• Home
  • »
  • News
  • »
  • lifestyle
  • »
  • Pleurisy Problem: ಕೆಮ್ಮುವಾಗ, ಉಸಿರಾಡುವಾಗ ಎದೆ ನೋವು ಕಾಣಿಸಿದ್ರೆ ಎಚ್ಚರ!

Pleurisy Problem: ಕೆಮ್ಮುವಾಗ, ಉಸಿರಾಡುವಾಗ ಎದೆ ನೋವು ಕಾಣಿಸಿದ್ರೆ ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಚಳಿಗಾಲದಲ್ಲಿ ಕೆಮ್ಮು ಸಾಮಾನ್ಯವಾಗಿದ್ದರೂ ಸಹ, ಕೆಮ್ಮುವಾಗ ಎದೆನೋವು ಕಾಣಿಸಿದರೆ ಖಂಡಿತಾ ನಿರ್ಲಕ್ಷ್ಯ ಮಾಡದೇ ವೈದ್ಯರ ಬಳಿ ತಪಾಸಣೆ ಮಾಡಿಸಿ. ಇಲ್ಲದಿದ್ದರೆ ಇದು ಜೀವಕ್ಕೆ ಮಾರಕವಾಗುವ ಸಾಧ್ಯತೆ ಹೆಚ್ಚು. ಶ್ವಾಸಕೋಶದಲ್ಲಿ ಉರಿಯೂತ ಉಂಟಾದಾಗ ಕೆಮ್ಮುವಾಗ ಎದೆ ನೋವು ಕಾಣಿಸಿಕೊಳ್ಳುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಮುಂದೆ ಓದಿ ...
  • Share this:

    ನೆಗಡಿ ಮತ್ತು ಕೆಮ್ಮಿನ (Cold And Cough) ಸಮಸ್ಯೆ (Problem) ಚಳಿಗಾಲದಲ್ಲಿ ತುಂಬಾ ಸಾಮಾನ್ಯ. ಜೊತೆಗೆ ಅನೇಕ ರೀತಿಯ ಸೋಂಕು ಉಲ್ಬಣಗೊಳ್ಳುತ್ತವೆ. ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಜ್ವರ ತುಂಬಾ ಮಾಮೂಲಿ ಬಿಡು ಎಂದುಕೊಂಡು ಜನರು (People) ಇದರ ಬಗ್ಗೆ ಗಂಭೀರವಾಗಿ (Serious) ಪರಿಗಣಿಸಲು ಹೋಗಲ್ಲ. ಚಳಿಗಾಲದಲ್ಲಿ ಕೆಮ್ಮು ಸಾಮಾನ್ಯವಾಗಿದ್ದರೂ ಸಹ, ಕೆಮ್ಮುವಾಗ ಎದೆನೋವು ಕಾಣಿಸಿದರೆ ಖಂಡಿತಾ ನಿರ್ಲಕ್ಷ್ಯ ಮಾಡದೇ ವೈದ್ಯರ ಬಳಿ ತಪಾಸಣೆ ಮಾಡಿಸಿ. ಇಲ್ಲದಿದ್ದರೆ ಇದು ಜೀವಕ್ಕೆ ಮಾರಕವಾಗುವ ಸಾಧ್ಯತೆ ಹೆಚ್ಚು. ಶ್ವಾಸಕೋಶದಲ್ಲಿ ಉರಿಯೂತ ಉಂಟಾದಾಗ ಕೆಮ್ಮುವಾಗ ಎದೆ ನೋವು ಕಾಣಿಸಿಕೊಳ್ಳುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ವೈದ್ಯಕೀಯ ಭಾಷೆಯಲ್ಲಿ ಈ ಕಾಯಿಲೆಯನ್ನು ಫ್ಲೆರೈಸಿ ಎಂದೂ ಕರೆಯುತ್ತಾರೆ.


    ಕೆಮ್ಮಿನ ಜೊತೆಗೆ ಉಸಿರಾಡುವಾಗ ಎದೆ ನೋವು


    ಯಾಕಂದ್ರೆ ಶ್ವಾಸಕೋಶದಿಂದ ಎದೆಗೆ ವಿಸ್ತರಿಸುವ ಜೀವಕೋಶಗಳ ಮೇಲ್ಮೈ ಪ್ಲುರಾದಲ್ಲಿ ಇದೆ. ಕೆಮ್ಮಿನ ಜೊತೆಗೆ ಉಸಿರಾಡುವಾಗ ನೋವು ಉಂಟಾಗುತ್ತದೆ.  ಫ್ಲೆರೈಸಿ ಈ ಕಾಯಿಲೆ ಉಂಟಾಗಲು ಹಲವು ಕಾರಣಗಳು ಇರಬಹುದು. ಅನೇಕ ಬಾರಿ ಈ ರೋಗವು ಮಾರಣಾಂತಿಕವಾಗಿ ಪರಿಣಮಿಸುವ ಸಾಧ್ಯತೆ ಹೆಚ್ಚು. ಹಾಗಾಗಿ ಸಮಯಕ್ಕೆ ಸರಿಯಾಗಿ ಫ್ಲೆರೈಸಿ ಕಾಯಿಲೆ ತಡೆಗಟ್ಟುವ ಮತ್ತು ಪರಿಹಾರ ಕ್ರಮ ತೆಗೆದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ.


    ಫ್ಲೆರೈಸಿ ಕಾಯಿಲೆ ಹೇಗೆ ಉಂಟಾಗುತ್ತದೆ?


    ಫ್ಲೆರೈಸಿ ಕಾಯಿಲೆ ಉಂಟಾಗಲು ನ್ಯುಮೋನಿಯಾ ಸೇರಿ ಹಲವು ಬ್ಯಾಕ್ಟೀರಿಯಾ ಸೋಂಕುಗಳು ಕಾರಣ ಆಗುತ್ತವೆ. ಇದು ಫ್ಲೂ ಅಥವಾ ಫಂಗಸ್‌ ವೈರಸ್‌ನಿಂದ ಕೂಡ ಉಂಟಾಗುತ್ತವೆ. ಜೊತೆಗೆ ಶ್ವಾಸಕೋಶಕ್ಕೆ ಅನೇಕ ಗಂಭೀರ ಕಾಯಿಲೆಗಳು ಹರಡುತ್ತವೆ. ಹೀಗಾಗಿ ಫ್ಲುರೈಸಿ ರೋಗವು ಉಂಟಾಗುತ್ತದೆ.




    ಫ್ಲೆರೈಸಿ ಕಾಯಿಲೆಗೆ ಕಾರಣವಾಗುವ ಆರೋಗ್ಯ ಸಮಸ್ಯೆ


    ಶ್ವಾಸಕೋಶ ಕ್ಯಾನ್ಸರ್, ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವುದು, ಎದೆಯ ಗಾಯ, ಶ್ವಾಸಕೋಶ ಅಥವಾ ಪ್ಲುರಾ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ ರೂಪುಗೊಳ್ಳುವುದು, ಲೂಪಸ್ ಅಥವಾ ರುಮಟಾಯ್ಡ್ ಸಂಧಿವಾತ, ಸ್ವಯಂ ನಿರೋಧಕ ಕಾಯಿಲೆ, ರಕ್ತಹೀನತೆ, ಮೆಸೊಥೆಲಿಯೊಮಾ, ಟಿಬಿ, ಕ್ಯಾನ್ಸರ್ ಚಿಕಿತ್ಸೆಯು ಕಾಯಿಲೆಗೆ ಕಾರಣವಾಗುತ್ತವೆ.


    ಫ್ಲೆರೈಸಿ ಕಾಯಿಲೆಯ ಲಕ್ಷಣಗಳು ಹೀಗಿವೆ


    ನಿರಂತರವಾಗಿ ಕಾಡುವ ಕೆಮ್ಮು, ಶೀತ ಮತ್ತು ಜ್ವರ, ಗಂಟಲು ಕೆರೆತ, ಉಸಿರಾಡುವಾಗ ಎದೆ ಉರಿಯುವುದು, ಜಂಟಿ ನೋವು ಮತ್ತು ಊತ, ಭುಜ ಮತ್ತು ಬೆನ್ನಿನ ಹಿಗ್ಗುವಿಕೆ ವೇಳೆ ಎದೆ ನೋವು ಇವೆಲ್ಲವೂ ಫ್ಲೆರೈಸಿ ಕಾಯಿಲೆ ಲಕ್ಷಣಗಳು ಆಗಿವೆ.


    while coughing and breathing time pain in chest than dont ignore
    ಸಾಂದರ್ಭಿಕ ಚಿತ್ರ


    ಫ್ಲೆರೈಸಿ ಕಾಯಿಲೆ ಮಾರಣಾಂತಿಕವಾಗಬಹುದು


    ಫ್ಲೆರೈಸಿ ಕಾಯಿಲೆಗೆ ಸರಿಯಾಗಿ ಚಿಕಿತ್ಸೆ ನೀಡದೆ ಬಿಟ್ಟರೆ ಮಾರಣಾಂತಿಕವಾಗುತ್ತದೆ. ಇದು ರಕ್ತದ ಹರಿವಿನ ಅಡಚಣೆ, ಶ್ವಾಸಕೋಶದ ಮೇಲ್ಮೈಯಲ್ಲಿ ಕೀವು, ಉಸಿರಾಟ ತೊಂದರೆ ಉಂಟು ಮಾಡುತ್ತದೆ.


    ವೈರಲ್ ಸೋಂಕಿನಿಂದ ಫ್ಲುರೈಸಿ ಕಾಯಿಲೆ ಉಂಟಾದರೆ ಸಾಮಾನ್ಯವಾಗಿ ಕೆಲವು ದಿನಗಳ ನಂತರ ತಾನಾಗಿಯೇ ವಾಸಿಯಾಗುತ್ತದೆ. ಇದು ಬ್ಯಾಕ್ಟೀರಿಯಾ ಸೋಂಕಿನಿಂದ ಆದರೆ ಪ್ರತಿಜೀವಕಗಳ ಸೇವನೆ ಮಾಡ್ಬೇಕು.


    ಫ್ಲೆರೈಸಿ ಕಾಯಿಲೆ ರೋಗ ನಿರ್ಣಯಿಸುವುದು ಹೇಗೆ?


    ಫ್ಲೆರೈಸಿ ಕಾಯಿಲೆ ಲಕ್ಷಣಗಳಿದ್ದಾಗ ವೈದ್ಯರು ಸ್ಟೆತೊಸ್ಕೋಪ್ ಸಹಾಯದಿಂದ ನಿಮ್ಮ ಶ್ವಾಸಕೋಶದ ಧ್ವನಿ ಆಲಿಸುತ್ತಾರೆ. ಆಗ ಉಜ್ಜುವಿಕೆ ಶಬ್ದ ಬಂದ್ರೆ ರೋಗ ಗೊತ್ತಾಗುತ್ತದೆ. ಎಕ್ಸ್-ರೇ, ಅಲ್ಟ್ರಾಸೌಂಡ್, ಸಿಟಿ ಸ್ಕ್ಯಾನ್, ಬಯಾಪ್ಸಿ ವಿಧಾನದಿಂದ ಕಂಡು ಹಿಡಿಯಬಹುದು.


    ಇದನ್ನೂ ಓದಿ: ಅಗಸೆ ಬೀಜಗಳನ್ನು ಹುರಿದು ತಿನ್ನಿ ಸಾಕು.. ಅತಿಯಾದ ತೂಕ, ನಿದ್ರೆ ಸಮಸ್ಯೆ ಮಾಯವಾಗುತ್ತೆ! 


    ಸ್ವಯಂ ನಿರೋಧಕ ಅಥವಾ ಶ್ವಾಸಕೋಶದ ಕಾಯಿಲೆಗಳ ಸರಿಯಾದ ಚಿಕಿತ್ಸೆಯನ್ನು ಪಡೆಯುವ ಮೂಲಕ, ಬ್ಯಾಕ್ಟೀರಿಯಾ ಅಥವಾ ವೈರಲ್ ಸೋಂಕನ್ನು ತಡೆಗಟ್ಟಲು ಕೈಗಳನ್ನು ತೊಳೆಯುವುದು ಮುಂತಾದ ನೈರ್ಮಲ್ಯ ಸಮಸ್ಯೆಗಳನ್ನು ನೋಡಿಕೊಳ್ಳಲು ಇದು ಸಹಾಯಕವಾಗಿರುತ್ತದೆ.

    Published by:renukadariyannavar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು