Ganesh Chaturthi 2022: ಹಬ್ಬಕ್ಕೆ ಮನೆಗೆ ತರುವ ಗಣಪನ ಸೊಂಡಿಲು ಎಡಕ್ಕೇ ಯಾಕೆ ತಿರುಗಿರುತ್ತೆ? ಇದರ ಹಿಂದಿದೆ ಸಖತ್ ಸ್ಟೋರಿ!

Balamuri Ganesha Idols: ಈ ನಂಬಿಕೆಯನ್ನು ಉಲ್ಲಂಘಿಸಿ ಗಣೇಶ ಮೂರ್ತಿ ತಯಾರಿಸುವ ಧೈರ್ಯವನ್ನು ತಯಾರಕರು ಮಾಡುವುದಿಲ್ಲ. ಭಕ್ತಿಯಿಂದ ಗಣೇಶ ಮೂರ್ತಿ ತಯಾರಿಸುವ ಕಲಾವಿದರು ಈ ನಂಬಿಕೆಯನ್ನಿಟ್ಟುಕೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇಂದು ಗಣೇಶ ಹಬ್ಬ (Ganesha Festival). ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಭ್ರಮ ಸಡಗರದಿಂದ ಈ ಹಬ್ಬವನ್ನು ಆಚರಿಸಲಾಗುತ್ತಿದೆ (Celebration). ಗಣೇಶನ ಮೂರ್ತಿಗಳನ್ನು ಸ್ಥಾಪಿಸಿ, ಪೂಜೆ ಮಾಡಲಾಗುತ್ತದೆ. ಆದರೆ ಸಾಮಾನ್ಯವಾಗಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವಾಗ ಗಣೇಶನ (Ganesha) ಸೊಂಡಿಲು ಯಾವ ಕಡೆ ಇದೆ ಎಂಬುದನ್ನು ಯಾರೂ ನೋಡುವುದಿಲ್ಲ. ಬಹುತೇಕ ಗಣೇಶ ಮೂರ್ತಿಗಳ ಸೊಂಡಿಲು ಎಡಗಡೆಗೆ ಬಾಗಿರುತ್ತದೆ. ಅದನ್ನು ಎಡಮುರಿ (Edamuri) ಎಂದು, ಬಲಗಡೆ ಸೊಂಡಿಲು ಬಾಗಿದ್ದರೆ ಬಲಮುರಿ (Balamuri) ಎಂದು, ನೇರವಾಗಿ ಸೊಂಡಿಲು ಬಾಗಿದ್ದರೆ ಅದನ್ನು ಉರ್ದ್ವಮುರಿ ಎಂದು ಕರೆಯುತ್ತಾರೆ. ಅಪರೂಪದಲ್ಲಿ ಈ ಬಲಮುರಿ ಹಾಗು ಉರ್ದ್ವಮುರಿ ಗಣೇಶ ಮೂರ್ತಿಗಳಿವೆ. ಬಹುತೇಕ ಗಣೇಶನ ಮೂರ್ತಿಯು ಎಡಮೂರಿಯಾಗಿರುತ್ತದೆ. ಹಾಗಾದ್ರೆ ಹಬ್ಬದ ದಿನ ಮನೆಗೆ ಯಾಕೆ ಬಲಮುರಿ ಗಣಪನನ್ನ ತರುವುದಿಲ್ಲ ಎಂಬುದು ಗೊತ್ತಾ? ಇಲ್ಲಿದೆ ನೋಡಿ ಅದರ ವಿಶೇಷ ಕಾರಣ.

ಬಲಮುರಿಗಿದೆ ಅಪ್ರತಿಮ ಶಕ್ತಿ

ಬಲಮುರಿ ಎಂದರೆ ದಕ್ಷಿಣಾಭಿಮುಖ, ಈ ದಕ್ಷಿಣ ದಿಕ್ಕು ಯಮನ ದಿಕ್ಕು ಎನ್ನಲಾಗುತ್ತಿದೆ. ಬಲಮುರಿಗೆ ಗಣೇಶನ ಸೊಂಡಿಲು ಇದ್ದರೆ ಯಮನನ್ನು ಎದುರಿಸುವ ಶಕ್ತಿ ಸಿಗುತ್ತದೆ. ಅಲ್ಲದೇ, ಯಾವುದೇ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬಲ್ಲರು ಎಂದರ್ಥ. ಆದರೆ ಬಲಮುರಿಯ ಗಣೇಶ ಮೂರ್ತಿ ಪೂಜೆಯನ್ನು ಮಾಡುವುದು ಸುಲಭವಲ್ಲ. ಬಹಳ ನಾಜೂಕಾಗಿ ಮಾಡಬೇಕಾಗುತ್ತದೆ. ಪೂಜೆಯ ಸಂದರ್ಭದಲ್ಲಿ ಏನಾದರೂ ಅಪ್ಪಿ ತಪ್ಪಿ ಮಿಸ್​ ಆಯಿತು ಅಥವಾ ಯಾವುದೇ ತಪ್ಪಾಯಿತು ಎಂದರೆ ಕೇಡು ನಿಶ್ಚಿತ. ಅದಕ್ಕಾಗಿ ಬಲಮುರಿ ಗಣೇಶನನ್ನು ಜಾಗೃತ ಗಣೇಶ ಎಂದು ಸಹ ಕರೆಯುತ್ತಾರೆ. ಹಾಗಾಗಿಯೇ ಬಲಮುರಿ ಗಣೇಶ ಪೂಜಿಸುವವರು ಸಹ ಜಾಗೃತರಾಗಿರಬೇಕೆಂಬ ನಂಬಿಕೆ ಇದೆ. ಇದು ಸನಾತನ ಗ್ರಂಥಗಳಲ್ಲಿ ಉಲ್ಲೇಖವಾಗಿದೆ.

ಇನ್ನು, ಎಡಮುರಿ ಗಣೇಶ ವಾಮಮುಖಿ. ವಾಮಮುಖಿ ಎಂದರೆ ಉತ್ತರ ದಿಕ್ಕು, ಈ ಉತ್ತರ ದಿಕ್ಕು  ಶಾಂತವಾದ ದಿಕ್ಕು ಎನ್ನುತ್ತಾರೆ. ಇದೇ ಕಾರಣಕ್ಕೆ ಗಣೇಶನ ಸೊಂಡಿಲು ಎಡಮುರಿಯಾಗಿರುತ್ತದೆ ಎನ್ನಲಾಗುತ್ತಿದೆ. ಇದೇ ಕಾರಣ ಸಾಮಾನ್ಯವಾಗಿ ಎಲ್ಲಿ ನೋಡಿದರೂ ಎಡಮುರಿ ಇರುವ ಗಣೇಶನ ಮೂರ್ತಿಗಳನ್ನು ನಾವು ನೋಡುತ್ತೇವೆ. ಬಲಗಡೆ ಸೊಂಡಿಲು ಇರುವ ಗಣೇಶ ಮೂರ್ತಿಗಳನ್ನು ಕಾಣುವುದು ವಿರಳಾತಿವಿರಳ. ನೂರಕ್ಕೆ ಎಲ್ಲೋ ಒಂದೆರಡು ಬಲಮುರಿ ಗಣೇಶ ಮೂರ್ತಿಗಳನ್ನು ಕಾಣಬಹುದು. ಮತ್ತೊಂದು ಮುಖ್ಯವಾದ ವಿಚಾರ ಎಂದರೆ ಗಣೇಶ ಚಂದ್ರನಿಗೆ ದಂತವನ್ನು ಮುರಿದು ಬಿಸಾಡಿದಾಗ ಬಹಳ ಸಿಟ್ಟಿನಿಂದ ಇರುತ್ತಾನೆ. ಆ ಸಮಯದಲ್ಲಿ ಆತನ ಸೊಂಡಿಲು ಬಲಕ್ಕೆ ಇತ್ತು. ಹಾಗಾಗಿ ಬಲಮುರಿ ಗಣೇಶನಿಗೆ ಕೋಪ ಹೆಚ್ಚಿರುತ್ತದೆ.

ಇದನ್ನೂ ಓದಿ: ಹಬ್ಬಕ್ಕಾಗಿ ಮನೆಯಲ್ಲೇ ಹಾಕಿಕೊಳ್ಳಬಹುದಾದ ಸಿಂಪಲ್​​​ ಮೆಹಂದಿ ಡಿಸೈನ್​ಗಳು ಇಲ್ಲಿವೆ ನೋಡಿ

ಕೋಪ ಶಾಂತ ಮಾಡಿಸಲು ಹರಸಾಹಸ ಮಾಡಬೇಕು

ಗಣೇಶನನ್ನ ಶಾಂತಗೊಳಿಸುವುದು ಬಹಳ ಕಷ್ಟವಾಗುತ್ತದೆ. ಪೂಜೆ ವಿಧಿ ವಿಧಾನ ಹಾಗೂ ನೈವೇದ್ಯ ಯಾವುದೇ ವಿಚಾರದಲ್ಲಿ ಸಹ ತಪ್ಪು ಆಗಬಾರದು. ಸಣ್ಣ ತಪ್ಪು ಸಹ ದೊಡ್ಡ ಸಮಸ್ಯೆಗೆ ಕಾರಣವಾಗುತ್ತದೆ.  ಬಲಮುರಿ ಗಣಪನಿಗೆ ಪೂಜೆ ಮಾಡುವಾಗ ಹಲವಾರು ನಿಯಮಗಳನ್ನು ಫಾಲೋ ಮಾಡಬೇಕಾಗುತ್ತದೆ. ಶಾಸ್ತ್ರೋಕ್ತವಾಗಿ ಪೂಜೆ ಮಾಡಬೇಕಾಗುತ್ತದೆ. ಅಲ್ಲದೇ,ನೈವೇದ್ಯದ ವಿಚಾರದಲ್ಲಿ ಸಹ ಯಾವುದೇ ಮಿಸ್ಟೇಕ್ ಆಗಬಾರದು. ಬಲಮುರಿ ಗಣಪನನ್ನ ಶಾಂತ ಮಾಡಲು ಬಹಳ ಕಷ್ಟಪಡಬೇಕಾಗುತ್ತದೆ. ನಮ್ಮ ಕಣ್ತಪ್ಪಿನಿಂದ ಆಗುವ ಸಣ್ಣ ತಪ್ಪು ಸಹ ನಮ್ಮ ಜೀವನದಲ್ಲಿ ಸಮಸ್ಯೆಗೆ ಕಾರಣವಾಗುತ್ತದೆ. ಗಣೇಶನಿಗೆ ಆ ತಪ್ಪಿನಿಂದ ಸಿಟ್ಟು ಹೆಚ್ಚಾಗುತ್ತದೆ. ಅದು ನಮಗೆ ಕೆಡುಕಾಗುತ್ತದೆ.

ಇದನ್ನೂ ಓದಿ: ಗಣೇಶನಿಗೆ ಪ್ರಿಯವಾದ ಆಹಾರಗಳು ಯಾವುದು? ಮೋದಕ ಪ್ರಿಯನ 'ತಿಂಡಿ' ಹಿಂದಿನ ಕಥೆ!

ಈ ಬಲಮುರಿ ಗಣೇಶನ ಕೈನಲ್ಲಿ ದಂತ ಇರುತ್ತದೆ ಎಂಬ ನಂಬಿಕೆ ಸಹ ಇದೆ.  ಮತ್ತೊಂದು ವಿಚಾರ ಎಂದರೆ, ಗಣಪತಿ ಮೂರ್ತಿ ತಯಾರಕರು ಸಹ ಬಲಮುರಿ ಮೂರ್ತಿಯನ್ನು ತಯಾರಿಸುವುದಿಲ್ಲ. ನಂಬಿಕೆಯ ಪ್ರಕಾರ ಮೂರ್ತಿ ತಯಾರಿಕರಿಗೆ ಕೆಡುಕಾಗುತ್ತದೆ, ಆದರೆ ಅದನ್ನು ಇಟ್ಟು ಪೂಜೆ ಮಾಡುವವರಿಗೆ ಒಳ್ಳೆಯದಾಗುತ್ತದೆ. ಈ ನಂಬಿಕೆಯು ಹಿಂದಿನ ಕಾಲದಿಂದಲೂ ಬಂದಿದೆ, ಈಗಲೂ ಮುಂದುವರಿದಿದೆ. ಈ ನಂಬಿಕೆಯನ್ನು ಉಲ್ಲಂಘಿಸಿ ಗಣೇಶ ಮೂರ್ತಿ ತಯಾರಿಸುವ ಧೈರ್ಯವನ್ನು ತಯಾರಕರು ಮಾಡುವುದಿಲ್ಲ. ಭಕ್ತಿಯಿಂದ ಗಣೇಶ ಮೂರ್ತಿ ತಯಾರಿಸುವ ಕಲಾವಿದರು ಈ ನಂಬಿಕೆಯನ್ನಿಟ್ಟುಕೊಂಡಿದ್ದಾರೆ.
Published by:Sandhya M
First published: