ಜೀವನ (Life) ಅಂದ್ಮೇಲೆ ನೂರೆಂಟು ಕಷ್ಟ (Problems), ಸಂಕಷ್ಟಗಳು ಬರುತ್ತಲೇ ಇರುತ್ತವೆ. ಅದಕ್ಕೆಲ್ಲಾ ಚಿಂತೆ (Worry) ಮಾಡುತ್ತಾ ಕುಳಿತು ಆರೋಗ್ಯ (Health) ಹಾಳು ಮಾಡಿಕೊಳ್ಳಬಾರದು. ಕೆಲವರು ಚಿಂತೆ ಮಾಡಿ ಹಲವು ಕಾಯಿಲೆಗಳನ್ನು (Disease) ಆಹ್ವಾನಿಸಿಕೊಳ್ಳುತ್ತಾರೆ. ಚಿಂತೆ, ಕಣ್ಣೀರು, ಒತ್ತಡ ಇದೆಲ್ಲವೂ ಆರೋಗ್ಯ ಹಾಳು ಮಾಡುತ್ತದೆ. ಒಂದು ಸಂಕಷ್ಟದ ಬದಲು ಆಗ ಮತ್ತೊಂದು ಸಂಕಷ್ಟ ಫ್ರಿಯಾಗಿ ಸಿಗುತ್ತೆ. ಹಾಗಾಗಿ ಚಿಂತೆ ಮಾಡುತ್ತಾ ಕುಳಿತುಕೊಳ್ಳದೇ, ಜೀವನದಲ್ಲಿ ಬರುವ ಚಿಕ್ಕ ಹಾಗೂ ದೊಡ್ಡ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಹಿಮ್ಮೆಟ್ಟಿಸುತ್ತಾ, ಮುನ್ನಡೆಯಬೇಕು. ಯಾವುದಕ್ಕೂ, ಕುಗ್ಗದೇ, ಜಗ್ಗದೇ ನಡೆದಾಗ ಬದುಕು ಸುಂದರವಾಗಿ ಕಟ್ಟಿಕೊಳ್ಳಬಹುದು.
ಚಿಂತೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಳು
ಚಿಂತೆ ಚಿತೆಗೆ ಸಮಾನ ಅಂತಾರೆ. ಇದು ಜೀವನದಲ್ಲಿ ನಿಜವಾಗುತ್ತದೆ. ಯಾರು ಸಮಸ್ಯೆಗಳನ್ನು ಎದುರಿಸಲಾಗದೇ ದುಃಖಿತರಾಗುತ್ತಾರೋ, ಅವರು ಆರೋಗ್ಯ ಸಹ ಹಾಳು ಮಾಡಿಕೊಳ್ತಾರೆ. ಜೀವನದಲ್ಲಿ ಸಮಸ್ಯೆಗಳು ಮತ್ತು ಚಿಂತೆಗಳು ನಡೆಯುತ್ತಲೇ ಇರುತ್ತವೆ.
ಆದರೆ ಯಾವಾಗಲೂ ಚಿಂತೆ ಮಾಡುತ್ತಾ ಕೂರುವುದು ಆತಂಕ, ಅಸ್ವಸ್ಥತೆ ಮತ್ತು ಕೆಟ್ಟ ಮಾನಸಿಕ ಆರೋಗ್ಯದ ಸಂಕೇತವಾಗಿದೆ. ಈ ಅಸ್ವಸ್ಥತೆಯು ವ್ಯಕ್ತಿಯ ಜೀವನವನ್ನು ನರಕಯಾತನೆ ಪಡುವಂತೆ ಮಾಡುತ್ತದೆ. ವ್ಯಕ್ತಿಯು ಮಾನಸಿಕ ಆರೋಗ್ಯ ಹಾಳಾದ್ರೆ ರೋಗಿಯಂತಾಗುತ್ತಾನೆ. ಆಗ ದಿನ ನಿತ್ಯದ ಸಾಮಾನ್ಯ ಚಟುವಟಿಕೆಗಳನ್ನು ಸಹ ಮಾಡಿಕೊಳ್ಳಲಾಗದ ಸ್ಥಿತಿ ತಲುಪುತ್ತಾನೆ.
ಆಗ ಆತಂಕ ಅಂದ್ರೆ ಆ್ಯಂಕ್ಸಾಯ್ಟಿ ಅಟ್ಯಾಕ್ ಉಂಟಾಗುತ್ತದೆ. ರೋಗಿಯು ಹಲವು ಬಾರಿ ಈ ಆತಂಕ ಹಾಗೂ ಆ್ಯಂಕ್ಸಾಯ್ಟಿ ಅಟ್ಯಾಕ್ ಸಮಸ್ಯೆ ಎದುರಿಸುತ್ತಾನೆ. ಹಾಗಾದ್ರೆ ಈ ಆ್ಯಂಕ್ಸಾಯ್ಟಿ ಅಟ್ಯಾಕ್ ಗೆ ಕಾರಣಗಳು ಏನೆಂದು ನೋಡೋಣ.
ವೆಬ್ಮೆಡ್ ಹೇಳುವ ಪ್ರಕಾರ, ಆ್ಯಂಕ್ಸಾಯ್ಟಿ ಅಟ್ಯಾಕ್ ಆರೋಗ್ಯ ಸಮಸ್ಯೆಗೆ ಈ ರೋಗ ಲಕ್ಷಣಗಳನ್ನು ಗುರುತಿಸಬಹುದು. ಆತಂಕದ ದಾಳಿ ಅಥವಾ ಪ್ಯಾನಿಕ್ ಅಟ್ಯಾಕ್ ಗೆ ಹಲವು ಕಾರಣಗಳಿವೆ.
ವಿಪರೀತ ಭಯವಾಗುವುದು, ವೇಗದ ಹೃದಯ ಬಡಿತ, ಬೆವರು ಬರುವುದು, ನಡುಕ ಬರುವುದು, ಉಸಿರಾಟದ ತೊಂದರೆ, ಗಂಟಲಿನಲ್ಲಿ ಏನೋ ಸಿಲುಕಿದ ಹಾಗೆ ಭಾವನೆ ಉಂಟಾಗುವುದು, ಎದೆ ನೋವು ಕಾಣಿಸಿಕೊಳ್ಳುವುದು, ವಾಕರಿಕೆ, ತಲೆಸುತ್ತು, ಕೈ ಕಾಲುಗಳು ಮರಗಟ್ಟುವುದು ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಆ್ಯಂಕ್ಸಾಯ್ಟಿ ಅಟ್ಯಾಕ್ ಸಮಸ್ಯೆಗೆ ಮೂತ್ರಜನಕಾಂಗದ ಆಯಾಸವು ಕಾರಣವಾಗಿದೆ!
ವರದಿಯೊಂದರ ಪ್ರಕಾರ, ಮೂತ್ರಜನಕಾಂಗದ ಆಯಾಸವು ಆ್ಯಂಕ್ಸಾಯ್ಟಿ ಅಟ್ಯಾಕ್ ಸಮಸ್ಯೆಗೆ ಕಾರಣವಾಗಿದೆ. ದೇಹವು ದೈಹಿಕ ಹಾಗೂ ಮಾನಸಿಕ ಒತ್ತಡ ಅನುಭವಿಸಿದರೆ ಮೂತ್ರಜನಕಾಂಗದ ಗ್ರಂಥಿಗಳು ಕಾರ್ಟಿಸೋಲ್ ನಂತಹ ಒತ್ತಡದ ಹಾರ್ಮೋನ್ ಉತ್ಪತ್ತಿ ಮಾಡುತ್ತವೆ. ಈ ಹಾರ್ಮೋನು ಆ್ಯಂಕ್ಸಾಯ್ಟಿ ದಾಳಿಗೆ ಕಾರಣವಾಗುತ್ತದೆ.
ಗ್ಲುಟನ್ ಸೆನ್ಸಿಟಿವಿಟಿ
ಗ್ಲುಟನ್ ಸೆನ್ಸಿಟಿವಿಟಿ ಮತ್ತು ಸೆಲಿಯಾಕ್ ಡಿಸೀಸ್ ಅಂಟು ಹೊಂದಿರುವ ಆಹಾರ ಸೇವನೆ ಮಾಡುವುದರಿಂದ ಉಂಟಾಗುವ ಕಾಯಿಲೆ ಆಗಿದೆ. ಗ್ಲುಟನ್ ಮುಕ್ತ ಆಹಾರ ಸೇವನೆ ಮಾಡುವುದು ರೋಗಿಗಳಲ್ಲಿ ಆತಂಕ ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳು ಹೇಳಿವೆ.
ಕರುಳಿನ ಆರೋಗ್ಯ ಕಳಪೆಯಾಗಿರುವುದು
ಕರುಳಿನ ಆರೋಗ್ಯ ತೊಂದರೆ ಆಗುವುದು, ಹೊಟ್ಟೆಯಲ್ಲಿ ಸಮಸ್ಯೆ ಉಂಟಾದಾಗ, ಅಡಚಣೆ ಸಂಕೇತ ಮೆದುಳಿಗೆ ತಲುಪುತ್ತದೆ. ಇದು ಆತಂಕ, ಒತ್ತಡ ಅಥವಾ ಖಿನ್ನತೆ, ಹಲವು ಮಾನಸಿಕ ಸಮಸ್ಯೆ ಹುಟ್ಟು ಹಾಕುತ್ತದೆ.
ಇದನ್ನೂ ಓದಿ: ತೂಕ ನಷ್ಟ, ಬಲಿಷ್ಠ ಮೂಳೆಗಳು ಸೇರಿದಂತೆ ಯಾವೆಲ್ಲಾಆರೋಗ್ಯ ಪ್ರಯೋಜನ ನೀಡುತ್ತೆ ಗೊತ್ತಾ ಈ ತರಕಾರಿ!
ಪೌಷ್ಟಿಕಾಂಶ ಕೊರತೆ
ಅಗತ್ಯ ಪೋಷಕಾಂಶ ದೇಹಕ್ಕೆ ಸಿಗದೇ ಹೋದಾಗ ಆ್ಯಂಕ್ಸಾಯ್ಟಿ ಅಟ್ಯಾಕ್ ಸಂಭವಿಸಬಹುದು. ವಿಟಮಿನ್ ಬಿ6 ಮತ್ತು ಕಬ್ಬಿಣದ ಕೊರತೆ ಆತಂಕ ಮತ್ತು ಪ್ಯಾನಿಕ್ ಅಟ್ಯಾಕ್ ಗೆ ಕಾರಣ ಎಂದು ಹಲವು ಸಂಶೋಧನೆಗಳು ತಿಳಿಸಿವೆ. ಗಳ ಹಿಂದೆ ಕಂಡುಬಂದಿದೆ. ವಿಟಮಿನ್ ಬಿ6 ಮತ್ತು ಕಬ್ಬಿಣವು ಮಾನಸಿಕ ಆರೋಗ್ಯ ಮತ್ತು ಸಿರೊಟೋನಿನ್ ಹಾರ್ಮೋನ್ ಉತ್ಪಾದನೆಗೆ ಅತ್ಯವಶ್ಯಕ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ