• Home
  • »
  • News
  • »
  • lifestyle
  • »
  • Cholesterol Problem: ದೇಹಕ್ಕೆ ಕೊಲೆಸ್ಟ್ರಾಲ್ ಏಕೆ ಬೇಕು? ಇದರ ಲಕ್ಷಣಗಳು ಯಾವವು?

Cholesterol Problem: ದೇಹಕ್ಕೆ ಕೊಲೆಸ್ಟ್ರಾಲ್ ಏಕೆ ಬೇಕು? ಇದರ ಲಕ್ಷಣಗಳು ಯಾವವು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೊಲೆಸ್ಟ್ರಾಲ್ ಎಂಬುದು ಒಂದು ರೀತಿಯ ಕೊಬ್ಬು ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸಂಗತಿ ಆಗಿದೆ. ಇದು ನಿಮ್ಮ ದೇಹವು ಜೀವಕೋಶ ಪೊರೆ ಲೈಂಗಿಕ ಹಾರ್ಮೋನು ಮತ್ತು ವಿಟಮಿನ್ ಡಿ ಸೇರಿದಂತೆ ಅನೇಕ ಹಾರ್ಮೋನುಗಳನ್ನು ಉಂಟು ಮಾಡಲು ಸಹಾಯ ಮಾಡುತ್ತದೆ.

  • Share this:

    ದೇಹಕ್ಕೆ (Body) ಕೊಲೆಸ್ಟ್ರಾಲ್‌ (Cholesterol) ಬೇಡಿಕೆ ಪೂರೈಸುವ ಕೆಲಸ (Work) ಮಾಡುವ ಅಂದ್ರೆ ಅದು ಯಕೃತ್ತು. ಯಕೃತ್ತು (Liver) ದೇಹದ ಪ್ರಮುಖ ಅಂಗಗಳಲ್ಲಿ (Part) ಒಂದಾಗಿದೆ. ನೀವು ಸೇವಿಸುವ ಆಹಾರದಿಂದಲೂ (Food) ದೇಹ ಕೊಲೆಸ್ಟ್ರಾಲ್ ನ್ನು (Cholesterol) ಪಡೆಯುತ್ತದೆ. ಕೊಲೆಸ್ಟ್ರಾಲ್ ಎಂಬುದು ಒಂದು ರೀತಿಯ ಕೊಬ್ಬು ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಸಂಗತಿ ಆಗಿದೆ. ಇದು ನಿಮ್ಮ ದೇಹವು ಜೀವಕೋಶ ಪೊರೆ, ಲೈಂಗಿಕ ಹಾರ್ಮೋನು ಮತ್ತು ವಿಟಮಿನ್ ಡಿ ಸೇರಿದಂತೆ ಅನೇಕ ಹಾರ್ಮೋನುಗಳನ್ನು ಉಂಟು ಮಾಡಲು ಸಹಾಯ ಮಾಡುತ್ತದೆ. ಎಚ್ ಡಿಎಲ್ ಮತ್ತು ಎಲ್ ಡಿಎಲ್ ಎರಡು ರೀತಿಯ ಕೊಲೆಸ್ಟ್ರಾಲ್ ದೇಹದಲ್ಲಿ ಇರುವುದು ಎಲ್ಲರಿಗೂ ಗೊತ್ತಿದೆ.


    ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ದೇಹದಲ್ಲಿವೆ


    ಇವುಗಳನ್ನು ಒಳ್ಳೆಯ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯುತ್ತಾರೆ. ಇವೆರಡೂ ಲಿಪೊಪ್ರೋಟೀನ್‌ ಆಗಿವೆ. ಇದು ರಕ್ತಪ್ರವಾಹದ ಮೂಲಕ ನಿಮ್ಮ ದೇಹದಾದ್ಯಂತ ಕೊಲೆಸ್ಟ್ರಾಲ್ ನ್ನು ಸಾಗಿಸಲು ಕಾರಣ ಆಗಿದೆ. ಅದರ ಮಟ್ಟವನ್ನು ರಕ್ತ ಪರೀಕ್ಷೆ ಮತ್ತು ಸ್ಕ್ರೀನಿಂಗ್ ಮೂಲಕ ಕಂಡು ಹಿಡಿಯಲಾಗುತ್ತದೆ.


    ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಕಡಿಮೆ ಆದರೆ ರಕ್ತನಾಳಗಳ ಅಡಚಣೆ ಅಪಾಯ ಹೆಚ್ಚಾಗುತ್ತದೆ. ಕಡಿಮೆ ಎಚ್ ಡಿಎಲ್ ಮಟ್ಟವು ಹೃದಯ ಸಂಬಂಧಿ ಕಾಯಿಲೆ ಅಪಾಯ ಹೆಚ್ಚಿಸುತ್ತದೆ. ಆದರೆ ಕಡಿಮೆ ಮಟ್ಟದ ಕೆಟ್ಟ ಎಲ್ ಡಿಎಲ್ ಕೊಲೆಸ್ಟ್ರಾಲ್ ದೇಹದಲ್ಲಿ ರೋಗ ಅಥವಾ ಆನುವಂಶಿಕ ಅಸ್ವಸ್ಥತೆ ಸೂಚಿಸುತ್ತದೆ.


    ಇದನ್ನೂ ಓದಿ: ರಕ್ತದ ಕೊರತೆ ನಿವಾರಿಸುತ್ತೆ ಪಾಲಕ್ ಸೂಪ್, ಕಣ್ಣುಗಳ ಆರೋಗ್ಯಕ್ಕೂ ಇದರಿಂದ ಲಾಭ


    ದೇಹಕ್ಕೆ ಕೊಳಕು ಕೊಲೆಸ್ಟ್ರಾಲ್ ಏಕೆ ಬೇಕು?


    ವೆಬ್ಮೆಟ್ಎಂಡಿ ಪ್ರಕಾರ, ನಿಮ್ಮ ದೇಹವು ಹೆಚ್ಚಿನ ಎಲ್ ಡಿಎಲ್ ಕೊಲೆಸ್ಟ್ರಾಲ್ ನ್ನು ಹೊಂದಿದೆ. ಇದು ನಿಮ್ಮ ರಕ್ತನಾಳಗಳ ಗೋಡೆಗಳಲ್ಲಿ ಸಂಗ್ರಹವಾಗುತ್ತವೆ. ಜೊತೆಗೆ ಹೃದಯಾಘಾತ ಅಥವಾ ಪಾರ್ಶ್ವವಾಯು ಉಂಟಾಗಲು ಕಾರಣವಾಗುತ್ತದೆ.


    ಇದನ್ನು ಕೆಟ್ಟ ಕೊಲೆಸ್ಟ್ರಾಲ್ ಎಂದು ಕರೆಯುತ್ತಾರೆ. ಆದರೆ ಈ ಕೊಲೆಸ್ಟ್ರಾಲ್ ಸಂಪೂರ್ಣವಾಗಿ ಅಪಾಯಕಾರಿ ಅಲ್ಲ ಎಂಬುದನ್ನು ನೆನಪಿಡಿ. ನಿಮ್ಮ ದೇಹಕ್ಕೆ ಅದರ ನರಗಳನ್ನು ರಕ್ಷಿಸಲು ಮತ್ತು ಆರೋಗ್ಯಕರ ಕೋಶಗಳು ಮತ್ತು ಹಾರ್ಮೋನು ತಯಾರಿಸಲು ಇದು ಅಗತ್ಯವಿದೆ.


    ದೇಹದಲ್ಲಿ ಎಷ್ಟು ಕೊಲೆಸ್ಟ್ರಾಲ್ ಇರಬೇಕು?


    ಕೊಲೆಸ್ಟ್ರಾಲ್ ಮಟ್ಟವು ಸುಮಾರು 150 ಆಗಿರಬೇಕು. ಇದರಲ್ಲಿ ನಿಮ್ಮ ಎಲ್ ಡಿಎಲ್ ಮಟ್ಟವು ಸುಮಾರು 100 mg/dL ಆಗಿರಬೇಕು. ಈ ಶ್ರೇಣಿಯು ನಿಮ್ಮ ಹೃದಯ ಕಾಯಿಲೆಯ ಅಪಾಯ ಕಡಿಮೆ ಮಾಡುತ್ತದೆ. ಅದೇ ವೇಳೆ ಒಟ್ಟು ಕೊಲೆಸ್ಟ್ರಾಲ್ 120 mg/dL ಗಿಂತ ಕಡಿಮೆ ಅಥವಾ ಎಲ್ ಡಿಎಲ್ ಮಟ್ಟವು 50 mg/dL ಗಿಂತ ಕಡಿಮೆ ಇರುತ್ತದೆ. ಇದನ್ನು ಹೈಪೋಲಿಪಿಡೆಮಿಯಾ ಎಂದು ಕರೆಯುತ್ತಾರೆ.


    ಕಡಿಮೆ ಮಟ್ಟದ ಎಲ್ಡಿಎಲ್ ಕೊಲೆಸ್ಟ್ರಾಲ್ ಗೆ ಕಾರಣಗಳು


    ಅಪೌಷ್ಟಿಕತೆ, ಹೈಪರ್ ಥೈರಾಯ್ಡಿಸಮ್, ದೀರ್ಘಕಾಲದ ಸೋಂಕು, ಉದಾಹರಣೆಗೆ ಹೆಪಟೈಟಿಸ್ ಸಿ, ದೀರ್ಘಕಾಲದ ಉರಿಯೂತ, ರಕ್ತದ ಕ್ಯಾನ್ಸರ್, ಆನುವಂಶಿಕ ಅಸ್ವಸ್ಥತೆ, ಯಕೃತ್ತಿನ ರೋಗ ಕಾರಣಗಳಾಗಿವೆ.


    ಕಡಿಮೆ ಎಲ್ ಡಿಎಲ್ ಕೊಲೆಸ್ಟ್ರಾಲ್ ಲಕ್ಷಣಗಳು


    ಕೊಬ್ಬಿನ ಮಲ, ಖಿನ್ನತೆ, ದೃಷ್ಟಿ ಬದಲಾವಣೆ, ಹಾರ್ಮೋನುಗಳ ಅಸಮತೋಲನ, ತೂಕ ಇಳಿಕೆ, ಮಕ್ಕಳಲ್ಲಿ ಅರಿವಿನ ದುರ್ಬಲತೆ ಉಂಟಾಗುತ್ತದೆ.


    ಇದನ್ನೂ ಓದಿ: ಕಪ್ಪು ತುಟಿಗೆ ನೈಸರ್ಗಿಕವಾಗಿ ಪಿಂಕ್ ಬಣ್ಣ ಬರಬೇಕಾ? ಹಾಗಿದ್ರೆ ಈ ಮನೆಮದ್ದನ್ನು ಟ್ರೈ ಮಾಡಿ!


    ಕಡಿಮೆ ಎಲ್‌ ಡಿಎಲ್ ಕೊಲೆಸ್ಟ್ರಾಲ್‌ ಅಪಾಯ


    ಮೇಯೊ ಕ್ಲಿನಿಕ್ ಪ್ರಕಾರ, ಕಡಿಮೆ ಎಲ್ ಡಿಎಲ್L ಮಟ್ಟಗಳಿಂದ ಅಪಾಯಗಳು ಅಪರೂಪ. ಆದರೆ ಕಡಿಮೆ ಮಟ್ಟದ ಎಲ್‌ ಡಿಎಲ್ ಕೊಲೆಸ್ಟ್ರಾಲ್ ಕ್ಯಾನ್ಸರ್, ರಕ್ತಸ್ರಾವದ ಪಾರ್ಶ್ವವಾಯು, ಖಿನ್ನತೆ, ಆತಂಕ ಮತ್ತು ಗರ್ಭಾವಸ್ಥೆಯಲ್ಲಿ ಅಕಾಲಿಕ ಹೆರಿಗೆ ಅಥವಾ ತೂಕ ನಷ್ಟಕ್ಕೆ ಕಾರಣ ಆಗುತ್ತದೆ/.

    Published by:renukadariyannavar
    First published: