ಬಿಳುಪಾದ ಹಲ್ಲುಗಳಿಗೆ ನೈಸರ್ಗಿಕ ಮನೆಮದ್ದು: ಕಾಂತಿಯುತ ದಂತಕ್ಕೆ ಐದೇ ನಿಮಿಷ ಸಾಕು

ಸೇಬು ರಸದ ಎಣ್ಣೆ ಹಲ್ಲುಗಳ ಮೇಲೆ ಕಟ್ಟಿರುವ ಕಿಟ್ಟವನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಹಲ್ಲುಗಳ ಮೇಲಿರುವ ಮೊಂಡು ಕಲೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆ.

news18-kannada
Updated:March 26, 2020, 2:44 PM IST
ಬಿಳುಪಾದ ಹಲ್ಲುಗಳಿಗೆ ನೈಸರ್ಗಿಕ ಮನೆಮದ್ದು: ಕಾಂತಿಯುತ ದಂತಕ್ಕೆ ಐದೇ ನಿಮಿಷ ಸಾಕು
ಸಾಂದರ್ಭಿಕ ಚಿತ್ರ
  • Share this:
ಮನುಷ್ಯನ ಪ್ರಮುಖ ಆಕರ್ಷಣೆ ಎಂದರೆ ನಗು. ನಗುವು ಮನುಷ್ಯನ ವ್ಯಕ್ತಿತ್ವವನ್ನು ಸೂಚಿಸುತ್ತದೆ ಎಂಬ ಮಾತಿದೆ. ಈ ನಗುವು ಇನ್ನಷ್ಟು ಸೊಗಸಾಗಿ ಕಾಣಲು ಹಲ್ಲುಗಳು ಸಹ ಅಷ್ಟೇ ಮುಖ್ಯ. ಅದಕ್ಕಾಗಿ ಪಳಪಳ ಹೊಳೆಯುವ, ಬಿಳಿಯ ದಂತದ ಹಲ್ಲು ಇರಬೇಕೆಂದು ಪ್ರತಿಯೊಬ್ಬರ ಆಸೆ.

ಇದಕ್ಕಾಗಿಯೇ ಮಾರುಕಟ್ಟೆಯಲ್ಲಿ ಸಾಕಷ್ಟು ಉತ್ಪನ್ನಗಳು ಸಹ ಲಭ್ಯವಿದೆ. ಆದರೆ, ಇವುಗಳೆಲ್ಲ ಕೆಮಿಕಲ್ ಮಿಶ್ರಣವಾಗಿದ್ದು ಅಷ್ಟೊಂದು ಸೂಕ್ತವಲ್ಲ. ಅದಕ್ಕಾಗೆ ಕೆಮಿಕಲ್ ಮಿಶ್ರಣವಿಲ್ಲದ, ಆರೋಗ್ಯಕರವಾದ ಶುಭ್ರವಾದ ಹಲ್ಲು ನಿಮ್ಮದಾಗಬೇಕೆಂದಿದ್ದರೆ ಈ ಕೆಳಗಿನ ನೈಸರ್ಗಿಕ ಮನೆಮದ್ದನ್ನು ಉಪಯೋಗಿಸಿ.

ಪೇನ್ ಕಿಲ್ಲರ್ ಔಷಧಿ ಸೇವಿಸುವ ಮುನ್ನ ಎಚ್ಚರ; ಇದರಿಂದ ಏನೆಲ್ಲಾ ತೊಂದರೆಗಳು ಗೊತ್ತೆ?

ತೆಂಗಿನ ಎಣ್ಣೆ: ತೆಂಗಿನ ಎಣ್ಣೆಯಲ್ಲಿ ಸಾಕಷ್ಟು ಆರೋಗ್ಯಕರ ಪ್ರಯೋಜನಗಳಿದ್ದು, ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ತೊಡೆದು ಹಾಕುವ ಶಕ್ತಿ ಹೊಂದಿದೆ. ಜತೆಗೆ ಇದು ಹಲ್ಲುಗಳನ್ನು ಶುಭ್ರಗೊಳಿಸಲು ಸಹಾಯ ಮಾಡುತ್ತದೆ.

ಅಡಿಗೆ ಸೋಡ: ಅಡಿಗೆ ಸೋಡವನ್ನು ಬಾಯಿಯ ಆರೋಗ್ಯಕ್ಕಾಗಿ ಹಿಂದಿನ ಕಾಲದಿಂದಲೂ ಉಪಯೋಗಿಸುತ್ತಿದ್ದಾರೆ. ಒಂದು ಟೇಬಲ್ ಸ್ಪೂನ್ ಅಡಿಗೆ ಸೋಡ ತೆಗೆದುಕೊಂಡು ಉಪ್ಪಿನೊಂದಿಗೆ ಬೆರೆಸಿ ಹಲ್ಲಿನ ಮೇಲೆ ಉಜ್ಜಿ. ಇದು ನಿಮ್ಮ ಹಲ್ಲುಗಳನ್ನು ಸ್ವಚ್ಚಗೊಳಿಸಿ ಹೊಳೆಯುವಂತೆ ಮಾಡುತ್ತದೆ.

ಸೇಬು ರಸದ ಎಣ್ಣೆ: ಸೇಬು ರಸದ ಎಣ್ಣೆ ಹಲ್ಲುಗಳ ಮೇಲೆ ಕಟ್ಟಿರುವ ಕಿಟ್ಟವನ್ನು ನಿವಾರಣೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಹಲ್ಲುಗಳ ಮೇಲಿರುವ ಮೊಂಡು ಕಲೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಧೂಮಪಾನದಿಂದ ಆಗಿರುವ ಕಲೆಗಳಿದ್ದರೆ ತೊಡೆದು ಹಾಕುತ್ತದೆ.

ಎಳನೀರು ಕುಡಿದ್ರೆ ಹಲವು ಸಮಸ್ಯೆಗಳಿಗೆ ಹೇಳಬಹುದಂತೆ ಗುಡ್​ ಬೈಸ್ಟ್ರಾಬೆರ್ರಿ: ಸ್ಟ್ರಾಬೆರ್ರಿ ಹಣ್ಣುಗಳು ಕೇವಲ ತಿನ್ನಲು ಮಾತ್ರ ರುಚಿಕರವಲ್ಲ, ಬದಲಾಗಿ ಹಲ್ಲುಗಳ ಆರೋಗ್ಯಕ್ಕೂ ಉತ್ತಮವಾಗಿದೆ. ಇದರಲ್ಲಿ ವಿಟಮಿನ್ ಸಿ ಅಂಶ ಅಧಿಕವಾಗಿದ್ದು, ಹಲ್ಲುಗಳ ಮೇಲಿರುವ ಹಳದಿ ಬಣ್ಣವನ್ನು ಮಾಯಮಾಡುತ್ತದೆ. ಜತೆಗೆ ಇದರಲ್ಲಿರುವ ಮ್ಯಾಲಿಕ್ ಆ್ಯಸಿಡ್ ಅಂಶ ಹಲ್ಲುಗಳಲ್ಲಿನ ಕಲೆ ನಿವಾರಣೆ ಮಾಡುತ್ತದೆ.

ಇದ್ದಿಲ ಪೌಡರ್: ನೈಸರ್ಗಿಕವಾಗಿ ಹಲ್ಲುಗಳನ್ನು ಬಿಳುಪಾಗಿಸಲು ಸುಲಭ ಉಪಾಯವೆಂದರೆ ಇದ್ದಿಲ ಪುಡಿ. ಇದ್ದಿಲನ್ನು ಪುಡಿ ಮಾಡಿಕೊಂಡು, ಅದನ್ನು ಟೂತ್ ಬ್ರಶ್​​ನಿಂದ ಹಲ್ಲುಗಳ ಮೇಲೆ ಉಜ್ಜಿ. ಇದು ಕೊಳೆ ನಿವಾರಣೆ ಮಾಡಿ ಹಲ್ಲುಗಳನ್ನು ಪಳಪಳ ಹೊಳೆಯುವಂತೆ ಮಾಡುತ್ತದೆ.
First published: March 26, 2020, 2:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading