Fatty Liver: ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಸಮಸ್ಯೆ ಯಾರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ? ಲಕ್ಷಣಗಳೇನು?

ಪ್ರತಿ ವ್ಯಕ್ತಿಯ ಆರೋಗ್ಯಕರ ಯಕೃತ್ತಿನಲ್ಲಿ ಸ್ವಲ್ಪ ಪ್ರಮಾಣದ ಕೊಬ್ಬು ಇದ್ದೇ ಇರುತ್ತದೆ. ಆದರೆ ಕೊಬ್ಬಿನ ಪ್ರಮಾಣವು ಯಕೃತ್ತಿನ ಒಟ್ಟು ತೂಕದ 5 ರಿಂದ 10 ಪ್ರತಿಶತ ತಲುಪಿದರೆ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ (Fatty Liver Disease) ಯಕೃತ್ತಿನಲ್ಲಿ ಹೆಚ್ಚುವರಿ ಕೊಬ್ಬಿನ ಶೇಖರಣೆಯಿಂದ ಉಂಟಾಗುವ ಕಾಯಿಲೆಯ ಸಾಮಾನ್ಯ ಸ್ಥಿತಿ. ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಹೊಂದಿದ ಜನರಲ್ಲಿ (People) ಯಾವುದೇ ರೋಗ ಲಕ್ಷಣಗಳು (Symptoms) ಗೋಚರ ಆಗುವುದಿಲ್ಲ. ಆದರೆ ಈ ಸಮಸ್ಯೆ (Problem) ಹೆಚ್ಚಾದರೆ ಕೆಲವು ಸಂದರ್ಭಗಳಲ್ಲಿ ಯಕೃತ್ತಿಗೆ ಸಾಕಷ್ಟು ಹಾನಿ ಉಂಟು ಮಾಡುತ್ತದೆ. ಮತ್ತು ಯಕೃತ್ತಿನ ಕ್ಯಾನ್ಸರ್ ಉಂಟು ಮಾಡುವ ಸಂಭವ ಹೆಚ್ಚಿಗೆ ಇರುತ್ತದೆ. ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳುವ ಮೂಲಕ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ತಡೆಗಟ್ಟಬಹುದು ಇಲ್ಲವೇ ಕಡಿಮೆ ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯ. ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯನ್ನು ಸ್ಟೀಟೋಸಿಸ್ ಎಂದು ಕರೆಯುತ್ತಾರೆ.

    ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಸಮಸ್ಯೆ

    ಪ್ರತಿ ವ್ಯಕ್ತಿಯ ಆರೋಗ್ಯಕರ ಯಕೃತ್ತಿನಲ್ಲಿ ಸ್ವಲ್ಪ ಪ್ರಮಾಣದ ಕೊಬ್ಬು ಇದ್ದೇ ಇರುತ್ತದೆ. ಆದರೆ ಕೊಬ್ಬಿನ ಪ್ರಮಾಣವು ಯಕೃತ್ತಿನ ಒಟ್ಟು ತೂಕದ 5 ರಿಂದ 10 ಪ್ರತಿಶತ ತಲುಪಿದರೆ ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ತುಂಬಾ ಕೇಸ್ ಗಳಲ್ಲಿ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಯಾವುದೇ ಗಂಭೀರ ಸಮಸ್ಯೆ ಉಂಟು ಮಾಡುವುದಿಲ್ಲ.

    ಕೆಲವರು ಈ ಫ್ಯಾಟಿ ಲಿವರ್ ಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ ಜನರು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕು.

    ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ಪದಾರ್ಥಗಳನ್ನು ಸೇವಿಸಿದ್ರೆ ತೂಕ ಹೆಚ್ಚೋ ಭಯವಿಲ್ಲ, ಫಿಟ್ ಆಗಿರುತ್ತೀರಿ

    ಫ್ಯಾಟಿ ಲಿವರ್ ಡಿಸೀಸ್ ಯಾರಲ್ಲಿ ಕಾಣಿಸಿಕೊಳ್ಳುತ್ತದೆ?

    ಹಿಸ್ಪಾನಿಕ್ ಅಥವಾ ಏಷ್ಯನ್ ಮಹಿಳೆಯರು,

    ಮುಟ್ಟು ನಿಂತ ಮಹಿಳೆಯರು,

    ಹೆಚ್ಚಿನ ಹೊಟ್ಟೆಯ ಕೊಬ್ಬು

    ಅಧಿಕ ತೂಕ

    ಅಧಿಕ ರಕ್ತದೊತ್ತಡ

    ಅಧಿಕ ರಕ್ತ ಪರಿಚಲನೆ

    ಮಧುಮೇಹ

    ಅಧಿಕ ಕೊಲೆಸ್ಟರಾಲ್

    ಪ್ರತಿರೋಧಕ ನಿದ್ರೆಯಲ್ಲಿ ಉಸಿರುಕಟ್ಟುವ ಸಮಸ್ಯೆ ಸೇರಿದಂತೆ ಇತ್ಯಾದಿ ಸಮಸ್ಯೆ ಹೊಂದಿದವರಲ್ಲಿ ಕಾಣಿಸಿಕೊಳ್ಳುತ್ತದೆ.

    ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಲಕ್ಷಣಗಳು ಯಾವವು?

    ಹೊಟ್ಟೆ ನೋವು

    ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ಹೊಟ್ಟೆ ನೋವು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ಸಂಕೇತವಾಗಿದೆ. ಪ್ರತಿ ಕಿಬ್ಬೊಟ್ಟೆಯ ನೋವು ಈ ಕಾಯಿಲೆಯ ಸಂಕೇತವಲ್ಲ. ಕೆಲವೊಮ್ಮೆ ಹೊಟ್ಟೆ ನೋವು ತಪ್ಪು ಆಹಾರ ಪದ್ಧತಿ ಅಥವಾ ಇತರ ಕಾರಣಗಳಿಂದ ಕೂಡ ಉಂಟಾಗುತ್ತದೆ.

    ಯಾವುದೇ ಕಾರಣವಿಲ್ಲದೆ ದೀರ್ಘ ಕಾಲದವರೆಗೆ ಹೊಟ್ಟೆ ನೋವು ಹೊಂದಿದ್ದರೆ ವೈದ್ಯರನ್ನು ಸಂಪರ್ಕಿಸಿ ಕೊಬ್ಬಿನ ಪಿತ್ತಜನಕಾಂಗದ ಸಮಸ್ಯೆ ಹೊಟ್ಟೆಯ ಮೇಲಿನ ಬಲಭಾಗದಲ್ಲಿ ನೋವು ಇರುತ್ತದೆ.

    ಹಸಿವಿನ ಕೊರತೆ

    ಹಸಿವಿನ ಕೊರತೆಯು ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ಲಕ್ಷಣವಾಗಿರಬಹುದು. ಏಕೆಂದರೆ ಅನೇಕ ಸಂದರ್ಭಗಳಲ್ಲಿ ಈ ಕಾಯಿಲೆಯಲ್ಲಿ ಜನರು ಹಸಿವು ಕಳೆದುಕೊಳ್ಳಲು ಪ್ರಾರಂಭಿಸುತ್ತಾರೆ.

    ತೂಕ ಇಳಿಕೆ

    ಹಠಾತ್ ತೂಕ ನಷ್ಟವು ಕಾಯಿಲೆಯ ಸಂಕೇತ. ತೂಕ ಕಡಿಮೆಯಾಗಲು ಹಲವು ಕಾರಣಗಳಿರಬಹುದು. ಹೊಟ್ಟೆಯು ಉಬ್ಬುವುದು ಮತ್ತು ದೇಹದ ಉಳಿದ ಭಾಗವು ಕಡಿಮೆಯಾದರೆ, ಅದು ಈ ರೋಗದ ಚಿಹ್ನೆಯಾಗಿರಬಹುದು.

    ಸುಸ್ತು ಅಥವಾ ಮಾನಸಿಕ ಗೊಂದಲ

    ಫ್ಯಾಟಿ ಲಿವರ್ ಸಂಬಂಧಿತ ಸಮಸ್ಯೆ ಹೆಚ್ಚಾಗುತ್ತಿದ್ದರೆ ಅದು ಹೆಚ್ಚು ಸುಸ್ತು ಮತ್ತು ಗೊಂದಲದ ಸ್ಥಿತಿ ಅನುಭವಿಸುವಂತೆ ಮಾಡುತ್ತದೆ. ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುತ್ತದೆ.

    ಹಳದಿ ಚರ್ಮ ಮತ್ತು ಕಣ್ಣುಗಳ ಬಿಳಿ ಬಣ್ಣ

    ಕಣ್ಣುಗಳು ಬಿಳಿಯಾಗುವುದು ಮತ್ತು ಚರ್ಮವು ಹಳದಿಯಾಗುವುದು ಕೂಡ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ಸಂಕೇತವಾಗಿದೆ.

    ಇದನ್ನೂ ಓದಿ: ಕೈಗಳಲ್ಲಿ ಮರಗಟ್ಟುವಿಕೆ, ಜುಮ್ಮೆನ್ನುವುದನ್ನು ನಿರ್ಲಕ್ಷ್ಯ ಮಾಡದೇ, ಸಮಸ್ಯೆಯ ಬಗ್ಗೆ ಅರಿಯಿರಿ

    ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ಚಿಕಿತ್ಸೆ

    ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ ಚಿಕಿತ್ಸೆ ನೀಡಲು ಪ್ರಸ್ತುತ ಯಾವುದೇ ಔಷಧಿ ಇಲ್ಲ. ದೇಹದ ತೂಕ ಕಡಿಮೆ ಮಾಡುವುದು, ಸಮತೋಲಿತ ಆಹಾರ, ವ್ಯಾಯಾಮ, ಚೆನ್ನಾಗಿ ನಿದ್ದೆ ಇತ್ಯಾದಿ ಮಾಡಬೇಕು.
    Published by:renukadariyannavar
    First published: