• Home
 • »
 • News
 • »
 • lifestyle
 • »
 • Health Tips: ರಾತ್ರಿ ಹೊತ್ತಲ್ಲಿ ಮೊಸರು ಕುಡಿತೀರಾ? ಎಚ್ಚರ ತಪ್ಪಿದ್ರೆ ಜೀವಕ್ಕೆ ಎರವಾಗಬಹುದು

Health Tips: ರಾತ್ರಿ ಹೊತ್ತಲ್ಲಿ ಮೊಸರು ಕುಡಿತೀರಾ? ಎಚ್ಚರ ತಪ್ಪಿದ್ರೆ ಜೀವಕ್ಕೆ ಎರವಾಗಬಹುದು

ಮೊಸರು

ಮೊಸರು

ಆಯುರ್ವೇದ ಈ ಮೊಸರನ್ನು ಸೇವಿಸುವುದರ ಬಗ್ಗೆ ಏನು ಹೇಳುತ್ತದೆ ನೋಡಿ. ಮೊಸರು ದೇಹಕ್ಕೆ ಎಷ್ಟು ಒಳ್ಳೆಯದು ಮತ್ತು ನೀವು ಅದನ್ನು ಯಾವಾಗ ಮತ್ತು ಹೇಗೆ ತಿನ್ನಬೇಕು ಎಂಬುದರ ಬಗ್ಗೆಯೂ ಇದು ಎಚ್ಚರಿಸುತ್ತದೆ.

 • Share this:

ಈಗ ಬೇಸಿಗೆ (Summer) ಶುರುವಾಗಿದೆ. ಬಹುತೇಕರ ಮನೆಯಲ್ಲಿ ಮಧ್ಯಾಹ್ನ ಮೊಸರು (Curd), ಮಜ್ಜಿಗೆ (Butter Milk) ಊಟದ ಜೊತೆಗೆ ಇರಿಸಿಕೊಳ್ಳುವುದನ್ನು ನಾವು ನೋಡುತ್ತೇವೆ. ಈ ಋತುಮಾನದ ಬದಲಾವಣೆಗೆ ಅನುಗುಣವಾಗಿ ನಮ್ಮ ಆಹಾರವನ್ನು ಬದಲಾಯಿಸಿ ಕೊಳ್ಳುತ್ತಾ ಮತ್ತು ನಮ್ಮ ದೇಹಕ್ಕೆ ಅವು ಸರಿ ಹೊಂದಿಸಿ ಕೊಳ್ಳುತ್ತಾ ಹೋಗುವುದರ ಕಡೆಗೆ ಗಮನ ಹರಿಸುವುದು ಮುಖ್ಯ. ಅದಕ್ಕಾಗಿ, ನೀವು ಯಾವುದೋ ದೂರದ ಕಿರಾಣಿ ಅಂಗಡಿಗೆ ಹೋಗಿ ಆಹಾರ ಪದಾರ್ಥಗಳನ್ನು ಖರೀದಿಸಿ ತರಬೇಕು ಎಂದೇನಲ್ಲ, ಬದಲಾಗುತ್ತಿರುವ ತಾಪಮಾನಕ್ಕೆ ಹೊಂದಿಕೊಳ್ಳುವಂತೆ ಮತ್ತು ದೇಹಕ್ಕೆ ಸಹಾಯ ಮಾಡುವಲ್ಲಿ ಈ ಮೊಸರು ತುಂಬಾನೇ ಪ್ರಮುಖವಾದ ಪಾತ್ರ ವಹಿಸುತ್ತದೆ.


ಬೇಸಿಗೆಯಲ್ಲಿ ಈ ಮೊಸರು ಹೆಚ್ಚಿನ ಭಾರತೀಯ ಮನೆಗಳಲ್ಲಿ (Indian Houses) ಪ್ರಮುಖವಾದ ಆಹಾರ ಪದಾರ್ಥವಾಗಿದೆ. ಇದು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಮತ್ತು ಚರ್ಮ ಮತ್ತು ಕೂದಲಿನ ಮೇಲೆ ಅನ್ವಯಕ್ಕೂ ಉತ್ತಮವಾಗಿದೆ.


ಆರೋಗ್ಯಕ್ಕೆ ಬೆಸ್ಟ್ ಮೊಸರು, ಆದರೆ ರಾತ್ರಿ ಒಳ್ಳೇದಲ್ವಾ?


ಮೊಸರು ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ, ರೋಗ ನಿರೋಧಕಶಕ್ತಿಯನ್ನು ಬಲಪಡಿಸುತ್ತದೆ, ಮೂಳೆಗಳನ್ನು ಬಲಪಡಿಸುತ್ತದೆ, ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ನೀವು ತೂಕ ಇಳಿಸುವ (Weight loss) ಪ್ರಯತ್ನದಲ್ಲಿದ್ದರೆ ಸಹ ಇದು ತುಂಬಾ ಸಹಾಯಕವಾಗಲಿದೆ.


ಆಯುರ್ವೇದ ಹೇಳೋದೇನು?


ಆದರೆ ಆಯುರ್ವೇದ ಈ ಮೊಸರನ್ನು ಸೇವಿಸುವುದರ ಬಗ್ಗೆ ಏನು ಹೇಳುತ್ತದೆ ನೋಡಿ. ಮೊಸರು ದೇಹಕ್ಕೆ ಎಷ್ಟು ಒಳ್ಳೆಯದು ಮತ್ತು ನೀವು ಅದನ್ನು ಯಾವಾಗ ಮತ್ತು ಹೇಗೆ ತಿನ್ನಬೇಕು ಎಂಬುದರ ಬಗ್ಗೆಯೂ ಇದು ಎಚ್ಚರಿಸುತ್ತದೆ. ಆಯುರ್ವೇದ ತಜ್ಞ ಡಾ. ದೀಕ್ಷಿತ್ ಭಾವ್ಸರ್ ಸಾವಲಿಯಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಮೊಸರನ್ನು ಹೇಗೆ ಸೇವಿಸಬೇಕು ಎಂಬುದರ ಬಗ್ಗೆ ವಿವರಿಸುವ ಒಂದು ಪೋಸ್ಟ್ ಅನ್ನು ಹಂಚಿ ಕೊಂಡಿದ್ದಾರೆ.


ಜೀರ್ಣವಾಗೋದು ತುಂಬಾ ನಿಧಾನ


"ಮೊಸರು ರುಚಿಯಲ್ಲಿ ಹುಳಿಯಾಗಿದ್ದು, ಜೀರ್ಣಿಸಿಕೊಳ್ಳಲು ಭಾರವಾಗಿರುತ್ತದೆ, ಎಂದರೆ ಜೀರ್ಣಕ್ರಿಯೆಗೆ ಒಳಗಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಅವರು ಶೀರ್ಷಿಕೆಯಲ್ಲಿ ವಿವರಿಸಿದ್ದಾರೆ. ಮೊಸರು ಕೊಬ್ಬನ್ನು ಹೆಚ್ಚಿಸುತ್ತದೆ, ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಕಫಾ ಮತ್ತು ಪಿತ್ತವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ ಎಂದು ಡಾ. ಸಾವಲಿಯಾ ಹೇಳಿದ್ದಾರೆ.


ಇದನ್ನೂ ಓದಿ: Sour Curd: ಹುಳಿ ಮೊಸರನ್ನು ಎಸೆಯುವ ಅಭ್ಯಾಸ ಇದ್ರೆ ಈಗಲೇ ನಿಲ್ಲಿಸಿ, ಈ ಆಹಾರ ಪದಾರ್ಥಗಳನ್ನು ತಯಾರಿಸಿ..


ಅವರು "ಮೊಸರಿನ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು" ಹಂಚಿಕೊಂಡಿದ್ದಾರೆ, ಹಾಗೆಯೇ ಪ್ರತಿದಿನ ಮತ್ತು ಮಧ್ಯಾಹ್ನದ ಹೊತ್ತಿನಲ್ಲಿ ಮೊಸರು ಸೇವಿಸುವುದರ ವಿರುದ್ಧ ಎಚ್ಚರಿಕೆ ಸಹ ನೀಡಿದ್ದಾರೆ.


 • ಮೊಸರನ್ನು ಬಿಸಿ ಮಾಡಬಾರದು. ಇದು ಬಿಸಿಯಾಗುವುದರಿಂದ ತನ್ನ ಗುಣಗಳನ್ನು ಕಳೆದುಕೊಳ್ಳುತ್ತದೆ. • ದೇಹದಲ್ಲಿ ಬೊಜ್ಜು, ಕಫಾ ಅಂತಹ ಅಸ್ವಸ್ಥತೆಗಳು, ರಕ್ತಸ್ರಾವದ ಅಸ್ವಸ್ಥತೆಗಳು ಮತ್ತು ಉರಿಯೂತದ ಪರಿಸ್ಥಿತಿಗಳನ್ನು ಹೊಂದಿರುವ ಜನರು ಮೊಸರನ್ನು ತಿನ್ನುವುದು ಒಳ್ಳೆಯದಲ್ಲ. • ರಾತ್ರಿ ಸಮಯದಲ್ಲಿ ಮೊಸರನ್ನು ಎಂದಿಗೂ ನಿಮ್ಮ ಊಟದಲ್ಲಿ ಸೇರಿಸಿಕೊಳ್ಳಬಾರದು. • ಮೊಸರನ್ನು ದಿನನಿತ್ಯ ಸೇವಿಸಬಾರದು. ನಿಯಮಿತವಾಗಿ ಸೇವಿಸಬಹುದಾದ ಏಕೈಕ ವಸ್ತುವೆಂದರೆ ಚೂರ್ಣ ಮಜ್ಜಿಗೆ, ಅದು ಬಂಡೆ ಉಪ್ಪು, ಕರಿ ಮೆಣಸು ಮತ್ತು ಜೀರಿಗೆಯಂತಹ ಮಸಾಲೆಗಳನ್ನು ಸೇರಿಸಿ ಸೇವಿಸಿರಿ. • ಮೊಸರು ಚಾನಲ್ ಬ್ಲಾಕರ್ ಹೊಂದಿಕೆಯಾಗದ ಆಹಾರವಾಗಿರುವುದರಿಂದ ನೀವು ಮೊಸರನ್ನು ಹಣ್ಣುಗಳೊಂದಿಗೆ ಬೆರೆಸಿಕೊಂಡು ಸೇವಿಸಬೇಡಿ. ದೀರ್ಘಕಾಲದ ಮೊಸರಿನ ಸೇವನೆಯು ಚಯಾಪಚಯ ಸಮಸ್ಯೆಗಳು ಮತ್ತು ಅಲರ್ಜಿಗಳನ್ನು ಪ್ರಚೋದಿಸುತ್ತದೆ. • ಮೊಸರನ್ನು ಯಾವುದೇ ಮಾಂಸದ ಜೊತೆಗೆ ಸೇರಿಸಿಕೊಂಡು ತಿನ್ನಬಾರದು. ಎಂದರೆ ಈ ಕೋಳಿ, ಕುರಿ ಅಥವಾ ಮೀನಿನಂತಹ ಪ್ರಾಣಿ ಮಾಂಸಗಳೊಂದಿಗೆ ಬೇಯಿಸಿದ ಮೊಸರಿನ ಯಾವುದೇ ಸಂಯೋಜನೆಯು ದೇಹದಲ್ಲಿ ವಿಷವನ್ನು ಉತ್ಪಾದಿಸುತ್ತದೆ.


“ನೀವು ಮೊಸರನ್ನು ಪ್ರತಿದಿನ ಸೇವಿಸಲು ಬಯಸಿದರೇ, ಸಾಂದರ್ಭಿಕವಾಗಿ ಮಧ್ಯಾಹ್ನದ ಸಮಯದಲ್ಲಿ ಮತ್ತು ಅದು ಮಿತವಾಗಿ ಸೇವಿಸಿರಿ" ಎಂದು ಜನರಿಗೆ ಆಯುರ್ವೇದ ತಜ್ಞ ಡಾ. ದೀಕ್ಷಿತ್ ಭಾವ್ಸರ್ ಅವರು ಕಿವಿ ಮಾತನ್ನು ಹೇಳಿದ್ದಾರೆ.


ಇದನ್ನೂ ಓದಿ: Buttermilk Rice vs Curd Rice: ಮೊಸರನ್ನ ಅಥವಾ ಮಜ್ಜಿಗೆ ಅನ್ನ ಎರಡರಲ್ಲಿ ಯಾವುದು ಉತ್ತಮ? ಯಾಕೆ? ಕಾರಣ ಇಲ್ಲಿದೆ

Published by:Divya D
First published: