Weight Loss: ಹೆಚ್ಚಿನ ಕ್ಯಾಲೋರಿಗಳನ್ನು ಬರ್ನ್ ಮಾಡಲು ಯಾವ ಹವಾಮಾನ ಸೂಕ್ತ ಗೊತ್ತೇ?

2021 ರಲ್ಲಿ ನೇಚರ್ ಮೆಡಿಸಿನ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹೆಚ್ಚಿನ ಕಂದು ಕೊಬ್ಬನ್ನು ಹೊಂದಿರುವ ಜನರು ಹೃದ್ರೋಗ, ಟೈಪ್-2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಕಡಿಮೆ ಅಪಾಯವನ್ನು ಹೊಂದಿದ್ದಾರೆ ಎಂದು ಅಧ್ಯಯನವು ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಆಧುನಿಕ ಜೀವನ ಶೈಲಿಯಲ್ಲಿ ಬಹುತೇಕ ಜನರು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆ ಅಂದರೆ ಅದು ಬೊಜ್ಜು (Many People Face Fat Problem). ಬದಲಾದ ಆಹಾರ ಕ್ರಮ (Food Style), ಜೀವನ ಶೈಲಿಯಿಂದಾಗಿ (Life Style) ಇಂದು ಎಲ್ಲರಲ್ಲೂ ಈ ಬೊಜ್ಜು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಈ ಬೊಜ್ಜನ್ನು ಕರಗಿಸಲು ಸಾಕಷ್ಟು ಜನರು ಸಾಕಷ್ಟು ಕಸರತ್ತು ಮಾಡುತ್ತಾರೆ. ಆದರೂ ಬೊಜ್ಜು ಅಷ್ಟು ಸುಲಭವಾಗಿ ಕರಗುವುದಿಲ್ಲ. ನಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಬರೀ ನಾವು ಆಹಾರ ಕ್ರಮ, ತಾಲೀಮು ಮಾಡುವ ಕ್ರಮ, ಜೀವನ ಶೈಲಿಯಲ್ಲಿ ಅಗತ್ಯವಾದ ಬದಲಾವಣೆ ಮಾಡಿಕೊಂಡರೆ ಸಾಕಾಗುತ್ತೆ ಎಂದು ನಾವೆಲ್ಲರೂ ಅಂದುಕೊಂಡಿದ್ದೇವೆ. ನಾವು ಜಿಮ್‌ನಲ್ಲಿ ವ್ಯಾಯಾಮ ಮಾಡುವುದು ಅಥವಾ ಬೆಳಿಗ್ಗೆ ವಾಯು ವಿಹಾರಕ್ಕೆ ಹೋಗುವುದು, ಉದ್ಯಾನವನದಲ್ಲಿ ಜಾಗಿಂಗ್ ಮಾಡುವುದು. ಹೀಗೆ ಅನೇಕ ರೀತಿಯ ತಾಲೀಮುಗಳನ್ನು ಮಾಡುತ್ತಲೆ ಇರುತ್ತೇವೆ. ತೂಕ ನಷ್ಟದ ವಿಷಯಕ್ಕೆ ಬಂದಾಗ ಜನರು ತಮ್ಮದೇ ಆದಂತಹ ಆದ್ಯತೆಗಳನ್ನು ಹೊಂದಿದ್ದಾರೆ.

  ಆದಾಗ್ಯೂ, ಫಿಟ್‌ನೆಸ್ ಪ್ರಯಾಣದಲ್ಲಿ ಹವಾಮಾನದಂತಹ ಅಂಶವು ಸಹ ತುಂಬಾನೇ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ಹಾಗಾದರೆ ಯಾವ ಹವಾಮಾನದಲ್ಲಿ ಹೆಚ್ಚು ಬೊಜ್ಜನ್ನು ಅಥವಾ ಕ್ಯಾಲರಿಗಳನ್ನು ಕರಗಿಸಬಹುದು. ಬೇಸಿಗೆಯಲ್ಲಿ ವ್ಯಾಯಾಮ ಮಾಡುವುದರಿಂದ ಹೆಚ್ಚಿನ ಲಾಭವಿದೆಯೇ ಅಥವಾ ಚಳಿಗಾಲದಲ್ಲಿ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಲಾಭ ಇದೆಯೇ ಎನ್ನುವ ಗೊಂದಲ ನಿಮ್ಮಲ್ಲಿ ಇರಬೇಕಲ್ಲವೇ? ಹಾಗಿದ್ದರೆ ಬನ್ನಿ.. ಒಂದು ನಿರ್ದಿಷ್ಟ ರೀತಿಯ ಹವಾಮಾನವು ನಿಮಗೆ ಹೇಗೆ ಹೆಚ್ಚಿನ ಕ್ಯಾಲೋರಿಗಳನ್ನು ಬರ್ನ್ ಮಾಡಲು ಸಹಾಯ ಮಾಡುತ್ತದೆ ತಿಳಿದುಕೊಳ್ಳೋಣ.

  ಹವಾಮಾನ ಮತ್ತು ತೂಕ ನಷ್ಟ ಹೇಗೆ ಸಂಬಂಧ ಹೊಂದಿವೆ?

  ಹೆಚ್ಚುವರಿ ದೇಹದ ಕೊಬ್ಬನ್ನು ಕರಗಿಸುವ ವಿಷಯಕ್ಕೆ ಬಂದಾಗ, ಗರಿಷ್ಠ ಕ್ಯಾಲೋರಿಗಳನ್ನು ಬರ್ನ್ ಮಾಡಲು ಹೆಚ್ಚಿನ ತಾಪಮಾನವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದಾಗ್ಯೂ, ಸೆಲ್ ರಿಪೋರ್ಟ್ಸ್ ಮೆಡಿಸಿನ್ ನಲ್ಲಿ ಪ್ರಕಟವಾದ ಒಂದು ಹೊಸ ಅಧ್ಯಯನವು, ಶೀತ ವಾತಾವರಣದಲ್ಲಿ ವ್ಯಾಯಾಮ ಮಾಡುವುದರಿಂದ ದೇಹದ ವಿವಿಧ ತಾಪಮಾನಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತೋರಿಸಲಾಗಿದೆ. ಇದು ಹೆಚ್ಚುವರಿಯಾಗಿ ಕೊಬ್ಬನ್ನು ಕರಗಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

  ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯದ ತಜ್ಞರು ಎರಡು ವರ್ಷಗಳ ಅವಧಿಗೆ ಎಂಟು ಜನ ಪುರುಷರನ್ನು ಶೀತ ಹವಾಮಾನದಲ್ಲಿ ಈಜಲು ಬಿಟ್ಟಿದ್ದು, ಇನ್ನೊಂದು ಕಡೆಯಲ್ಲಿ ತಾಪಮಾನ ನಿರ್ದಿಷ್ಟ ಸನ್ನಿವೇಶಗಳನ್ನು ಆಯ್ಕೆ ಮಾಡಿಕೊಂಡ ಮತ್ತೊಂದು ಈಜುಗಾರರ ಗುಂಪನ್ನು ಅಧ್ಯಯನ ಮಾಡಿದರು. ಶೀತ ಹವಾಮಾನದ ಈಜುಗಾರರು ತಮ್ಮ ಪರಿಸರದಲ್ಲಿ ಆಗುವಂತಹ ತಾಪಮಾನ ಬದಲಾವಣೆಗೆ ಹೊಂದಿಕೊಳ್ಳುವಲ್ಲಿ ಉತ್ತಮರಾಗಿದ್ದಾರೆ ಎಂದು ಫಲಿತಾಂಶಗಳು ಸಾಬೀತುಪಡಿಸಿವೆ.

  ಶೀತ ಹವಾಮಾನ ಈಜುಗಾರರು ಕಂದು ಕೊಬ್ಬಿನ ಉತ್ತಮ ಸಕ್ರಿಯತೆಯನ್ನು ಹೊಂದಿದ್ದಾರೆ ಎಂದು ಸಹ ಕಂಡು ಹಿಡಿಯಲಾಯಿತು. ದೇಹವು ತಣ್ಣಗಾದಾಗ ಸಕ್ರಿಯಗೊಳ್ಳುವ ವಿಶೇಷ ರೀತಿಯ ದೇಹದ ಕೊಬ್ಬು ಇದಾಗಿದ್ದು, ಇದು ಶೀತ ಪರಿಸ್ಥಿತಿಯಲ್ಲಿ ದೇಹದ ತಾಪಮಾನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚಿನ ಶಾಖ ಉತ್ಪಾದನೆಯಿಂದಾಗಿ, ಚಳಿಗಾಲದ ಈಜುಗಾರರು ತಂಪಾಗಿಸುವ ಸಮಯದಲ್ಲಿ ಹೆಚ್ಚಿನ ಕ್ಯಾಲೋರಿಗಳನ್ನು ಬರ್ನ್ ಮಾಡಿದರು.

  ಇದನ್ನು ಓದಿ: Smallest Gun: ವಿಶ್ವದ ಅತ್ಯಂತ ಚಿಕ್ಕ ರಿವಾಲ್ವರ್ ಬೆಲೆ ಬರೋಬ್ಬರಿ 5 ಲಕ್ಷ ರೂ. ಇದರ ತೂಕ ಕೇವಲ 19.8 ಗ್ರಾಂ!

  2021 ರಲ್ಲಿ ನೇಚರ್ ಮೆಡಿಸಿನ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹೆಚ್ಚಿನ ಕಂದು ಕೊಬ್ಬನ್ನು ಹೊಂದಿರುವ ಜನರು ಹೃದ್ರೋಗ, ಟೈಪ್-2 ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಕಡಿಮೆ ಅಪಾಯವನ್ನು ಹೊಂದಿದ್ದಾರೆ ಎಂದು ಅಧ್ಯಯನವು ತಿಳಿಸಿದೆ. ಹಾಗಾಗಿ ಬೇಸಿಗೆ ಕಾಲಕ್ಕಿಂತಲೂ ಚಳಿಗಾಲದಲ್ಲಿ ಅತಿ ಹೆಚ್ಚು ಕೊಬ್ಬನ್ನು ಕರಗಿಸಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಕಂಡುಕೊಂಡಿದೆ.
  Published by:HR Ramesh
  First published: