Healthy Vegetables: ಯಾವ ತರಕಾರಿಗಳನ್ನು ಬೇಯಿಸಿ ತಿನ್ನುವುದು ಹೆಚ್ಚು ಆರೋಗ್ಯಕ್ಕೆ ಒಳ್ಳೆಯದು?

ಕೆಲವು ತರಕಾರಿಗಳನ್ನು ಬೇಯಿಸಿದಾಗ ಹೆಚ್ಚು ಪೌಷ್ಟಿಕಯುಕ್ತವಾಗಿರುತ್ತವೆ. ಅಡುಗೆ ಮಾಡಿ ವಿವಿಧ ರೆಸಿಪಿ ಮಾಡಿ ಸೇವನೆ ಮಾಡುವುದು ಸಾಕಷ್ಟು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಯಾವ ತರಕಾರಿಗಳನ್ನು ಬೇಯಿಸಿದಾಗ ಹೆಚ್ಚು ಪೌಷ್ಟಿಕವಾಗುತ್ತವೆ ಎಂದು ಇಲ್ಲಿ ನೋಡೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಪೌಷ್ಠಿಕಾಂಶಯುಕ್ತ (Nutrition) ಮತ್ತು ಹೆಲ್ದೀ (Healthy) ಆಹಾರ ಸೇವನೆ (Food Eating) ತುಂಬಾ ಮುಖ್ಯ. ಇಂದಿನ ದಿನಗಳಲ್ಲಿ ಹಸಿರು ತರಕಾರಿಗಳನ್ನು (Green Vegetables) ಹೆಚ್ಚೆಚ್ಚು ಸೇವನೆ ಮಾಡಬೇಕು. ವ್ಯಕ್ತಿಯೊಬ್ಬ ಆರೋಗ್ಯವಾಗಿರಬೇಕಾದರೆ, ಆತ ಆಹಾರ ಸೇವನೆಯ ಬಗ್ಗೆ ಮತ್ತು ಏನು ತಿನ್ನುತ್ತಿದ್ದಾನೆ, ಕುಡಿಯುತ್ತಿದ್ದಾನೆ ಎಂಬುದರ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಹೆಲ್ದೀ ಆಹಾರ ಸೇವನೆ ಮಾಡಲು ಬಯಸುತ್ತಾರೆ. ಜೊತೆಗೆ ತೂಕ ಇಳಿಕೆಗೆ ಸಾಕಷ್ಟು ಪ್ರಯತ್ನ ಮಾಡುತ್ತಿರುವವರು ತಮ್ಮ ಆಹಾರ ಸೇವನೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಯಾಕೆಂದರೆ ಜಂಕ್ ಫುಡ್, ಸಂಸ್ಕರಿಸಿದ ಆಹಾರಗಳು ಆರೋಗ್ಯವನ್ನು ಹಾಳು ಮಾಡುತ್ತವೆ.

    ಯಾವ ತರಕಾರಿಗಳನ್ನು ಬೇಯಿಸಿ ತಿನ್ನುವುದು ಹೆಚ್ಚು ಪೌಷ್ಟಿಕವಾಗಿರುತ್ತದೆ?

    ಹಸಿ ಮತ್ತು ಹಸಿರು ತರಕಾರಿಗಳ ಸೇವನೆ ಸಾಕಷ್ಟು ಆರೋಗ್ಯಕ್ಕೆ ಒಳ್ಳೆಯದು. ಆದರೆ ಇವುಗಳನ್ನು ತಿನ್ನುವುದು ಆರೋಗ್ಯಕ್ಕೆ ಉತ್ತಮ ಎಂಬುದು ಇದರ ಹಿಂದಿನ ತರ್ಕ. ಆದಾಗ್ಯೂ, ಎಲ್ಲಾ ಕಚ್ಚಾ ತರಕಾರಿಗಳು ಹೆಚ್ಚು ಪೌಷ್ಟಿಕಾಂಶ ಪ್ರಮಾಣ ಹೊಂದಿರುತ್ತವೆ ಎಂಬುದು ನಿಜವಲ್ಲ.

    ನಿಜದ ಸಂಗತಿ ಅಂದ್ರೆ ಕೆಲವು ತರಕಾರಿಗಳನ್ನು ಬೇಯಿಸಿದಾಗ ಹೆಚ್ಚು ಪೌಷ್ಟಿಕಯುಕ್ತವಾಗಿರುತ್ತವೆ. ಯಾವ ತರಕಾರಿಗಳನ್ನು ಬೇಯಿಸಿದಾಗ ಹೆಚ್ಚು ಪೌಷ್ಟಿಕವಾಗುತ್ತವೆ ಎಂದು ಇಲ್ಲಿ ನೋಡೋಣ. ಅಂತಹ ಕೆಲವು ತರಕಾರಿಗಳ ಬಗ್ಗೆ ತಿಳಿಯೋಣ. ಅವುಗಳನ್ನು ಅಡುಗೆ ಮಾಡಿ ವಿವಿಧ ರೆಸಿಪಿ ಮಾಡಿ ಸೇವನೆ ಮಾಡುವುದು ಸಾಕಷ್ಟು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

    ಇದನ್ನೂ ಓದಿ: ಮಳೆಗಾಲದಲ್ಲಿ ವೇಟ್ ಲಾಸ್ ಹಾಗೂ ಡಯಟ್ ಮುಂದುವರೆಸಲು ಏನು ಮಾಡಬೇಕು ಗೊತ್ತಾ?

    ಶತಾವರಿ ತರಕಾರಿ

    ಎಲ್ಲಾ ಜೀವಿಗಳಂತೆ ತರಕಾರಿಗಳು ಜೀವಕೋಶ ಹೊಂದಿರುತ್ತವೆ. ಅಂತಹ ಸ್ಥಿತಿಯಲ್ಲಿ ತರಕಾರಿಗಳಲ್ಲಿನ ಕೆಲವು ಪ್ರಮುಖ ಪೋಷಕಾಂಶಗಳು ಕೆಲವೊಮ್ಮೆ ಈ ಜೀವಕೋಶಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತವೆ. ತರಕಾರಿಗಳನ್ನು ಬೇಯಿಸಿದಾಗ, ಈ ಜೀವಕೋಶಗಳು ಒಡೆಯುತ್ತವೆ. ಇದರಿಂದ ಪೋಷಕಾಂಶಗಳು ಸೋರಿಕೆಯಾಗಿ, ಆಹಾರದಲ್ಲಿ ಸೇರಿ, ಊಟದ ಮೂಲಕ ನಮ್ಮ ದೇಹವನ್ನು ಸೇರುತ್ತವೆ.

    ದೇಹವು ಅಂತಹ ಪೋಷಕಾಂಶಗಳನ್ನು ಅತ್ಯಂತ ಸುಲಭವಾಗಿ ಹೀರಿಕೊಳ್ಳುತ್ತದೆ. ಅಡುಗೆ ಮಾಡಿದಾಗ ಶತಾವರಿಯು ಅದರ ಜೀವಕೋಶಗಳನ್ನು ಒಡೆಯುತ್ತದೆ. ಆಗ ಇದರಿಂದ ವಿಟಮಿನ್ ಎ, ಬಿ9, ಸಿ ಮತ್ತು ಇ ಅನ್ನು ಬಿಡುಗಡೆ ಮಾಡುತ್ತದೆ. ಶತಾವರಿ ತರಕಾರಿ ಸೇವನೆ ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗಿದೆ.

    ಇದು ಮಹಿಳೆಯರ ಸಂತಾನೋತ್ಪತ್ತಿ ಹಾರ್ಮೋನುಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಅವರ ಲೈಂಗಿಕ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಹೇಳಲಾಗಿದೆ. ಜೊತೆಗೆ ಇದು ಅನೇಕ ದೀರ್ಘ ಕಾಲದ ಕಾಯಿಲೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

    ಅಣಬೆ

    ಅಣಬೆಗಳು ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕ ಎರ್ಗೋಥಿಯೋನಿನ್ ನ್ನು ಹೊಂದಿವೆ. ಇದು ಅಣಬೆಯನ್ನು ಅಡುಗೆ ಪಾಕ ವಿಧಾನದ ಸಮಯದಲ್ಲಿ ಬಿಡುಗಡೆ ಆಗುತ್ತದೆ. ಉತ್ಕರ್ಷಣ ನಿರೋಧಕಗಳು ನಮ್ಮ ಜೀವಕೋಶಗಳಿಗೆ ಹಾನಿ ಮಾಡುವ ರಾಸಾಯನಿಕಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಜೀವಕೋಶಗಳಿಗೆ ಹಾನಿಯಾದರೆ ರೋಗಗಳು ಮತ್ತು ವಯಸ್ಸಾಗುವಿಕೆ ಹೆಚ್ಚಾಗುತ್ತದೆ.

    ಪಾಲಕ್ ಸೊಪ್ಪು

    ಪಾಲಕ್ ಸೊಪ್ಪು ಕಬ್ಬಿಣ, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಸತುವು ಸೇರಿದಂತೆ ಕೆಲವು ಮುಖ್ಯ ಪೋಷಕಾಂಶಗಳನ್ನು ಹೊಂದಿದ್ದು, ಸಮೃದ್ಧವಾಗಿದೆ. ಪಾಲಕ್ ಸೊಪ್ಪನ್ನು ಬೇಯಿಸಿದಾಗ ಈ ಪೋಷಕಾಂಶಗಳು ಸುಲಭವಾಗಿ ಹೀರಲ್ಪಡುತ್ತವೆ. ಏಕೆಂದರೆ ಪಾಲಕ್ ಸೊಪ್ಪು, ಆಕ್ಸಲಿಕ್ ಆಮ್ಲವನ್ನು ಹೊಂದಿದೆ.

    ಇದು ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಪ್ರತಿಬಂಧಿಸುತ್ತದೆ. ಪಾಲಕ್ ಸೊಪ್ಪನ್ನು ಬಿಸಿ ಮಾಡಿದಾಗ ಒಂದು ರೀತಿಯ ಕ್ಯಾಲ್ಸಿಯಂ ಬಿಡುಗಡೆಯಾಗುತ್ತದೆ. ಇದನ್ನು ದೇಹವು ಅಗತ್ಯಕ್ಕೆ ಅನುಗುಣವಾಗಿ ಹೀರಿಕೊಳ್ಳುತ್ತದೆ. ಪಾಲಕ್ ಸೊಪ್ಪನ್ನು ಬೇಯಿಸಿದಾಗ ಅದು ಫೋಲೇಟ್ (B9) ಮಟ್ಟವನ್ನು ನಿರ್ವಹಿಸುತ್ತದೆ ಎಂದು ಸಂಶೋಧನೆ ಹೇಳಿದೆ. ಇದು ಕೆಲವು ರೀತಿಯ ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.

    ಟೊಮೆಟೊ

    ಟೊಮೆಟೊ ತರಕಾರಿಯನ್ನು ಬೇಯಿಸುವುದು ಉತ್ಕರ್ಷಣ ನಿರೋಧಕ ಲೈಕೋಪೀನ್ ನ್ನು ಹೆಚ್ಚಿಸುತ್ತದೆ. ಟೊಮೆಟೊ ಬೇಯಿಸಿದಾಗ ಅದರ ದಪ್ಪ ಕೋಶಗಳನ್ನು ಒಡೆಯುತ್ತದೆ.  ಲೈಕೋಪೀನ್ ಹೃದ್ರೋಗ ಮತ್ತು ಕ್ಯಾನ್ಸರ್ ಸೇರಿದಂತೆ ಅನೇಕ ದೀರ್ಘ ಕಾಲದ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತದೆ. ಟೊಮೆಟೊದಲ್ಲಿ ಲೈಕೋಪೀನ್ ಪ್ರಮಾಣವು ಬೇಯಿಸಿದಾಗ ಹೆಚ್ಚಾಗುತ್ತದೆ.

    ಇದನ್ನೂ ಓದಿ: ಎಣ್ಣೆಯುಕ್ತ ಮುಖದಲ್ಲಿ ಕಾಣಿಸುವ ಬಿಳಿ ಮೊಡವೆ ತೆಗೆಯಲು ಸುಲಭ ಟಿಪ್ಸ್, ಟ್ರೈ ಮಾಡಿ

    ಕ್ಯಾರೆಟ್

    ಕಚ್ಚಾ ಕ್ಯಾರೆಟ್‌ಗಳಿಗಿಂತ ಬೇಯಿಸಿದ ಕ್ಯಾರೆಟ್‌ಗಳು ಹೆಚ್ಚು ಬೀಟಾ-ಕ್ಯಾರೋಟಿನ್ ಅನ್ನು ಹೊಂದಿರುತ್ತವೆ. ಇದನ್ನು ದೇಹವು ವಿಟಮಿನ್ ಎ ಆಗಿ ಪರಿವರ್ತಿಸುತ್ತದೆ. ಈ ಕೊಬ್ಬು ಕರಗುವ ವಿಟಮಿನ್ ಮೂಳೆ ಬೆಳವಣಿಗೆ, ದೃಷ್ಟಿ ಮತ್ತು ಪ್ರತಿರಕ್ಷಣಾ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ.
    Published by:renukadariyannavar
    First published: