Diabetes: ಈರುಳ್ಳಿ ಸೇವಿಸಿದ್ರೆ ಡಯಾಬಿಟಿಸ್​ ಬರುತ್ತಾ? ಏನ್ ಹೇಳುತ್ತೆ ಹೊಸ ವರದಿ?

ಅನೇಕ ಆರೋಗ್ಯ (Health) ಅಂಶಗಳಿಂದ ಸಮೃದ್ಧವಾಗಿರುವ ಈರುಳ್ಳಿ ಜೀರ್ಣಾಂಗದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನೂ ರಕ್ಷಿಸುತ್ತದೆ. ನಿತ್ಯದ ಅಡುಗೆಯಲ್ಲಿ (Cooking) ಬಳಸಲಾಗುವ ಈರುಳ್ಳಿಯು ರುಚಿಯನ್ನು ಹೆಚ್ಚಿಸುವ ತರಕಾರಿ ಮಾತ್ರವಾಗಿರದೆ ಸೂಪರ್ ಫುಡ್ (Super Food) ಕೂಡ ಹೌದು ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ.

ಈರುಳ್ಳಿ

ಈರುಳ್ಳಿ

  • Share this:
ನಮ್ಮ ದಿನನಿತ್ಯದ ಅಡುಗೆ ಪದಾರ್ಥಗಳಲ್ಲಿ ಬಳಸಲಾಗುವ ಈರುಳ್ಳಿ (Onion) ಯಾವುದೇ ಖಾದ್ಯದ ರುಚಿಯನ್ನು ಹೆಚ್ಚಿಸುತ್ತದೆ. ಅನೇಕ ಆರೋಗ್ಯ (Health) ಅಂಶಗಳಿಂದ ಸಮೃದ್ಧವಾಗಿರುವ ಈರುಳ್ಳಿ ಜೀರ್ಣಾಂಗದ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನೂ ರಕ್ಷಿಸುತ್ತದೆ. ನಿತ್ಯದ ಅಡುಗೆಯಲ್ಲಿ (Cooking) ಬಳಸಲಾಗುವ ಈರುಳ್ಳಿಯು ರುಚಿಯನ್ನು ಹೆಚ್ಚಿಸುವ ತರಕಾರಿ ಮಾತ್ರವಾಗಿರದೆ ಸೂಪರ್ ಫುಡ್ (Super Food) ಕೂಡ ಹೌದು ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು 50% ದಷ್ಟು ಕಡಿಮೆ ಮಾಡುವ ಗುಣವನ್ನು ಹೊಂದಿರುವ ಈರುಳ್ಳಿಯು ಟೈಪ್ 2 ಮಧುಮೇಹಿಗಳ (Diabetes) ಆಹಾರದಲ್ಲಿ ಮರೆಯದೇ ಸೇರಿಸಬಹುದಾದ ತರಕಾರಿಯಾಗಿದೆ.

ಟೈಪ್ 2 ಡಯಾಬಿಟೀಸ್‌ಗೆ ಈರುಳ್ಳಿ ಅತ್ಯುತ್ತಮವೇ?
ಸುದ್ದಿಮೂಲಗಳ ಪ್ರಕಾರ ಅಧ್ಯಯನದ ಆವಿಷ್ಕಾರಗಳನ್ನು ಸ್ಯಾನ್ ಡಿಯಾಗೋದಲ್ಲಿ ನಡೆದ ಎಂಡೋಕ್ರೈನ್ ಸೊಸೈಟಿಯ 97 ನೇ ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು ಹಾಗೂ ಈರುಳ್ಳಿಯ ಸಾರವನ್ನು ಮಧುಮೇಹ ವಿರೋಧಿ ಔಷಧಿಯಾದ ಮೆಟ್‌ಫಾರ್ಮಿನ್‌ನೊಂದಿಗೆ ನೀಡಿದಾಗ ರಕ್ತದ ಅಧಿಕ ಸಕ್ಕರೆ ಮಟ್ಟ ಹಾಗೂ ಒಟ್ಟು ಕೊಲೆಸ್ಟ್ರಾಲ್ ಮಟ್ಟಗಳನ್ನು ಕಡಿಮೆ ಮಾಡುತ್ತದೆ ಎಂಬುದಾಗಿ ಬಹಿರಂಗಗೊಂಡಿದೆ.

ನೈಜೀರಿಯಾದ ಅಬ್ರಕಾದಲ್ಲಿರುವ ಡೆಲ್ಟಾ ಸ್ಟೇಟ್ ಯೂನಿವರ್ಸಿಟಿಯ ಪ್ರಮುಖ ಅಧ್ಯಯನದ ಲೇಖಕ ಆಂಥೋನಿ ಓಜಿಹ್ ತಿಳಿಸಿರುವಂತೆ ಈರುಳ್ಳಿ ಅಗ್ಗವಾಗಿ ದೊರೆಯುವ ತರಕಾರಿಯಾಗಿದ್ದು ಇದನ್ನು ಪೌಷ್ಟಿಕಾಂಶ ಪೂರಕವಾಗಿ ಕೂಡ ಬಳಸಬಹುದಾಗಿದೆ. ಮಧುಮೇಹಿಗಳಿಗೆ ಚಿಕಿತ್ಸೆ ನೀಡಲು ಸಮರ್ಥವಾಗಿರುವ ತರಕಾರಿ ಇದಾಗಿದೆ ಎಂದಿದ್ದಾರೆ.

ಇಲಿಗಳ ಮೇಲೆ ನಡೆಸಿದ ಸಂಶೋಧನೆ
ಇಲಿಗಳ ಮೇಲೆ ಅಧ್ಯಯನಕಾರರು ಸಂಶೋಧನೆಯನ್ನು ಕೈಗೊಂಡಿದ್ದಾರೆ. ಔಷಧದ ಪರಿಣಾಮವನ್ನು ಹೆಚ್ಚಿಸುತ್ತದೆಯೇ ಎಂಬುದನ್ನು ನೋಡಲು ವೈದ್ಯಕೀಯವಾಗಿ ಮಧುಮೇಹ ಪ್ರೇರಿತ ಮೂರು ಇಲಿಗಳ ಗುಂಪುಗಳಿಗೆ ಈರುಳ್ಳಿ ಸಾರವನ್ನು ವಿವಿಧ ಪ್ರಮಾಣದಲ್ಲಿ ನೀಡಲಾಯಿತು.

ಇದನ್ನೂ ಓದಿ:  Multivitamin Deficiency: ಅತಿಯಾಗಿ ಆಯಾಸವಾಗುತ್ತಾ? ದೇಹಕ್ಕೆ ಮಲ್ಟಿವಿಟಮಿನ್ ಅಗತ್ಯವಾಗಿ ಬೇಕು

ಮನುಷ್ಯರ ಮೇಲೆ ಪ್ರಯೋಗ ನಡೆಸದೇ ತೀರ್ಮಾನ ಕೈಗೊಳ್ಳುವಂತಿಲ್ಲ
ಅಧ್ಯಯನವನ್ನು ಪ್ರಶ್ನಿಸಿರುವ ಫೋರ್ಟಿಸ್ ಸಿಡಿಒಸಿ ಮಧುಮೇಹ ಕೇಂದ್ರದ ಅಧ್ಯಕ್ಷ ಡಾ ಅನೂಪ್ ಮಿಶ್ರಾ, ಇದೇ ಸಿದ್ಧಾಂತವನ್ನು ಅನುಸರಿಸುತ್ತಿದ್ದರೆ ಇಂದು ಭಾರತ ಮಧುಮೇಹದ ಅತ್ಯಧಿಕ ಪ್ರಕರಣವನ್ನು ಹೊಂದಿರುತ್ತಿರಲಿಲ್ಲ. ಏಕೆಂದರೆ ನಾವು ಭಾರತೀಯರು ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿಯ ಸೇವನೆ ಮಾಡುತ್ತೇವೆ ಅಂತೆಯೇ ಅಡುಗೆ ಮನೆಯಲ್ಲಿ ಮುಖ್ಯವಾದ ತರಕಾರಿಯಾಗಿ ಈರುಳ್ಳಿಯನ್ನು ಪರಿಗಣಿಸುತ್ತಾರೆ.

ಹೆಚ್ಚಿನ ಫೈಬರ್‌ ಅಂಶವನ್ನು ಹೊಂದಿರುವ ಈರುಳ್ಳಿಯನ್ನು ಎಲ್ಲಾ ಪ್ರಮುಖ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಹಾಗಿದ್ದರೂ ಈರುಳ್ಳಿಯ ಸಾರವು ರಕ್ತದಲ್ಲಿನ ಗ್ಲುಕೋಸ್ ಕಡಿತಕ್ಕೆ ಕಾರಣವಾದ ಕಾರ್ಯವಿಧಾನ, ಚಯಾಪಚಯ ಕ್ರಿಯೆಯ ಮೇಲೆ ಅದರ ಪರಿಣಾಮವನ್ನು ನಿರ್ಧರಿಸಲು ಹಾಗೂ ಇತರ ಔಷಧಿಗಳಂತೆಯೇ ಇದು ಉತ್ತಮವಾಗಿದೆಯೇ ಎಂಬುದನ್ನು ನಿರ್ಧರಿಸಲು ಸಾಕಷ್ಟು ಪುರಾವೆಗಳ ಅಗತ್ಯವಿದೆ. ಕೂಡಲೇ ಒಂದು ತೀರ್ಮಾನಕ್ಕೆ ಬರುವುದು ಅಷ್ಟು ಸಮಂಜಸವಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:  Migraine: ಪದೇ ಪದೇ ಕಾಡೋ ಮೈಗ್ರೇನ್​ಗೆ ಈ ಮನೆಮದ್ದುಗಳನ್ನೊಮ್ಮೆ ಟ್ರೈ ಮಾಡಿ

ಇಲಿಗಳ ಮೇಲೆ ನಡೆಸಿರುವ ಆಸಕ್ತಿದಾಯಕ ಸಂಶೋಧನೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗುವುದಿಲ್ಲ ಅಂತೆಯೇ ಇದೇ ಸಂಶೋಧನೆಗಳನ್ನು ಮಾನವರಲ್ಲಿ ಕೂಡ ಪುನರಾವರ್ತಿಸಬೇಕು ಎಂದು ಅನೂಪ್ ಮಿಶ್ರಾ ತಿಳಿಸಿದ್ದಾರೆ. ಈರುಳ್ಳಿಯನ್ನೇ ಅತಿ ಹೆಚ್ಚಿನ ಖಾದ್ಯಗಳಲ್ಲಿ ಬಳಸುವ ಭಾರತೀಯ ವ್ಯಕ್ತಿಗಳ ಮೇಲೆ ಈ ಸಂಶೋಧನೆಯನ್ನು ಪ್ರತ್ಯೇಕವಾಗಿ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿದೆ
ಮಧುಮೇಹಿ ಇಲಿಗಳಲ್ಲಿ ದೇಹದ ತೂಕದ ಪ್ರತಿ ಕೆಜಿಗೆ ಅನುಗುಣವಾಗಿ 400 mg ಹಾಗೂ 600 mg ಯಂತೆ ಈರುಳ್ಳಿ ಸಾರವನ್ನು ನೀಡಿದಾಗ, ಕನಿಷ್ಟ ಮಟ್ಟದೊಂದಿಗೆ ಇಲಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವು 50% ಹಾಗೂ 30% ಕ್ಕೆ ಸಮರ್ಥನೀಯವಾಗಿ ಇಳಿಕೆಯಾಗಿರುವುದು ಅಧ್ಯಯನಗಳಿಂದ ತಿಳಿದು ಬಂದಿದೆ. 400 mg ಹಾಗೂ 600 mg ಯ ಅತಿ ಹೆಚ್ಚಿನ ಪರಿಣಾಮಗಳೊಂದಿಗೆ ಈರುಳ್ಳಿ ಸಾರವು ಮಧುಮೇಹಿ ಇಲಿಗಳಲ್ಲಿ ಒಟ್ಟು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿದೆ.
Published by:Ashwini Prabhu
First published: