ಸದೃಢ ಆರೋಗ್ಯಕ್ಕೆ (Health) ಪೋಷಕಾಂಶ (Nutrients) ಭರಿತ ಆಹಾರ (Food) ಸೇವನೆ ತುಂಬಾ ಮುಖ್ಯ. ನಮ್ಮ ದೇಹಕ್ಕೆ (Body) ಸುರ್ಯನ ಬೆಳಕಿನಿಂದ ಹಿಡಿದು ಪ್ರಕೃತಿಯ (Nature) ಹಲವು ಅಂಶಗಳು ಹಲವು ರೀತಿಯಲ್ಲಿ ಆರೋಗ್ಯಕರ ಜೀವನಕ್ಕೆ (Life) ಕೊಡುಗೆ ನೀಡುತ್ತವೆ. ಪ್ರಕೃತಿಯಲ್ಲಿ ಬದುಕುವ ಜನರು ಪ್ರಕೃತಿಯ ಜೊತೆ ಜೊತೆಗೆ ಸಾಗಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಕೃತಿಯನ್ನು ನಾಶ ಮಾಡುತ್ತಾ, ಮನುಷ್ಯ ಕೃತಕ ಜೀವನ ಕಟ್ಟಿಕೊಳ್ಳುತ್ತಾ ಸಾಗಿದ್ದಾನೆ. ಹೀಗಾಗಿ ಇಂದು ಜನರು ಉತ್ತಮ ಗಾಳಿ, ಮಳೆ ಹಾಗೂ ಮಣ್ಣು ಇಲ್ಲದೇ ಬದುಕುವಂತಾ ಸ್ಥಿತಿ ನಿರ್ಮಾಣವಾಗಿದೆ. ಅಂತರ್ಜಲ ಕಡಿಮೆ ಆಗುತ್ತಿದೆ. ಓಝೋನ್ ಪದರ ಹಾನಿ ಸೇರಿದಂತೆ ಹಲವು ಸಮಸ್ಯೆಗಳು ಕಾಡುತ್ತಿವೆ.
ಸದೃಢ ಆರೋಗ್ಯಕ್ಕೆ ಬೇಕು ಜೀವಸತ್ವಗಳು
ಆದರೆ ವ್ಯಕ್ತಿಯು ಆರೋಗ್ಯವಾಗಿ ಬದುಕಲು ಪ್ರಕೃತಿದತ್ತ ಅಂಶಗಳು ಹಾಗೂ ಆಹಾರ ತುಂಬಾ ಮುಖ್ಯ ಪಾತ್ರ ವಹಿಸುತ್ತದೆ. ಯಾಕಂದ್ರೆ ಆರೋಗ್ಯಕ್ಕೆ ಬೇಕಾದ ಬಹುತೇಕ ಅಂಶಗಳು ಸಿಗುವುದೇ ಆಹಾರದಿಂದ. ಹಾಗಾಗಿ ಆಹಾರ ಸೇವನೆ ಮತ್ತು ಕುಡಿಯುವ ನೀರು ತುಂಬಾ ಮುಖ್ಯ ಪಾತ್ರ ವಹಿಸುತ್ತದೆ.
ದೇಹ ಮತ್ತು ಮಾನಸಿಕ ಆರೋಗ್ಯಕ್ಕೆ ಜೀವಸತ್ವ ಮತ್ತು ಖನಿಜಗಳು ಅತ್ಯಂತ ಅವಶ್ಯಕ. ದೇಹದಲ್ಲಿ ಅವುಗಳ ಮಟ್ಟ ಕಡಿಮೆ ಆಗುತ್ತಾ ಹೋದರೆ ಮಾನಸಿಕ ಆರೋಗ್ಯ ಹದಗೆಡುತ್ತಾ ಹೋಗುತ್ತದೆ. ಕೆಲವು ಜೀವಸತ್ವಗಳು ಮತ್ತು ಖನಿಜಗಳ ಕೊರತೆಯಿಮದ ಆತಂಕ ಹಾಗೂ ಅಸ್ವಸ್ಥತೆ ಕಾಡುತ್ತದೆ.
ಆತಂಕ ಮತ್ತು ಅಸ್ವಸ್ಥತೆ
ಸಾಮಾನ್ಯವಾಗಿ ವ್ಯಕ್ತಿಯು ಬೇರೆ ಪ್ರದೇಶಕ್ಕೆ ಹೋದಾಗ, ನಿರ್ಜನ ಪ್ರದೇಶದಲ್ಲಿದ್ದಾಗ, ಮನಸ್ಸಿನಲ್ಲಿ ಹಲವು ಆಲೋಚನೆಗಳಿದ್ದಾಗ ಆತಂಕ ಪಡುತ್ತಾನೆ. ಕೆಲವೊಮ್ಮೆ ಜೀವನದಲ್ಲಿ ಬರುವ ಕಠಿಣ ಸವಾಲುಗಳು, ಸಂಷ್ಟದ ಪರಿಸ್ಥಿತಿಯಿಂದಾಗಿ ಆತಂಕ ಎದುರಿಸುತ್ತಾನೆ. ಇದು ಸಾಮಾನ್ಯವಾಗಿದೆ.
ಈ ರೀತಿಯ ಸ್ಥಿತಿ ಹೆಚ್ಚುತ್ತಾ ಹೋದರೆ ಅದನ್ನು ಆತಂಕದ ಅಸ್ವಸ್ಥತೆ ಎಂದು ಕರೆಯುತ್ತಾರೆ. ಉದಾಹರಣೆಗೆ ನೀವು ಕೆಲಸ ಮಾಡುತ್ತಿರುವ ಸ್ಥಳಕ್ಕೆ ಏಕಾಏಕಿ ಬಾಸ್ ಬಂದು ಪ್ರಶ್ನೆ ಮಾಡಿದ್ರೆ ನೀವು ಭಯ ಹಾಗೂ ಆತಂಕ ಎದುರಿಸುವುದು ಆಗಿದೆ.
ಆತಂಕದ ಅಸ್ವಸ್ಥತೆ ಲಕ್ಷಣಗಳು
ಇನ್ನು ಆತಂಕದ ಅಸ್ವಸ್ಥತೆ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಯಾಕಂದ್ರೆ ವ್ಯಕ್ತಿಯಿಂದ ವ್ಯಕ್ತಿಗೆ ಆಲೋಚನೆಗಳು ಭಿನ್ನವಾಗಿರುತ್ತವೆ. ಹಾಗಾಗಿ ಒಟ್ಟಿಗೆ ಮತ್ತು ಪ್ರತ್ಯೇಕವಾಗಿ ಬರುತ್ತವೆ.
ಆತಂಕದ ಅಸ್ವಸ್ಥತೆ ಕಾಡಿದಾಗ ಸಾಮಾನ್ಯವಾಗಿ ಬೆವರುವುದು, ವೇಗದ ಹೃದಯ ಬಡಿತ, ವೇಗದ ಉಸಿರಾಟ, ದೇಹದಲ್ಲಿ ನಡುಕ, ಹಠಾತ್ ದೌರ್ಬಲ್ಯ ಉಂಟಾಗುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ವಿಟಮಿನ್ ಡಿ ಮತ್ತು ವಿಟಮಿನ್ ಕೆ
ಹಾರ್ಮೋನ್ ತಜ್ಞೆ ಡಾ.ತಾರಾ ಸ್ಕಾಟ್ ಪ್ರಕಾರ, ಯಾರಲ್ಲಿ ಹೆಚ್ಚು ಆತಂಕದ ಅಸ್ವಸ್ಥತೆ ಕಂಡು ಬರುತ್ತದೆಯೋ ಅವರು ವಿಟಮಿನ್ ಡಿ ಮತ್ತು ವಿಟಮಿನ್ ಕೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳಬೇಕು ಅಂತಾರೆ. ಯಾಕಂದ್ರೆ ಸೂರ್ಯನ ಬೆಳಕು ಕಡಿಮೆ ಇರುವ ಜಾಗದಲ್ಲಿ ವಾಸಿಸುತ್ತಿರುವವರು ಆತಂಕದ ಅಸ್ವಸ್ಥತೆಗೆ ತುತ್ತಾಗುತ್ತಾರೆ. ವಿಟಮಿನ್ ಕೆ 2 ಮತ್ತು ವಿಟಮಿನ್ ಡಿ ಕೊರತೆ ಆತಂಕದ ಅಸ್ವಸ್ಥತೆಗೆ ಕಾರಣವಾಗುತ್ತದೆ ಅಂತಾರೆ ತಜ್ಞರು.
ಬಿ ಕಾಂಪ್ಲೆಕ್ಸ್ ಕೊರತೆ
ಬಿ ಕಾಂಪ್ಲೆಕ್ಸ್ ಅಂದ್ರೆ ಎಲ್ಲಾ ರೀತಿಯ ಜೀವಸತ್ವಗಳ ಗುಂಪು ಆಗಿದೆ. ಇದನ್ನು ಬಿ ಕಾಂಪ್ಲೆಕ್ಸ್ ಎಂದು ಕರೆಯುತ್ತಾರೆ. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯದ ಅನೇಕ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ. ದೇಹದಲ್ಲಿ ಬಿ ಜೀವಸತ್ವ ಕೊರತೆ ಅನುಭವಿಸಿದರೆ ದೇಹದಲ್ಲಿ ಸಿರೊಟೋನಿನ್, ಡೋಪಮೈನ್ ಮತ್ತು ಇತರ ನರ ತೊಂದರೆ ಉಂಟಾಗುತ್ತದೆ.
ಸತು ಮತ್ತು ತಾಮ್ರ
ದೇಹದಲ್ಲಿ ಸತು ಮತ್ತು ತಾಮ್ರ ಕೊರತೆಯು ಆತಂಕದ ಅಸ್ವಸ್ಥತೆಗೆ ಕಾರಣವಾಗಬಹುದು. ಇವೆರಡರ ಮಟ್ಟ ತಿಳಿಯಿರಿ.
ಮೆಗ್ನೀಸಿಯಮ್ ಕೊರತೆ
ಮಾನಸಿಕ ಆರೋಗ್ಯಕ್ಕೆ ಮೆಗ್ನೀಸಿಯಮ್ ಪ್ರಯೋಜನಕಾರಿ. ಈ ಖನಿಜದ ಕೊರತೆ ಆತಂಕ ಹಾಗೂ ಖಿನ್ನತೆ ಉಂಟು ಮಾಡುತ್ತದೆ.
ಇದನ್ನೂ ಓದಿ: ದೇಹಕ್ಕೆ ಕ್ಯಾಲ್ಸಿಯಂ ಒದಗಿಸಲು ಈ ಸೂಪರ್ ಫುಡ್ ಸೇವಿಸಿ
ಒಮೆಗಾ 3
ಒಮೆಗಾ 3 ಕೊಬ್ಬಿನಾಮ್ಲ ಕೊರತೆ ಮಾನಸಿಕ ಆರೋಗ್ಯ ಹದಗೆಡಿಸುತ್ತದೆ. ಇದು ಆತಂಕದ ಅಸ್ವಸ್ಥತೆಗೆ ಕಾರಣವಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ