• Home
  • »
  • News
  • »
  • lifestyle
  • »
  • Fridge And Vegetables: ಈ ತರಕಾರಿಗಳನ್ನು ಫ್ರಿಡ್ಜ್​​ನಲ್ಲಿಟ್ಟು ನಂತರ ಸೇವಿಸಲೇಬಾರದು, ಎಚ್ಚರ!

Fridge And Vegetables: ಈ ತರಕಾರಿಗಳನ್ನು ಫ್ರಿಡ್ಜ್​​ನಲ್ಲಿಟ್ಟು ನಂತರ ಸೇವಿಸಲೇಬಾರದು, ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಫ್ರಿಡ್ಜ್ ನಲ್ಲಿ ತುಂಬಾ ದಿನದವರೆಗೆ ಸಂಗ್ರಹಿಸಿಟ್ಟು ಪದಾರ್ಥಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಅದರಲ್ಲೂ ಕೆಲವು ತರಕಾರಿ ಹಾಗೂ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಟ್ಟು ತಿನ್ನಬಾರದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

  • Share this:

     ಈಗೆಲ್ಲಾ ಪ್ರತಿಯೊಬ್ಬರ ಮನೆಯಲ್ಲೂ (Home) ಫ್ರಿಡ್ಜ್ (Fridge) ಇದೆ. ತಮಗಿಷ್ಟದ ಆಹಾರವನ್ನು (Food) ಅದರಲ್ಲಿ ಸಂಗ್ರಹಿಸಿಟ್ಟು ತಿನ್ನಬಹುದು. ಫ್ರಿಡ್ಜ್ ಇದ್ರೆ ಆಹಾರ ಬೇಗ ಹಾಳಾಗುವುದಿಲ್ಲ. ವಿಶೇಷವಾಗಿ ತರಕಾರಿ (Vegetables) ಕೊಂಡಾಗ ಬೇಗ ಹಾಳಾಗುವುದನ್ನು ತಡೆಯಲು ಫ್ರಿಡ್ಜ್ ಸಹಾಯ ಮಾಡುತ್ತದೆ. ಬೇಸಿಗೆ ಕಾಲದಲ್ಲಿ ತರುವ ತಂಪು ಪಾನೀಯಗಳು (Cold Drinks), ಐಸ್ ಕ್ರೀಂ ಸೇರಿದಂತೆ ಜ್ಯೂಸ್ ಹಾಗೂ ಇತರೆ ತಂಪು ವಸ್ತುಗಳನ್ನು ಸಂಗ್ರಹಿಸಿಡಲು ಫ್ರಿಡ್ಜ್ ಸಹಾಯ ಮಾಡುತ್ತದೆ. ಅಂದ ಹಾಗೇ ಫ್ರಿಡ್ಜ್ ಇದ್ರೆ ಹಸಿರು ತರಕಾರಿಗಳ (Green Vegetables) ಸಂಗ್ರಹಕ್ಕೆ ಅನುಕೂಲ ಆಗುತ್ತದೆ. ಎಷ್ಟೋ ಸಲ ದಿನವೂ ಬಳಕೆಗೆ ತರುವ ಹಸಿರು ಸೊಪ್ಪು ತರಕಾರಿ ಬೇಗ ಹಾಳಾಗುತ್ತದೆ.


    ಫ್ರಿಡ್ಜ್ ನಲ್ಲಿ ಯಾವೆಲ್ಲಾ ತರಕಾರಿಗಳನ್ನು ಇಡಬಾರದು?


    ಇದನ್ನು ತಡೆಯಲು ಫ್ರಿಡ್ಜ್ ಬೇಕು ಅನ್ನಿಸುತ್ತದೆ. ಅಷ್ಟೇ ಯಾಕೆ, ದಿನವೂ ಕೊಳ್ಳುವ ಹಾಲಿನ ಪ್ಯಾಕೆಟ್, ಮೊಸರು, ಬೆಣ್ಣೆಯನ್ನೂ ಸಹ ಫ್ರಿಡ್ಜ್ ನಲ್ಲಿ ಇಟ್ಟು ತುಂಬಾ ದಿನದವರೆಗೆ ಸೇವನೆ ಮಾಡಬಹುದು.


    ಫ್ರಿಡ್ಜ್ ನಲ್ಲಿ ಹೀಗೆ ತುಂಬಾ ದಿನದವರೆಗೆ ಸಂಗ್ರಹಿಸಿಟ್ಟು, ಪದಾರ್ಥಗಳನ್ನು ತಿನ್ನುವುದು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಅದರಲ್ಲೂ ಕೆಲವು ತರಕಾರಿ ಹಾಗೂ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಟ್ಟು ತಿನ್ನಬಾರದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.




    ಬನ್ನಿ ಹಾಗಿದ್ರೆ ಫ್ರಿಡ್ಜ್ ನಲ್ಲಿ ಸಂಗ್ರಹಿಸಿಟ್ಟು ತಿನ್ನಬಾರದ ತರಕಾರಿಗಳು ಯಾವವು? ಮತ್ತು ಯಾಕೆ ಅವುಗಳನ್ನು ಫ್ರಿಡ್ಜ್ ನಲ್ಲಿಟ್ಟು ತಿನ್ನಬಾರದು ಅಂತಾ ನೋಡೋಣ.


    ಫ್ರಿಡ್ಜ್ ನಲ್ಲಿ ಈ ತರಕಾರಿಗಳನ್ನು ಇಟ್ಟು ಸೇವಿಸಬೇಡಿ!


    ಹಲವು ಸಲ ಆಹಾರ ಅಥವಾ ಕೊಂಡು ತಂದ ಪದಾರ್ಥಗಳು, ಅದರಲ್ಲೂ ತರಕಾರಿಗಳು ಕೆಡುವುದನ್ನು ತಪ್ಪಿಸಲು ಫ್ರಿಡ್ಜ್ ಬಳಸುತ್ತೇವೆ. ಬೇಯಿಸಿದ ಆಹಾರ ಮತ್ತು ಆಹಾರ ಪದಾರ್ಥಗಳನ್ನು ರೆಫ್ರಿಜರೇಟರ್‌ ನಲ್ಲಿ ಇಟ್ಟು ಕೆಲವು ದಿನಗಳವರೆಗೆ ಬಳಕೆ ಮಾಡುತ್ತಾರೆ.


    ಫ್ರಿಜ್ ಈ ಆಹಾರಗಳನ್ನು ತಾಜಾ ಆಗಿಡಲು ಸಹಾಯ ಮಾಡುತ್ತದೆ. ಆದರೆ ಫ್ರಿಡ್ಜ್‌ ನಲ್ಲಿ ಆಹಾರ ಇಡುವಾಗ ತುಂಬಾ ಜಾಗ್ರತೆ ವಹಿಸಬೇಕು. ಯಾಕಂದ್ರೆ ಫ್ರಿಡ್ಜ್‌ನಲ್ಲಿಟ್ಟ ನಂತರ ಕೆಲವು ಪದಾರ್ಥಗಳು ಬೇಗ ಹಾಳಾಗುತ್ತವೆ. ಮತ್ತು ದೇಹದಲ್ಲಿ ವಿಷ ಉತ್ಪತ್ತಿ ಮಾಡುತ್ತವೆ.


    ಯಾವೆಲ್ಲಾ ತರಕಾರಿ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿಟ್ಟು ಸೇವನೆ ಮಾಡಬಾರದು ಎಂಬ ಬಗ್ಗೆ ಪೌಷ್ಟಿಕ ತಜ್ಞೆ ಶ್ವೇತಾ ಷಾ ಹೇಳಿದ್ದಾರೆ. ಈ ತರಕಾರಿಗಳನ್ನು ಅಪ್ಪಿ ತಪ್ಪಿಯೂ ಫ್ರಿಡ್ಜ್ ನಲ್ಲಿ ಇಟ್ಟು ಸೇವನೆ ಮಾಡಬಾರದು ಎಂದು ಹೇಳಿದ್ದಾರೆ.


    ಯಾಕೆ ಈ ತರಕಾರಿಗಳನ್ನು ಫ್ರಿಡ್ಜ್ ನಲ್ಲಿಟ್ಟು ಸೇವನೆ ಮಾಡಬಾರದು ಎಂದು ಸಹ ಅವರು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಹಾಗಾಗಿ ಈ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸಿಟ್ಟು ಸೇವನೆ ಮಾಡುವುದನ್ನು ತಪ್ಪಿಸಿ.


    ಈರುಳ್ಳಿ


    ಈರುಳ್ಳಿಯನ್ನು ಫ್ರಿಜ್ ನಲ್ಲಿ ಸಂಗ್ರಹಿಸಿ ಇಡಬಾರದು ಅಂತಾರೆ ತಜ್ಞರು. ಫ್ರಿಡ್ಜ್ ನಲ್ಲಿ ಈರುಳ್ಳಿಯನ್ನು ಸಂಗ್ರಹಿಸಿಟ್ಟರೆ ಅದು ತನ್ನ ತೇವಾಂಶ ಕಳೆದುಕೊಳ್ಳುತ್ತದೆ. ಅವುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಅಥವಾ ಆಲೂಗಡ್ಡೆ ಇರುವ ಸ್ಥಳದಲ್ಲಿ ಇಡಬಾರದು ಎಂದು ಹೇಳಿದ್ದಾರೆ.


    ಸಾಂದರ್ಭಿಕ ಚಿತ್ರ


    ಬೆಳ್ಳುಳ್ಳಿ


    ಬೆಳ್ಳುಳ್ಳಿಯನ್ನೂ ಸಹ ರೆಫ್ರಿಜರೇಟರ್‌ ನಲ್ಲಿ ಸಂಗ್ರಹಿಸಿಟ್ಟು ಸೇವನೆ ಮಾಡದಂತೆ ತಿಳಿಸಿದ್ದಾರೆ. ಯಾಕಂದ್ರೆ ಬೆಳ್ಳುಳ್ಳಿ ಬೇಗ ಒಣಗಿ ರಬ್ಬರ್ ನಂತಾಗುತ್ತದೆ. ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಯಾವಾಗಲೂ ಶುಷ್ಕ ಮತ್ತು ತಂಪಾದ ಸ್ಥಳದಲ್ಲಿ ಇಡಬೇಕು.


    ಟೊಮೆಟೊ


    ತರಕಾರಿಗಳಲ್ಲಿ ಟೊಮೆಟೋ ಎಲ್ಲರೂ ಬಳಕೆ ಮಾಡುತ್ತಾರೆ. ಟೊಮೆಟೋವನ್ನು ವಾರದವರೆಗೆ ಸಂಗ್ರಹಿಸಿಟ್ಟು ತಿನ್ನುತ್ತಾರೆ. ಹೀಗಾಗಿ ಇದನ್ನು ಹೆಚ್ಚಾಗಿ ಫ್ರಿಡ್ಜ್ನಲ್ಲಿ ಇಡಲಾಗುತ್ತದೆ. ಟೊಮೆಟೊಗಳನ್ನು ಫ್ರಿಡ್ಜ್ ನಲ್ಲಿ ಸಂಗ್ರಹಿಸಿಟ್ಟರೆ ಅವುಗಳ ರುಚಿ, ಸುವಾಸನೆ, ರಸ ಕಳೆದು ಹೋಗುತ್ತದೆ.


    ಹೀಗೆ ಫ್ರಿಡ್ಜ್ ನಲ್ಲಿ ಟೊಮೆಟೊಗಳನ್ನು ಸಂಗ್ರಹಿಸಿಟ್ಟರೆ ಪೋಷಣೆ ಹಾಳಾಗುತ್ತದೆ. ಟೊಮೆಟೊಗಳನ್ನು ಕೋಣೆಯ ಉಷ್ಣಾಂಶವಿದ್ದಲ್ಲಿ ಸಂಗ್ರಹಿಸಿಡಬೇಕು.


    ಇದನ್ನೂ ಓದಿ: ಹೃದಯಾಘಾತಕ್ಕೂ ಮುನ್ನ ಈ ಲಕ್ಷಣಗಳು ಕಂಡು ಬರುತ್ತವೆ, ನಿರ್ಲಕ್ಷಿಸಬೇಡಿ


    ಕ್ಯಾಪ್ಸಿಕಂ


    ಕ್ಯಾಪ್ಸಿಕಂ ಅನ್ನು ಫ್ರಿಜ್ ನಲ್ಲಿಟ್ಟು ಬಳಸುವುದನ್ನು ನಿಲ್ಲಿಸಿ. ಯಾಕಂದ್ರೆ ಇದು ಕ್ಯಾಪ್ಸಿಕಂನ ಚರ್ಮವು ಮೃದುವಾಗಿಸುತ್ತದೆ. ರುಚಿ ಸಂಪೂರ್ಣವಾಗಿ ಹಾಳಾಗುತ್ತದೆ.

    Published by:renukadariyannavar
    First published: