ಯಾವ ಅಕ್ಕಿಯಿಂದ ಏನು ಪ್ರಯೋಜನ? ಬಿಳಿ, ಕೆಂಪು, ಕಂದು ಮತ್ತು ಕಪ್ಪು ಅಕ್ಕಿಯ ನಡುವಿನ ವ್ಯತ್ಯಾಸವೇನು?

ಕಪ್ಪು ಅಕ್ಕಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಹಾಗೂ ಕೇವಲ 160 ಕ್ಯಾಲೊರಿಗಳನ್ನು ಮಾತ್ರ ಹೊಂದಿರುತ್ತದೆ. ಇದು ಸಾಮಾನ್ಯ ಬಿಳಿ ಅಕ್ಕಿಗೆ ಆರೋಗ್ಯಕರ ಪರ್ಯಾಯವಾಗಿದೆ ಮತ್ತು ಇದನ್ನು ನಿಯಮಿತವಾಗಿ ಸೇವಿಸಬಹುದು.

ಅಕ್ಕಿ

ಅಕ್ಕಿ

  • Share this:

ನಮಗೆ ತಿಳಿದಿರುವಂತೆ ಅನ್ನ ಎಂದರೆ ಬಹುತೇಕ ಎಲ್ಲರಿಗೂ ಇಷ್ಟ. ಭಾರತೀಯ ಅಡುಗೆ ಮನೆಗಳಲ್ಲಿ ಅಕ್ಕಿ ಒಂದು ಪ್ರಧಾನ ಆಹಾರವಾಗಿದೆ. ಹಾಗೂ ಅನ್ನ ಇಲ್ಲದೆ ಊಟವು ಪೂರ್ಣವಾಗುವುದಿಲ್ಲ ಎಂಬುವುದು ನಮ್ಮ ದಕ್ಷಿಣ ಭಾರತೀಯರ ಅಭಿಪ್ರಾಯ. ಅಕ್ಕಿಯಲ್ಲಿ ವಿವಿಧ ವಿಧಗಳಿದ್ದು, ಪ್ರತಿಯೊಂದೂ ವಿಭಿನ್ನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಬನ್ನಿ ಈ ಕುರಿತು ಇನ್ನಷ್ಟು ತಿಳಿಯೋಣ


ಬಿಳಿ ಅಕ್ಕಿ, ಕಂದು ಅಕ್ಕಿ, ಕೆಂಪುಅಕ್ಕಿ ಮತ್ತುಕಪ್ಪು ಅಕ್ಕಿ:ಯಾವುದು ಆರೋಗ್ಯಕರ?ವ್ಯತ್ಯಾಸಗಳು, ಪ್ರಯೋಜನಗಳು


ಹೆಚ್ಚಿನ ಸಂದರ್ಭಗಳಲ್ಲಿ, ನಮ್ಮಲ್ಲಿ ಹಲವರು ಸಾಮಾನ್ಯವಾಗಿ ಬಿಳಿ ಅಕ್ಕಿಯಿಂದ ತೂಕ ಹೆಚ್ಚಾಗುತ್ತದೆ ಎಂದು ನಂಬುತ್ತಾರೆ, ಆದ್ದರಿಂದ ದಿನ ತಿನ್ನಲು ಇಷ್ಟಪಡುವುದಿಲ್ಲ. ಭಾರತದಲ್ಲಿ ಸಾಮಾನ್ಯವಾಗಿ ಕಂಡುಬರುವ ಬಿಳಿ ಅಕ್ಕಿ ಕೂಡ ಹೆಚ್ಚು ಸಂಸ್ಕರಿಸಿದ ಅಕ್ಕಿಯಾಗಿದೆ. ಬಿಳಿ ಅಕ್ಕಿ ಪಾಲಿಷ್ ಮಾಡುವುದರಿಂದ ಅದು ಯಾವುದೇ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುವುದಿಲ್ಲ. ಆದರೆ, ಬಿಳಿ ಅಕ್ಕಿಗೆ ಹೋಲಿಸಿದರೆ ಕಂದು ಅಕ್ಕಿ, ಕೆಂಪು ಅಕ್ಕಿ ಮತ್ತು ಕಪ್ಪು ಅಕ್ಕಿ ಆರೋಗ್ಯಕರ ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಒಳಗೊಂಡಿದೆ ಎಂದು ತಜ್ಞರು ಹೇಳುತ್ತಾರೆ. ಎಲ್ಲಾ ರೀತಿಯ ಅಕ್ಕಿ ನೀಡುವ ಮುಖ್ಯ ಪೋಷಕಾಂಶವೆಂದರೆ ಕಾರ್ಬೋಹೈಡ್ರೇಟ್.


ಇದನ್ನೂ ಓದಿ:Karnataka Cabinet: ನೂತನ ಸಚಿವರ ಪಟ್ಟಿಯಲ್ಲಿ ಯಾರಿಗೆ ಸ್ಥಾನ?; ಬೊಮ್ಮಾಯಿ ಸಂಪುಟ ಸೇರ್ಪಡೆಯಾದವರು ಇವರೇ ನೋಡಿ..!

  • ಬಿಳಿಅಕ್ಕಿ


ನಮಗೆ ತಿಳಿದಿರುವಂತೆ ಬಿಳಿ ಅಕ್ಕಿಯನ್ನು ಭಾರತೀಯ ಮನೆಗಳಲ್ಲಿ ವ್ಯಾಪಕವಾಗಿ ಸೇವಿಸಲಾಗುತ್ತದೆ. ಈ ಅಕ್ಕಿಯ ಬಿಳಿಯ ಬಣ್ಣಕ್ಕೆ ಕಾರಣ ಇದನ್ನು ಪಾಲಿಷ್‌ ಮಾಡಲಾಗುತ್ತದೆ.ಇದರಿಂದಾಗಿ ಇದು ಥಯಾಮಿನ್ ಮತ್ತು ಇತರ ಬಿ ಜೀವಸತ್ವಗಳಂತಹ ಕೆಲವು ಅಗತ್ಯ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಹೆಚ್ಚಿನ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿಲ್ಲ. ಆದರೂ, ಶಕ್ತಿಯ ಉಗ್ರಾಣವಾಗಿದೆ. ಪಿಷ್ಟದ ಸಾಂದ್ರತೆಯಿಂದಾಗಿ ಇದು ನಿಮ್ಮ ದೇಹಕ್ಕೆ ಇತರ ಅಕ್ಕಿಗೆ ಹೋಲಿಸಿದರೆ ಹೆಚ್ಚಿನ ಶಕ್ತಿ ನೀಡುತ್ತದೆ. ಇದು ಹೆಚ್ಚಿನ ಮಟ್ಟದ ಕಾರ್ಬೋಹೈಡ್ರೇಟ್‌ಗಳಿಂದ ಕೂಡಿದೆ.
  • ಕಂದುಅಕ್ಕಿ


ಆಹಾರದಲ್ಲಿ ಕಂದು ಅಕ್ಕಿಯನ್ನು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ. ಇದು ಮೂಲತಃ ಬಿಳಿ ಅಕ್ಕಿ, ಆದರೆ ಇದನ್ನು ಪಾಲಿಷ್‌ ಮಾಡುವುದಿಲ್ಲ. ಅದಕ್ಕೆ ಇದು ಕಂದು ಬಣ್ಣದಲ್ಲಿ ಇರುತ್ತದೆ. ಇದು ಖಂಡಿತವಾಗಿಯೂ ಬಿಳಿ ಅಕ್ಕಿಗಿಂತ ಹೆಚ್ಚು ಪೌಷ್ಟಿಕಾಂಶ ಹೊಂದಿದೆ. ಪ್ರತಿದಿನ ಒಂದು ಕಪ್ ಕಂದು ಅಕ್ಕಿ ಸೇವಿಸುವುದರಿಂದ ಮಧುಮೇಹ ಬರುವ ಅಪಾಯವನ್ನು 60%ರಷ್ಟು ಕಡಿಮೆ ಮಾಡಬಹುದು ಎಂದು ಅನೇಕ ಅಧ್ಯಯನಗಳು ಸೂಚಿಸಿವೆ. ಕಂದು ಅಕ್ಕಿ ಮೆಗ್ನೀಶಿಯಮ್, ಕಬ್ಬಿಣದಿಂದ ಕೂಡಿದೆ ಮತ್ತು ಜಿಂಕ್‌ನ ಉತ್ತಮ ಮೂಲವಾಗಿದೆ.


ಇದನ್ನೂ ಓದಿ:Gold Price Today: ಚಿನ್ನ ಕೊಳ್ಳುವವರಿಗೆ ಸಿಹಿ ಸುದ್ದಿ; ಬೆಲೆ ಕಡಿಮೆಯಾಗಿದೆ ನೋಡಿ...!

  • ಕೆಂಪುಅಕ್ಕಿ


ಸಾಮನ್ಯವಾಗಿ ಕೆಂಪು ಅಕ್ಕಿ ಯಾರಿಗೂ ತಿಳಿದಿರುವುದಿಲ್ಲ. ಅಕ್ಕಿಯು ಆಂಥೋಸಯಾನಿನ್ ಎಂಬ ಉತ್ಕರ್ಷಣ ನಿರೋಧಕದಿಂದ ಕೆಂಪು ಬಣ್ಣವನ್ನು ಪಡೆದುಕೊಳ್ಳುತ್ತದೆ. ಇದು ಹಲವಾರು ಕೆಂಪು ಮತ್ತು ನೇರಳೆ ಬಣ್ಣದ ತರಕಾರಿಗಳಲ್ಲಿ ಕಂಡುಬರುವ ಸಂಯುಕ್ತವಾಗಿದೆ. ಕೆಂಪು ಅಕ್ಕಿಯಲ್ಲಿ ಫೈಬರ್, ಕಬ್ಬಿಣ ಅಂಶ ಹೆಚ್ಚಾಗಿರುತ್ತದೆ ಮತ್ತು ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ನೀವು ತೂಕ ಇಳಿಸಿಕೊಳ್ಳಲು ಯೋಜಿಸುತ್ತಿದ್ದರೂ ಕೆಂಪು ಅಕ್ಕಿಯನ್ನು ಸೇವಿಸಬಹುದು. ಏಕೆಂದರೆ ಇದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಹೀಗಾಗಿ, ದೀರ್ಘಕಾಲದವರೆಗೆ ನಿಮ್ಮಲ್ಲಿ ಪೂರ್ಣತೆಯ ಭಾವನೆ ಮೂಡುತ್ತದೆ. ಕಳೆದ ಕೆಲವು ವರ್ಷಗಳಿಂದ ಕೆಂಪು ಅಕ್ಕಿ ಜನಪ್ರಿಯವಾಗಿದೆ.

  • ಕಪ್ಪುಅಕ್ಕಿ


ಕಪ್ಪು ಅಕ್ಕಿಯನ್ನು "ನಿಷೇಧಿತ ಅಕ್ಕಿ" ಎಂದೂ ಕರೆಯುತ್ತಾರೆ. ಇದು ಶತಮಾನಗಳಿಂದ ಚೀನೀ ಪಾಕಪದ್ಧತಿಯ ಭಾಗವಾಗಿದೆ, ಮತ್ತು ಇದನ್ನು ರಾಜಮನೆತನದವರು ಮಾತ್ರ ಬಳಸುತ್ತಾರೆ. ಫೈಬರ್, ಉತ್ಕರ್ಷಣ ನಿರೋಧಕಗಳು, ಫೈಟೊನ್ಯೂಟ್ರಿಯಂಟ್‌ಗಳು, ಫೈಟೊಕೆಮಿಕಲ್ಸ್, ವಿಟಮಿನ್ ಇ, ಪ್ರೋಟೀನ್ ಮತ್ತು ಕಬ್ಬಿಣದಿಂದ ಸಮೃದ್ಧವಾಗಿರುವ ಕಪ್ಪು ಅಕ್ಕಿ ತನ್ನದೇ ಆದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಇದು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಹಾಗೂ ಕಪ್ಪು ಅಕ್ಕಿ ಕೇವಲ 160 ಕ್ಯಾಲೊರಿಗಳನ್ನು ಮಾತ್ರ ಹೊಂದಿರುತ್ತದೆ. ಇದು ಸಾಮಾನ್ಯ ಬಿಳಿ ಅಕ್ಕಿಗೆ ಆರೋಗ್ಯಕರ ಪರ್ಯಾಯವಾಗಿದೆ ಮತ್ತು ಇದನ್ನು ನಿಯಮಿತವಾಗಿ ಸೇವಿಸಬಹುದು.

Published by:Latha CG
First published: