿಸುವುದನ್ನು ನಾವು ನೋಡಿರುತ್ತೇವೆ.


ಅದೇ ನಿದ್ರಾ ಹೀನತೆಯು ವಯಸ್ಕರಲ್ಲಿ ಆದರೆ ವಯಸ್ಕರಿಗೆ ನೆನಪಿನ ಶಕ್ತಿ ಕುಂದುವುದು, ಆಯಾಸ ಆಗುವುದು ಮತ್ತು ಇನ್ನಿತರೆ ಕಾರಣಗಳಿಂದ ತಿಳಿದುಬಿಡುತ್ತದೆ. ಆದರೆ ಮಕ್ಕಳಲ್ಲಿರುವ ನಿದ್ರಾ ಹೀನತೆಗೆ ಸಮಸ್ಯೆಗಳನ್ನು ತಿಳಿದುಕೊಳ್ಳುವುದು ತುಂಬಾ ಕಷ್ಟ.


ಒಂಟಿಯಾಗಿ ಬಿಟ್ಟು ಹೋಗುತ್ತಾರೆ ಎನ್ನುವ ಭಯ:


ಅನೇಕ ಮಕ್ಕಳಲ್ಲಿ ತಮ್ಮನ್ನು ಬಿಟ್ಟು ಒಂಟಿಯಾಗಿ ಮಲಗುವ ಕೊನೆಯಲ್ಲಿ ಪಾಲಕರು ಹೊರಗಡೆ ಹೋಗಿ ಟಿವಿ ನೋಡುತ್ತಾರೆ ಎನ್ನುವ ಭಯವು ಚಿಕ್ಕ ಮಕ್ಕಳಲ್ಲಿ ಮನೆ ಮಾಡಿರುತ್ತದೆ. ಹಾಗಾಗಿ ಮಕ್ಕಳು ನಿದ್ರೆಗೆ ಹೋಗುವುದನ್ನು ಮುಂದಕ್ಕೆ ದೂಡುತ್ತವೆ, ನಿದ್ರೆಯ ಮಧ್ಯೆ ಎದ್ದು ಅಳುತ್ತವೆ, ಕೆಲ ಮಕ್ಕಳು ತುಂಬಾ ಬೇಗನೆ ಏಳುತ್ತವೆ. ಇದರಿಂದ ಮಕ್ಕಳಲ್ಲಿ ನಿದ್ರಾ ಹೀನತೆ ಉಂಟಾಗುತ್ತದೆ. ಪಾಲಕರು ತಮ್ಮ ಮಕ್ಕಳಿಗೆ ನಿದ್ರೆಯು ಎಷ್ಟು ಅವಶ್ಯಕವಾಗಿದೆ ಎಂದು ತಿಳಿಸುವುದು ಅತಿ ಮುಖ್ಯವಾಗಿದೆ.


ಈ ಸಮಸ್ಯೆಯು ಹೆಚ್ಚಾಗಿ ಮನೆಯಲ್ಲಿ ಪಾಲಕರು ರಾತ್ರಿ ಬೇಗ ಮಲಗದೆ ಟಿವಿ ನೋಡುತ್ತಾ ಕುಳಿತುಕೊಳ್ಳುವುದರಿಂದ ಮಕ್ಕಳು ಸಹ ತಡವಾಗಿ ನಿದ್ರೆ ಮಾಡಿ ಮತ್ತೆ ಬೆಳಗ್ಗೆ ತಂದೆ ತಾಯಂದಿರ ಜೊತೆಗೆ ಏಳುತ್ತವೆ. ಹೀಗಾಗಿ ಪಾಲಕರಾದವರು ಒಂದು ಸಮಯವನ್ನು ನಿರ್ಧರಿಸಿಕೊಂಡು ನಿದ್ರೆ ಮಾಡುವುದರಿಂದ ಮಕ್ಕಳು ಸಹ ಈ ಸಮಸ್ಯೆಯಿಂದ ಬಳಲುವುದನ್ನು ತಪ್ಪಿಸಬಹುದಾಗಿದೆ.


ನಿರ್ದಿಷ್ಟವಾದ ಸಮಯಕ್ಕೆ ನಿದ್ರೆ ಹೋಗುವ ಅಭ್ಯಾಸ ರೂಡಿಸಿ:


ನಿರ್ದಿಷ್ಟವಾದಂತಹ ಸಮಯಕ್ಕೆ ಪ್ರತಿದಿನ ನಿದ್ರೆ ಹೋಗುವುದು ಪಾಲಕರಿಗೆ ಮತ್ತು ಮಕ್ಕಳಿಗೆ ನಿದ್ರಾಹೀನತೆಯಿಂದ ದೂರವಿಟ್ಟು ಆರೋಗ್ಯದಿಂದಿರಲು ಸಹಾಯ ಮಾಡುತ್ತದೆ. ನಿದ್ರೆಗೆ ಜಾರುವ ಮುಂಚೆ ಅತಿಯಾಗಿ ಟಿವಿ ನೋಡುವುದು, ವಿಡಿಯೋ ಗೇಮ್ಗಳನ್ನು ಆಡುವುದು, ಮೊಬೈಲ್ ನೋಡುವುದು, ಸಾಮಾಜಿಕ ಮಾಧ್ಯಮಗಳಲ್ಲಿ ಕಣ್ಣಾಡಿಸುವುದು ಇವೆಲ್ಲವೂ ನಿಮ್ಮ ನಿದ್ರೆಯನ್ನು ಹಾಳು ಮಾಡುವ ಸಾಧ್ಯತೆಗಳು ಜಾಸ್ತಿ ಇರುತ್ತವೆ. ಆದ್ದರಿಂದ ತಮ್ಮ ಮಕ್ಕಳೊಡನೆ ಮಲಗುವ ಸಮಯವನ್ನು ನಿರ್ಧರಿಸಿಕೊಂಡು ಬೇಗ ಮಲಗುವುದು ಎಲ್ಲರಿಗು ಒಳ್ಳೆಯದು. ಕೋಣೆಯಲ್ಲಿ ಒಂದು ಪುಟ್ಟ ಲೈಟ್ ಇದ್ದರೇ ಒಳ್ಳೆಯದು ಮಕ್ಕಳಿಗೆ ಕತ್ತಲು ಎಂದರೆ ತುಂಬಾ ಭಯವಾಗುತ್ತದೆ.


ತುಂಬಾ ಗಂಭೀರವಾದಂತಹ ನಿದ್ರಾಹೀನತೆಯ ಕಾರಣಗಳು:


ಕೆಲವರ ನಿದ್ರಾ ಹೀನತೆಗೆ ಕಾರಣ ಅವರ ನಿದ್ರೆಯ ನಡುವಳಿಕೆಯಲ್ಲಿ ಆಗುವ ಬದಲಾವಣೆಗಳಿಂದ, ಮತ್ತೆ ಕೆಲವರಲ್ಲಿ ತುಂಬಾ ಗಂಭೀರವಾದಂತಹ ಸಮಸ್ಯೆಗಳು ಇರಬಹುದು. ಅದರಲ್ಲಿ ಬಹುಮುಖ್ಯವಾದದ್ದು ಎಂದರೆ "ಪ್ಯಾರಾಸೊಮನಿಯಾ" ಇದು ಒತ್ತಡದ ಕಾರಣದಿಂದ, ನಿದ್ರಾ ಹೀನತೆಯಿಂದ ಮತ್ತು ಕೆಲವೊಮ್ಮೆ ವಂಶವಾಹಿ ಸಹ ಆಗಿರುತ್ತದೆ. ಇದು ನಿದ್ರೆಯಲ್ಲಿ ಮಾತನಾಡುವುದು, ನಿದ್ರೆಯಲ್ಲಿ ನಡೆದಾಡುವುದು, ನಿದ್ರೆಯಲ್ಲಿ ಎದ್ದೇಳುವುದು ಮತ್ತು ನಿದ್ರೆಯಲ್ಲಿ ಕನಸಿನಿಂದ ಅಳುವುದು ಎಲ್ಲವನ್ನು ಒಳಗೊಂಡಿರುತ್ತದೆ.


First published: