ಬಾಲಿವುಡ್ನ ದಿವಾ ಪ್ರಿಯಾಂಕಾ ಚೋಪ್ರಾ(Priyanka Chopra) ಹಾಗೂ ಅಮೆರಿಕಾದ ಪಾಪ್ ಗಾಯಕ ನಿಕ್ ಜೊನಾಸ್(Nick jonas) ಫೇಮಸ್ ಕಪಲ್ಗಳಲ್ಲಿ ಒಬ್ಬರು.. 2018 ರ ಡಿಸೆಂಬರ್ ನಲ್ಲಿ(December) ಹಿಂದೂ ಪದ್ಧತಿಯಂತೆ(Hindu rituals) ರಾಜಸ್ಥಾನದ(Rajasthan) ಜೋಧಪುರದ(jodhpur) ಉಮೈದ್ ಭವನ ಅರಮನೆಯಲ್ಲಿ ಹಾಗೂ ಕ್ರಿಶ್ಚಿಯನ್ (Christian rituals)ಸಂಪ್ರದಾಯದಂತೆ ದಾಂಪತ್ಯಕ್ಕೆ ಕಾಲಿಟ್ರು.. ವಯಸ್ಸಿನಲ್ಲಿ ತನ್ನಗಿಂತ ಚಿಕ್ಕವರಾದ ನಿಕ್ರನ್ನು ನಟಿ ಮದುವೆಯಾದಾಗ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು.ಅಲ್ಲದೇ ಇತ್ತೀಚಿಗೆ ಪ್ರಿಯಾಂಕಾ ಹಾಗೂ ಅನೇಕ ದಾಂಪತ್ಯ ಜೀವನದ ಬಗ್ಗೆ ಸಾಕಷ್ಟು ಗುಸುಗುಸು ಕೇಳಿಬಂದಿತ್ತು..ಆದ್ರೆ ಇದೆಲ್ಲದಕ್ಕೂ ಬ್ರೇಕ್ ಹಾಕಲು
ನೆಟ್ಫ್ಲಿಕ್ಸ್ನಲ್ಲಿ ಆರಂಭವಾಗಿರುವ ಜೋನಸ್ ಸಹೋದರರ ಹೊಸ ಕಾರ್ಯಕ್ರಮ ' ಜೋನಸ್ ಬ್ರದರ್ಸ್ ಫ್ಯಾಮಿಲಿ ರೋಸ್ಟ್ನಲ್ಲಿ' ಭಾಗಿಯಾಗಿ ವಿವಾದಗಳಿಗೆ ಬ್ರೇಕ್ ಹಾಕಿದ್ರು.. ಅಲ್ಲದೆ ಸದಾ ಸುದ್ದಿಯಲ್ಲಿರುವ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಸಹೋದರರ ಬಗ್ಗೆ ಹತ್ತು ಹಲವು ಕುತೂಹಲಗಳಿಗೆ ಇರುತ್ತವೆ.. ಖ್ಯಾತ ಪಾಪ್ ಗಾಯಕರಾದ ನಿಕ್ ಕುಟುಂಬದಲ್ಲಿ ಹೆಚ್ಚು ರಿಚ್ ಇರೋದ್ ಯಾರು. ಅವರ ಆದಾಯ ಎಷ್ಟು ಎನ್ನುವ ಸಣ್ಣ ಮಾಹಿತಿ ಇಲ್ಲಿದೆ.
ಜೋನಸ್ ಕುಟುಂಬದಲ್ಲಿ ಯಾರು ಸಿಕ್ಕಾಪಟ್ಟೆ ರಿಚ್..?
2005 ರಲ್ಲಿ ಡಿಸ್ನಿ ಚಾನೆಲ್ನಲ್ಲಿ ಬಂದ ಕ್ಯಾಂಪ್ ರಾಕ್ ಮತ್ತು ಹನ್ನಾ ಮೊಂಟಾನಾದ ಲ್ಲಿ ಕಾಣಿಸಿಕೊಂಡ ನಂತರ ಜೋನಸ್ ಬ್ರದರ್ಸ್ ಅಮೇರಿಕಾದದ್ಯಂತ ಹೆಚ್ಚು ಪ್ರಖ್ಯಾತಿ ಪಡೆದುಕೊಂಡ್ರು. ಹ್ಯಾಪಿನೆಸ್ ಬಿಗಿನ್ಸ್ ಆಲ್ಬಮ್ ಸಾಂಗ್ ಮೂಲಕ ಮತ್ತಷ್ಟು ಖ್ಯಾತಿ ಪಡೆದುಕೊಂಡ್ರೆ, ಪ್ರಿಯಾಂಕಾ ಚೋಪ್ರಾರನ್ನ ನಿಕ್ ಜೋನ್ಸ್ ಮದುವೆಯಾದ ಬಳಿಕ ಭಾರತದಲ್ಲಿ ಮತ್ತಷ್ಟು ಪ್ರಖ್ಯಾತಿಗಳಿಸಿದ್ರು..ಹೀಗಾಗಿ ಜೋನಸ್ ಕುಟುಂಬದಲ್ಲಿ ಯಾರು ಹೆಚ್ಚು ರಿಚ್ ಅನ್ನೋ ಮಾಹಿತಿ ಇಲ್ಲಿದೆ..
1)ನಿಕ್ ಜೋನಸ್ : ಜೋನಸ್ ಸಹೋದರರಲ್ಲಿ ಅತಿ ಹೆಚ್ಚು ಶ್ರೀಮಂತ ಅಂದ್ರೆ ಅದು ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್.. ಜೋನಸ್ ಸಹೋದರರಲ್ಲಿ ಹೆಚ್ಚು ಪಾಪುಲರ್ ಆಗಿರುವ ಪಾಪ್ ಗಾಯಕರಲ್ಲಿ ನಿಕ್ ಮೊದಲಿಗರು.. ಫ್ಯಾಶನ್ ಮತ್ತು ಸುಗಂಧ ದ್ರವ್ಯ ಉದ್ದಿಮೆಗಳಲ್ಲಿ ಸಂಗೀತದ ಜೊತೆಗೆ ತೊಡಗಿಸಿಕೊಂಡಿರುವ ನಿಕ್ ವಾರ್ಷಿಕ ಆದಾಯ ಬರೋಬ್ಬರಿ 50 ಮಿಲಿಯನ್.. ಅಂದ್ರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ 339.35 ಕೋಟಿ..
ಇದನ್ನೂ ಓದಿ :ಪ್ರಿಯಾಂಕಾ ಛೋಪ್ರಾ ತಾಯಿಯಾಗ್ತಿದ್ದಾರಾ? ಈ ವಿಚಾರ ಅವರೇ ಹೇಳಿದ್ದು... ಅಭಿಮಾನಿಗಳು ಫುಲ್ ಖುಷ್!
2)ಜೋ ಜೋನಸ್ : 32 ವರ್ಷ ವಯಸ್ಸಿನ ಜೋ ನಿಕ್ ಜೋನಸ್ ನಿಕ್ ಗಿಂತ ಹಿರಿಯ.. ತಮ್ಮನಿಗಿಂತ ಕೊಂಚ ಕಡಿಮೆ ಆದಾಯ ಹೊಂದಿರುವ ಜೋ ಜೋನಸ್ ವಾರ್ಷಿಕ ಆದಾಯ ಬರೋಬ್ಬರಿ 400 ಮಿಲಿಯನ್.. ಅಂದ್ರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ 300 ಕೋಟಿಯಷ್ಟು..
3)ಕೆವಿನ್ ಜೋನ್ಸ್ : 34 ವಯಸ್ಸಿನ ಕೆವಿನ್ ಜೋನ್ಸ್
2014 ರಲ್ಲಿ ದಿ ಸೆಲೆಬ್ರಿಟಿ ಅಪ್ರೆಂಟಿಸ್ನ ಏಳನೇ ಸೀಸನ್ನಲ್ಲಿ ಭಾಗಿಯಾಗಿದ್ರು.ಅಲ್ಲದೆ ಕೆವಿನ್ ಜೊನಾಸ್ವೆರ್ನರ್ ಎಂಬ ರಿಯಲ್ ಎಸ್ಟೇಟ್ ಅಭಿವೃದ್ಧಿ ಕಂಪನಿಯ ಸಂಸ್ಥಾಪಕರಾಗಿದ್ದು,ಮತ್ತು ಸಂವಹನ/ಸಾಮಾಜಿಕ ಮಾಧ್ಯಮ ಸಂಸ್ಥೆಯಾದ ದಿ ಬ್ಲೂ ಮಾರ್ಕೆಟ್ನ ಸಿಇಒ ಕೂಡ ಆಗಿದ್ದಾರೆ.ಸದ್ಯ ಇವರ ವಾರ್ಷಿಕ ಆದಾಯ ಬರೋಬ್ಬರಿ 400 ಮಿಲಿಯನ್.. ಅಂದ್ರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ 300 ಕೋಟಿಯಷ್ಟು..
4) ಪ್ರಿಯಾಂಕಾ ಚೋಪ್ರಾ : ಮಾಜಿ ಮಿಸ್ ವರ್ಲ್ಡ್, ಗ್ಲೋಬಲ್ ಐಕಾನ್ ಪ್ರಿಯಾಂಕಾ ಚೋಪ್ರಾ, ಲಾಸ್ ಏಂಜಲೀಸ್, ಮುಂಬೈ,ನ್ಯೂಯಾರ್ಕ್ ಸೇರಿ ಹಲವು ಕಡೆ ಆಸ್ತಿಗಳನ್ನು ಹೊಂದಿದ್ದಾರೆ.. ಹಲವಾರು ಅಮೆರಿಕನ್ ಟಿವಿ ಶೋ ಸಿನಿಮಾ, ಹಾಗೂ ಹಲವು ಕಂಪನಿಗಳ ರಾಯಭಾರಿಯಾಗಿರುವ ಪ್ರಿಯಾಂಕಾ ಚೋಪ್ರಾ ವಾರ್ಷಿಕ ಆದಾಯ 30 ರಿಂದ 45 ಮಿಲಿಯನ್..ಭಾರತ ರೂಪಾಯಿ ಮೌಲ್ಯದಲ್ಲಿ 250 ಕೋಟಿಗೂ ಅಧಿಕ..
5)ಸೋಫಿ ಟರ್ನರ್ : ಬ್ರಿಟಿಷ್ ನಟಿ ಸೋಫಿ ಟರ್ನರ್ ಅವರು ಗೇಮ್ ಆಫ್ ಥ್ರೋನ್ಸ್ನಲ್ಲಿ ಸಂಸಾ ಸ್ಟಾರ್ಕ್ ಪಾತ್ರದಿಂದ ಸಿಕ್ಕಾಪಟ್ಟೆ ಫೇಮಸ್ ಆದವರು.. ಜೋ ಜೋನಸ್ ಪತ್ನಿಯಾಗಿರುವ ಸೋಫಿ ಟರ್ನರ್ ವಾರ್ಷಿಕವಾಗಿ 8 ಕೋಟಿಗೂ ಅಧಿಕ ಹಣ ಗಳಿಸುತ್ತಾರೆ..
ಇದನ್ನೂ ಓದಿ :ನಿಕ್ ಜೋನಸ್ ಎಫೆಕ್ಟ್: Solapuri Chaddar ಶರ್ಟ್ಗಳಿಗೆ ಹೆಚ್ಚಾಗುತ್ತಾ ಡಿಮ್ಯಾಂಡ್..?
6)ಡೇನಿಯಲ್ ಜೋನಸ್ : ಕೇವಿನ್ ಜೋನಸ್ ಹೆಂಡತಿ ಡೇನಿಯಲ್ ಕೇಶವಿನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದವರು..ಹೀಗಾಗಿ ಇವರ ವಾರ್ಷಿಕ ಆದಾಯ ಜೋನೆಸ್ ಕುಟುಂಬದಲ್ಲಿ ಅತ್ಯಂತ ಕಡಿಮೆ.. ಇವರು ಕೇವಲ ವಾರ್ಷಿಕವಾಗಿ 5 ಮಿಲಿಯನ್ ಅಷ್ಟೇ ಹಣ ಗಳಿಸುತ್ತಾರೆ..
7)ಫ್ರಾಂಕಿ ಜೋನಸ್ : ಜೋನಸ್
ಸಹೋದರ ಅತ್ಯಂತ ಕಿರಿಯರಾಗಿರುವ ಫ್ರಾಂಕಿ ಇತರ ಜೋನಸ್ ಸಹೋದರರಂತೆ ಪಾಪ್ ಗಾಯಕರಲ್ಲ.. ಆದ್ರೆ ಕ್ಯಾಂಪ್ ರಾಕ್ 2: ದಿ ಫೈನಲ್ ಜಾಮ್, ಡಿಸ್ನಿ ಸರಣಿ ಜೋನಸ್ ಮತ್ತು ರಿಯಾಲಿಟಿ ಶೋ ಜೊನಸ್ರೋಸ್ಟ್ ನಲ್ಲಿ ಭಾಗಿಯಾಗಿ ಪರಿಚಿತರಾಗಿದ್ದಾರೆ.. ಸದ್ಯ ಇವರ ವಾರ್ಷಿಕ ಆದಾಯ ಕೇವಲ 2 ಮಿಲಿಯನ್..
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ