White Discharge: ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ವೈಟ್ ಡಿಸ್ಚಾರ್ಜ್ ಸಮಸ್ಯೆಗೆ ಮನೆಮದ್ದುಗಳು ಇಲ್ಲಿದೆ

ವೈಟ್ ಡಿಸ್ಚಾರ್ಜ್ ವಾಸನೆ ಮತ್ತು ಬಣ್ಣವು ಸ್ಪಷ್ಟವಾಗಿ ಬಿಳಿಯಾಗಿರುವುದು ಮತ್ತು ಪ್ರಮಾಣವು ಬದಲಾಗಬಹುದು. ಉದಾಹರಣೆಗೆ ಅಂಡೋತ್ಪತ್ತಿ ಸಮಯದಲ್ಲಿ ಸ್ತನ್ಯಪಾನ ಮಾಡುವಾಗ ಅಥವಾ ಲೈಂಗಿಕ ಪ್ರಚೋದನೆಯ ಸಮಯದಲ್ಲಿ ಹೆಚ್ಚಿನ ಪ್ರಮಾಣದ ವೈಟ್ ಡಿಸ್ಚಾರ್ಜ್ ಆಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬಹುತೇಕ ವಯಸ್ಕ ಮಹಿಳೆಯರು (Young Women) ವೈಟ್ ಡಿಸ್ಚಾರ್ಜ್ (White Discharge)  ಸಮಸ್ಯೆ (Problem) ಅನುಭವಿಸಿರುತ್ತಾರೆ. ದೇಹಕ್ಕೆ (Body) ಕನಿಷ್ಠ ಪ್ರಮಾಣದ ವೈಟ್ ಡಿಸ್ಚಾರ್ಜ್ ಆಗುವುದು ಅಗತ್ಯವಿರುತ್ತದೆ. ಇದು ಸಂತಾನೋತ್ಪತ್ತಿ ವ್ಯವಸ್ಥೆಗೆ  ಕಾರ್ಯ ನಿರ್ವಹಿಸುತ್ತದೆ. ಯೋನಿ ಮತ್ತು ಗರ್ಭಕಂಠದ ಒಳಗಿನ ಗ್ರಂಥಿಗಳಿಂದ ಮಾಡಲ್ಪಟ್ಟ ಈ ದ್ರವವು ಸತ್ತ ಜೀವಕೋಶಗಳು ಮತ್ತು ಬ್ಯಾಕ್ಟೀರಿಯಾ ಒಯ್ಯುತ್ತದೆ. ಇದು ಯೋನಿಯನ್ನು ಸ್ವಚ್ಛವಾಗಿರಿಸುತ್ತದೆ ಮತ್ತು ಸೋಂಕು ತಡೆಯಲು ಸಹಾಯ ಮಾಡುತ್ತದೆ. WebMd ಪ್ರಕಾರ, ದೀರ್ಘ ಅವಧಿಯ ಯೋನಿಯಿಂದ ವೈಟ್ ಡಿಸ್ಚಾರ್ಜ್ ಆಗುವುದು ಒಂದು ರೀತಿಯ ಸಮಸ್ಯೆ ತಂದೊಡ್ಡುತ್ತದೆ.

  ವೈಟ್ ಡಿಸ್ಚಾರ್ಜ್ ಆಗುವ ಸಮಸ್ಯೆ

  ನಿಮ್ಮ ಅವಧಿಯ ಸಮಯವನ್ನು ಸಹ ವೈಟ್ ಡಿಸ್ಚಾರ್ಜ್ ಅವಲಂಬಿಸಿದೆ. ವೈಟ್ ಡಿಸ್ಚಾರ್ಜ್ ವಾಸನೆ ಮತ್ತು ಬಣ್ಣವು ಸ್ಪಷ್ಟವಾಗಿ ಬಿಳಿಯಾಗಿರುವುದು ಮತ್ತು ಪ್ರಮಾಣವು ಬದಲಾಗಬಹುದು. ಉದಾಹರಣೆಗೆ, ಅಂಡೋತ್ಪತ್ತಿ ಸಮಯದಲ್ಲಿ ಸ್ತನ್ಯಪಾನ ಮಾಡುವಾಗ

  ಅಥವಾ ಲೈಂಗಿಕ ಪ್ರಚೋದನೆಯ ಸಮಯದಲ್ಲಿ, ಹೆಚ್ಚಿನ ಪ್ರಮಾಣದ ವೈಟ್ ಡಿಸ್ಚಾರ್ಜ್ ಆಗುತ್ತದೆ. ಅದೇ ವೇಳೆ ನೀವು ಗರ್ಭಿಣಿಯಾಗಿದ್ದರೆ ಮತ್ತು ನೈರ್ಮಲ್ಯ, ಕಾಳಜಿ ತೆಗೆದುಕೊಳ್ಳದೇ ಹೋದರೆ ಅದರ ವಾಸನೆಯು ವಿಭಿನ್ನವಾಗಿರುತ್ತದೆ.

  ಇದನ್ನೂ ಓದಿ: ನಾಲಿಗೆ ಮೇಲೆ ಈ ರೀತಿ ಆದಲ್ಲಿ ವಿಟಮಿನ್ ಡಿ ಕೊರತೆಯಂತೆ, ಎಚ್ಚರ ವಹಿಸಿ

  ವೈಟ್ ಡಿಸ್ಚಾರ್ಜ್ ಯಾವಾಗ ಸಮಸ್ಯೆಯಾಗಿ ಕಾಡುತ್ತದೆ?

  ಸಾಮಾನ್ಯವಾಗಿ ಯೋನಿಯಿಂದ ವೈಟ್ ಡಿಸ್ಚಾರ್ಜ್ ಆಗುವುದು ಸ್ಪಷ್ಟ ಅಥವಾ ಬಿಳಿ ಬಣ್ಣದಿಂದ ಕೂಡಿದ್ದರೆ ಇದು ಕೆಟ್ಟ ವಾಸನೆ ಹೊಂದಿರುವುದಿಲ್ಲ. ಮತ್ತು ನಿಮ್ಮ ಅವಧಿಗಳಲ್ಲಿ ಅದರ ಬಣ್ಣ ಮತ್ತು ಅದು ದಪ್ಪ ಆಗುತ್ತದೆ.

  ಜೊತೆಗೆ ಅದರ ಪ್ರಮಾಣದಲ್ಲಿ ಹೆಚ್ಚಳ, ಬಲವಾದ ವಾಸನೆ ಮತ್ತು ಅದರ ಬಣ್ಣ ಬದಲಾವಣೆ ನಿಮ್ಮ ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತದೆ. ಅಂತಹ ಸ್ಥಿತಿಯಲ್ಲಿ ಅದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ನೀವು ತಿಳಿಯಬೇಕು.

  ಅಸಹಜ ಯೋನಿ ವೈಟ್ ಡಿಸ್ಚಾರ್ಜ್ ಕಾರಣಗಳು ಯಾವವು?

  ಪ್ರತಿಜೀವಕ ಅಥವಾ ಸ್ಟೀರಾಯ್ಡ್ ಬಳಕೆ, ಬ್ಯಾಕ್ಟೀರಿಯಾದ ಯೋನಿನೋಸಿಸ್, ಜನನ ನಿಯಂತ್ರಣ ಔಷಧಗಳ ಸೇವನೆ, ಗರ್ಭಕಂಠದ ಕ್ಯಾನ್ಸರ್ ಕಾಯಿಲೆ, ಎಸ್ಟಿಡಿ, ಮಧುಮೇಹ, ಪರಿಮಳಯುಕ್ತ ಸೋಪ್ ಅಥವಾ ಲೋಷನ್ ಬಳಸುವುದು,

  ಬಬಲ್ ಬಾತ್ ಮಾಡುವುದು, ಶಸ್ತ್ರಚಿಕಿತ್ಸೆಯ ನಂತರ ಉಂಟಾಗುವ ಶ್ರೋಣಿಯ ಸೋಂಕು, ಪೆಲ್ವಿಕ್ ಉರಿಯೂತದ ಕಾಯಿಲೆ (PID), ಟ್ರೈಕೊಮೋನಿಯಾಸಿಸ್, ಯೋನಿಯಲ್ಲಿ ಅಥವಾ ಸುತ್ತಲೂ ಉರಿಯುವಿಕೆ, ಯೀಸ್ಟ್ ಸೋಂಕು ಇವು ಯೋನಿಯ ವೈಟ್ ಡಿಸ್ಚಾರ್ಜ್ ಗೆ ಕಾರಣಗಳಾಗಿವೆ.

  ವೈಟ್ ಡಿಸ್ಚಾರ್ಜ್ ಹೋಗಲಾಡಿಸಲು ಮನೆ ಮದ್ದು

  ಮೆಂತ್ಯ ಬೀಜ ಬಳಕೆ

  ಮೆಂತ್ಯವನ್ನು ನೀರಿನಲ್ಲಿ ಕುದಿಸಿ ಕುಡಿಯುವುದು ವೈಟ್ ಡಿಸ್ಚಾರ್ಜ್ ಸಮಸ್ಯೆ ಹೋಗಲಾಡಿಸುತ್ತದೆ. ನೀರು ಅರ್ಧದಷ್ಟು ಕಡಿಮೆಯಾಗುವವರೆಗೆ ನೀವು ಮೆಂತ್ಯ ಬೀಜಗಳನ್ನು 500 ಮಿಲಿ ನೀರಿನಲ್ಲಿ ಕುದಿಸಿ. ತಣ್ಣಗಾದ ನಂತರ ಈ ನೀರನ್ನು ಸೇವಿಸಿ.

  ಬೆಂಡೆಕಾಯಿ ಸೇವನೆಯಿಂದ ಸಮಸ್ಯೆ ದೂರವಾಗುತ್ತದೆ

  ಅನೇಕ ಜನರ ನೆಚ್ಚಿನ ಬೆಂಡೆಕಾಯಿ ವೈಟ್ ಡಿಸ್ಚಾರ್ಜ್ ಸಮಸ್ಯೆಗೆ ಉತ್ತಮ ಪರಿಹಾರ ನೀಡುತ್ತದೆ. ವೈಟ್ ಡಿಸ್ಚಾರ್ಜ್ ಹೋಗಲಾಡಿಸಲು ನೈಸರ್ಗಿಕ ಪರಿಹಾರವ ಬೆಂಡೆಕಾಯಿ ಕುದಿಸಿ ಮತ್ತು ಅದರ ದಪ್ಪ ದ್ರಾವಣ ಸೇವಿಸುವುದು. ಕೆಲವು ಮಹಿಳೆಯರು ಬೆಂಡೆಕಾಯಿಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸುತ್ತಾರೆ.

  ಕೊತ್ತಂಬರಿ ಬೀಜ

  ಕೊತ್ತಂಬರಿ ಬೀಜಗಳು ವೈಟ್ ಡಿಸ್ಚಾರ್ಜ್ ತಡೆಗಟ್ಟಲು ನೈಸರ್ಗಿಕ ಪರಿಹಾರವಾಗಿದೆ. ರಾತ್ರಿಯಿಡೀ ನೀರಿನಲ್ಲಿ ಕೆಲವು ಚಮಚ ಕೊತ್ತಂಬರಿ ಬೀಜ ನೆನೆಸಿಡಿ. ಮತ್ತು ಬೆಳಿಗ್ಗೆ ಈ ನೀರನ್ನು ಫಿಲ್ಟರ್ ಮಾಡಿ ಮತ್ತು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

  ಬೆಟ್ಟದ ನೆಲ್ಲಿಕಾಯಿ

  ಲ್ಯುಕೋರೋಯಿಯಾವನ್ನು ಆಮ್ಲಾದಿಂದ ಗುಣಪಡಿಸಬಹುದು. ನೀವು ನೆಲ್ಲಿಕಾಯಿಯ ತುಂಡುಗಳನ್ನು ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ. ಅವುಗಳನ್ನು ರುಬ್ಬಿ, ಪುಡಿ ಮಾಡಿ. ಈಗ 2 ಚಮಚ ಪುಡಿ ತೆಗೆದುಕೊಂಡು ಅದರಲ್ಲಿ ಅಷ್ಟೇ ಪ್ರಮಾಣದ ಜೇನುತುಪ್ಪ ಮಿಶ್ರಣ ಮಾಡಿ. ಪೇಸ್ಟ್ ತಯಾರಿಸಿ. ದಿನಕ್ಕೆ ಎರಡು ಬಾರಿ ಈ ಪೇಸ್ಟ್ ಅನ್ನು ಸೇವಿಸಿ. ಆಮ್ಲಾ ಪುಡಿ ಮತ್ತು ಜೇನುತುಪ್ಪವನ್ನು ನೀರಿನೊಂದಿಗೆ ಬೆರೆಸಿ ಕುಡಿಯಿರಿ.

  ಇದನ್ನೂ ಓದಿ: ಕೂದಲು ಮತ್ತು ತ್ವಚೆಯ ಆರೋಗ್ಯಕ್ಕೆ ಮಜ್ಜಿಗೆ ಬಳಸ್ತೀರಾ? ಹಾಗಾದ್ರೆ ತಪ್ಪದೇ ಓದಿ   

  ತುಳಸಿ

  ತುಳಸಿ ಎಲೆಗಳ ರಸವನ್ನು ಮಾಡಿ ಅದಕ್ಕೆ ಜೇನುತುಪ್ಪ ಬೆರೆಸಿ. ಇದನ್ನು ದಿನಕ್ಕೆರಡು ಬಾರಿ ಕುಡಿಯಿರಿ. ಇದು ವೈಟ್ ಡಿಸ್ಚಾರ್ಜ್ ಸಮಸ್ಯೆ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಇದನ್ನು ಪ್ರತಿದಿನ ಹಾಲಿನೊಂದಿಗೆ ಸೇವಿಸಬಹುದು.
  Published by:renukadariyannavar
  First published: