• Home
  • »
  • News
  • »
  • lifestyle
  • »
  • Nail Care: ಉಗುರಿನ ಮೇಲಿನ ಬಿಳಿ ಚುಕ್ಕೆ ಈ ಸಮಸ್ಯೆಯ ಲಕ್ಷಣವಂತೆ

Nail Care: ಉಗುರಿನ ಮೇಲಿನ ಬಿಳಿ ಚುಕ್ಕೆ ಈ ಸಮಸ್ಯೆಯ ಲಕ್ಷಣವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸತು ಕೊರತೆಯನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ. ಏಕೆಂದರೆ ಸತುವು ನಮ್ಮ ಜೀವಕೋಶಗಳಲ್ಲಿ ಹರಡಿರುತ್ತದೆ. ಆದಾಗ್ಯೂ ಸತು ಕೊರತೆಯನ್ನು ಗುರುತಿಸಲು ಸಹಾಯ ಮಾಡುವ ರೋಗಲಕ್ಷಣಗಳನ್ನು ಅವರು ಪಟ್ಟಿಮಾಡುತ್ತಾರೆ.

  • Trending Desk
  • 3-MIN READ
  • Last Updated :
  • Share this:

ಕೆಲವೊಬ್ಬರ ಉಗುರುಗಳ (Nail) ಮೇಲೆ ಬಿಳಿ ಚುಕ್ಕೆ (White Spot) ಅಥವಾ ಬಿಳಿ ಅಡ್ಡ ಗೆರೆಗಳು ಮೂಡಿರುತ್ತವೆ. ಸಾಮಾನ್ಯವಾಗಿ ಜನರಲ್ಲಿ ಕ್ಯಾಲ್ಶಿಯಂ ಕೊರತೆಯಿಂದಾಗಿ ಹೀಗಾಗುತ್ತದೆ ಅನ್ನೋ ನಂಬಿಕೆ ಇದೆ. ಆದರೆ ಇದು ತಪ್ಪು. ಉಗುರುಗಳ ಮೇಲೆ ಬಿಳಿ ಕಲೆಗಳು ಕ್ಯಾಲ್ಶಿಯಂ (Calcium) ಕೊರತೆಯಿಂದಲ್ಲ ಬದಲಾಗಿ ಸತು ಅಥವಾ ಜಿಂಕ್‌ ಕೊರತೆಯಿಂದ ಉಂಟಾಗುತ್ತವೆ. ಪೌಷ್ಟಿಕತಜ್ಞೆ ಪೂಜಾ ಮಖಿಜಾ ಅವರು ಇನ್‌ಸ್ಟಾಗ್ರಾಂನಲ್ಲಿ(Instagram)  ಈ ಬಗ್ಗೆ ವಿವರಿಸಿದ್ದಾರೆ. ಸತುವು ದೇಹಕ್ಕೆ, ಅದರಲ್ಲೂ ವಿಶೇಷವಾಗಿ ಹೃದಯ, ಮೂಳೆಗಳು, ಶ್ವಾಸಕೋಶಗಳು ಮತ್ತು ನೂರಾರು ಇತರ ಕಿಣ್ವಗಳಿಗೆ ಅಗತ್ಯವಿರುವ "ಮೈಕ್ರೋ ಟ್ರೇಸ್ ಮಿನರಲ್" ಆಗಿದೆ.


ಹಾಗಾಗಿ ಸತುವು ಭರಿತ ಆಹಾರವನ್ನು ಸೇವಿಸುವುದು ಅತ್ಯಂತ ಅವಶ್ಯಕವಾಗಿದೆ ಎಂದು ಅವರು ವಿವರಿಸಿದ್ದಾರೆ.


ಸತು ಒಂದು "ಮಿರಾಕಲ್ ಮಿನರಲ್'


ಸತುವು ಪ್ರೋಟೀನ್ ಉತ್ಪಾದನೆ, ಕೋಶಗಳ ಬೆಳವಣಿಗೆ ಮತ್ತು ವಿಭಜನೆ, ಡಿಎನ್‌ಎ ಸಂಶ್ಲೇಷಣೆ, ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದು ಮುಂತಾದ ದೈಹಿಕ ಕಾರ್ಯಗಳಿಗೆ ಬೇಕಾಗುತ್ತದೆ.


"ಮಿರಾಕಲ್ ಮಿನರಲ್' ಎಂದೂ ಕರೆಯಲ್ಪಡುವ ಸತುವು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ. ಅಲ್ಲದೇ ಬಹುಬೇಗ ರೋಗಲಕ್ಷಣಗಳನ್ನು ಸುಧಾರಿಸುತ್ತದೆ" ಎಂದು ಮಖಿಜಾ ಅವರು ಹೇಳುತ್ತಾರೆ.


ಆದರೆ, "73 ಪ್ರತಿಶತ ಭಾರತೀಯರು ಪ್ರೋಟೀನ್ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಸತು ಕೊರತೆಯು ಇನ್ನೂ ಹೆಚ್ಚು ಪ್ರಚಲಿತವಾಗಿದೆ" ಎಂದು ಪೂಜಾ ವಿವರಿಸುತ್ತಾರೆ.


ಸತು ಕೊರತೆಯ ಚಿಹ್ನೆಗಳು


ಸತು ಕೊರತೆಯನ್ನು ಪತ್ತೆಹಚ್ಚುವುದು ಕಷ್ಟಕರವಾಗಿದೆ. ಏಕೆಂದರೆ ಸತುವು ನಮ್ಮ ಜೀವಕೋಶಗಳಲ್ಲಿ ಹರಡಿರುತ್ತದೆ. ಆದಾಗ್ಯೂ ಸತು ಕೊರತೆಯನ್ನು ಗುರುತಿಸಲು ಸಹಾಯ ಮಾಡುವ ರೋಗಲಕ್ಷಣಗಳನ್ನು ಅವರು ಪಟ್ಟಿಮಾಡುತ್ತಾರೆ.


* ಸಾಕಷ್ಟು ಹೊತ್ತು ನಿದ್ದೆ ಮಾಡದೇ ಇರುವುದು.


* ರೋಗನಿರೋಧಕ ವ್ಯವಸ್ಥೆಯು ದುರ್ಬಲವಾಗಿರುವುದು.


* ಲೈಂಗಿಕಾಸಕ್ತಿ ಕಡಿಮೆ ಇರುವುದು.


* ಸುಲಭವಾಗಿ ತೂಕ ಹೆಚ್ಚಳ ಅನುಭವಿಸುವುದು


* ಹಲ್ಲುಗಳು ಹುಳುಕಾಗುವುದು ಮತ್ತು ಒಸಡುಗಳಲ್ಲಿ ರಕ್ತಸ್ರಾವ


* ಕೈ ಮತ್ತು ಮುಖದ ಸುಕ್ಕುಗಳು


* ಗುಣಮುಖರಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು


* ಕಣ್ಣಿನ ತೊಂದರೆ, ದೃಷ್ಟಿ ದೋಷವನ್ನು ಹೊಂದಿರುವುದು


ದೇಹದಲ್ಲಿನ ಸತುವಿನ ಕೊರತೆಯನ್ನು ನೀಗಿಸಿಕೊಳ್ಳಲು ನಾವು ಸತುವು ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸುವುದು ಮುಖ್ಯ. ಹಾಗಿದ್ರೆ ಅಂಥ ಆಹಾರಗಳು ಯಾವವು ಅನ್ನೋದನ್ನು ನೋಡೋಣ.


ಸತುವು ಸಮೃದ್ಧವಾಗಿರುವ ಆಹಾರ


*ಸಿಂಪಿ


*ಏಡಿ ಮತ್ತು ನಳ್ಳಿ


*ಮಾಂಸ ಮತ್ತು ಕೋಳಿ


*ಅಣಬೆಗಳು, ಪಾಲಕ, ಕೋಸುಗಡ್ಡೆ, ಬೆಳ್ಳುಳ್ಳಿ ಮತ್ತು ಕೇಲ್ ಮುಂತಾದ ತರಕಾರಿಗಳು


*ಕಡಲೆ ಮತ್ತು ಬೀನ್ಸ್ ನಂತಹ ದ್ವಿದಳ ಧಾನ್ಯಗಳು


ಇದನ್ನೂ ಓದಿ: ಈ ಪೋಷಕಾಂಶಗಳ ಕೊರತೆ ಆದ್ರೆ ಆರೋಗ್ಯ ಸಮಸ್ಯೆ ಗ್ಯಾರಂಟಿ


*ಎಡಮೇಮ್, ಪೈನ್, ಚಿಯಾ ಮತ್ತು ಕುಂಬಳಕಾಯಿಯಂತಹ ಬೀಜಗಳು ಮತ್ತು ಬೀಜಗಳು


* ಬ್ರೌನ್‌ ರೈಸ್‌, ಓಟ್ಸ್ ಮತ್ತು ಕ್ವಿನೋವಾದಂತಹ ಧಾನ್ಯಗಳು


*ಕಾರ್ನ್‌ಫ್ಲೆಕ್ಸ್‌, ಮ್ಯೂಸ್ಲಿ, ಗೋಧಿ ಫ್ಲೆಕ್ಸ್‌ನಂತಹ ಬಲವರ್ಧಿತ ಉಪಹಾರ ಧಾನ್ಯಗಳು


*ಡೈರಿ ಆಹಾರಗಳು


*ಡಾರ್ಕ್ ಚಾಕೊಲೇಟ್


ಸತುವಿನ ಸಪ್ಲಿಮೆಂಟ್‌ಗಳನ್ನು ಸೇವಿಸಬಹುದಾ?


ಜಿಂಕ್‌ ಅಥವಾ ಸತುವಿನ ಕೊರತೆಯನ್ನು ನೀಗಿಸಲು ಪೂರಕಗಳನ್ನು ಸೇವಿಸಬಹುದು. ಆದರೆ ಅದಕ್ಕೂ ಮೊದಲು ನೀವು ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕಾಗುತ್ತದೆ. ಸತು ಗ್ಲುಕೋನೇಟ್, ಜಿಂಕ್ ಸಲ್ಫೇಟ್, ಜಿಂಕ್ ಸಿಟ್ರೇಟ್ ಮುಂತಾದ ವಿವಿಧ ಸತು ಪೂರಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.


ಆದಾಗ್ಯೂ, ಸತುವಿನ ಸಪ್ಲಿಮೆಂಟ್‌ಗಳನ್ನು ಸೇವಿಸುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ವಿಷಯಗಳಿವೆ. "ಜಿಂಕ್ ಪೂರಕಗಳು ಕೆಲವೊಮ್ಮೆ ವಾಕರಿಕೆ, ವಾಂತಿ, ಅತಿಸಾರ ಮತ್ತು ಕೆಲವು ಜನರಲ್ಲಿ ಹೊಟ್ಟೆ ನೋವಿನಂತಹ ಅಡ್ಡಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಗುರುಗ್ರಾಮ್‌ನ ಪಾರಸ್ ಆಸ್ಪತ್ರೆಗಳ ಮುಖ್ಯ ಆಹಾರ ತಜ್ಞರಾದ ಡಾ.ನೇಹಾ ಪಠಾನಿಯಾ ಹೇಳುತ್ತಾರೆ.


ಸತು ಸಪ್ಲಿಮೆಂಟ್‌ ತೆಗೆದುಕೊಳ್ಳುವಾಗ ನೆನಪಲ್ಲಿಟ್ಟುಕೊಳ್ಳಬೇಕಾದ ಅಂಶಗಳು


ಹೆಚ್ಚಿನ ಸತು ಸೇವನೆಯು ತಾಮ್ರ ಮತ್ತು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಅಡ್ಡಿಪಡಿಸುತ್ತದೆ. ಕೆಲವರಲ್ಲಿ ವಾಕರಿಕೆ, ವಾಂತಿ, ಅತಿಸಾರ ಮತ್ತು ಹೊಟ್ಟೆ ನೋವನ್ನು ಉಂಟುಮಾಡಬಹುದು.


ಇದನ್ನೂ ಓದಿ: ಬ್ರೇಕ್​ಫಾಸ್ಟ್​ಗೆ ತಯಾರಿಸಿ ಮಸಾಲಾ ಫ್ರೆಂಚ್ ಟೋಸ್ಟ್, ಇಲ್ಲಿದೆ ನೋಡಿ ರೆಸಿಪಿ


“ವಯಸ್ಕರಲ್ಲಿ ಧಾತುರೂಪದ ಸತುವು ದಿನಕ್ಕೆ 40 ಮಿಗ್ರಾಂ ಮೀರಿದರೆ ಜ್ವರ, ಕೆಮ್ಮು, ತಲೆನೋವು ಮತ್ತು ಆಯಾಸದಂತಹ ಲಕ್ಷಣಗಳನ್ನು ಉಂಟುಮಾಡಬಹುದು.


ಹೀಗೆ ಅಡ್ಡ ಪರಿಣಾಮಗಳ ಅಪಾಯವನ್ನು ಕಡಿಮೆ ಮಾಡಲು, ಶಿಫಾರಸು ಮಾಡಲಾದ ಡೋಸೇಜ್‌ನ್ನಷ್ಟೇ ತೆಗೆದುಕೊಳ್ಳಿ ಎಂಬುದಾಗಿ ಡಾ. ಪಠಾನಿಯಾ ಸಲಹೆ ನೀಡುತ್ತಾರೆ.

Published by:Sandhya M
First published: