ಹೇಗೆ ತೂಕ ನಷ್ಟಕ್ಕಾಗಿ (Weight Loss) ಸ್ಥೂಲಕಾಯದವರು (Obesity) ಕಸರತ್ತು ಮಾಡ್ತಾರೋ ಹಾಗೆಯೇ ತೂಕ ಹೆಚ್ಚಿಸಿಕೊಳ್ಳಲು (Weight Gain) ತೆಳ್ಳಗಿರುವವರು ಸಾಕಷ್ಟು ಪರದಾಡುತ್ತಾರೆ. ಈ ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ. ಎಲ್ಲರಿಗೂ ಒಂದೊಂದು ರೀತಿಯ ಸಮಸ್ಯೆ (Problem), ಕೊರತೆ (Deficiency) ಇದ್ದೇ ಇರುತ್ತದೆ. ಕೆಲವರು ತೆಳ್ಳಗೆ, ಬೆಳ್ಳಗೆ ಇರುತ್ತಾರೆ. ಆದರೆ ಕಾಲು, ಕೈ ಸರಿ ಇರಲ್ಲ. ಇಲ್ಲವೇ ಯಾವುದೋ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ಇನ್ನು ದಪ್ಪ ಇರುವವರು ಮಂಡಿ ನೋವು, ಅಸ್ವಸ್ಥತೆ, ನಡೆದಾಡಲು ತೊಂದರೆ ಅನುಭವಿಸುತ್ತಾರೆ. ಹೀಗೆ ಎಲ್ಲರೂ ಅವರದ್ದೇ ಆದ ಸಮಸ್ಯೆ ಹೊಂದಿರುತ್ತಾರೆ. ಇಂದು ನಾವು ತೆಳ್ಳಗೆ ಇರುವವರು ತೂಕ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬ ಸಂಗತಿ ಬಗ್ಗೆ ತಿಳಿಯೋಣ.
ತೂಕ ಹೆಚ್ಚಿಸಿಕೊಳ್ಳುವುದು ಹೇಗೆ?
ಫಿಟ್ ಆಗಿರುವುದು ತುಂಬಾ ಮುಖ್ಯ. ಹಾಗಂತ ಹೆಚ್ಚು ತೆಳ್ಳಗಿರುವುದು ಸಹ ಆರೋಗ್ಯಕ್ಕೆ ತೊಂದರೆ ಉಂಟು ಮಾಡುತ್ತದೆ. ತುಂಬಾ ಅಂದರೆ ಅತೀಯಾಗಿ ತೆಳ್ಳಗಿದ್ದರೆ ಅದು ದೌರ್ಬಲ್ಯದ ಸಂಕೇತ ಅಂತಾರೆ ತಜ್ಞರು.
ಹಾಗಾಗಿ ಹೇಗೆ ತೂಕ ಹೆಚ್ಚಳ ಸಮಸ್ಯೆ ತೊಡೆದು ಹಾಕುವುದು ಮುಖ್ಯವೋ, ಹಾಗೆಯೇ ಅತಿಯಾಗಿ ತೆಳ್ಳಗಿರುವ ಸಮಸ್ಯೆ ತೊಡೆದು ಹಾಕುವುದು ಮುಖ್ಯ.
ತೆಳ್ಳಗಿರುವ ಸಮಸ್ಯೆಯನ್ನು ಕಡಿಮೆ ತೂಕ ಎಂದು ಕರೆಯುತ್ತಾರೆ. ಆರೋಗ್ಯಕರ ರೀತಿಯಲ್ಲಿ ತೂಕ ಹೆಚ್ಚಿಸುವುದು ತುಂಬಾ ಮುಖ್ಯ. ಆರೋಗ್ಯಕರ ತೂಕ ಹೆಚ್ಚಿಸುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಾರೆ. ಕಾರ್ಯಕಾರಿ ಪೌಷ್ಟಿಕತಜ್ಞ ಮುಗ್ಧ ಪ್ರಧಾನ್ ಅವರು ಆರೋಗ್ಯಕರ ತೂಕ ಹೆಚ್ಚಳದ ಬಗ್ಗೆ ಮಾಹಿತಿ ನೀಡಿದ್ದಾರೆ.
ತೂಕ ಹೆಚ್ಚಳಕ್ಕೆ ಏನ್ ಮಾಡಬೇಕು?
ಅತ್ಯಂತ ಕಡಿಮೆ ತೂಕ ಹೊಂದಿದ್ದರೆ ಮತ್ತು ತೂಕ ಹೆಚ್ಚಳಕ್ಕೆ ಪ್ರಯತ್ನಿಸುತ್ತಿದ್ದರೆ, ತೂಕ ಹೆಚ್ಚಾಗುವುದು ಕೊಬ್ಬಿನ ರೂಪದಲ್ಲಿಲ್ಲ. ಅದು ಸ್ನಾಯುವಿನ ರೂಪದಲ್ಲಿದೆ ಎಂಬುದನ್ನು ಮೊದಲು ತಿಳಿಯಿರಿ. ಪ್ರೋಟೀನ್, ಕ್ಯಾಲೋರಿಗಳು ಮತ್ತು ಸ್ನಾಯುವಿನ ಓವರ್ಲೋಡ್ ನಿಮ್ಮ ಊಟದಲ್ಲಿ ಸೇರಿಸಿ.
ತೂಕ ಹೆಚ್ಚಿಸಲು ಎಷ್ಟು ಪ್ರೋಟೀನ್ ಬೇಕು?
ತೂಕ ನಷ್ಟದ ಗುರಿಗಾಗಿ ಪ್ರೊಟೀನ್ ಸಮೃದ್ಧ ಪದಾರ್ಥ ಸೇವಿಸಬೇಕು. ಪ್ರೊಟೀನ್ ಗುರಿಯು ದೇಹದ ತೂಕದ ಪ್ರತಿ ಕೆಜಿಗೆ ಕನಿಷ್ಠ 1 .1.5 ಗ್ರಾಂ ಪ್ರೋಟೀನ್ ಇರಬೇಕು.
ಉತ್ತಮ ಹೆಚ್ಚುವರಿ ಕ್ಯಾಲೊರಿ ಸೇವನೆ ಮಾಡಿ. ಅಗತ್ಯವಿರುವ ಪ್ರೋಟೀನ್ ಮತ್ತು ಕ್ಯಾಲೊರಿ ಸೇವನೆ ಹಾಗೂ ಆಹಾರದ ಗುಣಮಟ್ಟಕ್ಕೆ ಗಮನ ಕೊಡುವುದು ತುಂಬಾ ಮುಖ್ಯ.
ಏನು ತಿನ್ನಬೇಕು?
ಸಂಪೂರ್ಣ ಸಂಸ್ಕರಿಸದ ಆಹಾರಗಳ ಮೇಲೆ ಗಮನ ಕೇಂದ್ರೀಕರಿಸಿ. ಸಂಸ್ಕರಿಸಿದ ಸಕ್ಕರೆ ಮತ್ತು ಬೀಜದ ಎಣ್ಣೆಗಳು, ಗ್ಲುಟನ್, ಕಾರ್ನ್, ಸೋಯಾ ಆಹಾರದಲ್ಲಿ ಸೇರ್ಪಡೆ ಮಾಡಿ.
ಅನುಕೂಲಕರ ಆಹಾರ ಉರಿಯೂತದ ಆಹಾರ ಸೇವನೆ ಆದಷ್ಟು ತಪ್ಪಿಸಿ. ಸಾಕಷ್ಟು ಪೋಷಕಾಂಶಗಳನ್ನು ಪಡೆಯುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ.
ಸ್ನಾಯು ಓವರ್ಲೋಡ್ ಎಂದರೆ ಏನು?
ಸ್ನಾಯುವಿನ ಓವರ್ ಲೋಡ್ ಎಂದರೆ ಸ್ನಾಯುವಿನ ದ್ರವ್ಯರಾಶಿ ಹೆಚ್ಚಿಸಲು ಕೆಲಸ ಮಾಡುವುದಾಗಿದೆ. ಇದನ್ನು ಸ್ನಾಯುವಿನ ಹೈಪರ್ಟ್ರೋಫಿ ಎಂದು ಕರೆಯುತ್ತಾರೆ. ಶಕ್ತಿ ಅಥವಾ ಪ್ರತಿರೋಧ ತರಬೇತಿಯ ಮೇಲೆ ಕೇಂದ್ರೀಕೃತವಾಗಿರುತ್ತದೆ.
ಹೆಚ್ಚು ಕಾರ್ಡಿಯೋ ವ್ಯಾಯಾಮ ಮಾಡುವುದನ್ನು ತಪ್ಪಿಸಿ. ಚಯಾಪಚಯ ಆರೋಗ್ಯವು ಉತ್ತಮ ಸ್ಥಿತಿಯಲ್ಲಿದೆಯೇ ಎಂದು ನೋಡಿಕೊಳ್ಳಿ.
ಸದಾ ಆರೋಗ್ಯಕರ ಜೀವನಶೈಲಿ ಕಾಪಾಡಿಕೊಳ್ಳಿ. ಇದು ನಿಮಗೆ ಸಾಕಷ್ಟು ಆರೋಗ್ಯ ಪ್ರಯೋಜನ ನೀಡುತ್ತದೆ. ಸಾಕಷ್ಟು ವಿಶ್ರಾಂತಿ ಮತ್ತು ನಿದ್ರೆ ಮಾಡಿ.
ಇದನ್ನೂ ಓದಿ: ತೂಕ ಇಳಿಕೆಯಿಂದ ಸಂಧಿವಾತ ಸಮಸ್ಯೆಗೂ ಪರಿಹಾರ, ಹೇಗೆ ಅಂತೀರಾ? ಇಲ್ಲಿದೆ ವಿವರ
ಬೆಳಗ್ಗೆ ಬೇಗ ಎದ್ದು ಸೂರ್ಯನ ಬಿಸಿಲಿಗೆ ಮೈಯೊಡ್ಡಿ. ಧೂಮಪಾನ ಮತ್ತು ಮದ್ಯಪಾನ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಿ. ಇದು ಆರೋಗ್ಯಕರ ವೇಟ್ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ