Weight Loss: ತೂಕ ಇಳಿಸುವ ಜರ್ನಿಯಲ್ಲಿ ಈ ತರಕಾರಿಗಳ ಸೇವನೆ ಬೆಸ್ಟ್​!

ಆರೋಗ್ಯ ಮತ್ತು ತೂಕ ಇಳಿಕೆ ಪ್ರಯಾಣದ ಮೇಲೆ ತರಕಾರಿಗಳು ಪ್ರಭಾವ ಬೀರುತ್ತದೆ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಕಡಿಮೆ ಕ್ಯಾಲೋರಿ ಹೊಂದಿರುವ ತರಕಾರಿಗಳನ್ನು ಆಹಾರದಲ್ಲಿ ಸೇರಿಸುವುದು ಉತ್ತಮ ಕೆಲಸವಾಗಿದೆ. ಪಿಷ್ಟವಿಲ್ಲದ ತರಕಾರಿಗಳ ಸೇವನೆ ಬೊಜ್ಜು ಕಡಿಮೆ ಆಗುತ್ತದೆ.

ಆರೋಗ್ಯ ಮತ್ತು ತೂಕ ಇಳಿಕೆ ಪ್ರಯಾಣದ ಮೇಲೆ ತರಕಾರಿಗಳು ಪ್ರಭಾವ ಬೀರುತ್ತದೆ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಕಡಿಮೆ ಕ್ಯಾಲೋರಿ ಹೊಂದಿರುವ ತರಕಾರಿಗಳನ್ನು ಆಹಾರದಲ್ಲಿ ಸೇರಿಸುವುದು ಉತ್ತಮ ಕೆಲಸವಾಗಿದೆ. ಪಿಷ್ಟವಿಲ್ಲದ ತರಕಾರಿಗಳ ಸೇವನೆ ಬೊಜ್ಜು ಕಡಿಮೆ ಆಗುತ್ತದೆ.

ಆರೋಗ್ಯ ಮತ್ತು ತೂಕ ಇಳಿಕೆ ಪ್ರಯಾಣದ ಮೇಲೆ ತರಕಾರಿಗಳು ಪ್ರಭಾವ ಬೀರುತ್ತದೆ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಕಡಿಮೆ ಕ್ಯಾಲೋರಿ ಹೊಂದಿರುವ ತರಕಾರಿಗಳನ್ನು ಆಹಾರದಲ್ಲಿ ಸೇರಿಸುವುದು ಉತ್ತಮ ಕೆಲಸವಾಗಿದೆ. ಪಿಷ್ಟವಿಲ್ಲದ ತರಕಾರಿಗಳ ಸೇವನೆ ಬೊಜ್ಜು ಕಡಿಮೆ ಆಗುತ್ತದೆ.

  • Share this:
    ತೂಕ ನಿಯಂತ್ರಣ (Weight Control) ಮಾಡುವುದು ತುಂಬಾ ದೀರ್ಘಕಾಲದ (Long Time) ಪ್ರಯತ್ನದ ಫಲವಾಗಿ ಸಿಗುವಂಥದ್ದಾಗಿದೆ. ತೂಕ ಇಳಿಸುವವರು (Weight Loss) ಯಾವಾಗಲೂ ತಮ್ಮ ಜೀವನಶೈಲಿ (Lifestyle) ಮತ್ತು ಆಹಾರ ಕ್ರಮದ (Food Chart) ಬಗ್ಗೆ ಹೆಚ್ಚು ಗಮನ ಹರಿಸುವುದು ತುಂಬಾ ಮುಖ್ಯ. ಯಾಕಂದ್ರೆ ನಾವು ತಿನ್ನುವ ಆಹಾರವು ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಒಳ್ಳೆಯ ಮತ್ತು ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ನೀವು ಸೇವಿಸುವ ಆಹಾರವು ತೂಕ ಕಡಿಮೆ ಮಾಡುವ ಅಥವಾ ಹೆಚ್ಚಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ಹಾಗಾಗಿ ನೀವು ಯಾವ ಧಾನ್ಯ, ತರಕಾರಿ, ಮಾಂಸ ಸೇವನೆ ಮಾಡುತ್ತೀರಿ ಎಂಬ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

    ಯಾವ ಹಣ್ಣು ಮತ್ತು ತರಕಾರಿ ತೂಕ ಇಳಿಕೆಗೆ ಸಹಾಯ ಮಾಡುತ್ತದೆ?

    ನೀವು ಯಾವ ಹಣ್ಣುಗಳನ್ನು ತಿನ್ನಲು ಆಯ್ಕೆ ಮಾಡುತ್ತೀರಿ? ಮತ್ತು ಯಾವ ತರಕಾರಿಗಳನ್ನು ತಿನ್ನುತ್ತೀರಿ? ಎಂಬುದು ನಿಮ್ಮ ಆರೋಗ್ಯ ಮತ್ತು ತೂಕ ಇಳಿಕೆ ಪ್ರಯಾಣದ ಮೇಲೆ ಪ್ರಭಾವ ಬೀರುತ್ತದೆ. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಕಡಿಮೆ ಕ್ಯಾಲೋರಿ ಹೊಂದಿರುವ ತರಕಾರಿಗಳನ್ನು ಆಹಾರದಲ್ಲಿ ಸೇರಿಸುವುದು ಉತ್ತಮ ಕೆಲಸವಾಗಿದೆ.

    ಪಿಷ್ಟವಿಲ್ಲದ ತರಕಾರಿಗಳ ಸೇವನೆ ಬೊಜ್ಜು ಕಡಿಮೆ ಆಗುತ್ತದೆ. ಕಡಿಮೆ ಕ್ಯಾಲೋರಿ ಆಹಾರ, ಸಮೃದ್ಧ ಫೈಬರ್ ಮತ್ತು ವಿಟಮಿನ್ ತರಕಾರಿಗಳಲ್ಲಿ ಕಂಡು ಬರುತ್ತವೆ. ನೀವು ಹೆಚ್ಚು ತರಕಾರಿ ಸೇವನೆ ಮಾಡಿದರೆ ಅದು ದೇಹದಲ್ಲಿ ಹೆಚ್ಚುವರಿ ಕ್ಯಾಲೊರಿ ತೆಗೆದು ಹಾಕುತ್ತದೆ.

    ಇದನ್ನೂ ಓದಿ: ಆಗಾಗ ಶೀತ ಕಾಣಿಸಿಕೊಳ್ಳುತ್ತಿದ್ದರೆ ವಿಟಮಿನ್ ಸಿ ನಿಮ್ಮ ದೇಹ ಸೇರಲಿ

    ಇದು ನಿಮ್ಮ ಫಿಟ್ನೆಸ್ ನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ತೂಕ ನಷ್ಟಕ್ಕೆ ನೀವು ಯಾವ ತರಕಾರಿಗಳನ್ನು ಆಹಾರದ ಭಾಗವಾಗಿ ಮಾಡಿದರೆ ತೂಕ ಇಳಿಕೆ ಪ್ರಯಾಣ ಸುಲಭವಾಗುತ್ತದೆ ಎಂಬುದನ್ನು ನಾವು ಇಲ್ಲಿ ನೋಡೋಣ.

    ಪಾಲಕ್ ಸೊಪ್ಪು

    ನೀವು ಪಾಲಕ್ ಸೊಪ್ಪನ್ನು ಸೇವನೆ ಮಾಡಿದರೆ ಅದು ಬೆಲ್ಲಿ ಫ್ಯಾಟ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪಾಲಕವನ್ನು ಪೌಷ್ಟಿಕ ತರಕಾರಿ ಎಂದು ಪರಿಗಣಿಸಲಾಗಿದೆ. ಇದು ಫೈಬರ್ನಲ್ಲಿ ಸಮೃದ್ಧವಾಗಿದೆ. ಪಾಲಕ್ ಸೊಪ್ಪು ಎಲ್ಲಾ ಋತುಗಳಲ್ಲಿಯೂ ದೊರೆಯುತ್ತದೆ. ಪಾಲಕ್ ಕಬ್ಬಿಣ, ವಿಟಮಿನ್ ಎ, ಸಿ, ಕೆ, ಮೆಗ್ನೀಸಿಯಮ್ ಮತ್ತು ಮ್ಯಾಂಗನೀಸ್‌ನ ಮೂಲ ಆಗಿದೆ.

    ಕ್ಯಾರೆಟ್ ಸೇವನೆ ಮಾಡುವುದು

    ಕ್ಯಾರೆಟ್ ಸೀಸನ್ ಚಳಿಗಾಲದಲ್ಲಿದ್ದರೂ, ಇತ್ತೀಚಿನ ದಿನಗಳಲ್ಲಿ ನೀವು ಋತುವಿನ ಉದ್ದಕ್ಕೂ ಹೆಚ್ಚಿನ ತರಕಾರಿಗಳನ್ನು ಸುಲಭವಾಗಿ ಪಡೆಯಬಹುದು. ನಿಮ್ಮ ಆಹಾರದಲ್ಲಿ ನೀವು ಕ್ಯಾರೆಟ್ ಅನ್ನು ಸೇರಿಸಿ.  ಕ್ಯಾರೆಟ್ ಕಡಿಮೆ ಕ್ಯಾಲೋರಿ ಮತ್ತು ಪೋಷಕಾಂಶಗಳಿಂದ ಕೂಡಿದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಕ್ಯಾರೆಟ್ ವಿಟಮಿನ್ ಎ, ಬೀಟಾ ಕ್ಯಾರೋಟಿನ್ ಮತ್ತು ಫೈಬರ್‌ನ ಉತ್ತಮ ಮೂಲ ಆಗಿದೆ.

    ಬ್ರೊಕೊಲಿ ಸೇವನೆ ಮಾಡಿ

    ಕಡಿಮೆ ಕಾರ್ಬ್ ತರಕಾರಿಗಳಲ್ಲಿ ಬ್ರೊಕೊಲಿ ಸೇರಿದೆ. ಋತುವಿನ ಉದ್ದಕ್ಕೂ ನೀವು ಸುಲಭವಾಗಿ ಬ್ರೊಕೊಲಿ ಸೇವನೆ ಮಾಡಬಹುದು. ತೂಕ ಇಳಿಸಲು ಬಯಸುವವರು ಇದನ್ನು ತಮ್ಮ ಆಹಾರದಲ್ಲಿ ಸೇರಿಸಿ. ಬ್ರೊಕೊಲಿ ವಿಟಮಿನ್ ಸಿ ಮತ್ತು ಕೆ ಯ ಉತ್ತಮ ಮೂಲ ಆಗಿದೆ. ಇದು ಕಾರ್ಬೋಹೈಡ್ರೇಟ್‌ಗಳ ಪ್ರಮಾಣವನ್ನು ಕಡಿಮೆ ಹೊಂದಿದೆ. ನೀವು ಸಲಾಡ್, ಸೂಪ್ ಅಥವಾ ತರಕಾರಿ ರೂಪದಲ್ಲಿ ತಿನ್ನಬಹುದು.

    ಇದನ್ನೂ ಓದಿ: ಈ ಕೆಲವು ಚಟುವಟಿಕೆಗಳಿಂದ ಮಧುಮೇಹ ನಿಯಂತ್ರಿಸಿ!

    ಬೀಟ್ರೂಟ್ ಸೇವನೆ ಮಾಡಿ

    ಸ್ಥೂಲಕಾಯ ಕಡಿಮೆ ಮಾಡಲು, ಖಂಡಿತವಾಗಿಯೂ ಬೀಟ್ರೂಟ್ ಅನ್ನು ಸಲಾಡ್ ಅಥವಾ ಜ್ಯೂಸ್ ರೂಪದಲ್ಲಿ ಆಹಾರದಲ್ಲಿ ಸೇರಿಸಿ. ಬೀಟ್ರೂಟ್ ಕಡಿಮೆ ಕ್ಯಾಲೋರಿ ಮತ್ತು ಕೊಬ್ಬು ಮುಕ್ತ ತರಕಾರಿ ಆಗಿದೆ. ಇದು ಫೈಬರ್ ಮತ್ತು ವಿಟಮಿನ್‌ಗಳ ಉತ್ತಮ ಮೂಲವಾಗಿದೆ. ಬೀಟ್ರೂಟ್ ತಿನ್ನುವುದರಿಂದ ಕಬ್ಬಿಣದ ಕೊರತೆ ನಿವಾರಣೆ ಆಗುತ್ತದೆ. ಇದರ ಸೇವನೆ ಮಾಡುವುದು ದೀರ್ಘಕಾಲ ಹಸಿವು ತಡೆಯುತ್ತದೆ. ಬೊಜ್ಜು ಕಡಿಮೆ ಮಾಡುತ್ತದೆ.
    Published by:renukadariyannavar
    First published: