HOME » NEWS » Lifestyle » WHICH ZODIAC SIGN SHOULD YOU MARRY BASED ON YOUR SIGN STG HG

ನಿಮ್ಮ ರಾಶಿ ಪ್ರಕಾರ ನೀವು ಯಾವ ರಾಶಿಯವರನ್ನು ಮದುವೆಯಾದರೆ ಖುಷಿಯಾಗಿರ್ತೀರಾ? ಜ್ಯೋತಿಷ್ಯದ ಲೆಕ್ಕಾಚಾರ ಹೀಗಿದೆ...

Zodiac Sign for Wedding: ನಿಮ್ಮ ರಾಶಿಗೆ ಯಾವ ರಾಶಿಯವರೊಂದಿಗೆ ಒಳ್ಳೆಯ ಬಾಂಧವ್ಯವಿರುತ್ತದೆ ಎನ್ನುವ ಲೆಕ್ಕಾಚಾರವನ್ನು ಜ್ಯೋತಿಷ್ಯದಲ್ಲಿ ತಿಳಿಸಿದ್ದಾರೆ. ಒಮ್ಮೆ ಗಮನಿಸಿ ನೋಡಿ.

news18-kannada
Updated:June 9, 2021, 1:40 PM IST
ನಿಮ್ಮ ರಾಶಿ ಪ್ರಕಾರ ನೀವು ಯಾವ ರಾಶಿಯವರನ್ನು ಮದುವೆಯಾದರೆ ಖುಷಿಯಾಗಿರ್ತೀರಾ? ಜ್ಯೋತಿಷ್ಯದ ಲೆಕ್ಕಾಚಾರ ಹೀಗಿದೆ...
ಪ್ರಾತಿನಿಧಿಕ ಚಿತ್ರ
  • Share this:

ಪ್ರತಿಯೊಬ್ಬರು ತಾವು ಯಾರೊಂದಿಗೆ ತಮ್ಮ ಜೀವನವನ್ನು ಸಂಪೂರ್ಣವಾಗಿ ಕಳೆಯುತ್ತೇವೆ ಎನ್ನುವ ಕುತೂಹಲ ಹೊಂದಿರುತ್ತಾರೆ. ಆದರೆ ನಮ್ಮ ರಾಶಿ ಮತ್ತು ನಕ್ಷತ್ರಕ್ಕೆ ಅನುಗುಣವಾಗಿ ಮದುವೆಯಾದರೆ ನಮ್ಮ ಬದುಕು ಸುಖಮಯವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. ಈ ನಿಟ್ಟಿನಲ್ಲಿ ನಿಮ್ಮ ರಾಶಿಗೆ ಯಾವ ರಾಶಿಯವರೊಂದಿಗೆ ಒಳ್ಳೆಯ ಬಾಂಧವ್ಯವಿರುತ್ತದೆ ಎನ್ನುವ ಲೆಕ್ಕಾಚಾರವನ್ನು ಜ್ಯೋತಿಷ್ಯದಲ್ಲಿ ತಿಳಿಸಿದ್ದಾರೆ. ಒಮ್ಮೆ ಗಮನಿಸಿ ನೋಡಿ.


ಮೇಷರಾಶಿಯವರಿಗೆ ಧನಸ್ಸು ಅಥವಾ ಕುಂಭ

ನಿಮ್ಮಂತೆ ಬೋಲ್ಡ್​, ಸಾಕಷ್ಟು ದಿಟ್ಟ ತನವನ್ನು ಹೊಂದಿರುವ ವ್ಯಕ್ತಿತ್ವದವರು ನಿಮಗೆ ಹೊಂದುತ್ತಾರೆ. ಆದ್ದರಿಂದ ಮೇಷ ರಾಶಿಯವರು ಧನಸ್ಸು ಮತ್ತು ಕುಂಭ ರಾಶಿಯ ಸಂಗಾತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಧನಸ್ಸು ಅವರು ಸ್ವತಂತ್ರ ಮತ್ತು ಹೇರಿಕೆ ಇಲ್ಲದಂತಹ ಜೀವನ ಶೈಲಿಗೆ ಅನುವು ಮಾಡಿಕೊಡುತ್ತಾರೆ. ಅಲ್ಲದೇ ಕುಂಭ ರಾಶಿಯವರು ಸಹ ತಮ್ಮದೇ ಆದ ಶೈಲಿಯಲ್ಲಿ ಸ್ವತಂತ್ರ ಜೀವನವನ್ನು ವ್ಯಾಖ್ಯಾನಿಸುತ್ತಾರೆ.


ವೃಷಭರಾಶಿಯವರಿಗೆಕಟಕ ಅಥವಾ ವೃಶ್ಚಿಕ


ನಿಮ್ಮ ಮೃದು ಸ್ವಭಾವವನ್ನು ಕೆಲವರು ಮಾತ್ರವೇ ನಿಭಾಯಿಸಲು ಸಾಧ್ಯ. ಕಟಕ ಮತ್ತು ವೃಶ್ಚಿಕ ನಿಮಗೆ ಅದ್ಭುತ ಆಯ್ಕೆ. ಕಟಕ ರಾಶಿಯವರು ಬಹಳ ಸೂಕ್ಷ್ಮ ಮತ್ತು ನಿಷ್ಠೆಯಿಂದ ಇದ್ದು ತಮ್ಮ ಸಂಗಾತಿಗೆ ಬದ್ಧರಾಗಿರುತ್ತಾರೆ. ವೃಶ್ಚಿಕ ರಾಶಿಯವರು ನಿಮ್ಮ ಕಾಳಜಿ ವಹಿಸುತ್ತಾರೆ. ಇದು ನಿಮಗೆ ಬಹಳ ಇಷ್ಟವಾಗುತ್ತದೆ.


ಮಿಥುನರಾಶಿಯವರಿಗೆ ಕುಂಭ ಅಥವಾ ಧನಸ್ಸು


ನಿಮ್ಮ ಖುಷಿಯಾದ ಮತ್ತು ಮನರಂಜನಾತ್ಮಕ ವ್ಯಕ್ತಿತ್ವಕ್ಕೆ ಕುಂಭ ರಾಶಿಯವರ ಸೃಜನಶೀಲ ವ್ಯಕ್ತಿತ್ವ ಹೊಂದುತ್ತದೆ. ಇವರು ನಿಮಗೆ ಅದ್ಭುತ ಜೋಡಿ. ಧನಸ್ಸು ರಾಶಿಯವರು ಸಾಕಷ್ಟು ಸ್ವತಂತ್ರಜೀವಿಗಳು. ಅವರಿಗೆ ಒಂದಡೆ ಕೂರುವುದಕ್ಕಿಂತಲೂ ಅಡ್ವೆಂಚರ್​​ ಮನಸ್ಥಿತಿ ಬಹಳ ಇಷ್ಟವಾಗುತ್ತದೆ. ಇದು ನಿಮಗೂ ಇಷ್ಟವಾಗುತ್ತದೆ.

ಕಟಕರಾಶಿಯವರಿಗೆ ಸಿಂಹ ಅಥವಾ ವೃಷಭ


ಪರಿಪೂರ್ಣ ಸಂಬಂಧಕ್ಕೆ ಅಗತ್ಯವಾದಷ್ಟು ಪ್ರೀತಿ ಮತ್ತು ಕಾಳಜಿ ನಿಮ್ಮ ಬಳಿ ಇದೆ. ಸಿಂಹ ಮತ್ತು ವೃಷಭ ರಾಶಿಯವರು ನಿಮಗೆ ಬೆಸ್ಟ್ ಮ್ಯಾಚ್​. ಸಿಂಹ ರಾಶಿಯವರ ಬೆಂಕಿಯಂತಹ ವ್ಯಕ್ತಿತ್ವ ನಿಮ್ಮ ಎಲ್ಲಾ ಅಡೆ ತಡೆಗಳನ್ನು ನಿವಾರಿಸುತ್ತದೆ. ವೃಷಭ ನಿಮ್ಮ ಮೂಡಿ ಸ್ವಭಾವಕ್ಕೆ ಹೊಂದಿಕೊಳ್ಳುತ್ತದೆ.


ಸಿಂಹರಾಶಿಯವರಿಗೆ ಮೀನಾ ಅಥವಾ ತುಲಾ


ನೀವು ಸಿಕ್ಕಾಪಟ್ಟೆ ಸ್ವ ಪ್ರತಿಷ್ಠೆ ಪ್ರಿಯರು ಮತ್ತು ನಿಮ್ಮ ಬಗ್ಗೆ ಬಹಳ ಹೆಮ್ಮೆ ಹೊಂದಿರುವವರು. ಆದ್ದರಿಂದ ಮೀನಾ ಅಥವಾ ತುಲಾ ರಾಶಿಯವರು ನಿಮಗೆ ಅತ್ಯುತ್ತಮ ಆಯ್ಕೆ. ಮೀನಾ ರಾಶಿಯವರು ಸಂಬಂಧಗಳ ನಿಭಾಯಿಸುವಿಕೆ, ಕಾಳಜಿ ಮಾಡುವಿಕೆ ಬಹಳ ಸಂತಸ ನೀಡುತ್ತದೆ. ತುಲಾ ರಾಶಿಯವರು ಬಹಳ ಸಹನೆ ಮತ್ತು ಪ್ರೌಢಿಮೆಯಿಂದ ವ್ಯವಹರಿಸುವ ಕಾರಣ ಅವರು ನಿಮಗೆ ಬಹಳ ಬೆಸ್ಟ್​ ಮ್ಯಾಚ್​


ಕನ್ಯಾರಾಶಿಯವರಿಗೆ ವೃಷಭ ಅಥವಾ ಮಕರ


ನಿಮಗೆ ಸಂಬಂಧಗಳಲ್ಲಿ ಸುರಕ್ಷತೆ ಮತ್ತು ಭದ್ರತೆ ಬಹಳ ಮುಖ್ಯ. ವೃಷಭ ಮತ್ತು ಮಕರ ನಿಮಗೆ ಅದ್ಭುತ ದಾಂಪತ್ಯ ಜೀವನಕ್ಕೆ ನೆರವಾಗುವರು. ವೃಷಭ ನಿಮಗೆ ಜೀವನಪರ್ಯಂತ ಖುಷಿ ನೀಡುವರು ಮತ್ತು ಬದ್ಧರಾಗಿರುವರು. ನೀವು ಇದೇ ಬದ್ಧತೆಯನ್ನು ಮಕರ ರಾಶಿಯೊಂದಿಗೆ ಹೊಂದಿರುವಿರಿ. ಇದು ನಿಮ್ಮನ್ನು ಚೆನ್ನಾಗಿ ಹೊಂದಿಕೊಳ್ಳುವಂತೆ ನೋಡಿಕೊಳ್ಳುತ್ತದೆ.


ತುಲಾರಾಶಿಯವರಿಗೆ ವೃಷಭ ಅಥವಾ ಮೇಷ


ನೀವು ಆಕರ್ಷಕ ಮತ್ತು ಆತ್ಯುತ್ತಮ ಮನಸ್ಥಿತಿ ಉಳ್ಳವರು. ಆದರೂ ಕೆಲವು ಸಮಯ ಸಮಸ್ಯೆಗಳಿಗೆ ಸಿಲುಕುತ್ತೀರಿ. ವೃಷಭ ಮತ್ತು ಮೇಷ ನಿಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲರು. ವೃಷಭ ನಿಮ್ಮನ್ನು ಪಡೆದಿದ್ದಕ್ಕೆ ಖುಷಿ ಪಡುವರು. ಮೇಷ ರಾಶಿಯವರು ನಿಮ್ಮನ್ನು ಉನ್ನತ ಸ್ಥಾನದಲ್ಲಿಡುವರು.



Youtube Video

ವೃಶ್ಚಿಕರಾಶಿಯವರಿಗೆಮೀನಾ ಅಥವಾ ಕನ್ಯಾ


ನೀವು ಸಾಕಷ್ಟು ರಹಸ್ಯಗಳನ್ನು , ಖಾಸಗಿತನವನ್ನು ಹೊಂದಿರುವವರು ನಿಮಗೆ ಮತ್ತೆ ಅಂತಹ ವ್ಯಕ್ತಿತ್ವದವರ ಅಗತ್ಯವಿಲ್ಲ. ಮೀನಾ ಮತ್ತು ಕನ್ಯಾ ಉತ್ತಮ ಆಯ್ಕೆ. ಮೀನಾ ರಾಶಿಯವರು ಯೋಚನಾಶಕ್ತಿಯನ್ನು ಬಳಸಿ ನಿಮ್ಮನ್ನು ಗ್ರಹಿಸುವರು. ಕನ್ಯಾ ನಿಮಗೆ ಪ್ರೀತಿಯ ಕಾಣಿಕೆ ನೀಡುವರು. ಅಲ್ಲದೇ ಸದಾ ನಿಮಗೆ ಆಶ್ಚರ್ಯವನ್ನುಂಟು ಮಾಡುವ ಮೂಲಕ ನಿಮ್ಮ ವ್ಯಕ್ತಿತ್ವಕ್ಕೆ ಹೊಂದುವರು.


ಧನಸ್ಸುರಾಶಿಯವರಿಗೆ ಧನಸ್ಸುರಾಶಿಯವರು ಅಥವಾ ಕುಂಭ


ರಾಶಿಯಲ್ಲೇ ಸಖತ್ ಅಡ್ವೆಂಚರ್ ನೇಚರ್ ನಿಮ್ಮದು. ನಿಮ್ಮ ಸಂಗಾತಿ ನಿಮಗೆ ಪ್ರೋತ್ಸಾಹ ನೀಡುವವರು ಆಗಿರಬೇಕು. ನಿಮಗೆ ಸ್ವತಂತ್ರ ಮತ್ತು ತಕ್ಷಣಕ್ಕೆ ಸ್ಪಂದಿಸುವ ಬೆಂಕಿಯಂತಹ ವ್ಯಕ್ತಿತ್ವದವರು ಸೂಕ್ತ ಆಯ್ಕೆ. ಆದ್ದರಿಂದ ಧನಸ್ಸು ರಾಶಿ ನಿಮಗೆ ಹೊಂದುತ್ತದೆ. ಕುಂಭ ರಾಶಿಯವರು ಸಹ ಸ್ವತಂತ್ರದ ಮಹತ್ವ ಅರಿತಿರುವ ಕಾರಣ ಅವರು ನಿಮಗೆ ಸೂಕ್ತ ಆಯ್ಕೆ.


ಮಕರ ರಾಶಿಯವರಿಗೆ ಕಟಕ ಅಥವಾ ವೃಷಭ


ರಚನೆ ಮತ್ತು ಯೋಜನಾತ್ಮಕ ವ್ಯಕ್ತಿತ್ವ ನಿಮ್ಮದು. ಆದ್ದರಿಂದ ಕಟಕ ಮತ್ತು ವೃಷಭ ಹೊಂದುತ್ತದೆ. ನಿಮ್ಮ ಗುರಿ ಮುಟ್ಟಲು ನೆರವಾಗುತ್ತಾರೆ. ನಿಮ್ಮ ಜೀವನ ಶೈಲಿಗೆ ಪೂರಕವಾಗಿ ಇರುತ್ತಾರೆ. ಕಟಕದವರು ಮದುವೆ ಮತ್ತು ಕುಟುಂಬದ ಗುರಿಗಳಲ್ಲಿ ಸಮಾನ ಅಭಿರುಚಿ ಹೊಂದಿರುವರು. ವೃಷಭ ನಿಮಗೆ ನೈತಿಕ ಬೆಂಬಲ ನೀಡುವುದಲ್ಲದೇ ಒತ್ತಾಸೆಯಾಗಿ ನಿಲ್ಲುವರು.


ಕುಂಭರಾಶಿಯವರಿಗೆ ಕುಂಭ ಅಥವಾ ಮಿಥುನ


ನಿಮ್ಮ ಸ್ವತಂತ್ರ ಸ್ವಭಾವದಿಂದ ನಿಮ್ಮನ್ನು ಜನರು ತಪ್ಪು ತಿಳಿಯುವುದೇ ಹೆಚ್ಚು. ಆದ್ದರಿಂದ ನೀವು ಕುಂಭ ರಾಶಿಯವರನ್ನೇ ಮದುವೆಯಾಗುವುದು ಒಳಿತು. ಮಿಥುನ ರಾಶಿಯವರು ನಿಮಗೆ ಸ್ನೇಹದ ಆಳ ಪರಿಚಯಿಸುವ ಕಾರಣ ಅವರು ನಿಮಗೆ ಒಳ್ಳೆಯ ಆಯ್ಕೆ. ಇದು ಯಶಸ್ವಿ ದಾಂಪತ್ಯದ ಗುಟ್ಟು.


ಮೀನಾರಾಶಿಯವರಿಗೆ ವೃಶ್ಚಿಕ ಅಥವಾ ಮೇಷ


ನಿಮಗೆ ವಾಸ್ತವವನ್ನು ಪರಿಚಯಿಸುವ ಮತ್ತು ನಿಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡುವವರು ನಿಮಗೆ ಸೂಕ್ತವಾದ ಜೋಡಿ. ವೃಶ್ಚಿಕ ಮತ್ತು ಮೇಷ ಈ ನಿಟ್ಟಿನಲ್ಲಿ ಸರಿಯಾದ ಆಯ್ಕೆ. ನಿಮ್ಮ ಮೂಡ್​ಗೆ ಅನುಗುಣವಾಗಿ ವೃಶ್ಚಿಕ ರಾಶಿಯವರು ನಡೆದುಕೊಳ್ಳುವರು. ಮೇಷ ರಾಶಿಯವರು ಅವರಂತೆ ನಿಮ್ಮನ್ನು ಖುಷಿಯಾಗಿ ಇಡುತ್ತಾರೆ.


First published: June 9, 2021, 1:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories