Thyroid: ಥೈರಾಯ್ಡ್ ರೋಗಿಗಳಿಗೆ ಈ ರೀತಿಯ ಆಹಾರ ಸೇವನೆ ಸೂಕ್ತ! ಮಿಸ್ ಮಾಡಬೇಡಿ

ಹೈಪೋಥೈರಾಯ್ಡಿಸಮ್ ಇರುವ ಸ್ಥಿತಿ ಉಂಟಾದಾಗ ಅದು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮತ್ತು ಈ ಸ್ಥಿತಿ ಹೊಂದಿರುವ ಜನರು ತೂಕ ಕಳೆದುಕೊಳ್ಳಲು ಹರಸಾಹಸ ಪಡಬೇಕಾಗುತ್ತದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
    ಕಾಲರ್ ಮೂಳೆಯ (Bones) ಬಳಿ ಇರುವ ಚಿಟ್ಟೆಯ ಆಕಾರದ ಗ್ರಂಥಿಯನ್ನೇ (Gland) ಥೈರಾಯ್ಡ್ (Thyroid) ಗ್ರಂಥಿ ಎಂದು ಕರೆಯುತ್ತಾರೆ. ಗಂಟಲಿನ ಮುಂಭಾಗದಲ್ಲಿ ಥೈರಾಯ್ಡ್ ಗ್ರಂಥಿ ಕಂಡು ಬರುತ್ತದೆ. ಥೈರಾಯ್ಡ್‌ ಉಂಟಾಗಲು ಸಾಮಾನ್ಯ ಕಾರಣ (Causes) ಅಂದ್ರೆ ಆಟೋಇಮ್ಯೂನ್ ಥೈರಾಯ್ಡ್ ಕಾಯಿಲೆ (AITD). ಥೈರಾಯ್ಡ್ ರೋಗಿಗಳಲ್ಲಿ ತೂಕಕ್ಕೆ ಸಂಬಂಧಿಸಿದ ಬಹಳಷ್ಟು ಸಮಸ್ಯೆಗಳು ಕಂಡು ಬರುತ್ತವೆ. ತೂಕ ಹೆಚ್ಚಾಗುವುದು ಮತ್ತು ಕಡಿಮೆ ಆಗುವುದು ಥೈರಾಯ್ಡ್ ಹಾರ್ಮೋನ್ ನ್ನು ಸೂಚಿಸುತ್ತದೆ. ಇದನ್ನು ಹೈಪೋಥೈರಾಯ್ಡಿಸಮ್ ಎಂದು ಕರೆಯುತ್ತಾರೆ. ಮತ್ತು ಥೈರಾಯ್ಡ್ ದೇಹದಲ್ಲಿ ಹೆಚ್ಚು ಹಾರ್ಮೋನ್ ನ್ನು ಉತ್ಪಾದಿಸಿದರೆ, ತೂಕ ತುಂಬಾ ಕಡಿಮೆಯಾಗುತ್ತಾ ಹೋಗುತ್ತದೆ. ಇದನ್ನು ಹೈಪರ್ ಥೈರಾಯ್ಡಿಸಮ್ ಎಂದು ಕರೆಯುತ್ತಾರೆ.

    ಪುರುಷರಿಗಿಂತ ಮಹಿಳೆಯರಲ್ಲಿ ಥೈರಾಯ್ಡ್ ಕಾಯಿಲೆ ಹೆಚ್ಚು

    ಹೈಪೋಥೈರಾಯ್ಡಿಸಮ್ ಇರುವ ಸ್ಥಿತಿ ಉಂಟಾದಾಗ ಅದು ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಮತ್ತು ಈ ಸ್ಥಿತಿ ಹೊಂದಿರುವ ಜನರು ತೂಕ ಕಳೆದುಕೊಳ್ಳಲು ಹರಸಾಹಸ ಪಡಬೇಕಾಗುತ್ತದೆ. ಒಂದು ಅಧ್ಯಯನದ ಪ್ರಕಾರ, ಥೈರಾಯ್ಡ್ ಅಪಾಯವು ಪುರುಷರಿಗಿಂತ ಮಹಿಳೆಯರಲ್ಲಿ ಹತ್ತು ಪಟ್ಟು ಹೆಚ್ಚು ಕಂಡು ಬರುತ್ತದೆ.

    ಥೈರಾಯ್ಡ್‌ ನಿಂದಾಗಿ ಹೆಚ್ಚಿದ ತೂಕವನ್ನು ಕಡಿಮೆ ಮಾಡಲು ನೀವು ಬಯಸಿದರೆ ಇಲ್ಲಿ ಹೇಳಲಾದ ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳಿ.

    ಇದನ್ನೂ ಓದಿ: ದಿನವನ್ನು ತಾಜಾ ಆಗಿರಿಸಲು ಮತ್ತು ಒತ್ತಡ ಮುಕ್ತವಾಗಿರಿಸಲು ಈ ಚಹಾ ಸೇವನೆ ಪ್ರಯೋಜನಕಾರಿ

    ಸರಳ ಕಾರ್ಬೋಹೈಡ್ರೇಟ್‌ ಮತ್ತು ಸಕ್ಕರೆ ಸೇವನೆ ಬೇಡ

    ಸ್ಯಾನ್ ಡಿಯಾಗೋದಲ್ಲಿನ ಪ್ರೈಮ್ ವೆಲ್ನೆಸ್ ಕ್ಲಿನಿಕ್‌ನ ನಿರ್ದೇಶಕ ಮತ್ತು ಹಾರ್ಮೋನ್ ಅಸ್ವಸ್ಥತೆಯ ತಜ್ಞ ಕೆಲ್ಲಿ ಆಸ್ಟಿನ್ ಹೇಳುವ ಪ್ರಕಾರ, ಥೈರಾಯ್ಡ್ ಹೊಂದಿರುವ ರೋಗಿಗಳು ಸರಳವಾದ ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆ ಸೇವನೆ ಮಾಡಬಾರದು. ಅವರು ಪಿಷ್ಟ ತರಕಾರಿಗಳು, ದ್ವಿದಳ ಧಾನ್ಯಗಳಂತಹ ಸಂಕೀರ್ಣ ಕಾರ್ಬೋಹೈಡ್ರೇಟ್‌ ಸೇವನೆ ಮಾಡಬೇಕು. ಮತ್ತು ಸಿಹಿ ಪದಾರ್ಥ ಸೇವನೆ ಮಾಡಬಾರದು ಎಂದು ಹೇಳುತ್ತಾರೆ.

    ಒರೆಗಾನ್ ಸ್ಟೇಟ್ ಯೂನಿವರ್ಸಿಟಿಯ ಪ್ರಕಾರ, ಹೆಚ್ಚಿನ ಗ್ಲೈಸೆಮಿಕ್ ಸೂಚಿ ಹೊಂದಿರುವ ಆಹಾರಗಳು (ಸರಳ ಕಾರ್ಬ್ ಮತ್ತು ಸಕ್ಕರೆ ಆಹಾರಗಳು) ದೇಹದಲ್ಲಿ ಉರಿಯೂತ ಹೆಚ್ಚು ಮಾಡುತ್ತವೆ. ದೀರ್ಘಕಾಲದ ಊತದಿಂದಾಗಿ, ದೇಹವು ಉಬ್ಬಿರುವಂತೆ ಕಾಣುತ್ತದೆ ಮತ್ತು ತೂಕವು ಹೆಚ್ಚುತ್ತದೆ. ಹೆಚ್ಚು ಉರಿಯೂತ ನಿವಾರಕ ಆಹಾರ ಸೇವನೆ ಮಾಡುವುದು ಸೂಕ್ತ.

    ಉರಿಯೂತ ಕಡಿಮೆ ಮಾಡುವ ಆಹಾರ ಸೇವನೆ ಮಾಡುವುದು, ಕೀಲು ನೋವನ್ನು ಕಡಿಮೆ ಮಾಡುತ್ತದೆ. ಮತ್ತು ಉರಿಯೂತ ಕಡಿಮೆ ಮಾಡುತ್ತದೆ. ಇದರೊಂದಿಗೆ, ಉರಿಯೂತದ ಆಹಾರಗಳು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸರಿಯಾಗಿ ಇರಿಸಲು ಸಹಕಾರಿ ಆಗಿವೆ.

    ದೇಹದ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಉರಿಯೂತ ಕಡಿಮೆ ಮಾಡುವುದು

    ನ್ಯೂ ಹ್ಯಾಂಪ್‌ಶೈರ್‌ನ ಮ್ಯಾಂಚೆಸ್ಟರ್‌ನಲ್ಲಿರುವ ಹೆಲ್ತ್ ಸ್ಟ್ರಾಂಗ್ ಇಂಟಿಗ್ರೇಟಿವ್ ಮೆಡಿಸಿನ್‌ನ ವೈದ್ಯಕೀಯ ನಿರ್ದೇಶಕರಾದ ಟೀನಾ ಬ್ಯೂಡೋಯಿನ್ ಹೇಳುವ ಪ್ರಕಾರ, ಉರಿಯೂತ ನಿವಾರಕ ಆಹಾರವು ದೇಹದ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಉರಿಯೂತ ಕಡಿಮೆ ಮಾಡಲು ಸಹಕಾರಿ ಆಗಿವೆ.

    ಹಾಗಾಗಿ ಎಲೆಗಳ ಹಸಿರು-ತರಕಾರಿ, ಟೊಮ್ಯಾಟೊ, ಕೊಬ್ಬಿನ ಮೀನು, ಒಣ ಹಣ್ಣುಗಳು, ಹಣ್ಣುಗಳು ಮತ್ತು ಆಲಿವ್ ಎಣ್ಣೆಯನ್ನು ಉರಿಯೂತ ನಿವಾರಕವಾಗಿ ಸೇವನೆ ಮಾಡಬಹುದು.

    ಸಣ್ಣ ಪ್ರಮಾಣದಲ್ಲಿ ಆಗಾಗ್ಗೆ ಆಹಾರ ಸೇವನೆ ಮಾಡಿ

    ಥೈರಾಯ್ಡ್ ಇರುವವರು ತೂಕ ಇಳಿಸಿಕೊಳ್ಳಲು ಸಣ್ಣ ಪ್ರಮಾಣದಲ್ಲಿ ಆಹಾರ ಸೇವನೆ ಮಾಡಬೇಕು.  ನೀವು ಅಲ್ಪಾವಧಿ ಊಟ ಮಾಡುತ್ತಿದ್ದರೆ ಪ್ರತಿ 3-4 ಗಂಟೆಗಳಿಗೊಮ್ಮೆ ಆಹಾರ ಸೇವನೆ ಮಾಡಬೇಕು. ಆಹಾರದಲ್ಲಿ ಪ್ರೋಟೀನ್, ಆರೋಗ್ಯಕರ ಕೊಬ್ಬು ಮತ್ತು ಸಂಕೀರ್ಣ ಕಾರ್ಬ್ ಆಹಾರ ಸೇವಿಸಬೇಕು. ಇವು ರಕ್ತದ ಸಕ್ಕರೆ ಮಟ್ಟ ಸಮತೋಲನ ಮಾಡಲು ಸಹಕಾರಿ. ಮತ್ತು ತೂಕ ಕಡಿಮೆ ಮಾಡಲು ಸಹಕಾರಿ.

    ಸಮತೋಲನ ಆಹಾರ ಸೇವನೆ ರೂಢಿಸಿಕೊಳ್ಳಿ

    ನೀವು ಏನು ತಿಂದಿದ್ದೀರಿ ಎಂಬುದನ್ನು ಡೈರಿಯಲ್ಲಿ ಬರೆದಿಡಿ. ಸಮತೋಲಿತ ಆಹಾರ ಸೇವನೆ ಮಾಡಿ. ಹೈಪೋಥೈರಾಯ್ಡಿಸಂ ರೋಗಿಯಾಗಿದ್ದರೆ, ಅವರಿಗೆ ಎಷ್ಟು ಪ್ರೋಟೀನ್, ಕೊಬ್ಬು ಮತ್ತು ಕಾರ್ಬ್ ಸೇವಿಸಿದ್ದಾರೆ ಎಂಬುದನ್ನು ತಿಳಿಯುವಂತೆ ನೋಡಿಕೊಳ್ಳಿ. ಆಹಾರದಲ್ಲಿ ಆರೋಗ್ಯಕರ ಕೊಬ್ಬು ಹೆಚ್ಚು, ಪ್ರೋಟೀನ್ ಮಧ್ಯಮ ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಸೇವನೆ ಮಾಡಿ.

    ಇದನ್ನೂ ಓದಿ: ರಕ್ತದಲ್ಲಿ ಹೆಚ್ಚಳವಾಗುವ ಯೂರಿಕ್ ಆಮ್ಲವನ್ನು ಕಡಿಮೆ ಮಾಡಲು ಇಲ್ಲಿದೆ ಆಯುರ್ವೇದಿಕ್ ಪರಿಹಾರ

    ವ್ಯಾಯಾಮವನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿ

    ಆರೋಗ್ಯಕರ ಆಹಾರದ ಜೊತೆಗೆ ವ್ಯಾಯಾಮ ಮಾಡಿ. ಹೈಪೋಥೈರಾಯ್ಡಿಸಮ್‌ನಿಂದ ಬಳಲುತ್ತಿರುವವರಿಗೆ ವ್ಯಾಯಾಮವು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
    Published by:renukadariyannavar
    First published: