ಮೊಟ್ಟ ಮೊದಲ ಬಾರಿ ಟೂತ್ ಬ್ರೆಶ್​ ಬಳಸಿದ ದೇಶ ಯಾವುದು ಗೊತ್ತೆ ?

news18
Updated:June 29, 2018, 9:37 PM IST
ಮೊಟ್ಟ ಮೊದಲ ಬಾರಿ ಟೂತ್ ಬ್ರೆಶ್​ ಬಳಸಿದ ದೇಶ ಯಾವುದು ಗೊತ್ತೆ ?
news18
Updated: June 29, 2018, 9:37 PM IST
-ನ್ಯೂಸ್ 18 ಕನ್ನಡ

ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಮೊದಲು ಮಾಡುವ ಕೆಲಸ ಹಲ್ಲುಜ್ಜುವುದು. ಹಲ್ಲುಗಳ ಆರೋಗ್ಯ ಕಾಪಾಡಲು ಮತ್ತು ಬಾಯಿಯನ್ನು ಸ್ವಚ್ಛವಾಗಿಡಲು ಟೂತ್ ಬ್ರೆಶ್ ಸಹಕಾರಿ. ಆದರೆ ಪ್ರತಿದಿನ ಬಳಸುವ ಟೂತ್​ ಬ್ರೆಶ್​ ಅನ್ನು ಮೊಟ್ಟ ಮೊದಲ ಬಾರಿ ಎಲ್ಲಿ ಕಂಡು ಹಿಡಿಯಲಾಯಿತು ಎಂಬುದು ಗೊತ್ತಿದೆಯೇ ?. ಟೂತ್ ಬ್ರೆಶ್​ನಿಂದ ದಿನಚರಿಯನ್ನು ಆರಂಭಿಸಲಾಗುತ್ತಿದ್ದರೂ ಇದರ ಇತಿಹಾಸ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.

ಹಿಂದಿನ ಕಾಲದಲ್ಲಿ ಮಾನವರು ಬೆರಳನ್ನು ಬಳಸಿ ಹಲ್ಲುಜ್ಜಿಕೊಳ್ಳುತ್ತಿದ್ದರು. ಈಗಲೂ ಕೂಡ ಟೂತ್​ ಬ್ರೆಶ್ ಮರೆತರೆ ಪರ್ಯಾಯವಾಗಿ ಬೆರಳನ್ನು ಅವಲಂಭಿಸುತ್ತೇವೆ. ಆದರೆ ಬೆರಳನ್ನು ಹಲ್ಲುಜ್ಜಲು ಬಳಸುವುದನ್ನು ನಿಲ್ಲಿಸಿದ ಕೀರ್ತಿ ಚೀನಿ ಚಕ್ರವರ್ತಿಗೆ ಸಲ್ಲುತ್ತದೆ. 1498 ರ ಜೂನ್ 26 ರಂದು ಚೀನಿ ಚಕ್ರವರ್ತಿ ಹಲ್ಲುಜ್ಜುವ ಸಾಧನವನ್ನು​ ಕಂಡು ಹಿಡಿದರು. ಮೂಳೆ ಮತ್ತು ಬಿದಿರುಗಳಿಂದ ತಯಾರಿಸಲಾದ ಈ ಸಾಧನವನ್ನು​ 14 ನೇ ಶತಮಾನದಲ್ಲಿ ಚೀನಿಯರು ಬಳಸುತ್ತಿದ್ದರು. ಈ ಸಂಸ್ಕೃತಿ ಮುಂದೆ ವಿಶ್ವದಾದ್ಯಂತ ಪಸರಿಸಿತು.

1780ರಲ್ಲಿ ಇಂಗ್ಲೆಂಡ್​ನ ವಿಲಿಯಂ ಆಡಿಸ್ ಈ ಸಾಧನಕ್ಕೆ ಬ್ರೆಶ್ ರೂಪ ಕೊಟ್ಟು ಮತ್ತಷ್ಟು ಜನರು ಇದನ್ನು ಬಳಸುವಂತೆ ಮಾಡಿದರು. ಅಮೆರಿಕದ ಹೆಚ್​.ಎನ್ ವಾಡ್ಸ್​ವರ್ತ್ ಬ್ರೆಶ್​ಗೆ​ 18,653 ನಂಬರಿನ ಪೇಟೆಂಟ್​ ಸೃಷ್ಟಿಸಿದರು. ಬ್ರೆಶ್​​ನ ಬೇಡಿಕೆಗಳು ಹೆಚ್ಚಾಗುತ್ತಿದ್ದಂತೆ 1885 ರಲ್ಲಿ ಅಮೆರಿಕದಲ್ಲಿ ಟೂತ್​ ಬ್ರೆಶ್ ತಯಾರಿಸುವ ಘಟಕಗಳು ಪ್ರಾರಂಭವಾದವು.

1960 ರಲ್ಲಿ ಅಮೆರಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ವಿದ್ಯುತ್ ಚಾಲಿತ ಬ್ರೆಶ್ ಹೊಸ ಅಲೆಯನ್ನು ಸೃಷ್ಟಿಸಿತು. ಇದನ್ನು ಸ್ಕ್ವಿಬ್ಬ್ ಸಂಸ್ಥೆಯು ತಯಾರಿಸಿದ್ದು, ಮುಂದೆ ಟೂತ್​ ಬ್ರೆಶ್​ನ ವಿನ್ಯಾಸಗಳಿಗೆ ಇದು ಮುನ್ನುಡಿ ಬರೆಯಿತು.​ ಪ್ರಸ್ತುತ, ಮಾರುಕಟ್ಟೆಯಲ್ಲಿ ಹಲವು ಬಗೆಯ ಟೂತ್​ ಬ್ರೆಶ್​ಗಳು ವಿಶಿಷ್ಟ ಗಾತ್ರ ಮತ್ತು ಆಕಾರದಲ್ಲಿ ಸಿಗುತ್ತಿದೆ. 2003 ರಲ್ಲಿ ನಡೆದ 'ದಿನನಿತ್ಯ ಇರಲೇಬೇಕಾದ ವಸ್ತುಗಳ' ಸಮೀಕ್ಷೆ ಪಟ್ಟಿಯಲ್ಲಿ ಟೂತ್​ ಬ್ರೆಶ್  ಮೊದಲ ಸ್ಥಾನ ಪಡೆದಿರುವುದು ಇದರ ಮಹತ್ವವನ್ನು ಸೂಚಿಸುತ್ತದೆ.
First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ