• Home
  • »
  • News
  • »
  • lifestyle
  • »
  • Warts Problem: ನರಹುಲಿಗಳು ಯಾಕೆ ಮತ್ತು ಹೇಗೆ ಉಂಟಾಗುತ್ತವೆ? ಪರಿಹಾರದ ಬಗ್ಗೆ ವೈದ್ಯರು ಹೇಳೋದೇನು?

Warts Problem: ನರಹುಲಿಗಳು ಯಾಕೆ ಮತ್ತು ಹೇಗೆ ಉಂಟಾಗುತ್ತವೆ? ಪರಿಹಾರದ ಬಗ್ಗೆ ವೈದ್ಯರು ಹೇಳೋದೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮುಖದಲ್ಲಿ ಉಂಟಾಗುವ ನರಹುಲಿಗಳು ಸಾಮಾನ್ಯವಾಗಿ ಹ್ಯೂಮನ್ ಪ್ಯಾಪಿಲೋಮಾ ವೈರಸ್‌ನಿಂದ ಉಂಟಾಗುತ್ತವೆ. ಅವುಗಳನ್ನು ಮುಖದ ಭಾಗದ ಮೇಲೆ ಎಲ್ಲಿ ಬೇಕಾದರೂ ಕಾಣಬಹುದು. ಆದರೆ ಗದ್ದವು ಒಂದು ಭಾಗ. ಅಲ್ಲಿ ಅವು ಹೆಚ್ಚು ಉಂಟಾಗುತ್ತವೆ. ಇದು ಸಾಮಾನ್ಯವಾಗಿ ವೈರಸ್ ಇರುವಿಕೆಯಿಂದ ಆಗುತ್ತದೆ.

  • Share this:

    ಧೂಳು, ಮಣ್ಣು, ಮಾಲಿನ್ಯದಿಂದ (Pollution) ಚರ್ಮದ (Skin) ಮೇಲೆ ಕಲೆ, ಮೊಡವೆ (Acne) ಉಂಟಾಗುವುದು ಇತ್ತೀಚಿನ ಸೌಂದರ್ಯ ಸಮಸ್ಯೆಗಳಲ್ಲಿ (Beauty Problems) ಸಾಮಾನ್ಯ ತೊಂದರೆ ಆಗಿವೆ. ಚರ್ಮದ ಮೇಲೆ ಕಾಣಿಸಿಕೊಳ್ಳುವ ಮೊಡವೆ ತರಹದ ನರಹುಲಿಗಳು ಸೋಂಕನ್ನು ತೋರಿಸುತ್ತವೆ. ಧೂಳು ಮತ್ತು ಕೊಳೆಯಿಂದ ನರಹುಲಿಗಳು ಉಂಟಾಗಬಹುದು. ಈ ವಿಷಯ ಹೆಚ್ಚಿನ ಜನರಿಗೆ ತಿಳಿದಿಲ್ಲ. ಹಾಗಾಗಿ ಅದರ ಬಗ್ಗೆ ಹೆಚ್ಚು ಜನರು ಗಮನ ಹರಿಸುವುದಿಲ್ಲ. ಇದು ಅವರು ಮಾಡುವ ದೊಡ್ಡ ತಪ್ಪು ಆಗಿದೆ. ವೈದ್ಯರ ಪ್ರಕಾರ, ಅವರು ಸರಿಯಾದ ಸಮಯದಲ್ಲಿ ನರಹುಲಿ ಸಮಸ್ಯೆಗೆ ಚಿಕಿತ್ಸೆ ಪಡೆಯದಿದ್ದರೆ ಇದು ವ್ಯಕ್ತಿಯ ನೋವು ಉಂಟು ಮಾಡುತ್ತದೆ.  ಮುಂದೆ ಇದು ಹೆಚ್ಚಾಗಿ ಕ್ಯಾನ್ಸರ್ ನಂತಹ ಕಾಯಿಲೆ ಹುಟ್ಟು ಹಾಕುತ್ತದೆ.


    ಮುಖದಲ್ಲಿ ಉಂಟಾಗುವ ನರಹುಲಿಗಳು ಸಾಮಾನ್ಯವಾಗಿ ಹ್ಯೂಮನ್ ಪ್ಯಾಪಿಲೋಮಾ ವೈರಸ್‌ನಿಂದ ಉಂಟಾಗುತ್ತವೆ. ಅವುಗಳನ್ನು ಮುಖದ ಭಾಗದ ಮೇಲೆ ಎಲ್ಲಿ ಬೇಕಾದರೂ ಕಾಣಬಹುದು. ಆದರೆ ಗದ್ದವು ಒಂದು ಭಾಗ. ಅಲ್ಲಿ ಅವು ಹೆಚ್ಚು ಉಂಟಾಗುತ್ತವೆ. ಇದು ಸಾಮಾನ್ಯವಾಗಿ ವೈರಸ್ ಇರುವಿಕೆಯಿಂದ ಆಗುತ್ತದೆ.


    ನರಹುಲಿಗಳು ಯಾವುವು?


    ನರಹುಲಿಗಳು ಮಾನವ ಪ್ಯಾಪಿಲೋಮ ವೈರಸ್ (HPV) ನಿಂದ ಉಂಟಾಗುವ ಚರ್ಮದ ಸೋಂಕಿನ ಒಂದು ವಿಧ. ಸೋಂಕು ಚರ್ಮದ ಮೇಲೆ ಒರಟಾದ, ಚರ್ಮದ ಬಣ್ಣದ ತೇಪೆಗಳನ್ನು ಉಂಟು ಮಾಡುತ್ತದೆ. ಈ ರೀತಿಯ ನರಹುಲಿಗಳು ಸಾಂಕ್ರಾಮಿಕ ಆಗಿಯೂ ಉಂಟಾಗುತ್ತವೆ.


    ಇದನ್ನೂ ಓದಿ: ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಬೇಕು ಎಂದರೆ ಈ ಆಹಾರಗಳನ್ನು ಸೇವಿಸಿ


    ಮತ್ತು ಸೋಂಕಿತ ವ್ಯಕ್ತಿಯನ್ನು ಸ್ಪರ್ಶಿಸುವ ಮೂಲಕ ಇತರರಿಗೂ ಉಂಟಾಗುವ ಸಾಧ್ಯತೆ ಹೆಚ್ಚು. ನರಹುಲಿಗಳು ಸಾಮಾನ್ಯವಾಗಿ ಕೈಗಳ ಮೇಲೂ ಕಾಣಿಸಿಕೊಳ್ಳುತ್ತವೆ. ಆದರೆ ಅವು ಪಾದ, ಮುಖ, ಜನನಾಂಗ ಮತ್ತು ಮೊಣಕಾಲುಗಳ ಮೇಲೂ ಪರಿಣಾಮ ಬೀರುತ್ತವೆ.


    ವೈದ್ಯರು ನರಹುಲಿಗಳ ಬಗ್ಗೆ ಹೇಳೋದೇನು?


    ಜೀವಿಶಾ ಚಿಕಿತ್ಸಾಲಯದ ಡಾ.ಆಕೃತಿ ಗುಪ್ತಾ ಹೇಳುವ ಪ್ರಕಾರ, ಚರ್ಮದ ಮೇಲೆ ಮಾನವ ಪ್ಯಾಪಿಲೋಮ ವೈರಸ್ ಪ್ರವೇಶಿಸುವುದರಿಂದ ನರಹುಲಿಗಳು ಉಂಟಾಗುತ್ತವೆ. ಪಾರ್ಲರ್‌ನಲ್ಲಿ ಥ್ರೆಡ್ ಮಾಡುವುದು ಮತ್ತು ವ್ಯಾಕ್ಸಿಂಗ್ ಮಾಡುವುದರಿಂದ ಸೋಂಕು ಉಂಟಾಗುತ್ತದೆ.



    ಫೇಶಿಯಲ್ ನ್ಯಾಪ್‌ಕಿನ್‌ಗಳು ಮತ್ತು ಟವೆಲ್‌ ಅಥವಾ ಮೇಕಪ್ ಬ್ರಷ್‌ ಹಂಚಿಕೊಳ್ಳುವುದು ಸೋಂಕಿಗೆ ಕಾರಣ. ದುರ್ಬಲ ರೋಗ ನಿರೋಧಕ ಶಕ್ತಿ ಹೊಂದಿರುವ ಜನರು, ಮಧುಮೇಹಿಗಳು ಅಥವಾ ಇಮ್ಯುನೊಸಪ್ರೆಸಿವ್ ಔಷಧಿ ತೆಗೆದುಕೊಳ್ಳುವ ಜನರಲ್ಲಿ ಇದು ಸಾಮಾನ್ಯವಾಗಿ ಕಂಡು ಬರುತ್ತದೆ.


    ಲೈಂಗಿಕತೆ ಕೂಡ ನರಹುಲಿಗೆ ಕಾರಣವಾಗಬಹುದು.


    ನರಹುಲಿಗಳ ವಿಧಗಳು ದೇಹದ ಪೀಡಿತ ಭಾಗವನ್ನು ಅವಲಂಬಿಸಿ ಬದಲಾಗುತ್ತವೆ. ಕೈಗಳಲ್ಲಿ ಉಂಟಾಗುತ್ತವೆ. ನರಹುಲಿಗಳನ್ನು ಸಾಮಾನ್ಯ ನರಹುಲಿಗಳು ಎಂದು ಕರೆಯುತ್ತಾರೆ. ಅತ್ಯಂತ ಸಾಮಾನ್ಯ ವಿಧವಾಗಿದೆ. ಮುಖದಲ್ಲಿ ನರಹುಲಿಗಳು ಮುಖ ಮತ್ತು ಹಣೆಯ ಮೇಲೆ ಪರಿಣಾಮ ಬೀರುತ್ತವೆ.


    ಪಾದಗಳಲ್ಲಿ ಕೆಲವು ನರಹುಲಿಗಳು ಪಾದದ ಅಡಿಭಾಗದಲ್ಲಿ ಕಾಣಿಸುತ್ತವೆ. ಈ ನರಹುಲಿಗಳು ಮಧ್ಯದಲ್ಲಿ ಸಣ್ಣ ಕಪ್ಪು ಚುಕ್ಕೆಗಳಂತೆ ಕಾಣುತ್ತವೆ. ಇವುಗಳು ಹೆಚ್ಚಾಗಿ ನೋವಿನಿಂದ ಕೂಡಿರುತ್ತವೆ. ಜನನಾಂಗದಲ್ಲಿ, ಗುದನಾಳದ ಮೇಲೆ ನರಹುಲಿ ರೂಪುಗೊಳ್ಳುತ್ತವೆ. ಜನನಾಂಗದ ನರಹುಲಿಗಳು ಲೈಂಗಿಕವಾಗಿ ಹರಡುವ ಒಂದು ರೀತಿಯ ಸೋಂಕು ಆಗಿದೆ.


    ನರಹುಲಿಗಳು ತೊಂದರೆ ಉಂಟು ಮಾಡಬಹುದು. ಹೆಚ್ಚಿನ ನರಹುಲಿಗಳು ಯಾವುದೇ ತೊಂದರೆಗಳಿಲ್ಲದೆ ತಾನಾಗಿಯೇ ಹೋಗುತ್ತವೆ. ಆದರೆ ಕೆಲವೊಮ್ಮೆ ತೊಂದರೆ ಮತ್ತು ನೋವು ಉಂಟು ಮಾಡುತ್ತವೆ.


    HPV ಮತ್ತು ಜನನಾಂಗದ ನರಹುಲಿಗಳು ಗುದ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್ ಮತ್ತು ಗಂಟಲು (ಒರೊಫಾರ್ಂಜಿಯಲ್) ಕ್ಯಾನ್ಸರ್ ಸೇರಿದಂತೆ ಹಲವು ವಿಭಿನ್ನ ಕ್ಯಾನ್ಸರ್ಗಳಿಗೆ ಸಂಬಂಧಿಸಿವೆ. ಹೆಚ್ಚಿನ ನರಹುಲಿಗಳು ನೋವುಂಟು ಮಾಡಲ್ಲ. ಆದರೆ ಅವು ಒಳಮುಖವಾಗಿ ಬೆಳೆಯುವ ಸಾಧ್ಯತೆಯಿದೆ.


    ನರಹುಲಿಗಳಿಂದ ನಿಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕು?


    ವೈದ್ಯರ ಪ್ರಕಾರ ನರಹುಲಿ ತಡೆಯಲು ಯಾವುದೇ ಮಾರ್ಗವಿಲ್ಲ. ಕೆಲವು ವಿಷಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಸೋಂಕನ್ನು ತಪ್ಪಿಸಬಹುದು. ನರಹುಲಿ ಕತ್ತರಿಸುವುದನ್ನು ತಪ್ಪಿಸಿ. ಉಗುರು ಅಥವಾ ಹೊರಪೊರೆಯನ್ನು ಬಾಯಿಯಿಂದ ಕಚ್ಚುವ ಅಭ್ಯಾಸ ಬಿಡಿ.


    ಇದನ್ನೂ ಓದಿ: ಚಿಕ್ಕ ವಯಸ್ಸಿನಲ್ಲೇ ಕಾಡುವ ಕಣ್ಣಿನ ಅಸ್ವಸ್ಥತೆ ದೂರ ಮಾಡಲು ಈ ಪದಾರ್ಥಗಳನ್ನು ಸೇವಿಸಿ!


    ಟವೆಲ್, ಒಗೆಯುವ ಬಟ್ಟೆ, ನೇಲ್ ಕಟರ್, ರೇಜರ್ ಅಥವಾ ಇತರ ವೈಯಕ್ತಿಕ ವಸ್ತುಗಳನ್ನು ಹಂಚಿಕೊಳ್ಳಬೇಡಿ. ಇನ್ನೊಬ್ಬ ವ್ಯಕ್ತಿಯ ನರಹುಲಿ ಮುಟ್ಟಬೇಡಿ.

    Published by:renukadariyannavar
    First published: