ನ್ಸರ್ ನಲ್ಲಿ (Cancer) ಹಲವು ವಿಧಗಳಿವೆ. ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ಕ್ಯಾನ್ಸರ್ ಗಳು ಜನರನ್ನು (People) ಬಾಧಿಸುತ್ತಿವೆ. ಕ್ಯಾನ್ಸರ್ ಎಂಬುದು ದೀರ್ಘಕಾಲದ ಕಾಯಿಲೆಯಾಗಿದೆ (Disease). ಕ್ಯಾನ್ಸರ್ ಒಮ್ಮೆ ಅಂಟಿದರೆ ಅದನ್ನು ಶಾಶ್ವತವಾಗಿ ಗುಣಪಡಿಲಸು ಆಗಲ್ಲ. ಹಾಗಾಗಿ ಕ್ಯಾನ್ಸರ್ ಬರದಂತೆ ಮುಂಜಾಗ್ರತೆ ವಹಿಸುವುದು ತುಂಬಾ ಮುಖ್ಯ. ಕ್ಯಾನ್ಸರ್ ಯಾರಿಗೆ ಬೇಕಾದ್ರೂ ಬರುತ್ತದೆ. ಇದು ದೇಹದ ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆ ಪರಿಣಾಮದಿಂದ ಉಂಟಾಗುತ್ತದೆ. ಒಂದು ಅಂಗದಲ್ಲಿ (Part) ಹುಟ್ಟಿಕೊಳ್ಳುವ ಈ ಕಾಯಿಲೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದೇ ಹೋದರೆ ಅದು ಇತರೆ ಭಾಗಗಳಿಗೂ ಹರಡುವ ಅಪಾಯ ಹೆಚ್ಚು ಇರುತ್ತದೆ. ಇದು ತುಂಬಾ ಗಂಭೀರ ಮತ್ತು ಮಾರಣಾಂತಿಕವಾಗುತ್ತದೆ.
ಲಿಂಗ ಆಧಾರಿತ ಕ್ಯಾನ್ಸರ್
ಹಾಗಾಗಿ ಕ್ಯಾನ್ಸರ್ ರೋಗ ಲಕ್ಷಣಗಳ ಬಗ್ಗೆ ಸರಿಯಾಗಿ ತಿಳಿವಳಿಕೆ ಹೊಂದುವುದು ಮತ್ತು ಅದರ ಬಗ್ಗೆ ನಿರ್ಲಕ್ಷ್ಯ ಮಾಡದಿರುವುದು ಮುಖ್ಯ. ಕೆಲವು ಕ್ಯಾನ್ಸರ್ ಗಳು ಲಿಂಗ ಆಧಾರಿತವಾಗಿವೆ. ಉದಾಹರಣೆಗೆ ಮಹಿಳೆಯರಲ್ಲಿ ಸ್ತ್ರೀರೋಗ ಕ್ಯಾನ್ಸರ್ ಕಂಡು ಬರುತ್ತದೆ. ಕ್ಯಾನ್ಸರ್ ನಲ್ಲಿ ಐದು ಮಾರಣಾಂತಿಕ ಕ್ಯಾನ್ಸರ್ ಗಳು ಇವೆ.
ಈ ಎಲ್ಲಾ ಕ್ಯಾನ್ಸರ್ ಗಳು ಒಂದಕ್ಕೊಂದು ಭಿನ್ನವಾಗಿವೆ. ಆದರೆ ಈ ಕ್ಯಾನ್ಸರ್ ಗಳ ರೋಗ ಲಕ್ಷಣಗಳು ಮಾತ್ರ ಸಾಮ್ಯತೆ ಹೊಂದಿರುತ್ತವೆ. ಹೀಗಾಗಿ ಎಷ್ಟೋ ಕ್ಯಾನ್ಸರ್ ಪ್ರಕರಣಗಳಲ್ಲಿ ಯಾವ ಕ್ಯಾನ್ಸರ್ ಆಗಿದೆ ಮತ್ತು ಯಾವ ಅಂಗದಿಂದ ಆರಂಭವಾಗಿದೆ ಎಂಬುದನ್ನು ಗುರುತಿಸುವಲ್ಲಿ ವಿಳಂಬ ಆಗಬಹುದು.
ಏನಿದು ಸ್ತ್ರೀರೋಗ ಕ್ಯಾನ್ಸರ್
ಸ್ತ್ರೀಯರ ಸಂತಾನೋತ್ಪತ್ತಿ ಅಂಗಗಳಲ್ಲಿ ಸಂಭವಿಸುವ ಕ್ಯಾನ್ಸರ್ ನ್ನು ಸ್ತ್ರೀರೋಗ ಕ್ಯಾನ್ಸರ್ ಎನ್ನಲಾಗುತ್ತದೆ. ಈ ಸ್ತ್ರೀರೋಗ ಕ್ಯಾನ್ಸರ್ ಮಹಿಳೆಯ ಸೊಂಟದ ಭಾಗಗಳಲ್ಲಿ ಹಾಗೂ ವಿವಿಧ ಅಂಗಗಳಲ್ಲಿ ರೂಪುಗೊಳ್ಳುವ ಸಾಧ್ಯತೆ ಹೆಚ್ಚು.
ಇದು ಕೆಳ ಹೊಟ್ಟೆ ಭಾಗ ಮತ್ತು ಸೊಂಟದ ಮೂಳೆಗಳ ನಡುವಿನ ಪ್ರದೇಶದಲ್ಲಿ ಆರಂಭವಾಗಬಹುದು. ಇದರಲ್ಲಿ ಗರ್ಭಕಂಠದ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್, ಯೋನಿ ಕ್ಯಾನ್ಸರ್, ವಲ್ವಾರ್ ಕ್ಯಾನ್ಸರ್ ಆಗುವುದನ್ನು ಕಾಣಬಹುದು.
ಸ್ತೀಯರಲ್ಲಿ ಕಂಡು ಬರುವ ಐದು ವಿಧದ ಕ್ಯಾನ್ಸರ್ ಗಳ ರೋಗ ಲಕ್ಷಣಗಳು ಹೀಗಿವೆ
ಸ್ತೀಯರಲ್ಲಿ ಕಂಡು ಬರುವ ಗರ್ಭಕಂಠದ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್, ಯೋನಿ ಕ್ಯಾನ್ಸರ್, ವಲ್ವಾರ್ ಕ್ಯಾನ್ಸರ್ ನಲ್ಲಿ ಈ ರೋಗ ಲಕ್ಷಣಗಳು ಕಾಣಿಸುತ್ತವೆ. ಅವುಗಳೆಂದರೆ ಯೋನಿ ರಕ್ತಸ್ರಾವ ವಿಸರ್ಜನೆ,
ಶ್ರೋಣಿಯಲ್ಲಿ ನೋವು ಉಂಟಾಗುವುದು, ಯೋನಿಯ ಸುತ್ತಮುತ್ತ ಪ್ರದೇಶದಲ್ಲಿ ತುರಿಕೆ, ಸುಡುವ ಸಂವೇದನೆ, ಮೂತ್ರ ಹಿಡಿದಿಟ್ಟುಕೊಳ್ಳುವಲ್ಲಿ ತೊಂದರೆ ಉಂಟಾಗುವುದು, ಹೊಟ್ಟೆ ಉಬ್ಬುವುದು, ಬೆನ್ನು ನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಯಾವ ಮಹಿಳೆಯರಲ್ಲಿ ಈ ಕ್ಯಾನ್ಸರ್ ಗಳು ಸಂಭವಿಸುವ ಅಪಾಯವಿದೆ?
ಯಾವ ಮಹಿಳೆ ಯಾವಾಗ ಬೇಕಾದರೂ ಈ ಗರ್ಭಕಂಠದ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ಗರ್ಭಾಶಯದ ಕ್ಯಾನ್ಸರ್, ಯೋನಿ ಕ್ಯಾನ್ಸರ್, ವಲ್ವಾರ್ ಕ್ಯಾನ್ಸರ್ ಗಳ ಅಪಾಯ ಎದುರಿಸಬಹುದು.
ಜೊತೆಗೆ ಯಾರು ಬೇರೆ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೋ ಅವರಲ್ಲಿ ಈ ಕ್ಯಾನ್ಸರ್ ಗಳು ಸಂಭವಿಸಬಹುದು. ಸ್ಥೂಲಕಾಯ ಹೊಂದಿದವರಲ್ಲಿ ಕ್ಯಾನ್ಸರ್ ಅಪಾಯವಿದೆ, 55 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು, ಎಚ್ ಪಿವಿ ಸೋಂಕು ಉಳ್ಳವರು ಮತ್ತು ಧೂಮಪಾನ, ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸ ಹೊಂದಿರುವವರಲ್ಲಿ ಅಪಾಯ ಹೆಚ್ಚು.
ಆರಂಭಿಕ ರೋಗ ನಿರ್ಣಯ ಮತ್ತು ಚಿಕಿತ್ಸೆ
ಸ್ತ್ರೀರೋಗ ಕ್ಯಾನ್ಸರ್ ಗಳ ರೋಗ ಲಕ್ಷಣಗಳು ಕಂಡು ಬಂದ ಕೂಡಲೇ ಪರೀಕ್ಷೆ ನಡೆಸಿ. ಆರಂಭಿಕ ಹಂತದಲ್ಲೇ ರೋಗ ನಿರ್ಣಯ ಮತ್ತು ಚಿಕಿತ್ಸೆ ನೀಡುವುದು ತುಂಬಾ ಮುಖ್ಯ. ಇಲ್ಲದಿದ್ದರೆ ಅದು ಮಾರಣಾಂತಿಕ ಹಂತ ತಲುಪುವ ಸಾಧ್ಯತೆ ಹೆಚ್ಚು. ತಜ್ಞರ ಜೊತೆ ಮಾತನಾಡಿ, ಸಲಹೆ ಪಡೆಯಿರಿ.
ಗರ್ಭಕಂಠದ ಮತ್ತು ಗರ್ಭಾಶಯದ ಕ್ಯಾನ್ಸರ್ ಪತ್ತೆ ಹಚ್ಚಲು ಪ್ಯಾಪ್ ಸ್ಮೀಯರ್ ಪರೀಕ್ಷೆ, ಯೋನಿ, ಗರ್ಭಕಂಠ, ಗರ್ಭಾಶಯ, ಫಾಲೋಪಿಯನ್ ಟ್ಯೂಬ್ಗಳು, ಅಂಡಾಶಯಗಳು ಮತ್ತು ಶ್ರೋಣಿ ಪರೀಕ್ಷೆ, ಎಂಡೊಮೆಟ್ರಿಯಲ್ ಅಂಗಾಂಶ ಪರೀಕ್ಷೆ ಮಾಡಿಸಬೇಕಾಗುತ್ತದೆ.
ಇದನ್ನೂ ಓದಿ: ಬ್ರೆಡ್ ತಿಂದ್ಮೇಲೆ ಸುಸ್ತು, ಹೊಟ್ಟೆಯುಬ್ಬರ ಸಮಸ್ಯೆ ಯಾಕೆ ಉಂಟಾಗುತ್ತದೆ?
ಸ್ತ್ರೀರೋಗ ಕ್ಯಾನ್ಸರ್ ತಡೆಗಟ್ಟುವುದು ಹೇಗೆ?
ಸ್ತ್ರೀರೋಗ ಕ್ಯಾನ್ಸರ್ ತಡೆಗಟ್ಟಲು ಎಚ್ ಪಿವಿ ಲಸಿಕೆ ಹಾಕಿಸುವಂತೆ ತಜ್ಞರು ಸೂಚಿಸುತ್ತಾರೆ. ನಿಯಮಿತ ತಪಾಸಣೆ ಮಾಡಿಸಿ, ಚಿಕಿತ್ಸೆ ಪಡೆಯಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ