• Home
 • »
 • News
 • »
 • lifestyle
 • »
 • Makhana And Health: ಈ ಆರೋಗ್ಯ ಸಮಸ್ಯೆಗಳಿದ್ರೆ ಮಖಾನಾ ತಿನ್ನಲೇಬಾರದಂತೆ

Makhana And Health: ಈ ಆರೋಗ್ಯ ಸಮಸ್ಯೆಗಳಿದ್ರೆ ಮಖಾನಾ ತಿನ್ನಲೇಬಾರದಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಮಲದ ಬೀಜಗಳಿಂದ ತಯಾರಿಸಲಾದ ಮಖಾನಾ ಆರೋಗ್ಯ ಲಾಭ ನೀಡುತ್ತದೆ. ಅಂದ ಹಾಗೇ ಮಖಾನಾವನ್ನು ಲೋಟಸ್ ಸೀಡ್ಸ್ ಎಂದೂ ಸಹ ಕರೆಯುತ್ತಾರೆ. ಕೆಲವರು ಇದನ್ನು ಫಾಕ್ಸ್ ನಟ್ಸ್ ಎಂದು ಕರೆಯುತ್ತಾರೆ. ಈ ಕಮಲದ ಬೀಜಗಳನ್ನು ಚೆನ್ನಾಗಿ ತೊಳೆದು ಒಣಗಿಸಿ ಮತ್ತು ಹುರಿದ ನಂತರ ಅವುಗಳು ಮಖಾನಾ ಆಗುತ್ತವೆ.

ಮುಂದೆ ಓದಿ ...
 • Share this:

  ಮಖಾನಾ (Makhana) ಎಂಬುದು ಒಂದು ಆಹಾರ ಪದಾರ್ಥವಾಗಿದೆ (Food Ingredient). ಕಮಲದ ಬೀಜಗಳಿಂದ (Lotus Seeds) ಮಖಾನಾ ತಯಾರಿಸಲಾಗುತ್ತದೆ. ಮಖಾನಾ ಆರೋಗ್ಯಕ್ಕೆ (Health) ಸಾಕಷ್ಟು ಪ್ರಯೋಜನ (Benefits) ನೀಡುತ್ತದೆ. ಅಂದ ಹಾಗೇ ಕಮಲದ ಹೂವು, ಬೀಜ, ಕಾಂಡ ಮತ್ತು ಎಲೆಗಳನ್ನು ಹಲವು ಔಷಧೀಯ ವಿಷಯಗಳಲ್ಲಿ ಬಳಕೆ ಮಾಡಲಾಗುತ್ತದೆ. ಹಾಗೆಯೇ ಕಮಲದ ಬೀಜಗಳಿಂದ ತಯಾರಿಸಲಾದ ಮಖಾನಾ ಆರೋಗ್ಯ ಲಾಭ ನೀಡುತ್ತದೆ. ಅಂದ ಹಾಗೇ ಮಖಾನಾವನ್ನು ಲೋಟಸ್ ಸೀಡ್ಸ್ ಎಂದೂ ಸಹ ಕರೆಯುತ್ತಾರೆ. ಕೆಲವರು ಇದನ್ನು ಫಾಕ್ಸ್ ನಟ್ಸ್ ಎಂದು ಕರೆಯುತ್ತಾರೆ. ಈ ಕಮಲದ ಬೀಜಗಳನ್ನು ಚೆನ್ನಾಗಿ ತೊಳೆದು ಒಣಗಿಸಿ ಮತ್ತು ಹುರಿದ ನಂತರ ಅವುಗಳು ಮಖಾನಾ ಆಗುತ್ತವೆ.


  ಮಖಾನಾ ಆರೋಗ್ಯ ಪ್ರಯೋಜನಗಳು


  ಮಖಾನಾದಲ್ಲಿ ಪ್ರೋಟೀನ್‌ ಅಂಶ ಹೇರಳವಾಗಿದೆ. ಇದು ದೇಹದ ಸ್ನಾಯುಗಳ ಆರೋಗ್ಯಕ್ಕೆ ಲಾಭಕಾರಿ. ಮಖಾನಾ ಔಷಧವಿದ್ದಂತೆ. ಯಾಕಂದ್ರೆ ಇದನ್ನು ಅನೇಕ ಸಮಸ್ಯೆಗಳ ನಿವಾರಣೆಗೆ ಬಳಕೆ ಮಾಡ್ತಾರೆ. ಹೆರಿಗೆಯ ನಂತರ ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಮಖಾನಾ ಸೇವನೆಗೆ ನೀಡಲಾಗುತ್ತದೆ.


  ಮಖಾನಾವನ್ನು ನಿಮ್ಮ ಆರೋಗ್ಯದ ಹಿತದೃಷ್ಟಿಯಿಂದ ನಿತ್ಯವೂ ಆಹಾರ ಕ್ರಮದಲ್ಲಿ ಸೇರಿಸಬಹುದು. ಮಖಾನಾವನ್ನು ಸಿಹಿ ಪದಾರ್ಥವಾಗಿ, ಉಪ್ಪು, ಖಾರದ ಪದಾರ್ಥವಾಗಿ ಬಳಕೆ ಮಾಡಬಹುದು. ಉಪವಾಸದ ಸಮಯದಲ್ಲಿ ಮಖಾನಾ ಸೇವಿಸಲಾಗುತ್ತದೆ.
  ನೀವು ತೂಕ ಇಳಿಕೆಗೆ ಅಥವಾ ಪೌಷ್ಟಿಕಾಂಶ ಪಡೆಯಲು ಬಯಸುತ್ತಿದ್ದರೆ ಮಖಾನಾ ಸೇವಿಸಿ. ಇದರಲ್ಲಿರುವ ಪೌಷ್ಟಿಕಾಂಶ ಅಂಶಗಳು ಇದನ್ನು ವಿಶೇಷವಾಗಿಸುತ್ತವೆ. ಜೊತೆಗೆ ಇದು ಯಾವೆಲ್ಲಾ ಅಡ್ಡ ಪರಿಣಾಮ ಬೀರುತ್ತದೆ? ಮತ್ತು ಯಾರಿಗೆಲ್ಲಾ ತೊಂದರೆ ನೀಡುತ್ತದೆ ಎಂಬುದನ್ನು ಚೆನ್ನಾಗಿ ತಿಳಿದು ಆಹಾರದಲ್ಲಿ ಸೇರಿಸಿ.


  ಈ ಆರೋಗ್ಯ ಸಮಸ್ಯೆಯಿದ್ದವರು ಮಖಾನಾ ಸೇವನೆಯಿಂದ ದೂರವಿರಿ


  ಈಗಾಗಲೇ ನೀವು ಕೆಲವು ಆರೋಗ್ಯ ಸಮಸ್ಯೆ ಹೊಂದಿದ್ದರೆ ಮಖಾನಾ ಸೇವನೆಯಿಂದ ದೂರವಿರುವಂತೆ ತಜ್ಞರು ಸಲಹೆ ನೀಡುತ್ತಾರೆ. ಮಖಾನಾವನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಎಂಬುದನ್ನು ತಿಳಿದುಕೊಳ್ಳಿ.


  ಹೊಟ್ಟೆಯ ಸಮಸ್ಯೆ ಹೊಂದಿರುವವರು ಮಖಾನಾದಿಂದ ದೂರವಿರಿ


  ನಿರಂತರವಾಗಿ ಹೊಟ್ಟೆ ಸಂಬಂಧಿ ಸಮಸ್ಯೆ ಎದುರಿಸುತ್ತಿದ್ದರೆ ಮಖಾನಾ ಸೇವನೆ ಮಾಡ್ಬೇಡಿ. ಮಖಾನಾ ನೇರವಾಗಿ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಮಲಬದ್ಧತೆ, ಗ್ಯಾಸ್ ಅಥವಾ ಉಬ್ಬುವಿಕೆ ಸಮಸ್ಯೆ ಇರುವವರು ಮಲಬದ್ಧತೆ ಸಮಸ್ಯೆಗೆ ಬಲಿಯಾಗುತ್ತಿದ್ದರೆ, ಮಖಾನಾದಿಂದ ದೂರವಿರಿ.


  ರಕ್ತದ ಸಕ್ಕರೆ ಮೇಲೆ ಪರಿಣಾಮ ಬೀರುತ್ತದೆ


  ನೀವು ಮಧುಮೇಹಿಗಳಾಗಿದ್ದರೆ ಮಖಾನಾವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ. ಸಂಶೋಧನೆ ಪ್ರಕಾರ, ಇದು ರಕ್ತದ ಸಕ್ಕರೆ ಪ್ರಮಾಣ ಕಡಿಮೆ ಮಾಡುತ್ತದೆ. ಇದರ ಅತಿಯಾದ ಸೇವನೆ ಅಡ್ಡ ಪರಿಣಾಮ ಬೀರುತ್ತದೆ.


  ಅಲರ್ಜಿ ಸಮಸ್ಯೆ ಇರುವವರು ಮಖಾನಾ ಸೇವಿಸಬೇಡಿ


  ಮಖಾನಾ ಸೇವನೆ ಎಲ್ಲರಿಗೂ ಸರಿ ಹೊಂದುವುದಿಲ್ಲ. ವಿವಿಧ ರೀತಿಯ ಅಲರ್ಜಿ ಹೊಂದಿರುವವರು ಮಖಾನಾ ಸೇವಿಸಬೇಡಿ. ಇದನ್ನು ತಿಂದರೆ ಅಲರ್ಜಿ ಹೆಚ್ಚಬಹುದು ಅಥವಾ ಅಲರ್ಜಿ ಉಂಟಾಗಬಹುದು.


  ಸಾಂದರ್ಭಿಕ ಚಿತ್ರ


  ಮೂತ್ರಪಿಂಡದಲ್ಲಿ ಕಲ್ಲು ಇರುವವರು ಮಖಾನಾ ಸೇವಿಸಬೇಡಿ


  ಕಿಡ್ನಿಯಲ್ಲಿ ಕಲ್ಲು ಸಮಸ್ಯೆ ಇರುವವರು ಮಖಾನಾ ಸೇವಿಸಬೇಡಿ. ಇದರಲ್ಲಿ ಸಾಕಷ್ಟು ಕ್ಯಾಲ್ಸಿಯಂ ಇದೆ. ಕಿಡ್ನಿಯಲ್ಲಿ ಕಲ್ಲು ಇರುವವರಿಗೆ ಕ್ಯಾಲ್ಸಿಯಂ ತೊಂದರೆ ಉಂಟು ಮಾಡುತ್ತದೆ. ಕಲ್ಲು ದೊಡ್ಡದಾಗುವ ಸಾಧ್ಯತೆ ಹೆಚ್ಚಿಸುತ್ತದೆ.


  ಇದನ್ನೂ ಓದಿ: ಯೀಸ್ಟ್ ಸೋಂಕು ಹೇಗೆ ಉಂಟಾಗುತ್ತದೆ? ತಡೆಯಲು ಏನು ಮಾಡ್ಬೇಕು?


  ಮಖಾನಾವನ್ನು ಎಷ್ಟು ಪ್ರಮಾಣದಲ್ಲಿ ತಿನ್ನಬೇಕು?


  ಯಾವುದೇ ಆರೋಗ್ಯ ಸಮಸ್ಯೆ ಇಲ್ಲದವರು ಪ್ರತಿದಿನ ಹುರಿದ ಮಖಾನಾ ತಿನ್ನಬಹುದು. ಒಂದು ಬಟ್ಟಲು ಮಖಾನಾ 3.9 ಗ್ರಾಂ ಪ್ರೋಟೀನ್ ನೀಡುತ್ತದೆ. ಜೊತೆಗೆ ಸಾಕಷ್ಟು ನೀರು ಕುಡಿಯಿರಿ.

  Published by:renukadariyannavar
  First published: