Cardiac Arrest: ಮುಂಜಾನೆಯೇ ಹೆಚ್ಚಾಗಿ ಹಾರ್ಟ್​ ಅಟಾಕ್ ಆಗುವ ಸಾಧ್ಯತೆ ಹೆಚ್ಚು, ವೈದ್ಯರು ಇದರ ಬಗ್ಗೆ ಹೇಳಿದ್ದು ಹೀಗೆ

Causes Cardiac Arrests: ಇತ್ತೀಚಿನ ದಿನಗಳಲ್ಲಿ ರೋಗ ಬಂದು ಸಾಯುವವರಿಗಿಂತ ಹೃದಯಾಪಘಾತದಿಂದ ಸಾಯುವವರೇ ಹೆಚ್ಚು. ಅಯ್ಯೋ, ನಿನ್ನೆ ಅಷ್ಟೇ ಚೆನ್ನಾಗಿ ನಗಾಡಿಕೊಂಡು ಇದ್ರು, ಇದ್ದಕ್ಕಿದ್ದಂತೆ ಹೋಗ್​ಬಿಟ್ರಾ? ಎಂಬ ಪ್ರಶ್ನೆಯು ಸಾಮಾನ್ಯವಾಗಿದೆ ಎಂಬುದು ಬೇಸರದ ಸಂಗತಿ. ಅದರಲ್ಲೂ ಹೆಚ್ಚಾಗಿ ಬೆಳಗ್ಗಿನ ಸಮಯದಲ್ಲಿ ಸಂಭವಿಸುತ್ತದೆ. ಅದರ ಕಾರಣವನ್ನು ಇಂದು ತಿಳಿಯೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಾರ್ಡಿಯಾಕ್ ಅರೆಸ್ಟ್ (Cardiac Arrest) ನಿಂದ ಇಂತಹವರು ತೀರಿಕೊಂಡರು ಅಂತ ಸಾಮಾನ್ಯವಾಗಿ ಇತ್ತೀಚೆಗೆ ನಾವು ತುಂಬಾನೇ ಕೇಳುತ್ತಿದ್ದೇವೆ, ಅದರಲ್ಲೂ ಬೆಳಿಗ್ಗೆ ಹೊತ್ತು ಜಿಮ್​ಗೆ  ಹೋದಾಗ ಅಲ್ಲಿ ಎದೆ ನೋವು ಕಾಣಿಸಿಕೊಂಡು ಕಾರ್ಡಿಯಾಕ್ ಅರೆಸ್ಟ್ ಆಗಿ ಸಾವನ್ನಪ್ಪಿದ್ದಾರೆ ಅಂತ ಸುದ್ದಿ ಸ್ವಲ್ಪ ಜಾಸ್ತಿನೆ ಕೇಳುತ್ತಿದ್ದೇವೆ.ಕಾರ್ಡಿಯಾಕ್ ಅರೆಸ್ಟ್ ಅಥವಾ ಕನ್ನಡದಲ್ಲಿ ಹೃದಯ ಸ್ತಂಭನಗಳು ಹೆಚ್ಚು ಸಾಮಾನ್ಯವಾಗಿವೆ ಮತ್ತು ಇದು ಯಾವ ಸಮಯದಲ್ಲಿ, ಯಾರಿಗೆ ಬರುತ್ತದೆ ಅಂತ ಊಹೆ ಮಾಡುವುದಕ್ಕೂ ಸಾಧ್ಯವಿಲ್ಲ. ಆದಾಗ್ಯೂ, ಹೆಚ್ಚಿನ ಜನರು ದಿನದ ಮುಂಜಾನೆಯ ಸಮಯದಲ್ಲಿ ಇದನ್ನು ಹೆಚ್ಚಾಗಿ ಅನುಭವಿಸುತ್ತಿದ್ದಾರೆ ಎಂದು ತಜ್ಞರು (Doctor) ಹೇಳುತ್ತಾರೆ. ನಸುಕಿನಲ್ಲಿ ಹೃದಯ ಸ್ತಂಭನಗಳು ಮತ್ತು ಹೃದಯಾಘಾತಗಳ ಅಸಮಾನ-ಹೆಚ್ಚಿನ ದರದ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದಾರೆ ನೋಡಿ.

ಹೃದಯ ಸ್ತಂಭನ ಮತ್ತು ಹೃದಯಾಘಾತ ಮುಂಜಾನೆ ಏಕೆ ಜಾಸ್ತಿ ಸಂಭವಿಸುತ್ತವೆ?

"ಅನೇಕ ಹೃದಯ ರೋಗಿಗಳಿಗೆ ಬೆಳಗ್ಗೆ ಹೃದಯ ಸ್ತಂಭನ ಅಥವಾ ಹೃದಯಾಘಾತ ಬರುವುದನ್ನು ನಾವು ಆಗಾಗ್ಗೆ ನೋಡುತ್ತೇವೆ" ಎಂದು ಗುರುಗ್ರಾಮದ ಫೋರ್ಟಿಸ್ ಮೆಮೊರಿಯಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ಅಧ್ಯಕ್ಷ ಡಾ.ಟಿ.ಎಸ್.ಕ್ಲೇರ್ ಹೇಳಿದ್ದಾರೆ.

ತಜ್ಞರ ಪ್ರಕಾರ, ಇದು ದೇಹದಲ್ಲಿ ಹಾರ್ಮೋನುಗಳ ಬಿಡುಗಡೆಯಿಂದಾಗಿ ಉಂಟಾಗುತ್ತದೆ. "ಮುಂಜಾನೆ 4 ಗಂಟೆ ಸುಮಾರಿಗೆ, ನಮ್ಮ ದೇಹವು ಸೈಟೋಕಿನಿನ್ ಬಿಡುಗಡೆ ಮಾಡುತ್ತದೆ, ಇದು ಅರಿಥ್ಮಿಯಾಗೆ ಕಾರಣವಾಗಬಹುದು ಮತ್ತು ಹಠಾತ್ ಹೃದಯ ಸ್ತಂಭನದ ಸಾಧ್ಯತೆಯನ್ನು ಹೆಚ್ಚಿಸುತ್ತದೆ" ಎಂದು ಅವರು ಹೇಳಿದರು.

ಹೃದಯ ಸ್ತಂಭನ ಮತ್ತು ಹೃದಯಾಘಾತಕ್ಕೆ ಮುಖ್ಯ ಕಾರಣ ಇದು

ಪ್ರತಿಷ್ಠಿತ ಆಸ್ಪತ್ರೆ  ನಡೆಸಿದ ಅಧ್ಯಯನದ ಪ್ರಕಾರ, ಇದು ನಮ್ಮ ದೇಹದಲ್ಲಿ ಆಗುವ ಬದಲಾವಣೆಯ ಬಗೆಗೆ ತಿಳಿಸಿದ್ದಾರೆ.

ಇದನ್ನು ಒಪ್ಪಿದ ಫರಿದಾಬಾದ್ ನ ಮೆಟ್ರೋ ಹಾರ್ಟ್ ಆಸ್ಪತ್ರೆಯ ಕಾರ್ಡಿಯಾಕ್ ಎಲೆಕ್ಟ್ರೋಫಿಸಿಯಾಲಜಿಯ ಮುಖ್ಯಸ್ಥರಾದ ಹಿರಿಯ ಕನ್ಸಲ್ಟೆಂಟ್ ಹೃದ್ರೋಗ ತಜ್ಞ ಡಾ. ನೀತಿ ಚಡ್ಡಾ ನೇಗಿ ಅವರು “ನಮ್ಮ ದೇಹವು ನಮ್ಮ ದೈನಂದಿನ ಅಗತ್ಯಗಳಿಗೆ ಸ್ಪಂದಿಸಲು ಸಹಾಯ ಮಾಡುವ ಶಕ್ತಿ ಹೊಂದಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಮಳೆ ತಂದ ಅವಾಂತರವನ್ನು ನೀವೊಮ್ಮೆ ನೋಡಿ, ಆ ಡ್ರೈವರ್ ಗತಿ ಏನಾಯ್ತೋ?

ಹಗಲಿನಲ್ಲಿ, ನಾವು ಹೆಚ್ಚು ಜಾಗರೂಕರಾಗಿರುತ್ತೇವೆ ಮತ್ತು ದಕ್ಷರಾಗಿರುತ್ತೇವೆ, ಆದರೆ ರಾತ್ರಿಯಲ್ಲಿ, ನಾವು ನಮ್ಮ ಎಲ್ಲಾ ಶಕ್ತಿಯನ್ನು ಕಳೆದುಕೊಂಡಿರುತ್ತೇವೆ ಮತ್ತು ಹೆಚ್ಚು ಅಗತ್ಯವಿರುವ ನಿದ್ರೆಗೆ ಸಿದ್ಧರಾಗಿರುತ್ತೇವೆ. ಈ ಜೈವಿಕ ಗಡಿಯಾರದಿಂದಾಗಿ, ಮುಂಜಾನೆಯ ಸಮಯದಲ್ಲಿ, ಬೆಳಗ್ಗೆ ಇದಕ್ಕೆ ಪ್ರತಿಕ್ರಿಯೆಯಾಗಿ ರಕ್ತದೊತ್ತಡ ಮತ್ತು ಹೃದಯ ಬಡಿತದಲ್ಲಿ ಹೆಚ್ಚಳವನ್ನು ನಾವು ನೋಡುತ್ತೇವೆ" ಎಂದು ಅವರು ಹೇಳಿದರು.

ಸಿರ್ಕಾಡಿಯನ್ ಚಟುವಟಿಕೆಗಳಿಗೆ ಪ್ರತಿಕ್ರಿಯೆಯಾಗಿ ಹೃದಯ ಬಡಿತ ಮತ್ತು ರಕ್ತದೊತ್ತಡದಲ್ಲಿನ ಈ ಹೆಚ್ಚಳವು ಬೆಳಿಗ್ಗೆ ಹೃದಯ ರಕ್ತನಾಳದ ವ್ಯವಸ್ಥೆಯನ್ನು ಹೆಚ್ಚು ಕೆರಳಿಸುತ್ತದೆ.

"ಸಿರ್ಕಾಡಿಯನ್ ಚಟುವಟಿಕೆಗಳು ಮುಂಜಾನೆಯ ಮಾರಣಾಂತಿಕ ಅಥವಾ ಪಾರ್ಶ್ವವಾಯು ದಾಳಿಗಳಿಗೆ ಕಾರಣವಾಗಬಹುದು" ಎಂದು ಒಪ್ಪಿಕೊಂಡ ಧರ್ಮಶಿಲಾ ನಾರಾಯಣ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯ ಹೃದ್ರೋಗಶಾಸ್ತ್ರದ ನಿರ್ದೇಶಕ ಮತ್ತು ಹಿರಿಯ ಸಲಹೆಗಾರರಾದ ಡಾ.ಆನಂದ್ ಕುಮಾರ್ ಪಾಂಡೆ, ರಕ್ತದ ಪ್ಲೇಟ್ಲೆಟ್ ಗಳು ಅಂಟಿಕೊಂಡಾಗ ಮತ್ತು ಅಡ್ರಿನಲ್ ಗ್ರಂಥಿಗಳಿಂದ ಉತ್ಪತ್ತಿಯಾಗುವ ಅಡ್ರಿನಾಲಿನ್ ಹೆಚ್ಚಾದಾಗ ಹೆಚ್ಚಿನ ಹೃದಯ ಸ್ತಂಭನಗಳು ಬೆಳಿಗ್ಗೆ 4 ರಿಂದ 10 ರವರೆಗೆ ಸಂಭವಿಸುತ್ತವೆ ಎಂದು ಹೇಳಿದರು.

"ಸಿರ್ಕಾಡಿಯನ್ ವ್ಯವಸ್ಥೆಯು ಬೆಳಿಗ್ಗೆ ಹೆಚ್ಚಿನ ಪಿಎಐ-1 ಕೋಶಗಳನ್ನು ಬಿಡುಗಡೆ ಮಾಡುತ್ತದೆ, ರಕ್ತದಲ್ಲಿ ಪಿಎಐ-1 ಜೀವಕೋಶಗಳ ಸಂಖ್ಯೆ ಹೆಚ್ಚಾದಷ್ಟೂ, ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಸಹ ಹೆಚ್ಚಾಗಿ ಹೃದಯಾಘಾತ ಅಥವಾ ಹೃದಯ ಸ್ತಂಭನಕ್ಕೆ ಕಾರಣವಾಗುತ್ತದೆ" ಎಂದು ಅವರು ವಿವರಿಸಿದರು.

ಮುಂಜಾನೆಯ ಸಮಯ ಮತ್ತು ರಾತ್ರಿ ನಿದ್ರೆಯ ಸಮಯ ತುಂಬಾನೇ ಮುಖ್ಯ

"ಮುಂಜಾನೆಯ ಸಮಯ ಮತ್ತು ನಿದ್ರೆಯ ಕೊನೆಯ ಹಂತವು ಹೃದಯಾಘಾತ ಮತ್ತು ಹಠಾತ್ ಹೃದಯ ಸಂಬಂಧಿ ಸಾವು, ಮಹಾಪಧಮನಿಯ ಬಿರುಕು ಅಥವಾ ರಕ್ತನಾಳದ ಮುರಿತ, ಶ್ವಾಸಕೋಶದ ಎಂಬಾಲಿಸಮ್ ಮತ್ತು ಪಾರ್ಶ್ವವಾಯು ಸೇರಿದಂತೆ ಎಲ್ಲಾ ರೀತಿಯ ಹೃದಯ ರಕ್ತನಾಳದ ತುರ್ತು ಸ್ಥಿತಿಗಳಿಗೆ ಅಪಾಯಕಾರಿ ಸಮಯವಾಗಿದೆ" ಎಂದು ಲುಧಿಯಾನದ ಸಿಬಿಯಾ ಮೆಡಿಕಲ್ ಸೆಂಟರ್ ನ ಸ್ಥಾಪಕ ಮತ್ತು ಹೃದ್ರೋಗ ತಜ್ಞ ಡಾ.ಎಸ್.ಎಸ್.ಸಿಬಿಯಾ ಹೇಳಿದ್ದಾರೆ.

ಲಂಡನ್ ನಲ್ಲಿ ನಡೆದ ಮತ್ತೊಂದು ಅಧ್ಯಯನ ಏನ್ ಹೇಳುತ್ತೆ?

ಲಂಡನ್ ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ನಡೆದ ಮತ್ತೊಂದು ಅಧ್ಯಯನವು, ಹೃದಯ ರಕ್ತನಾಳದ ಕಾಯಿಲೆಯ ರೋಗಿಗಳು ಬೆಳಿಗ್ಗೆ ತಮ್ಮ ರಕ್ತದಲ್ಲಿ ರಕ್ಷಣಾತ್ಮಕ ಅಣುಗಳ ಕಡಿಮೆ ಮಟ್ಟವನ್ನು ಹೊಂದಿರುತ್ತಾರೆ ಎಂದು ಕಂಡು ಹಿಡಿದಿದೆ.

ಇದು ಆ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು. ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ನಿಯಮಿತ ಧೂಮಪಾನವು ಕೆಲವು ಅಪಾಯ ವರ್ಧಕಗಳಾಗಿವೆ, ಇದು ರೋಗಿಗಳು ಅಂತಹ ಪ್ರಸಂಗವನ್ನು ಅನುಭವಿಸುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಹೇಳಿದ್ದಾರೆ.

ಹೃದಯ ಸ್ತಂಭನ ಮತ್ತು ಹೃದಯಾಘಾತಕ್ಕೆ ಈ ಅಂಶಗಳು ಕಾರಣವಾಗಬಹುದು

"ಆದಾಗ್ಯೂ, ಪ್ರಸ್ತುತ ಪೀಳಿಗೆಯು ಮೊದಲಿಗಿಂತ ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನಗಳ ಹೆಚ್ಚಿನ ಅಪಾಯಗಳನ್ನು ನೋಡುತ್ತಿದೆ.

ಎಡ ಭಾಗದಲ್ಲಿ ನೋವು ಕಾಣಿಸಿಕೊಳ್ಳತ್ತದೆ.


ಹಠಾತ್ ಹೃದಯ ಸ್ತಂಭನಗಳಲ್ಲಿ ಇಂತಹ ಹೆಚ್ಚಳಕ್ಕೆ ಕಾರಣವಾಗುವ ಅಂಶಗಳು ಮತ್ತು ಹಠಾತ್ ಸಾವಿನ ಹೆಚ್ಚಳಕ್ಕೆ ಕಾರಣವಾಗುವ ಅಂಶಗಳು ಅನಿಯಮಿತ ಜೀವನಶೈಲಿ, ತೊಂದರೆಗೊಳಗಾದ ನಿದ್ರೆ, ಹೆಚ್ಚಿದ ಮಾನಸಿಕ ಮತ್ತು ಸಾಮಾಜಿಕ ಒತ್ತಡ, ಮದ್ಯ ಸೇವನೆ, ಅನಾರೋಗ್ಯಕರ ಆಹಾರ ಪದ್ಧತಿಗಳು ಮತ್ತು ವಾಯುಮಾಲಿನ್ಯ" ಎಂದು ಡಾ.ನೇಗಿ ಹೇಳಿದರು.

ಇದನ್ನೂ ಓದಿ: ಮಲಗಿರುವ ಸಿಂಹಿಣಿಯನ್ನು ಕೆಣಕಿದ ಸಿಂಹ; ಬಳಿಕ ಏನಾಯ್ತು? ಈ ವಿಡಿಯೋ ನೋಡಿ

ಉತ್ತಮ ಹೃದಯದ ಆರೋಗ್ಯಕ್ಕಾಗಿ, ಹೃದ್ರೋಗ ತಜ್ಞರು ಕನಿಷ್ಠ 7 ರಿಂದ 8 ಗಂಟೆಗಳ ಉತ್ತಮ ನಿದ್ರೆ, ತುಲನಾತ್ಮಕವಾಗಿ ಒತ್ತಡ ರಹಿತ ಜೀವನವನ್ನು ನಡೆಸುವುದು, ನಿಧಾನಗತಿಯ ಬೆಳಗಿನ ದಿನಚರಿ ಪಾಲಿಸಲು ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಲು ಶಿಫಾರಸು ಮಾಡಿದರು.
First published: